For Quick Alerts
ALLOW NOTIFICATIONS  
For Daily Alerts

ಹೊಸ ವರ್ಷದಲ್ಲಿ ಲಕ್ಷ್ಮಿ ಕೃಪೆ ಬೇಕೆಂದರೆ ಮನೆಯಲ್ಲಿರುವ ಇಂಥ ವಸ್ತುಗಳನ್ನು ಮೊದಲು ಹೊರಹಾಕಿ

|

ಹೊಸ ವರ್ಷ ನಮ್ಮೆಲ್ಲರ ಜೀವನದಲ್ಲಿ ಸುಖ, ಸಮದ್ಧಿ, ಹೊಸ ಹರ್ಷ ತರಬೇಕು, ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲೆಸಬೇಕೆಂದು ನಾವೆಲ್ಲಾ ಬಯಸುತ್ತೇವೆ. ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲೆಸಬೇಕೆಂದರೆ ಅವಳನ್ನು ಆಕರ್ಷಿಸುವ ರೀತಿಯಲ್ಲಿ ಮನೆಯಿರಬೇಕಾಗುತ್ತದೆ.

ಮನೆ ಪುಟ್ಟದಾಗಿರಲಿ, ಅರಮನೆಯಾಗಿರಲಿ ಲಕ್ಷ್ಮಿ ನಮ್ಮ ಮನೆಯಲ್ಲಿ ಬಂದು ನೆಲೆಸಬೇಕೆಂದರೆ ಋಣಾತ್ಮಕ ಶಕ್ತಿಯನ್ನು ಆಕರ್ಷಿಸುವ ವಸ್ತುಗಳು ನಮ್ಮ ಮನೆಯಲ್ಲಿರಬಾರದು. ಕೆಲವೊಮ್ಮೆ ನಾವು ಬಳಸದೆ ಇರುವ ಎಷ್ಟೋ ವಸ್ತುಗಳನ್ನು ಹಾಗೇ ಇಟ್ಟು ಬಿಡುತ್ತೇವೆ. ಆ ವಸ್ತುಗಳು ಮನೆಗೆ ಒಳ್ಳೆಯದಲ್ಲ.

ಆದ್ದರಿಂದ ಅದೃಷ್ಟ ನಿಮ್ಮ ಪಾಲಿಗೆ ಒಲಿಯುವಂತೆ ಮಾಡಲು ನಿಮ್ಮ ಮನೆಯಲ್ಲಿ ಈ ಬಗೆಯ ವಸ್ತುಗಳಿದ್ದರೆ ಹೊಸ ವರ್ಷಕ್ಕೆ ಮುನ್ನವೇ ಅವುಗಳನ್ನು ಮನೆಯಿಂದ ಹೊರಹಾಕಿ:

ಮುರಿದ ಕುರ್ಚಿ, ಪೀಠೋಪಕರಣಗಳು

ಮುರಿದ ಕುರ್ಚಿ, ಪೀಠೋಪಕರಣಗಳು

ಮುರಿದ ವಸ್ತುಗಳನ್ನು ಬಳಸುವುದು ಮನೆಗೆ ಒಳ್ಳೆಯದಲ್ಲ. ನಿಮ್ಮ ಮನೆಯಲ್ಲಿ ಇಂಥ ವಸ್ತುಗಳಿದ್ದರೆ ಅವುಗಳನ್ನು ಮನೆಯಿಂದ ಹೊರಗಡೆ ಹಾಕಿ. ಮುರಿದ ಕುರ್ಚಿ ಮನೆಗೆ ಅಶುಭವಾಗಿದೆ.

ಮುರಿದ ಪೀಠೋಪಕರಣಗಳು ಮನೆಯಲ್ಲಿದ್ದರೆ ಮನೆ ನೋಡಲು ಕೂಡ ಚೆನ್ನಾಗಿ ಕಾಣುವುದಿಲ್ಲ, ಅಲ್ಲದೆ ಅಂಥ ವಸ್ತುಗಳು ಮನೆ ಸ್ಥಳಾವಕಾಶ ಕೂಡ ಕಡಿಮೆ ಮಾಡುತ್ತದೆ. ಮುರಿದ ವಸ್ತುಗಳನ್ನು ಮನೆಯಿಂದ ಹೊರ ಹಾಕಿ ಹೊಸ ವರ್ಷಕ್ಕೆ ಮನೆಯನ್ನು ತಳಿರು-ತೋರಣಗಳಿಂದ ಅಲಂಕರಿಸಿ, ಲಕ್ಷ್ಮಿ ನಿಮ್ಮ ಮನೆಯ ಧನಾತ್ಮಕ ಕಳೆಗೆ ಆಕರ್ಷಿತಳಾಗುತ್ತಾಳೆ.

ಹಳೆಯ, ಮುರಿದ ಚಪ್ಪಲಿಗಳು

ಚಪ್ಪಲಿ ಸ್ಟ್ಯಾಂಡಿನಲ್ಲಿ ಹಳೆಯ ಅಥವಾ ಮುರಿದ ಚಪ್ಪಲಿಗಳಿದ್ದರೆ ಅವುಗಳನ್ನು ಕಸದ ಬುಟ್ಟಿಗೆ ಹಾಕಿ. ಹಳೆಯ ಅಥವಾ ಬಳಕೆ ಮಾಡದೇ ಇರುವ ಮುರಿದ ಚಪ್ಪಲಿಗಳನ್ನು ಇಟ್ಟುಕೊಳ್ಳಬಾರದು.

ಹಳೆಯ ಅಥವಾ ಮುರಿದ ಚಪ್ಪಲಿಗಳನ್ನು ಮನೆಯಲ್ಲಿಯೇ ಇಟ್ಟರೆ ಅದು ವೇಸ್ಟ್, ಅದರ ಬದಲಿಗೆ ಅವುಗಳನ್ನು ಬಿಸಾಡಿ. ಬರೀ ಈಗ ಮಾತ್ರವಲ್ಲ ಯಾವಾಗಲೂ ಬಳಸದೆ ಇರುವ ಹಾಗೂ ಮುರಿದ ಚಪ್ಪಲಿಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳಬೇಡಿ.

ಒಡೆದ ಗ್ಲಾಸ್‌ಗಳು

ಒಡೆದ ಗ್ಲಾಸ್‌ಗಳು

ನಿಮ್ಮ ಮನೆಯಲ್ಲಿ ಒಡೆದ ಗ್ಲಾಸ್‌ಗಳಿದ್ದರೆ ಅವುಗಳನ್ನು ಕೂಡ ಕೂಡಲೇ ಮನೆಯಿಂದ ಹೊರಹಾಕಿ. ಒಡೆದ ಕನ್ನಡಿ ಇದ್ದರೆ ಅವುಗಳನ್ನು ಬದಲಾಯಿಸಿ. ಮನೆಯ ಕಿಟಕಿಗಳು ಒಡೆದಿದ್ದರೆ ಅವುಗಳನ್ನು ಸರಿಪಡಿಸಿ. ಒಡೆದ ಗಾಜಿನ ಚೂರುಗಳನ್ನು ಮನೆಯಲ್ಲಿ ಇಡಲೇಬೇಡಿ. ಮತ್ತೆ ಬಿಸಾಡುವ ಎಂದು ಮರೆತು ಇಟ್ಟಿದ್ದರೆ ಕೂಡಲೇ ಅವುಗಳನ್ನು ಕಸದ ಬುಟ್ಟಿಗೆ ಹಾಕಿ. ಒಡೆದ ಗ್ಲಾಸ್‌ಗಳು ಮನೆಗೆ ಒಳ್ಳೆಯದಲ್ಲ ಎಂಬುವುದು ವೈದಿಕ ಶಾಸ್ತ್ರದಲ್ಲಿ ಹೇಳಿರುವುದು ವೈಜ್ಞಾನಿಕವಾಗಿಯೂ ಸತ್ಯಾಂಶವಾಗಿದೆ. ಏಕೆಂದರೆ ಅವುಗಳು ಆಕಸ್ಮಿಕವಾಗಿ ತಾಗಿದರೆ ಗಾಯವಾಗುವುದು, ಅಂಥ ವಸ್ತುಗಳನ್ನು ಮೊದಲು ಹೊರಹಾಕಿ.

ದೇವರ ಮೂರ್ತಿಗಳು ಹಾಳಾಗಿದ್ದರೆ

ದೇವರ ಮೂರ್ತಿಗಳು ಹಾಳಾಗಿದ್ದರೆ

ಹಾಳಾದ ಅಥವಾ ಮುರಿದ ದೇವರ ಮೂರ್ತಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ದೇವರ ಫೋಟೋಗಳು ಒಡೆದಿದ್ದರೆ ಮನೆಯೊಳಗಡೆ ಇಡಬೇಡಿ. ದೇವರು ಎಂದರೆ ನಮ್ಮ ಮನಸ್ಸಿಗೆ ಧನಾತ್ಮಕ ಬಾವ ತುಂಬುವುದು. ನಮ್ಮೆಲ್ಲಾ ಕಷ್ಟಗಳಲ್ಲಿ ನನಗೆ ಸಹಾಯ ಮಾಡು, ಎಲ್ಲವನ್ನು ಎದುರಿಸುವ ಶಕ್ತಿ ನೀಡು ಎಂದು ದೇವರನ್ನು ಪ್ರಾರ್ಥಿಸುತ್ತೇವೆ. ಅಂಥ ದೇವರ ಮೂರ್ತಿ ಅಥವಾ ಫೋಟೋ ಒಡೆದಿದ್ದರೆ ಅವುಗಳನ್ನು ನೋಡಿದಾಗ ನಮ್ಮ ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆ ಮೂಡುವುದು, ಮನೆಯಲ್ಲೂ ಋಣಾತ್ಮಕ ಪ್ರಭಾವ ಬೀರುವುದು. ಆದ್ದರಿಂದ ಮುರಿದ ದೇವರ ವಿಗ್ರಹ ಅಥವಾ ಒಡೆದ ದೇವರ ಫೋಟೋಗಳನ್ನು ಮನೆಯಲ್ಲಿ ಇಡಲೇಬೇಡಿ. ಹಾಗಂತ ಕೆಲವರು ನೀರಿಗೆ ಹೋಗಿ ಹಾಕಿ ಬರುತ್ತಾರೆ, ಹಾಗೆಯೂ ಮಾಡಬೇಡಿ. ಅವುಗಳನ್ನು ಸರಿಯಾದ ರೀತಿಯಲ್ಲಿ ವಿಸರ್ಜಿಸಿ.

ಎಲೆಕ್ಟ್ರಿಕ್‌ ಬೋರ್ಡ್ ಹಾಳಾಗಿದ್ದರೆ

ಎಲೆಕ್ಟ್ರಿಕ್‌ ಬೋರ್ಡ್ ಹಾಳಾಗಿದ್ದರೆ

ಮನೆಯ ಸ್ವಿಚ್‌ ಬೋರ್ಡ್‌ಗಳು ಹಾಳಾಗಿದ್ದರೆ ಅವುಗಳನ್ನು ಸರಿಪಡಿಸಿ. ಶಾಕ್‌ ಹೊಡೆಯುವ ಸಾಧ್ಯತೆ ಹೆಚ್ಚಿರುವುದರಿಂದ ಹಾಳಾದ ಸ್ವಿಚ್‌ ಬೋರ್ಡ್, ಎಲೆಕ್ಟ್ರಿಕ್ ವಸ್ತುಗಳನ್ನು ಬಳಸುತ್ತಿದ್ದರೆ ಅಪಾಯಕಾರಿ.

ಮುರಿದ ಪಾತ್ರೆಗಳು

ಮನೆಯಲ್ಲಿ ಮುರಿದ ಪಾತ್ರೆಗಳು ಅಥವಾ ಹಾಳಾದ ಕುಕ್ಕರ್‌ ಇಂಥ ವಸ್ತುಗಳಿದ್ದರೆ ಅವುಗಳನ್ನು ಹೊರಹಾಕಿ, ಇಂಥ ವಸ್ತುಗಳನ್ನು ಬಳಸುವುದು ಕೂಡ ಮನೆಗೆ ಒಳ್ಳೆಯದಲ್ಲ. ಮನೆಯಲ್ಲಿ ಜಜ್ಜಿ ಹೋದ, ಮುರಿದ ಪಾತ್ರೆಗಳಿದ್ದರೆ ಮೊದಲಿಗೆ ಗುಜುರಿಗೆ ಹಾಕಿ, ಮನೆಯನ್ನು ಸ್ವಚ್ಛ ಮಾಡಿ. ಮನೆಯ ದೂಳೆ ಒರೆಸಿ, ಮನೆಯನ್ನು ಸ್ವಚ್ಛಮಾಡಿ ತಳಿರು ತೋರಣಗಳಿಂದ ಅಲಂಕರಿಸಿ ತುಪ್ಪದ ದೀಪ ಹಚ್ಚಿ ಹೊಸ ವರ್ಷ ಸ್ವಾಗತಿಸಿ.

2023 ನಿಮ್ಮೆಲ್ಲರ ಬಾಳಲ್ಲಿ ಹೊಸತನ ಹಾಗೂ ಹರ್ಷ ತುಂಬಲಿ....

English summary

New Year 2023: Remove these things from your house before the new year for good luck in kannada

New Year 2023: If you want good luck You should not keep these things in your home in new year for good luck, take a look,
X
Desktop Bottom Promotion