For Quick Alerts
ALLOW NOTIFICATIONS  
For Daily Alerts

ಸ್ಟವ್‌ನ ಜಿಡ್ಡು ತೆಗೆಯುವುದರಿಂದ ಹಿಡಿದು, ಮುಖದ ಕಾಂತಿ ಹೆಚ್ಚಿಸುವವರೆಗೂ, ಸಿಟ್ರಸ್ ಹಣ್ಣುಗಳ ಸಿಪ್ಪೆಯ ಪ್ರಯೋಜನಗಳು ಅಪಾರ

|

ಹಣ್ಣು- ತರಕಾರಿಗಳು ನಮ್ಮ ದೈನಂದಿನ ಆಹಾರಕ್ರಮದ ಅತ್ಯಗತ್ಯ ಭಾಗವಾಗಿದೆ. ಅದರಲ್ಲೂ ಸಿಟ್ರಸ್ ಹಣ್ಣುಗಳು ದೇಹಕ್ಕೆ ವಿಟಮಿನ್ ಮತ್ತು ಖನಿಜಗಳ ಅಗತ್ಯವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಅನಾನಸ್, ನಿಂಬೆ, ಕಿತ್ತಳೆಗಳನ್ನು ಬಳಸಿ, ಅವುಗಳ ಸಿಪ್ಪೆಯನ್ನು ಎಸೆಯುವುದು ವಾಡಿಕೆ. ಆದರೆ, ಈ ಸಿಪ್ಪೆಗಳನ್ನೂ ಪರ್ಯಾಯ ರೂಪದಲ್ಲಿ ಬಳಕೆ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ?

ಹೌದು, ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯಿಂದ ಸಮೃದ್ಧವಾಗಿದ್ದು, ಅವುಗಳ ಸಿಪ್ಪೆಗಳು ಸಹ ಅನೇಕ ಪ್ರಯೋಜನಗಳನ್ನು ಹೊಂದಿವೆ. ಹಾಗಾದರೆ, ಅವುಗಳನ್ನು ಉಪ್ಪಿನಕಾಯಿ ಹೊರತಾಗಿ ಬೇರೆ ಯಾವುದಕ್ಕೆ ಬಳಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಸಿಟ್ರಸ್ ಹಣ್ಣಿನ ಸಿಪ್ಪೆಗಳ ಪ್ರಯೋಜನಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕಾಫಿ ಮೇಕರ್ ಸ್ವಚ್ಛಗೊಳಿಸಲು ನಿಂಬೆ ಸಿಪ್ಪೆ:

ಕಾಫಿ ಮೇಕರ್ ಸ್ವಚ್ಛಗೊಳಿಸಲು ನಿಂಬೆ ಸಿಪ್ಪೆ:

ನಿಮ್ಮ ಕಾಫಿ ಮೇಕರ್ ಮೇಲೆ ಕಲೆಗಳನ್ನು ನೋಡಿ ಬೇಸತ್ತಿದ್ದೀರಾ ಮತ್ತು ಅವುಗಳನ್ನು ತೆಗೆದುಹಾಕಲು ಹೆಣಗಾಡುತ್ತಿದ್ದೀರಾ? ಹಾಗಾದ್ರೆ, ಬಳಸಿ ಉಳಿದಿರುವ ನಿಂಬೆ ಸಿಪ್ಪೆಯಿಂದ ಅದು ಹೊಸದಾಗಿ ಕಾಣುವಂತೆ ಮಾಡಬಹುದು.

ಹಂತಗಳು:

ಒಂದು ತಟ್ಟೆಯಲ್ಲಿ ½ ಚಮಚ ಅಡಿಗೆ ಸೋಡಾ ತೆಗೆದುಕೊಳ್ಳಿ. ನಿಂಬೆ ಸಿಪ್ಪೆಗಳನ್ನು ತೆಗೆದುಕೊಂಡು ಅಡಿಗೆ ಸೋಡಾದಲ್ಲಿ ಅದ್ದಿ, ಕಾಫಿ ಮೇಕರ್ ಅನ್ನು ಸ್ಕ್ರಬ್ ಮಾಡಿ, 10 ನಿಮಿಷಗಳ ಕಾಲ ಬಿಡಿ. ನೀರಿನಿಂದ ತೊಳೆಯಿರಿ.

ಕಿತ್ತಳೆ ಸಿಪ್ಪೆ ಫೇಸ್ ಸ್ಕ್ರಬ್ :

ಕಿತ್ತಳೆ ಸಿಪ್ಪೆ ಫೇಸ್ ಸ್ಕ್ರಬ್ :

ನೀವು ಎಣ್ಣೆಯುಕ್ತ ಚರ್ಮ ಹೊಂದಿದ್ದರೆ, ನಿರಂತರವಾಗಿ ಮೊಡವೆ ಎದುರಿಸುತ್ತಿದ್ದರೆ, ನಿಮ್ಮ ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಲು ಈ ಹೋಮ್ ಮೇಡ್ ಸ್ಕ್ರಬ್ ಬಳಸಿ. ಕಿತ್ತಳೆ ಸಿಪ್ಪೆಯು ಮುಖದ ರಂಧ್ರಗಳಲ್ಲಿನ ಮೇದೋಗ್ರಂಥಿಗಳನ್ನು ತೆಗೆದುಹಾಕುತ್ತದೆ ಹಾಗೂ ಆರೋಗ್ಯಕರವಾಗಿಸುತ್ತದೆ.

ಹಂತಗಳು :

ಕಿತ್ತಳೆ ಸಿಪ್ಪೆಗಳನ್ನು 2-3 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ, ½ ಕಪ್ ನೆನಸಿದ ಹೆಸರುಕಾಳನ್ನು ಸೇರಿಸಿ, ಮಿಕ್ಸರ್ ಗ್ರೈಂಡರ್ ನಲ್ಲಿ ಪುಡಿ ಮಾಡಿ. ಇದಕ್ಕೆ ಕಡಲೆಹಿಟ್ಟು ಮತ್ತು ಹಸಿ ಹಾಲನ್ನು ಸೇರಿಸಿ, ಮುಖಕ್ಕೆ ಹಚ್ಚಿ ಮತ್ತು ನಿಧಾನವಾಗಿ ಸ್ಕ್ರಬ್ ಮಾಡಿ.

ಸ್ಟೌವ್ ಸ್ವಚ್ಛಗೊಳಿಸಲು ಅನಾನಸ್ ಸಿಪ್ಪೆ:

ಸ್ಟೌವ್ ಸ್ವಚ್ಛಗೊಳಿಸಲು ಅನಾನಸ್ ಸಿಪ್ಪೆ:

ಅಡುಗೆ ಮಾಡಿದ ನಂತರ ಒಲೆಯ ಮೇಲೆ ಉಳಿಯುವ ಹಠಮಾರಿ ಗ್ರೀಸ್ ಕಲೆಗಳನ್ನು ಯಾರೂ ಇಷ್ಟಪಡುವುದಿಲ್ಲ. ಅಲ್ಲದೆ, ಅವುಗಳನ್ನು ತೆಗೆಯುವುದು ತುಂಬಾ ಕಷ್ಟ. ಅದಕ್ಕಾಗಿ ಅನಾನಸ್ ಸಿಪ್ಪೆ ಉತ್ತಮ. ಅನಾನಸ್ ಸಿಪ್ಪೆಯು ಗಟ್ಟಿಯಾಗಿರುತ್ತದೆ ಮತ್ತು ಅದರಲ್ಲಿರುವ ಆಮ್ಲವು ಕ್ಷಣಾರ್ಧದಲ್ಲಿ ಮೆತ್ತಿಕೊಂಡಿರುವ ಜಿಡ್ಡನ್ನು ತೆಗೆಯುತ್ತದೆ.

ಹಂತಗಳು:

ಸ್ಟೌವ್ ಮೇಲೆ ನೀರನ್ನು ಸಿಂಪಡಿಸಿ, 15 ನಿಮಿಷಗಳ ಕಾಲ ನೆನೆಯಲು ಬಿಡಿ. ಗ್ರೀಸ್ ಅನ್ನು ಚೆನ್ನಾಗಿ ಉಜ್ಜಲು ಅನಾನಸ್ ಸಿಪ್ಪೆಗಳನ್ನು ಬಳಸಿ. ಗ್ರೀಸ್ ಸುಲಭವಾಗಿ ಹೊರಬರುವುದನ್ನು ನೀವು ಗಮನಿಸಬಹುದು. ವಿವಿಧ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಪ್ರತ್ಯೇಕ ತುಣುಕುಗಳನ್ನು ಬಳಸಿ. ಕೊನೆಗೆ ಬಟ್ಟೆಯನ್ನು ಬಳಸಿ ಒರೆಸಿ.

ಬಟ್ಟೆ ವಾಸನೆ ಬರದಂತೆ ಮಾಡಲು ನಿಂಬೆ ಮತ್ತು ಕಿತ್ತಳೆ ಸಿಪ್ಪೆ:

ಬಟ್ಟೆ ವಾಸನೆ ಬರದಂತೆ ಮಾಡಲು ನಿಂಬೆ ಮತ್ತು ಕಿತ್ತಳೆ ಸಿಪ್ಪೆ:

ವಿಶೇಷವಾಗಿ ಬೇಸಿಗೆಯಲ್ಲಿ, ಬೆವರು ಮತ್ತು ದೇಹದ ಇತರ ದ್ರವಗಳಿಂದಾಗಿ ಬಟ್ಟೆಗಳು ಗಬ್ಬುನಾರುತ್ತಿರುತ್ತವೆ. ಕೆಲವೊಮ್ಮೆ ಅವುಗಳನ್ನು ಅತ್ಯುತ್ತಮ ಡಿಟರ್ಜೆಂಟ್‌ನಲ್ಲಿ ಸ್ವಚ್ಛಗೊಳಿಸಿದರೂ ಕೂಡ ವಾಸನೆ ಹೋಗಿರುವುದಿಲ್ಲ. ಆಗ ನಿಮಗೆ ಸಿಟ್ರಿಕ್ ಹಣ್ಣುಗಳಂತಹ ನೈಸರ್ಗಿಕ ಸಂಪನ್ಮೂಲಗಳು ಸಹಾಯಕ್ಕೆ ಬರುತ್ತವೆ.

ಹಂತಗಳು :

ದೊಡ್ಡ ಬಟ್ಟಲಿನಲ್ಲಿ, ನಿಂಬೆ, ಕಿತ್ತಳೆಗಳಂತಹ ಸಿಟ್ರಿಕ್ ಹಣ್ಣುಗಳ ಸಿಪ್ಪೆಗಳನ್ನು ಸಂಗ್ರಹಿಸಿ. ಸ್ಪಿನ್ನರ್‌ನಲ್ಲಿ ನಿಮ್ಮ ಬಟ್ಟೆಗಳನ್ನು ಒಣಗಿಸುವಾಗ, ಸಿಪ್ಪೆಗಳನ್ನು ಕೂಡ ಸೇರಿಸಿ. ಇದರಿಂದ ನಿಮ್ಮ ಬಟ್ಟೆ ವಾಸನೆಯಿಂದ ಮುಕ್ತವಾಗುತ್ತದೆ.

English summary

Various Uses of Different Fruits Peel in Kannada

Here we talking about Various Uses of Different Fruits Peel in Kannada, read on
Story first published: Saturday, October 23, 2021, 12:49 [IST]
X
Desktop Bottom Promotion