For Quick Alerts
ALLOW NOTIFICATIONS  
For Daily Alerts

ಅಡುಗೆಗೆ ಈರುಳ್ಳಿ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

|

ಈರುಳ್ಳಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸುವ ತರಕಾರಿ. ಈ ಈರುಳ್ಳಿ ಇಲ್ಲದೇ ಅಡುಗೆ ಮಾಡುವವರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಮಾಂಸಹಾರ ಪ್ರಿಯರಿಗಂತೂ ಈರುಳ್ಳಿ ಬೇಕೇ ಬೇಕು. ಇಂತಹ ಈರುಳ್ಳಿಯನ್ನು ಈ ಮಳೆಗಾಲದಲ್ಲಿ ಸರಿಯಾಗಿ ಸಂಗ್ರಹಿಸುವುದರ ಜೊತೆಗೆ ಅದನ್ನು ಸರಿಯಾಗಿ ಖರೀದಿಸುವುದು ಸಹ ಬಹಳ ಮುಖ್ಯ. ಹಾಗಾದರೆ ಈರುಳ್ಳಿ ಖರೀದಿಸುವಾಗ ಯಾವೆಲ್ಲಾ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ಇಲ್ಲಿ ನೋಡೋಣ.

onion

ಈರುಳ್ಳಿ ಖರೀದಿಸುವಾಗ ನೆನಪಿಡಬೇಕಾದ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

1) ಈರುಳ್ಳಿಯ ವಾಸನೆ:

1) ಈರುಳ್ಳಿಯ ವಾಸನೆ:

ಈರುಳ್ಳಿ ಖರೀದಿಸುವಾಗ ಅದರ ವಾಸನೆಗೆ ಗಮನ ಕೊಡಿ. ಒಂದು ವೇಳೆ ಈರುಳ್ಳಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಈರುಳ್ಳಿ ಒಳಗಿನಿಂದ ಕೊಳೆತು ಹೋಗಿದೆ ಎಂದು ಅರ್ಥ ಮಾಡಿಕೊಳ್ಳಿ. ಈರುಳ್ಳಿ ಹೊರಗಿನಿಂದ ಕೊಳೆಯುವ ಬದಲು ಒಳಗಿನಿಂದ ಕೊಳೆತುಹೋಗಿರುತ್ತದೆ. ಅದಕ್ಕೆ ಕೆಟ್ಟ ವಾಸನೆ ಹೊರಬರುತ್ತಿರುತ್ತದೆ. ಆದ್ದರಿಂದ, ಈರುಳ್ಳಿಯ ವಾಸನೆಯನ್ನು ನೋಡಿ, ಅದು ಕೊಳೆತು ಹೋಗಿದೆಯೇ ಅಥವಾ ತಾಜಾವಾಗಿದೆಯೇ ಎಂದು ತಿಳಿದುಕೊಳ್ಳಿ.

2) ಈರುಳ್ಳಿ ಸಿಪ್ಪೆ:

2) ಈರುಳ್ಳಿ ಸಿಪ್ಪೆ:

ಈರುಳ್ಳಿ ಸಿಪ್ಪೆ ಹೋಗಿದ್ದರೆ ಅಥವಾ ಸಿಪ್ಪೆ ತೆಗೆದಿದ್ದರೆ ಅದನ್ನು ಎಂದಿಗೂ ಖರೀದಿಸಬೇಡಿ. ಏಕೆಂದರೆ ಸಿಪ್ಪೆ ತೆಗೆದ ಈರುಳ್ಳಿಯನ್ನು ದೀರ್ಘಕಾಲ ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ಸಿಪ್ಪೆ ಸುಲಿದ ನಂತರ ಈರುಳ್ಳಿ ಹಾಳಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ಸಂಪೂರ್ಣ ಸಿಪ್ಪೆಯಿಂದ ಕೂಡಿದ ಈರುಳ್ಳಿಯನ್ನು ಖರೀದಿಸುವುದು ತುಂಬಾ ಒಳ್ಳೆಯದು. ಇದನ್ನು ಹೆಚ್ಚು ಕಾಲ ಸಂಗ್ರಹಿಸಿ ಇಡಬಹುದು.

 3) ಈರುಳ್ಳಿಯ ಬಣ್ಣ:

3) ಈರುಳ್ಳಿಯ ಬಣ್ಣ:

ಈರುಳ್ಳಿ ಅನೇಕ ಬಣ್ಣಗಳಲ್ಲಿ ಬರುತ್ತದೆ. ಆದರೆ ನೀವು ಕಿತ್ತಳೆ ಸಿಪ್ಪೆ ಹೊಂದಿರುವ ಈರುಳ್ಳಿ ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ಈ ಈರುಳ್ಳಿ ತಿನ್ನಲು ಸಿಹಿಯಾಗಿರುತ್ತದೆ, ಹೆಚ್ಚು ವಾಸನೆಯೂ ಬರುವುದಿಲ್ಲ. ಒಂದು ವೇಳೆ ನೀವು ಸಾಮಾನ್ಯ ಈರುಳ್ಳಿ ತಿನ್ನಲು ಬಯಸಿದರೆ, ನೀವು ನೇರಳೆ ಅಥವಾ ಗುಲಾಬಿ ಬಣ್ಣದ ಸಿಪ್ಪೆಯಿರುವ ಈರುಳ್ಳಿಯನ್ನು ಖರೀದಿಸಬಹುದು. ಇವುಗಳು ಸಿಹಿಯಾಗಿರದೇ ಸಾಮಾನ್ಯ ರುಚಿಯಿಂದ ಕೂಡಿರುವುದು.

4) ಈರುಳ್ಳಿಯ ತಳಭಾಗ:

4) ಈರುಳ್ಳಿಯ ತಳಭಾಗ:

ಈರುಳ್ಳಿ ಖರೀದಿಸುವಾಗ ಅದ ಕೆಳಗಿನ ಭಾಗವನ್ನು ನೋಡಲು ಮರೆಯದಿರಿ. ಹಳೆಯ ಈರುಳ್ಳಿಯಲ್ಲಿ ಮೊಗ್ಗುಗಳು ಹೊರಬರಲು ಪ್ರಾರಂಭಿಸಿರುತ್ತವೆ. ಈ ಸಂದರ್ಭದಲ್ಲಿ ಈರುಳ್ಳಿ ಒಳಗಿನಿಂದ ಕೊಳೆಯಲು ಆರಂಭವಾಗಿರುತ್ತದೆ. ಆ ಈರುಳ್ಳಿಯನ್ನು ಕೊಯ್ದು ತುಂಬಾ ಸಮಯ ಆಗಿದೆ ಎಂಬುದನ್ನು ಸೂಚಿಸುತ್ತವೆ ಈ ಮೊಳಕೆಗಳು. ಆದ್ದರಿಂದ, ಈರುಳ್ಳಿ ಖರೀದಿಸುವಾಗ, ಮೊಳಕೆ ಅಥವಾ ಮೊಗ್ಗುಗಳು ಇಲ್ಲದೇ ಇರುವುದನ್ನು ಗಮನಿಸಿ ಖರೀದಿಸುವುದು ಉತ್ತಮ.

 5) ಈರುಳ್ಳಿಯ ಗಾತ್ರ:

5) ಈರುಳ್ಳಿಯ ಗಾತ್ರ:

ಈರುಳ್ಳಿ ಖರೀದಿಸುವಾಗ ಈರುಳ್ಳಿ ಗಾತ್ರಕ್ಕೂ ಗಮನ ಕೊಡಿ. ಮಧ್ಯಮ ಗಾತ್ರದ ಈರುಳ್ಳಿ ಖರೀದಿಸಲು ಪ್ರಯತ್ನಿಸಿ. ಈರುಳ್ಳಿ ತುಂಬಾ ಚಿಕ್ಕದಾಗಿದ್ದರೆ, ಸಿಪ್ಪೆ ಸುಲಿದ ನಂತರ ಅದು ಮತ್ತಷ್ಟು ಚಿಕ್ಕದಾಗುತ್ತದೆ. ಇದು ಅಷ್ಟೊಂದು ರುಚಿ ನೀಡುವುದಿಲ್ಲ. ಆದ್ದರಿಂದ ಮಧ್ಯಮ ಗಾತ್ರದ ಈರುಳ್ಳಿಯನ್ನು ಮಾತ್ರ ಖರೀದಿಸಿ. ಅದೇ ರೀತಿ, ತುಂಬಾ ದೊಡ್ಡ ಗಾತ್ರವಿರುವ ಈರುಳ್ಳಿಯನ್ನೂ ಸಹ ತೆಗೆದುಕೊಳ್ಳಬಾರದು. ಇದು ಕೆಲವೊಮ್ಮೆ ಒಳಗಿನಿಂದ ಕೊಳೆತು ಹೋಗಿರುವ ಸಾಧ್ಯತೆಗಳಿವೆ.

Read more about: home kitchen ಮನೆ
English summary

Things to Keep in Mind While Buying Onions in Kannada

Here we talking about Things to keep in mind while buying Onions in Kannada, read on
Story first published: Monday, July 19, 2021, 15:07 [IST]
X
Desktop Bottom Promotion