For Quick Alerts
ALLOW NOTIFICATIONS  
For Daily Alerts

ಅಂದವಾದ ಮನೆಗೆ ಚೆಂದದ ಕರ್ಟನ್ಸ್‌ಗಳ ಆಯ್ಕೆ ಹೀಗಿರಲಿ

|

ಮನೆಯ ಅಲಂಕಾರ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅತ್ಯಂತ ಉತ್ಸಾಹವೇ! ಯಾವ ವಸ್ತುಗಳನ್ನು ಎಲ್ಲಿ ಜೋಡಿಸಬೇಕು, ಯಾವ ಪಿಠೋಪಕರಣಗಳು ಆಯಾ ಕೋಣೆಗಳಿಗೆ ಹೊಂದಾಣಿಕೆಯಾಗುತ್ತವೆ ಹಾಗೂ ಯಾವ ಬಣ್ಣ ಯಾವ ಕೋಣೆಗೆ ಸರಿಹೊಂದುತ್ತದೆ ಹೀಗೆ - ನಮ್ಮ ಮುಂದಿರುವ ಆಯ್ಕೆಗಳು ನಗಣ್ಯ!

Important Things To Consider When Buying Curtains in Kannada

ಅಂದ ಹಾಗೆ ನಿಮ್ಮ ಮನೆಗೆ ಪೀಠೋಪಕರಣಗಳು, ವಾರ್ಡ್ರೋಬ್‌ಗಳು ಮತ್ತು ಕಿಚನ್ ಉಪಕರಣಗಳನ್ನೇಲ್ಲಾ ಖರೀದಿಸಿದ್ದೀರಾ? ಹಾಗಾದರೆ ಮನೆ ಅಲಂಕಾರಿಕತೆಗೆ ಸಂಬಂಧಿಸಿದ ಇನ್ನೊಂದು ಪ್ರಮುಖವಾದ ಅಂಶವಿದೆ, ಅದನ್ನು ನೀವು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ.- ಅದೇ ಕರ್ಟನ್ ಗಳು ಅಥವಾ ಪರದೆಗಳು. ಕೋಣೆಯ ಸೌಂದರ್ಯವನ್ನು ಹೆಚ್ಚಿಸಬಲ್ಲ ಅಲಂಕಾರದ ನಿರ್ಣಾಯಕ ವಿಷಯಗಳಲ್ಲಿ ಅವು ಒಂದು.

ತೆಳ್ಳಗಿನ ಮತ್ತು ನಯವಾದ ಪರದೆಗಳಿಂದ ಹಿಡಿದು, ಅಲಂಕಾರಿಕ, ಕಡು ಬಣ್ಣಗಳಿಂದ ಇತರ ಬಣ್ಣಗಳವರೆಗೆ ಹಾಗೂ ದಪ್ಪ ಬಟ್ಟೆಗಳಿಂದ ಹಿಡಿದು ಭಾರವಾದ ಅಪಾರದರ್ಶಕ ಪರದೆಗಳವರೆಗೆ - ಹೀಗೆ ನಿಮ್ಮ ಆಯ್ಕೆಗಳಿಗೆ ಅಂತ್ಯವಿಲ್ಲ. ಬಟ್ಟೆಗಳು ಮತ್ತು ಪರಿಕರಗಳಿಗಾಗಿ ಸಾಕಷ್ಟು ಆಯ್ಕೆಗಳು ನಿಮ್ಮ ಮುಂದಿದ್ದು, ಸರಿಯಾದ ಆಯ್ಕೆ ಮಾಡುವುದು ಸಾಕಷ್ಟು ಗೊಂದಲಮಯವಾಗಿಯೇ ಇರುತ್ತವೆ! ಪರದೆಗಳು ಮತ್ತು ಡ್ರಾಪ್ (ಒಂದು ಬಗೆಯ ದಪ್ಪ ಬಟ್ಟೆ) ಗಳನ್ನು ಹೇಗೆ, ನಿಮ್ಮ ಕೋಣೆಗಳಿಗೆ ಹೊಂದುಕೊಳ್ಳುವಂತೆ ಆಯ್ಕೆಮಾಡಿಕೊಳ್ಳಬೇಕು ಎಂಬುದು ಪರದೆಯನ್ನು ಆಯ್ಕೆಮಾಡುವಾಗ ಗಮನಿಸಬೇಕಾದ ಮೊದಲ ಹೆಜ್ಜೆ.

ಆಗಾಗ್ಗೆ, ಮನೆಮಾಲೀಕರು ವ್ಯತ್ಯಾಸವನ್ನು ತಿಳಿಯದೆ ಪರದೆ, ಡ್ರಾಪ್, ಬ್ಲೈಂಡ್ ಮತ್ತು ಶೇಡ್ಸ್ ಗಳನ್ನು ಕೋಣೆಯ ಅಲಂಕಾರಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೆ ಮಾಡುವುದರಿಂದ ಕಿಟಕಿಯಿಂದ ನಿಮ್ಮ ಕೋಣೆಗೆ ಸಿಗಬೇಕಾದ ಸೂರ್ಯನ ಬೆಳಕಿಗೆ ಇವು ಅಡ್ಡಿಪಡಿಸುತ್ತವೆ.

ಪರದೆಗಳು, ತೆಳುವಾದ ವಸ್ತು ಅಥವಾ ಬಟ್ಟೆಗಳಿಂದ ಮಾಡಿದ ಫ್ಯಾಬ್ರಿಕ್ ಪ್ಯಾನೆಲ್‌ಗಳಾಗಿದ್ದು ರಾಡ್‌/ ತಂತಿಗಳಲ್ಲಿ ಅವುಗಳನ್ನು ನೇತು ಹಾಕಲಾಗುತ್ತದೆ. ಅವುಗಳನ್ನು ಹೆಚ್ಚಾಗಿ ಗೌಪ್ಯತೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ, ಇದು ಮನೆಯ ಹೊರಾಂಗಣದ ಕಿಟಕಿಗಳಿಗೆ ಸೂಕ್ತವಾಗಿದೆ. ಆದರೆ, ಡ್ರಾಪ್‌ಗಳನ್ನು ದಪ್ಪವಾದ ವಸ್ತುಗಳಿಂದ/ಬಟ್ಟೆಗಳಿಂದ ತಯಾರಿಸಲಾಗುತ್ತದೆ, ಇದನ್ನು ಸೂರ್ಯನ ಬೆಳಕನ್ನು ತಡೆಯಲು ತಯಾರಿಸಲಾಗುತ್ತದೆ, ಇದು ಮಲಗುವ ಕೋಣೆಗಳಿಗೆ ಸೂಕ್ತವಾಗಿದೆ.

ಸರಿಯಾದ ಬಟ್ಟೆಯನ್ನು ಆರಿಸಿ

ಸರಿಯಾದ ಬಟ್ಟೆಯನ್ನು ಆರಿಸಿ

ಪರದೆಗಳ ನೋಟದಲ್ಲಿ ವಸ್ತುವು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಅದರ ಪರಿಣಾಮವಾಗಿ, ನಿಮ್ಮ ಕೋಣೆಯ ಸೌಂದರ್ಯವೂ ನಿರ್ಧಾರವಾಗುತ್ತದೆ. ಸಂಪೂರ್ಣ ಲೇಸ್ ನಿಂದ ಹಗುರವಾದ ಹತ್ತಿ ಬಟ್ಟೆಯವರೆಗೆ, ಮಧ್ಯಮ ತೂಕದ ಬ್ರೊಕೇಡ್ ಗಳಿಂದ ಭಾರೀ ವೆಲ್ವೆಟ್ ಗಳವರೆಗೆ, ನಿಮ್ಮ ಆಯ್ಕೆಗಳು ಸಾಕಷ್ಟಿವೆ!. ನಿಮ್ಮ ಬಟ್ಟೆಯನ್ನು ಆರಿಸುವಾಗ ನೀವು ಪರಿಗಣಿಸಬೇಕಾದ ಎರಡು ಅಂಶಗಳು ಇವು:

  • ನೀವು ಕೋಣೆಯ ಒಳಗೆ ಸೂರ್ಯನ ಬೆಳಕು ಎಷ್ಟು ಪ್ರವೇಶಿಸಬೇಕು ಎಂಬುದು
  • ನಿಮ್ಮ ಕೋಣೆಯ ಪರಿಸರ ಮತ್ತು ಅಲಂಕಾರ. ಉದಾಹರಣೆಗೆ, ಭಾರವಾದ ಬಟ್ಟೆಗಳು ಹೆಚ್ಚು ಸಾಂಪ್ರದಾಯಿಕ ಕೋಣೆಗೆ ಸರಿಹೊಂದುತ್ತವೆ, ಆದರೆ ಸಂಪೂರ್ಣ ಫ್ಯಾಬ್ರಿಕ್ / ತೆಳು ಬಟ್ಟೆ ಹೆಚ್ಚು ಕನಿಷ್ಠೀಯತೆಯ ಶೈಲಿಯ ಕೋಣೆ (ಕೇವಲ ಒಂದು ಅಥವಾ ಎರಡು ಬಣ್ಣವನ್ನು ಬಳಸಿ ಕೋಣೆಯನ್ನು ಅಲಂಕರಿಸಿರಲಾಗುತ್ತದೆ) ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
  • ಬಣ್ಣದ ಆಯ್ಕೆಯು ನೋಟವನ್ನು ಹೆಚ್ಚಿಸಬಹುದು ಅಥವಾ ಹಾಳುಮಾಡಬಹುದು

    ಬಣ್ಣದ ಆಯ್ಕೆಯು ನೋಟವನ್ನು ಹೆಚ್ಚಿಸಬಹುದು ಅಥವಾ ಹಾಳುಮಾಡಬಹುದು

    ನಿಮ್ಮ ಪರದೆಗಳ ಬಣ್ಣವು ಉಳಿದ ಪೀಠೋಪಕರಣಗಳೊಂದಿಗೆ ಹೊಂದುಕೊಳ್ಳಬೇಕು. ಅಲಂಕಾರಕ್ಕೆ ಹೊಂದಿಕೆಯಾಗುವ ಅಥವಾ ಅದಕ್ಕೆ ವ್ಯತಿರಿಕ್ತವಾದ ಡ್ರಾಪ್‌ಗಳನ್ನು ನೀವು ಆಯ್ಕೆ ಮಾಡಬಹುದು. ಆಹ್ಲಾದಕರ ನೋಟಕ್ಕಾಗಿ, ನಿಮ್ಮ ಗೋಡೆಗಳ ಬಣ್ಣಗಳಿಗೆ ಪೂರಕವಾದ ಬಣ್ಣದಲ್ಲಿ ಡ್ರಾಪ್‌ಗಳನ್ನು ಆರಿಸಿ. ಪರ್ಯಾಯವಾಗಿ, ಪರದೆ ಬಣ್ಣಗಳು ಪ್ರಮುಖ ಆಕರ್ಷಣೆ ಎನಿಸಲು ನೀವು ಬಯಸಿದರೆ, ಪೀಠೋಪಕರಣಗಳು ಮತ್ತು ಗೋಡೆಗಳಿಗೆ ವ್ಯತಿರಿಕ್ತವಾದ ಬಣ್ಣದ ಪರದೆಗಳನ್ನೇ ಆರಿಸಿ.

    ಪ್ರಿಂಟ್ ಮತ್ತು ಸೊಲಿಡ್ ಗಳ ನಡುವೆ ಆಯ್ಕೆ

    ಪ್ರಿಂಟ್ ಮತ್ತು ಸೊಲಿಡ್ ಗಳ ನಡುವೆ ಆಯ್ಕೆ

    ಇದನ್ನು ಹೇಳುವುದಕ್ಕೂ ಮೊದಲು ನಾವು ಕೋಣೆಯ ಉಳಿದ ಅಲಂಕಾರಗಳನ್ನು ನೋಡಬೇಕಾಗುತ್ತದೆ. ಕೋಣೆಯಲ್ಲಿರುವ ಇತರ ಎಲ್ಲಾ ಠೋಪಕರಣಗಳು ಕಡು ಬಣ್ಣವಾಗಿದ್ದರೆ, ಪ್ರಿಂಟೆಡ್ ಪರದೆಗಳು ಜನಪ್ರಿಯ ಆಯ್ಕೆಯಾಗಿದೆ. ಇದಕ್ಕೆ ವಿರುದ್ಧವಾದ ಸತ್ಯವೊಂದಿದೆ! ಇಲ್ಲಿ ನೆನಪಿಡಬೇಕಾಗಿರುವ ಒಂದು ವಿಷಯವೆಂದರೆ ಪ್ರಿಂಟೆಂಡ್ ಬಟ್ಟೆಗಳು ಯಾವುದೇ ಅಂಶಕ್ಕೆ ದೃಶ್ಯ ತೂಕವನ್ನು ಹೆಚ್ಚಿಸುತ್ತವೆ ಅಂದರೆ ಅದರ ಪ್ರಭಾವವು ಇತರ ಎಲ್ಲಾ ಉಪಕರಣಗಳ ಸೌಂದರ್ಯವ್ನನು ಮೀರಿಸುವಂಥದ್ದಾಗಿರುತ್ತದೆ. ಆದ್ದರಿಂದ ಪ್ರಿಂಟೆಡ್ ಪರದೆಗಳನ್ನು ಬಳಸಲು ಒಂದು ಮಾರ್ಗವೆಂದರೆ ಅವುಗಳನ್ನು ಕಡು ಬಣ್ಣದ ಪೀಠೋಪಕರಣಗಳೊಂದಿಗೆ, ಪ್ರಿಂಟೆಂಡ್ ಪಿಠೋಪಕರಣ ಹೊದಿಕೆಗಳು ಮತ್ತು ನೆಲಹಾಸುಗಳನ್ನು ಹೊಂದಿಸುವುದು. ನೀವು ಅದ್ಭುತವಾದ ಪ್ರಿಂಟ್ ಮತ್ತು ಜ್ಯಾಮಿತೀಯ ಮಾದರಿ ಪರದೆಗಳನ್ನು ಸಮಕಾಲೀನ ಶೈಲಿಯ ಸ್ಥಳಗಳಿಗೆ ಬಳಸಬಹುದು, ಆದರೆ ಹೂವುಗಳ ಮುದ್ರಿತ ಪರದೆಗಳು ಆಧುನಿಕ ಮತ್ತು ಸಾಂಪ್ರದಾಯಿಕ ಅಲಂಕಾರಗಳಿಗೆ ಸರಿಹೊಂದುತ್ತವೆ.

    ಸೂಕ್ತವಾದ ಉದ್ದವನ್ನು ಆರಿಸುವುದು

    ಸೂಕ್ತವಾದ ಉದ್ದವನ್ನು ಆರಿಸುವುದು

    ನೆಲದ ಮಟ್ಟಕ್ಕೆ ನಿಖರವಾಗಿ ಇರುವಂತಹ ಪರದೆಗಳು ಇದೀಗ ಚಾಲ್ತಿಯಲ್ಲಿವೆ. ಹೆಚ್ಚು ಔಚಿತ್ಯವಾದ ನೋಟಕ್ಕಾಗಿ, ನೀವು ಕೆಲವು ಇಂಚುಗಳಷ್ಟು ಹೆಚ್ಚು ಉದ್ದವಿರುವ ಪರದೆಯನ್ನು ಆರಿಸಿಕೊಳ್ಳಬಹುದು, ಇದರಿಂದಾಗಿ ಡ್ರಾಪ್‌ಗಳು ನೆಲದ ಮೇಲೆ ಹಾಸಿದಂತಿರುತ್ತದೆ. ಮತ್ತೊಂದೆಡೆ, ನೀವು ಮಕ್ಕಳನ್ನು ಹೊಂದಿದ್ದರೆ, ನೀವು ನೆಲದಿಂದ ಒಂದೆರಡು ಇಂಚುಗಳಷ್ಟು ಎತ್ತರದಲ್ಲಿರುವ ಪರದೆಗಳನ್ನೇ ಆಯ್ಕೆ ಮಾಡುವುದು ಉತ್ತಮ. ಸಣ್ಣ ಕಿಟಕಿಗಳಿಗಾಗಿ ಪರದೆಗಳನ್ನು ಕಟ್ಟುವುದು ಮತ್ತೊಂದು ಶ್ರೇಷ್ಠ ಆಯ್ಕೆಯಾಗಿದೆ, ಆದರೆ ಪೂರ್ಣ-ಉದ್ದದ ಡ್ರಾಪ್‌ಗಳು ಅಲಂಕಾರವನ್ನು ಇನ್ನಷ್ಟು ಸಮಗೊಳಿಸುತ್ತವೆ.

    ಅಗಲವನ್ನು ಅಳೆಯುವುದು

    ಅಗಲವನ್ನು ಅಳೆಯುವುದು

    ನಿಮ್ಮ ಪರದೆಗಳ ಸೂಕ್ತ ಅಗಲವು ನಿಮ್ಮ ಕಿಟಕಿ ಅಥವಾ ಬಾಗಿಲಿನ ಅಚ್ಚೊತ್ತುವಿಕೆಯ ಅಗಲವನ್ನು ಅವಲಂಬಿಸಿರುತ್ತದೆ. ಸರಿಯಾದ ಅಗಲವನ್ನು ಆರಿಸಲು ಒಂದು ಸುಲಭ ಮಾರ್ಗವೆಂದರೆ ಚೌಕಟ್ಟನ್ನು ಅಳೆಯುವುದು ಮತ್ತು ಅದನ್ನು 2 / 2.5 ಅಂಶದಿಂದ ಗುಣಿಸುವುದು. ಪರದೆಗಳನ್ನು ಹಿಂದಕ್ಕೆ ಎಳೆಯುವಾಗ ಬದಿಗಳಲ್ಲಿನ ಹೊರಗಿನ ನೋಟವನ್ನು ನೀಡಲು ಹೆಚ್ಚುವರಿ ಬಟ್ಟೆಯು ಸಹಾಯ ಮಾಡುತ್ತದೆ.

    ಪರದೆಗಳೊಂದಿಗೆ ಇತರ ಪರಿಕರಗಳು

    ಪರದೆಗಳೊಂದಿಗೆ ಇತರ ಪರಿಕರಗಳು

    ಇತರ ಪರಿಕರಗಳನ್ನು ಬಳಸುವುದರಿಂದ ಕೋಣೆಯ ಸೌಂದರ್ಯವು ಇನ್ನಷ್ಟು ಹೆಚ್ಚುತ್ತದೆ. ಪರದೆಗಳಿಗೆ ಟ್ರಿಮ್‌ಗಳು ಮತ್ತು ಪರಿಕರಗಳು ಪುಲ್-ಬ್ಯಾಕ್ಸ್ ಮತ್ತು ವೇಲೆನ್ಸ್‌ಗಳಿಂದ ಹಿಡಿದು ಪರದೆಯ ಮೇಲಿರುವ ಗೋಡೆಯ ಮೇಲೆ ಇಡಬಹುದಾದ ಅಲಂಕಾರಿಕ ಪರದೆವರೆಗೆ ವಿವಿಧ ಆಯ್ಕೆಗಳು ಇರುತ್ತದೆ. ಟ್ರಿಮ್ ಗಳು ಮತ್ತು ಪರಿಕರಗಳನ್ನು ಬುದ್ಧಿವಂತಿಕೆಯಿಂದ ಆಯ್ದುಕೊಳ್ಳಬೇಕು ಇದು ಪರದೆಯೊಂದಿಗೆ ಹೊಂದಿಗೆಯಾದರೆ ಪರದೆಯ ಭವ್ಯತೆಯನ್ನು ಹೆಚ್ಚಿಸುತ್ತದೆ. ಕಿಟಕಿಯ ಮೇಲ್ಭಾಗದಲ್ಲಿ ಇರಿಸಲಾಗಿರುವ ಅಲಂಕಾರಿಕ ಫ್ರಿಲ್ಡ್ ಫ್ಯಾಬ್ರಿಕ್ ವ್ಯಾಲೆನ್ಸ್, ನಿಮ್ಮ ಕೋಣೆಯ ಅಂದವನ್ನು ಹೆಚ್ಚಿಸಲು ಉತ್ತಮ ಆಯ್ಕೆಯಾಗಿವೆ. ಮತ್ತೊಂದೆಡೆ, ಸರಳವಾದ ಪುಲ್-ಬ್ಯಾಕ್ಸ್ ಮತ್ತು ಅಲಂಕಾರಿಕ ಟ್ರಿಮ್‌ಗಳು ಇಲ್ಲದೆ ವೆಲ್ವೆಟ್ ಅಥವಾ ಸ್ಯಾಟಿನ್ ನಂತಹ ಸರಳವಾದ ಬಟ್ಟೆಗಳೂ ಉತ್ತಮ ನೋಟವನ್ನು ಒದಗಿಸುತ್ತವೆ. ಆದರೆ ಇದೆಲ್ಲವೂ ನೀವು ಬಯಸುವ ನೋಟವನ್ನು ಅವಲಂಬಿಸಿರುತ್ತದೆ.

    ಗೆರೆಗಳಿರುವ ಮತ್ತು ಇಲ್ಲದ ಪರದೆಗಳನ್ನು ಆರಿಸುವುದು

    ಗೆರೆಗಳಿರುವ ಮತ್ತು ಇಲ್ಲದ ಪರದೆಗಳನ್ನು ಆರಿಸುವುದು

    ನೀವು ಆಯ್ಕೆ ಮಾಡಿದ ಪರದೆಗಳು ಅಥವಾ ಡ್ರಾಪ್‌ಗಳ ಕ್ರಿಯಾತ್ಮಕತೆಯನ್ನು ನೀವಿಲ್ಲಿ ಕಾಣಬಹುದು. ನೇರ ಸೂರ್ಯನ ಬೆಳಕನ್ನು ಪಡೆಯುವ ಕಿಟಕಿಯ ಮೇಲೆ ಪರದೆಯನ್ನು ಹಾಕಲಾಗಿದ್ದರೆ, ಅದರ ರಕ್ಷಣಾತ್ಮಕ ಒಳಪದರವು ಹೆಚ್ಚು ಅಪಾರದರ್ಶಕವಾಗಿಸುತ್ತದೆ, ಇದು ಅತ್ಯಂತ ನಿಧಾನವಾಗಿ ಮಸುಕಾಗುತ್ತದೆ ಮತ್ತು ಹೆಚ್ಚು ಕಾಲ ಉಳಿಯುತ್ತದೆ. ಅಲ್ಲದೆ, ಎರಡು ಪದರಗಳು - ಒಂದು ಕಡು ಅಥವಾ ದಪ್ಪವಾದ ಮತ್ತು ಇನ್ನೊಂದು ಅಪಾರದರ್ಶಕತೆಯ ಪರದೆಯುನಿಮಗೆ ಬೇಕಾದ ಗೌಪ್ಯತೆ ಮತ್ತು ಬೆಳಕಿನ ಪ್ರಮಾಣವನ್ನು ನಿರ್ಧರಿಸಲು ಸಹಾಯಮಾಡುತ್ತದೆ. ಲೈನಿಂಗ್ / ಅಡಿ ಬಟ್ಟೆ ಇರುವ ಡ್ರಾಪ್‌ಗಳು ಭಾರವಾಗಿರುತ್ತವೆ ಎಂಬುದನ್ನೂ ನೀವಿಲ್ಲಿ ಗಮನಿಸಬೇಕು. ಹಾಗಾಗಿ ಬುದ್ಧಿವಂತಿಕೆಯಿಂದ ಪರದೆಯನ್ನು ಆರಿಸಿ.

    ಅಗತ್ಯವಿರುವ ನಿರ್ವಹಣೆಯ ಆಧಾರದ ಮೇಲೆ ಬಟ್ಟೆಗಳನ್ನು ಆಯ್ಕೆ ಮಾಡಿ

    ಅಗತ್ಯವಿರುವ ನಿರ್ವಹಣೆಯ ಆಧಾರದ ಮೇಲೆ ಬಟ್ಟೆಗಳನ್ನು ಆಯ್ಕೆ ಮಾಡಿ

    ಪರದೆಯ ಬಟ್ಟೆ ಮತ್ತು ವಸ್ತುವು, ಅದನ್ನು ಹೇಗೆ ಸ್ವಚ್ಛಗೊಳಿಸಬೇಕು ಮತ್ತು ಎಷ್ಟು ಬಾರಿ ಸ್ವಚ್ಛಗೊಳಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಎಲ್ಲಾ ಪರದೆಗಳು ಮತ್ತು ಡ್ರಾಪ್‌ಗಳನ್ನು ಪ್ರತಿ 3-6 ತಿಂಗಳಿಗೊಮ್ಮೆ ತೊಳೆಯಬೇಕು, ಕೆಲವು ಬಟ್ಟೆಗಳಿಗೆ ಹೆಚ್ಚು ಕಾಳಜಿಯ ಅಗತ್ಯವಿರುತ್ತದೆ ಮತ್ತು ಕೆಲವನ್ನು ವಾಶಿಂಗ್ ಮಶಿನ್ ನಲ್ಲಿಯೂ ತೊಳೆಯಬಹುದು. ಹೀಗೆ ನಿಮ್ಮ ಮನೆಯ ಅಲಂಕಾರವನ್ನು ಹೆಚ್ಚಿಸುವಲ್ಲಿ ನೀವು ಆಯ್ದುಕೊಳ್ಳುವ ಕರ್ಟನ್ ಅಥವಾ ಪರದೆಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ.

English summary

Important Things To Consider When Buying Curtains in Kannada

Here we are discussing about Important Things To Consider When Buying Curtains in Kannada. From light and breezy to substantial and ornamental, from solid colours to prints, from sheer fabrics to heavy opaque textiles - the possibilities are endless. Read more.
X
Desktop Bottom Promotion