For Quick Alerts
ALLOW NOTIFICATIONS  
For Daily Alerts

ಅಡುಗೆ ಶ್ರಮ ಕಡಿಮೆ ಮಾಡುವ ಸೂಪರ್ ಕುಕ್ಕಿಂಗ್ ಟಿಪ್ಸ್

|

ಅಡುಗೆ ಮಾಡುವುದೇನು ರಾಕೆಟ್‌ ಸೈನ್ಸ್‌ ಅಲ್ಲ, ಆದರೆ ಇಲ್ಲಿಯೂ ಕೆಲವೊಂದು ಅಳತೆಗಳು, ಲೆಕ್ಕಾಚಾರಗಳು ತಪ್ಪಿದರೆ ಆ ಅಡುಗೆಯನ್ನು ಬಾಯಿಗಿಟ್ಟು ರುಚಿ ನೋಡೋಕೆ ಸಾಧ್ಯನೇ ಇಲ್ಲ. ಇನ್ನು ಅಡುಗೆ ಮಾಡುವಾಗ ಕೆಲವೊಂದು ಟೆಕ್ನಿಕ್ ಗೊತ್ತಿದ್ದರೆ ಅಡುಗೆ ಮಾಡುವುದು ಮತ್ತಷ್ಟು ಸುಲಭವಾಗುವುದು.

Super Kitchen Tips For Easy Cooking

ಇಲ್ಲಿ ನಾವು ಕೆಲವೊಂದು ಟಿಪ್ಸ್ ನೀಡುತ್ತಿದ್ದೇವೆ. ಈ ಟಿಪ್ಸ್ ನೀವು ಅಡುಗೆಯನ್ನು ಬೇಗನೆ ಮಾಡಿ ಮುಗಿಸಲು ತುಂಬಾ ಸಹಕಾರಿಯಾಗಲಿದೆ. ಬನ್ನಿ ಆ ಅಡುಗೆ ಟಿಪ್ಸ್ ಯಾವುವು ಎಂದು ನೋಡೋಣ:

1. ಮೊಟ್ಟೆಯ ಸಿಪ್ಪೆ ಸುಲಿಯುವುದು-ಟಿಪ್ಸ್ 1

1. ಮೊಟ್ಟೆಯ ಸಿಪ್ಪೆ ಸುಲಿಯುವುದು-ಟಿಪ್ಸ್ 1

ಒಂದು ಮೊಟ್ಟೆ ಬೇಯಿಸಿದರೆ ಸಿಪ್ಪೆ ಸುಲಿಯಲು ಹೆಚ್ಚು ಸಮಯ ಬೇಕಾಗಿಲ್ಲ, ಅದೇ 8-10 ಮೊಟ್ಟೆಯಾದರೆ ಒಂದೊಂದೇ ಮೊಟ್ಟೆಯ ಸಿಪ್ಪೆ ಸುಲಿಯಲು ಒಂದು 10 ನಿಮಿಷವಾದರೂ ಬೇಕು ಅಲ್ವಾ? ಒಂದು ಗ್ಲಾಸ್‌ ಜಾರ್‌ಗೆ ಅರ್ಧದಷ್ಟು ನೀರು ಹಾಕಿ ಅದರಲ್ಲಿ ಮೊಟ್ಟೆಗಳನ್ನು ಹಾಕಿ ಮುಚ್ಚಳ ಹಾಕಿ ಅಲುಗಾಡಿಸಿದರೆ ಮೊಟ್ಟೆಯ ಸಿಪ್ಪೆ ಸುಲಭವಾಗಿ ಸುಲಿದು ಬರುವುದು.

2. ಮೊಟ್ಟೆ ಸುಲಿಯುವ ಟಿಪ್ಸ್ 2:

2. ಮೊಟ್ಟೆ ಸುಲಿಯುವ ಟಿಪ್ಸ್ 2:

ಬೇಯಿಸಿದ ಮೊಟ್ಟೆಯ ಮಧ್ಯ ಕಟ್‌ ಮಾಡಿ ಸುಲಭವಾಗಿ ಸಿಪ್ಪೆ ಸುಲಿದು ಬರುವುದು. ಆದರೆ ಹೀಗೆ ಮೊಟ್ಟೆ ಸಿಪ್ಪೆ ಸುಲಿದು ಬರಲಿ ಮೊಟ್ಟೆ ಬೇಯಿಸಿದ ಮೇಲೆ ಸ್ವಲ್ಪ ತಣ್ಣಗಾಗಲು ಬಿಡಬೇಕು.

3, ಬೆಳ್ಳುಳ್ಳಿ

3, ಬೆಳ್ಳುಳ್ಳಿ

ಬೆಳ್ಳುಳ್ಳಿ ಸುಲಿಯುವುದು ಎಷ್ಟು ಕಷ್ಟಕರವೆಂಬುವುದು ಅದು ಸುಲಿದಾಗಲೇ ಗೊತ್ತಾಗುವುದು. ಒಂದು ಗ್ಲಾಸ್‌ ಜಾರ್‌ ತೆಗೆದುಕೊಂಡು ಅದರಲ್ಲಿ ಬೆಳ್ಳುಳ್ಳಿ ಎಸಳು ಹಾಕಿ, ಮುಚ್ಚಳ ಹಾಕಿ ಚೆನ್ನಾಗಿ ಅಲುಗಾಡಿಸಿದರೆ ಸಾಕು ಬೆಳ್ಳುಳ್ಳಿ ಸಿಪ್ಪೆ ಸುಲಿದು ಬರುವುದು. ಈ ವಿಧಾನದಲ್ಲಿ ನಿಮ್ಮ ತುಂಬಾ ಶ್ರಮ ಉಳಿತಾಯವಾಗುವುದು. ಟಿವಿ ಮುಂದೆ ಕುಳಿತು ನಿಮ್ಮ ನೆಚ್ಚಿನ ಪ್ರೋಗ್ರಾಂ ನೋಡುತ್ತಾ ಈ ವಿಧಾನದ ಮೂಲಕ ವಾರಕ್ಕೆ ಬಳಸುವ ಬೆಳ್ಳುಳ್ಳಿಯನ್ನು ಕೆಲವೇ ನಿಮಿಷಗಳಲ್ಲಿ ಸಿಪ್ಪೆ ಸುಲಿದು ಇಡಬಹುದು.

4. ಕಿವಿ ಹಣ್ಣು ಹಾಗೂ ಮಾವಿನ ಹಣ್ಣಿನ ಸಿಪ್ಪೆ ಸುಲಿಯುವ ವಿಧಾನ ಕ

4. ಕಿವಿ ಹಣ್ಣು ಹಾಗೂ ಮಾವಿನ ಹಣ್ಣಿನ ಸಿಪ್ಪೆ ಸುಲಿಯುವ ವಿಧಾನ ಕ

ಕಿವಿ ಹಣ್ಣು ಹಾಗೂ ಮಾವಿನ ಹಣ್ಣಿಗಳನ್ನು ಕತ್ತರಿಸಿ ಅದರ ಸಿಪ್ಪೆ ತೆಗೆಯುತ್ತೇವೆ. ಆದರೆ ಫ್ರೂಟ್‌ ಸಲಾಡ್‌ ಮಾಡುವಾಗ ಫಟ್-ಫಟ್ ಅಂತ ಸಿಪ್ಪೆ ಸುಲಿಯಲು ಇಂದು ಗ್ಲಾಸ್‌ ತೆಗೆದುಕೊಂಡು ಕಿವಿ ಅಥವಾ ಮಾವಿನ ಹಣ್ಣಿಗಳನ್ನು ತುಂಡು ಮಾಡಿ ಅದರ ಒಂದು ಬದಿಯನ್ನು ಗ್ಲಾಸ್‌ ತುದಿಯಲ್ಲಿಟ್ಟು ಎಳೆದರೆ ಮಾವಿನ ಹಣ್ಣು ಗ್ಲಾಸ್‌ ಒಳಗೆ ಬೀಳುತ್ತದೆ ಸಿಪ್ಪೆ ಬಿಸಾಡಬಹುದು. ನೈಫ್‌ ಬಳಸುವುದಕ್ಕಿಂತ ಈ ವಿಧಾನ ತುಂಬಾ ಸುಲಭ.

5. ಕ್ಯಾಪ್ಸಿಕಂ ಕತ್ತರಿಸಲು ಟಿಪ್ಸ್

5. ಕ್ಯಾಪ್ಸಿಕಂ ಕತ್ತರಿಸಲು ಟಿಪ್ಸ್

ಕೆಲವರಿಗೆ ಕ್ಯಾಪ್ಸಿಕಂನಲ್ಲಿರುವ ಬೀಜ ಬಳಸಲು ಇಷ್ಟವಾಗುವುದಿಲ್ಲ. ಅಂಥವರು ಕ್ಯಾಪ್ಸಿಕಂ ಕತ್ತರಿಸುವಾಗ ಅದರ ಬೀಜ ತೆಗೆಯಲು ಈ ವಿಧಾನ ಬಳಸಬಹುದು. ಹರಿತವಾದ ನೈಫ್‌ನಿಂದ ಅದರ ಎರಡೂ ಬದಿ ಕತ್ತರಿಸಿ. ಈಗ ನೈಫ್‌ ಅನ್ನು ಅದರ ಒಳಗೆ ಒಮ್ಮೆ ಆಡಿಸಿದರೆ ಸಾಕು ಬೀಜಗಳು ಹೊರಗೆ ಬೀಳುವುದು, ನಂತರ ಕ್ಯಾಪ್ಸಿಕಂ ಕತ್ತರಿಸಿ.

6. ಆಲೂಗಡ್ಡೆಯ ಸಿಪ್ಪೆ ಸುಲಿಯುವುದು ಹೇಗೆ

6. ಆಲೂಗಡ್ಡೆಯ ಸಿಪ್ಪೆ ಸುಲಿಯುವುದು ಹೇಗೆ

ಆಲೂಗಡ್ಡೆಯನ್ನು ಬೇಯಿಸಿದಾಗ ಸಿಪ್ಪೆ ಸುಲಭವಾಗಿ ಸುಲಿದು ಬರಲು ಬೇಯಿಸುವ ಮುನ್ನ ನೈಫ್‌ನಿಂದ ಅದರ ಸುತ್ತ ಸ್ಪೈರಲ್‌ ರೀತಿ ಗೆರೆಗಳನ್ನು ಎಳೆಯಿರಿ. ಹೀಗೆ ಮಾಡುವುದರಿಂದ ಆಲೂಗಡ್ಡೆ ಬೇಗನೆ ಬೇಯುತ್ತದೆ ಕೂಡ. ಈಗ ಬೆಂದ ಆಲೂಗಡ್ಡೆಯ ಸಿಪ್ಪೆ ಸುಲಭವಾಗಿ ಸುಲಿದು ಬರುವುದು. ಆದರೆ ಆಲೂಗಡ್ಡೆ ತುಂಬಾ ಬೇಯಿಸಬೇಡಿ. ಹದಕ್ಕೆ ತಕ್ಕಂತೆ ಬೇಯಿಸಿ.

7. ಈರುಳ್ಳಿ ಕತ್ತರಿಸಲು ಟಿಪ್ಸ್

7. ಈರುಳ್ಳಿ ಕತ್ತರಿಸಲು ಟಿಪ್ಸ್

ಸೂಪ್, ಪಾಸ್ತಾ ಮಾಡುವಾಗ ಈರುಳ್ಳಿ ಉದ್ದುದ್ದವಾಗಿ ತೆಳುವಾಗಿ ಇರಬೇಕು. ಆದರೆ ಹೀಗೆ ಕತ್ತರಿಸಲು ತುಂಬಾ ಸಮಯಬೇಕು. ಬದಲಿಗೆ ಈರುಳ್ಳಿಯನ್ನು ಅರ್ಧ ಭಾಗವನ್ನಾಗಿ ಕತ್ತರಿಸಿ, ತುರಿದರೆ ಸಾಕು. ಇನ್ನು ಆಮ್ಲೆಟ್‌ ಮಾಡಲು ಈ ವಿಧಾನ ಬಳಸಬಹುದು.

8. ನಿಂಬೆಹಣ್ಣು ಕತ್ತರಿಸದೆ ನಿಂಬೆರಸ ತೆಗೆಯುವುದು ಹೇಗೆ?

8. ನಿಂಬೆಹಣ್ಣು ಕತ್ತರಿಸದೆ ನಿಂಬೆರಸ ತೆಗೆಯುವುದು ಹೇಗೆ?

ಸ್ವಲ್ಪ ನಿಂಬೆರಸ ಬೇಕಾಗಿರುತ್ತದೆ, ಆದರೆ ಕತ್ತರಿಸಿಟ್ಟರೆ ಉಳಿದ ಅರ್ಧ ಭಾಗ ಹಾಳಾಗುವುದು ಎಂದು ನೀವು ಯೋಚಿಸುವುದಾದರೆ ಸೂಜಿ ಬಳಸುವ ವಿಧಾನ ಬಳಸಬಹುದು. ನಿಂಬೆ ಹಣ್ಣಿಗೆ ಸೂಜಿ ಚುಚ್ಚಿ ನಿಂಬೆಹಣ್ಣು ಹಿಂಡಿದರೆ ರಸ ಬರೆಯುವುದು. ನಂತರ ಅದನ್ನು ಕತ್ತರಿಸದೆ ಇರುವುದರಿಂದ ಕತ್ತರಿಸಿದ ನಿಂಬೆ ಹಣ್ಣಿನಂತೆ ಬೇಗನೆ ಹಾಳಾಗುವುದಿಲ್ಲ.

9. ಶುಂಠಿಯ ಸಿಪ್ಪೆ ಸುಲಿಯಲು ಟಿಪ್ಸ್

9. ಶುಂಠಿಯ ಸಿಪ್ಪೆ ಸುಲಿಯಲು ಟಿಪ್ಸ್

ನೀವು ಶುಂಠಿಯ ಸಿಪ್ಪೆ ಸುಲಿಯುವಾಗ ನೈಫ್ ಅಥವಾ ಪೀಲರ್ ಬಳಸುತ್ತೇವೆ. ಇದರಿಂದ ಸಿಪ್ಪೆ ಜೊತೆಗೆ ಸ್ವಲ್ಪ ಶುಂಠಿಯೂ ವ್ಯರ್ಥವಾಗುತ್ತದೆ. ಈ ವಿಧಾನದ ಬದಲಿಗೆ ಸ್ವಲ್ಪ ದೊಡ್ಡ ತುಂಡಿನ ಶುಂಠಿಯಾದರೆ ಅದರ ನಡುಭಾಗವನ್ನು ಕತ್ತರಿಸಿ ಸ್ಪೂನ್ ಬಳಸಿ ತೆಗೆದರೆ ಸುಲಭದಲ್ಲಿ ತೆಗೆಯಬಹುದು, ಶುಂಠಿಯೂ ವೇಸ್ಟ್ ಆಗುವುದಿಲ್ಲ.

English summary

Super Kitchen Tips For Easy Cooking

Here we have given easy cooking tips, this tips help you to easy your work, Read on..
Story first published: Thursday, May 14, 2020, 17:44 [IST]
X
Desktop Bottom Promotion