For Quick Alerts
ALLOW NOTIFICATIONS  
For Daily Alerts

ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ

|

ಬೆಳ್ಳಿಯ ಆಭರಣ ಇಲ್ಲ ಅಂತ ಹೇಳುವವರು ತುಂಬಾ ವಿರಳ, ಕಾಲ್ಗೆಜ್ಜೆ, ಕಾಲುಂಗುರ, ಕೈ ಕಡಗ, ನೆಕ್ಲೇಸ್‌, ಚೈನ್‌ ಹೀಗೆ ಬೆಳ್ಳಿಯ ಆಭರಣಗಳು ನಮ್ಮ ಬಳಿ ಇರುತ್ತದೆ. ಬೆಳ್ಳಿಯ ಆಭರಣಗಳು ಶೈನಿಂಗ್‌ನಿಂದ ಕೂಡಿದ್ದರೆ ಆಕರ್ಷಕ, ಕಪ್ಪಾಗಿದ್ದರೆ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ.

silver jewellery,

ಕೆಲವು ಆಭರಣಗಳನ್ನು ದಿನನಿತ್ಯ ಬಳಸುತ್ತೇವೆ. ಇನ್ನು ಕೆಲವು ಆಭರಣಗಳನ್ನು ಅಪರೂಪಕ್ಕೆ ಬಳಸುತ್ತೇವೆ, ಎಲ್ಲಿಗಾದರೂ ಹೋಗುವಾಗ ಬೆಳ್ಳಿಯ ಆಭರಣ ಧರಿಸಲು ನೋಡಿದರೆ ಅದರ ಬಣ್ಣ ಸ್ವಲ್ಪ ಮಸುಕಾಗಿರುತ್ತದೆ. ನಿಮ್ಮ ಬೆಳ್ಳಿಯ ಆಭರಣ ಸದಾ ಹೊಳಪಿನಿಂದ ಕೂಡಿರಬೇಕೆ? ಈ ಟಿಪ್ಸ್ ಸಹಕಾರಿಯಾದೀತು ನೋಡಿ:\

1. ಅವುಗಳನ್ನು ಗಾಳಿಯಾಡದ ಡಬ್ಬದಲ್ಲಿಡಿ

1. ಅವುಗಳನ್ನು ಗಾಳಿಯಾಡದ ಡಬ್ಬದಲ್ಲಿಡಿ

ನೀವು ತುಂಬಾ ಬಗೆಯ ಬೆಳ್ಳಿಯ ಆಭರಣಗಳನ್ನು ಒಂದು ಬ್ಯಾಗ್‌ನಲ್ಲಿ ಅಥವಾ ಡಬ್ಬದಲ್ಲಿ ಇಡುವುದಾದರೆ ನಿಮಗೇನು ಸಲಹೆ ನೀಡುತ್ತೇವೆ ಅಂದರೆ ಅವುಗಳನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಗಾಳಿಯಾಡದ ಡಬ್ಬದಲ್ಲಿಡಿ. ಅಲ್ಲದೆ ಬೆಳ್ಳಿಯ ಆಭರಣಗಳನ್ನು ರಬ್ಬರ್‌ ಬ್ಯಾಂಡ್‌ನಲ್ಲಿ ಸುತ್ತಿಡಬೇಡಿ. ಏಕೆಂದರೆ ರಬ್ಬರ್ ರಂಜಕವನ್ನು ಬಿಡುಗಡೆ ಮಾಡುತ್ತದೆ, ಇದರಿಂದ ಬೆಳ್ಳಿಯ ಬಣ್ಣ ಮಸುಕಾಗುವುದು.

2. ಮೃದುವಾದ ಬಟ್ಟೆಯಲ್ಲಿ ಒರೆಸಿ

2. ಮೃದುವಾದ ಬಟ್ಟೆಯಲ್ಲಿ ಒರೆಸಿ

ನೀವು ಬೆಳ್ಳಿಯನ್ನು ಮೃದುವಾದ ಬಟ್ಟೆಯಲ್ಲಿ ಒರೆಸಿ, ಇತರ ಬಟ್ಟೆಯಲ್ಲಿ ಒರೆಸಿದರೆ ಸ್ಕ್ರ್ಯಾಚ್‌ ಆಗಬಹುದು, ಬೆಳ್ಳಿಯನ್ನು ಒರೆಸುವಾಗ ಜಾಗ್ರತೆವಹಿಸಿ ಇಲ್ಲದಿದ್ದರೆ ಹಾನಿಯುಂಟಾಗುವುದು

ಈ ರೀತಿ ಶುಚಿಗೊಳಿಸಿ

ಈ ರೀತಿ ಶುಚಿಗೊಳಿಸಿ

ಒಂದು ಬೌಲ್‌ನಲ್ಲಿ ಅಲ್ಯುಮಿನಿಯಂ ಪಾಯಿಲ್ ಹಾಕಿ, ಅದರ ಹೊಳೆಯುವ ಬದಿ ಮೇಲ್ಭಾಗದಲ್ಲಿ ಇರಲಿ ಅದರಲ್ಲಿ ಬೆಳ್ಳಿಯ ಆಭರಣಗಳನ್ನು ಹಾಕಿ, ಬೆಳ್ಳಿಯ ಆಭರಣಗಳು ಮುಳುಗುವಂತೆ ನೀರು ಹಾಕಿ ಬೇಕಿಂಗ್ ಸೋಡಾ, ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ 10 ನಿಮಿಷ ಬಿಟ್ಟು ತೆಗೆದು ಮೃದುವಾದ ಬಟ್ಟೆಯಲ್ಲಿ ಒರೆಸಿ ಇಡಿ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

3 ಚಮಚ ಬೇಕಿಂಗ್‌ ಸೋಡಾಗೆ ಸ್ವಲ್ಪ ನೀರು ಸೇರಿಸಿ ಗಟ್ಟಿ ಪೇಸ್ಟ್‌ ರೀತಿ ಮಾಡಿ ಒಂದು ಹಲ್ಲುಜ್ಜುವ ಬ್ರೆಷ್‌ನಲ್ಲಿ ಹಾಕಿ ತಿಕ್ಕಿದರೆ ಬೆಳ್ಳಿ ಹೊಳಪಿನಿಂದ ಕೂಡಿರುತ್ತದೆ. ಈ ರೀತಿ ಸ್ವಚ್ಛ ಮಾಡಿದರೆ ಬೆಳ್ಳಿಯನ್ನು ಹೊಸದಾಗಿ ಕೊಳ್ಳುವಾಗ ಎಷ್ಟು ಹೊಳಪಿನಿಂದ ಕೂಡಿತ್ತೋ ಅಷ್ಟೇ ಹೊಳಪು ಪಡೆಯುತ್ತದೆ

5. ಟೂತ್‌ಪೇಸ್ಟ್

5. ಟೂತ್‌ಪೇಸ್ಟ್

ಟೂತ್‌ಪೇಸ್ಟ್‌ ಬಳಸಿ ಕೂಡ ಬೆಳ್ಳಿಯನ್ನು ಸ್ವಚ್ಛ ಮಾಡಬಹುದು

6. ಟೀ ಪುಡಿ

ಟೀ ಪುಡಿಯನ್ನು ಹಲ್ಲುಜ್ಜು ಬ್ರೆಷ್‌ನಲ್ಲಿ ಹಾಕಿ ಅದರಿಂದ ಬೆಳ್ಳಿಯ ಆಭರಣಗಳನ್ನು ಉಜ್ಜಿದರೆ ಆಭರಣಗಳನ್ನು ಹೊಳಪನ್ನು ಪಡೆಯುವುದು.

7. ಅಂಟ್ವಾಳಕಾಯಿ

ನಿಮಗೆ ಅಂಟ್ವಾಳಕಾಯಿ ಸಿಕ್ಕರೆ ಅದರಲ್ಲಿ ಬೆಳ್ಳಿಯ ಆಭರಣಗಳನ್ನು ಸ್ವಲ್ಪ ಹೊತ್ತು ಹಾಕಿಟ್ಟು ನಂತರ ಹಲ್ಲುಜ್ಜುವ ಬ್ರೆಷ್‌ನಿಂದ ತಿಕ್ಕಿ.

English summary

Tips To Keep Your Silver Jewellery Sparkling Always in Kannada

These tips to help silver jewellery shining always read on...
Story first published: Saturday, January 28, 2023, 11:23 [IST]
X
Desktop Bottom Promotion