For Quick Alerts
ALLOW NOTIFICATIONS  
For Daily Alerts

ವಾಸ್ತು ಪ್ರಕಾರ ಈ ಗಿಡಗಳು ಮನೆಗೆ ಅದೃಷ್ಟ ತರುವುದು

|

ಮನೆ ಮುಂದೆ ಹೂವಿನ ಗಿಡಗಳಿದ್ದರೆ ಮನೆಗೆ ಅದೇನೋ ಶೋಭೆ. ಎಲೆಗಳ ಹಸಿರು ಬಣ್ಣ ಮನೆಗೆ ವಿಶೇಷ ಕಳೆ ನೀಡಿದರೆ ಅದು ಆಮ್ಲಜನಕ ಹೊರ ಸೂಸುವುದರಿಂದ ಆರೋಗ್ಯದ ದೃಷ್ಟಿಯಿಂದ ನೋಡಿದಾಗ ತುಂಬಾ ಒಳ್ಳೆಯದು. ಇನ್ನು ವಾಸ್ತುಶಾಸ್ತ್ರದಲ್ಲಿನ ಕೆಲವೊಂದು ಗಿಡಗಳು ಮನೆಯಲ್ಲಿದ್ದರೆ ಅದೃಷ್ಟ ಎಂದು ಹೇಳಲಾಗಿದೆ.

Lucky plant

ಈ ಗಿಡಗಳನ್ನು ಮನೆಯಲ್ಲಿ ಮಾತ್ರವಲ್ಲ ಕೆಲಸದ ಜಾಗದಲ್ಲಿ ಇಟ್ಟರೂ ಒಳ್ಳೆಯದು. ಈ ಗಿಡಗಳನ್ನು ನೋಡುವುದರಿಂದ ಅದೃಷ್ಟ ಹಾಗೂ ಒಳ್ಳೆಯ ಕರ್ಮ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಕೆಲವೊಂದು ಗಿಡಗಳಿಗೆ ಧಾರ್ಮಿಕವಾಗಿಯೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಇಲ್ಲಿ ನಾವು ವಾಸ್ತು ಪ್ರಕಾರ ಮನೆಯಲ್ಲಿ ಯಾವ ಗಿಡಗಳನ್ನು ಇಟ್ಟರೆ ಒಳ್ಳೆಯದು ಎಂದು ಹೇಳಲಾಗಿದೆ ನೋಡಿ:

1. ತುಳಸಿ ಗಿಡ

1. ತುಳಸಿ ಗಿಡ

ತುಳಸಿಯನ್ನು ಪವಿತ್ರ ಗಿಡವೆಂದೇ ಪೂಜಿಸಲಾಗುವುದು. ಇದನ್ನು ಮನೆಯಲ್ಲಿ ಪೂಜೆಯಲ್ಲಿ ಬಳಸಲಾಗುವುದು. ಧಾರ್ಮಿಕ ಪೂಜೆ ವಿಧಿ ವಿಧಾನಗಳಲ್ಲಿ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರಲ್ಲಿ ಅನೇಕ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಆರೋಗ್ಯ ದೃಷ್ಟಿಯಿಂದ ನೋಡಿದಾಗಲೂ ತುಳಸಿ ತುಂಬಾ ಶ್ರೇಷ್ಠ.

ವಾಸ್ತು ಶಾಸ್ತ್ರ ಪ್ರಕಾರ ಮನೆಯಲ್ಲಿ ತುಳಸಿ ಗಿಡವಿದ್ದರೆ ಒಳ್ಳೆಯದು. ತುಳಸಿ ಗಿಡವನ್ನು ಇಡುವಾಗ ಉತ್ತರ, ಪೂರ್ವ, ಹಾಗೂ ಈಶಾನ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು.

2. ಅದೃಷ್ಟದ ಬಿದಿರಿನ ಗಿಡ

2. ಅದೃಷ್ಟದ ಬಿದಿರಿನ ಗಿಡ

ಬಿದಿರಿನ ಗಿಡ ದೀರ್ಘಾಯುಸ್ಸು, ಸಂಪತ್ತು, ಸಂತೋಷದ ಸಂಕೇತವಾಗಿದೆ. ಇದನ್ನು ಮನೆಯಲ್ಲಿ ಅತವಾ ಕೆಲಸದ ಜಾಗದಲ್ಲಿ ಇಡುವುದರಿಂದ ಋಣಾತ್ಮಕ ಶಕ್ತಿಯನ್ನು ಹೊರ ದೂಡುವುದು. ಎಷ್ಟು ಬಿದಿರಿನ ಕಡ್ಡಿಗಳಿರುವ ಗಿಡವನ್ನು ಇಡುತ್ತೇವೆ ಅವು ಒಂದೊಂದು ಅರ್ಥವನ್ನು ಸುಚಿಸುತ್ತದೆ. ಎರಡು ಕಡ್ಡಿಯಿರುವ ಬಿದಿರಿನ ಗಿಡವನ್ನು ಬೆಡ್‌ರೂಂನಲ್ಲಿ ಇಡುವುದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಮೂರು ಕಟ್ಟಿ ಇರುವ ಬಿದಿರಿನ ಗಿಡ ಬೆಳವಣಿಗೆ ಹಾಗೂ ಸಂತೋಷ, ಐದು ಕಡ್ಡಿಗಳಿರುವ ಗಿಡ ಇಡುವುದರಿಂದ ಆರೋಗ್ಯ ವೃದ್ಧಿಯಾಗುವುದು.

3. ಮನಿ ಪ್ಲ್ಯಾಂಟ್

3. ಮನಿ ಪ್ಲ್ಯಾಂಟ್

ಈ ಗಿಡ ಗಾಳಿಯಲ್ಲಿರುವ ಕಲುಷಿತ ಅಂಶವನ್ನು ಹೀರಿಕೊಂಡು ವಾತಾವರಣವನ್ನು ಶುದ್ಧ ಮಾಡುತ್ತದೆ. ಇದನ್ನು ಮನೆಯ ಒಳಗಡೆ ಇಡುವುದರಿಂದ ಮನೆಯ ಒಳಗಡೆಯ ಗಾಳಿ ಶುದ್ಧವಾಗಿರುತ್ತದೆ. ಇದು ಹಾನಿಕಾರಕ ವಿಕಿರಣಗಳನ್ನು ತಡೆಯುವುದರಿಂದ ಫ್ರಿಡ್ಜ್‌, ಟಿವಿ ಬಳಿ ಇದನ್ನು ಇಡುತ್ತಾರೆ. ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ ಈ ಗಿಡ ಇಟ್ಟರೆ ಮಾನಸಿಕ ಒತ್ತಡ ಕಡಿಮೆ ಮಾಡುವುದು.

ವಾಸ್ತು ಶಾಸ್ತ್ರದ ಪ್ರಕಾರ ಈ ಗಿಡವನ್ನು ಆಗ್ನೇಯ ದಿಕ್ಕಿನ್ಲಿಟ್ಟರೆ ಒಳ್ಳೆಯದು. ಇನ್ನು ಈ ಗಿಡವನ್ನು ಮನೆಯ ಹೊರಗಡೆ ಇಡಬಾರದು. ಇದು ಮನೆಯ ಒಳಗಡೆ ಇರಬೇಕು.

4. ಲೋಳೆಸರ

4. ಲೋಳೆಸರ

ಲೋಳೆಸರದಲ್ಲಿರುವ ಅನೇಕ ಆರೋಗ್ಯಕರ ಗುಣಗಳ ಬಗ್ಗೆ ಗೊತ್ತಿದೆ. ಅನೇಕ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಬಹುದು. ಆದ್ದರಿಂದ ಮನೆಯಲ್ಲಿ ಲೋಳೆಸರ ಗಿಡ ಇರುವುದು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ತುಂಬಾ ಸಹಕಾರಿ. ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಇದು ಮನೆಯಲ್ಲಿದ್ದರೆ ಋಣಾತ್ಮಕ ಶಕ್ತಿ ಹೊರಹಾಕಿ, ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬುತ್ತದೆ.

5. ಸ್ಪೈಡರ್ ಪ್ಲ್ಯಾಂಟ್

5. ಸ್ಪೈಡರ್ ಪ್ಲ್ಯಾಂಟ್

ಈ ಗಿಡ ನೋಡಲು ತುಂಬಾ ಸುಂದರವಾಗಿರುವುದರಿಂದ ಮನೆಯ ಅಲಂಕಾರ ಹೆಚ್ಚಿಸುವುದು. ಇದನ್ನು ಹೂಕುಂಡದಲ್ಲಿ ಹಾಕಿ ನೆಲದಲ್ಲಿ ಇಡಬಹುದು. ಇದು ಮನೆಯ ಅಲಂಕಾರ ಹೆಚ್ಚಿಸುವುದು ಮಾತ್ರವಲ್ಲ, ಮನೆಯೊಳಗಿನ ಗಾಳಿಯನ್ನು ಕೂಡ ಶುದ್ಧವಾಗಿಡುತ್ತದೆ. ಹೊಲೆ ಅಡುಗೆ ಮನೆಯಲ್ಲಿ ಇಟ್ಟರೆ ಇದು ಇಂಗಾಲದ ಡೈ ಆಕ್ಸೈಡ್‌ ಹೀರಿಕೊಂಡು ಮನೆಯ ಗಾಳಿಯನ್ನು ಶುದ್ಧವಾಗಿಡುತ್ತದೆ. ಈ ಗಿಡ ಮನೆಯಲ್ಲಿದ್ದರೆ ಸಂಪತ್ತು ವೃದ್ಧಿಯಾಗುವುದು, ಉತ್ತಮ ಆರೋಗ್ಯ ದೊರೆಯುವುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

5. ತಾವರೆ ಗಿಡ

5. ತಾವರೆ ಗಿಡ

ತಾವರೆ ಹೂವನ್ನು ಲಕ್ಷ್ಮಿಗೆ ಅರ್ಪಿಸಲಾಗುತ್ತದೆ. ಇದನ್ನು ಲಕ್ಷ್ಮಿಗೆ ಅರ್ಪಿಸುವುದರಿಂದ ಲಕ್ಷ್ಮಿ ಒಲಿಯುತ್ತಾಳೆ. ತಾವರೆ ಹೂ ಮನ ಶಾಂತಿ ಹಾಗೂ ಸಮೃದ್ಧಿಯನ್ನು ತರುತ್ತದೆ. ಧಾರ್ಮಿಕತೆ ನಂಬುವುದಾದರೆ ಈ ಗಿಡವನ್ನು ಮನೆಯಲ್ಲಿ ಬೆಳೆಸುವುದು ಒಳ್ಳೆಯದು. ಮನೆ ಮುಂದೆ ಚಿಕ್ಕ ಹೂ ಕುಂಡವಿದ್ದರೆ ಅದರಲ್ಲಿ ತಾವರೆ ಗಿಡ ಬೆಳೆಯಬಹುದು. ಇದನ್ನು ಮನೆಮದ್ದಾಗಿ ಕೂಡ ಬಳಸಬಹುದಾಗಿದೆ.

6. ಮಲ್ಲಿಗೆ ಹೂ

6. ಮಲ್ಲಿಗೆ ಹೂ

ಮಲ್ಲಿಗೆ ಗಿಡವೊಂದು ಮನೆಯಲ್ಲಿದ್ದರೆ ಸುತ್ತ ಮುತ್ತಲಿನ ಪರಿಸರ ಘಮ್ಮೆಂದು ಸುವಾಸನೆ ಬೀರಿ ತುಂಬಾ ಆಹ್ಲಾದಕರವಾಗಿರುತ್ತದೆ. ಈ ಗಿಡ ಮನೆಯಲ್ಲಿದ್ದರೆ ಕೆಲಸದ ಒತ್ತಡ, ಮತ್ತೇನೋ ಕಾರಣಕ್ಕೆ ಮಾನಸಿಕ ಒತ್ತಡಕ್ಕೆ ಒಳಗಾದಾಗ ಒತ್ತಡವನ್ನು ಕಡಿಮೆ ಮಾಡುತ್ತದೆ. ವಾಸ್ತು ಶಾಸ್ತ್ರ ಪ್ರಕಾರ ಮಲ್ಲಿಗೆ ಗಿಡವನ್ನು ಪೂರ್ವ, ಈಸಾನ್ಯ ಅಥವಾ ಮನೆಯಕಿಡಕಿ ಇರುವ ಕಡೆ ನೆಡುವುದು ಒಳ್ಳೆಯದು.

7. ಲಿಲ್ಲಿ ಗಿಡ

7. ಲಿಲ್ಲಿ ಗಿಡ

ಇದು ಮನೆಯಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ತರುತ್ತದೆ. ಮಾನಸಿಕವಾಗಿ ಕುಗ್ಗಿದಾಗ ಮನಸ್ಸಿಗೆ ಧನಾತ್ಮಕ ಶಕ್ತಿ ತುಂಬುವ ಗುಣ ಲಿಲ್ಲಿ ಗಿಡದಲ್ಲಿದೆ ಇದನ್ನು ಮನೆಯಲ್ಲಿ ಇಡುವುದರಿಂದ ಮನೆಯೊಳಗಡೆ ಸದಸ್ಯರು ಸಾಮರಸ್ಯದಿಂದ ಜೀವನ ನಡೆಸುತ್ತಾರೆ. ಇದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುವುದು. ಲಿಲ್ಲಿ ಗಿಡ ಮನೆಯಲ್ಲಿದ್ದರೆ ಮನೆಯಲ್ಲಿ ನೆಮ್ಮದಿ ನೆಲೆಸುವುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

8. ಜಡೆ ಗಿಡ

8. ಜಡೆ ಗಿಡ

ಜಡೆ ಗಿಡವನ್ನುಅದೃಷ್ಟದ ಗಿಡವೆಂದೇ ಪರಿಗಣಿಸಲಾಗಿದೆ. ಇದು ಮನೆಯಲ್ಲಿದ್ದರೆ ಅದೃಷ್ಟ ಒಲಿಯುವುದು. ಈ ಗಿಡ ನೋಡಲು ಚಿಕ್ಕದಾಗಿದ್ದು ದಪ್ಪ-ದಪ್ಪವಾದ ಎಲೆಗಳನ್ನು ಹೊಂದಿದ್ದು ನೋಡಲು ಸುಂದರವಾಗಿರುತ್ತದೆ. ಇದನ್ನು ಮನೆಯ ಮುಂದುಗಡೆ ಇಡಲಾಗುವುದು. ಈ ಗಿಡ ಮನೆಯ ಮುಂಭಾಗದಲ್ಲಿದ್ದರೆ ಯಾವುದೇ ಋಣಾತ್ಮಕ ಶಕ್ತಿ ಒಳಗೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಇದೆ. ಇದನ್ನು ಕೆಲಸದ ಜಾಗದಲ್ಲಿಯೂ ಇಡಬಹುದು.

9. ರಬ್ಬರ್ ಗಿಡ

9. ರಬ್ಬರ್ ಗಿಡ

ಈ ಗಿಡವನ್ನು ಪವಿತ್ರವಾದ ಗಿಡ ಎಂದೇ ಪರಿಗಣಿಸಲಾಗಿದೆ. ಇದು ಅದೃಷ್ಟ ತರುವ ಗಿಡ ಎಂದು ನಂಬಲಾಗಿದೆ. ಈ ಗಿಡ ಮನೆಯಲ್ಲಿದ್ದರೆ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುದು. ಮನೆಯಲ್ಲಿ ಹಣ ಹಾಗೂ ಆಭರಣ ಇಡುವ ಕಡೆ ಈ ಗಿಡ ಇಟ್ಟರೆ ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆ ಇದೆ. ಫೆಂಗ್‌ ಶುಯಿ ಪ್ರಕಾರ ಈ ಗಿಡ ಮನೆಯಲ್ಲಿದ್ದರೆ ಅದೃಷ್ಟ, ಇದರಿಂದ ಹಣಕಾಸು ಹೆಚ್ಚುವುದು.

 10 ಆರ್ಚಿಡ್ ಗಿಡ

10 ಆರ್ಚಿಡ್ ಗಿಡ

ಈ ಗಿಡ ಮನೆಗೆ ಸಂಪತ್ತು ತರುತ್ತದೆ. ಈ ಗಿಡದಲ್ಲಿ ಅರಳುವ ಹೂ ಮನೆಯವರಲ್ಲಿ ನೆಮ್ಮದಿ ಹಾಗೂ ಧನಾತ್ಮಕ ಚಿಂತನೆ ಇರುವಂತೆ ಮಾಡುತ್ತದೆ. ಈ ಗಿಡವನ್ನು ಮದುವೆಯಾದ ನವ ಜೋಡಿಗೆ ಉಡುಗೊರೆಯಾಗಿ ನೀಡಬಹುದು. ಇನ್ನು ಮನೆಯಲ್ಲಿ ಮಗು ಹುಟ್ಟಿದ್ದರೆ ಈ ಗಿಡದಿಂದ ಪ್ರಯೋಜನ ಪಡೆಯಬಹುದು. ಈ ಗಿಡವನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು.

11. ತಾಳೆಗಿಡ

11. ತಾಳೆಗಿಡ

ಚಿಕ್ಕ ಹೂ ಕುಂಡದಲ್ಲಿ ತಾಳೆಗಿಡ ನೆಡುವುದರಿಂದ ಕೂಡ ಮನೆಗೆ ಒಳಿತಾಗುವುದು. ಈ ಗಿಡವನ್ನು ಕೆಲಸದ ಜಾಗದಲ್ಲಿ ಕೂಡ ಇಡಲಾಗುತ್ತದೆ. ಇದು ಹಾನಿಕಾರಕ ವಿಕಿರಣಗಳನ್ನು ಹೀರಿಕೊಂಡು ಶುದ್ಧ ಗಾಳಿಯನ್ನು ನೀಡುತ್ತದೆ. ಇದನ್ನು ಮನೆಯ ಆವರಣದಲ್ಲಿ ಇಡುವುದರಿಂದ ಮೆನಯ ಅಲಂಕಾರ ಹೆಚ್ಚುವುದು. ಈ ಗಿಡ ಮನೆಯಲ್ಲಿದ್ದರೆ ಒಳಿತಾಗುವುದು ಎಂಬ ನಂಬಿಕೆ ಇದೆ.

English summary

Plants That Will Change The luck Of Your Home

Vaastu Shashtra, which is an ancient science of architecture that originated in India, tells about certain lucky plants that bring good fortune to one's life.
X
Desktop Bottom Promotion