For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿರುವ ಕನ್ನಡಿಗಳನ್ನು ಸ್ವಚ್ಛಗೊಳಿಸಲು ತಲೆಕೆಡಿಸಿಕೊಳ್ಳಬೇಡಿ, ಈ ಅದ್ಭುತ ಹ್ಯಾಕ್ಸ್‌ಗಳನ್ನು ಟ್ರೈ ಮಾಡಿ

|

ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈಗಾಗಲೇ ಪ್ರತಿಮನೆಗಳಲ್ಲೂ ಸ್ವಚ್ಛತೆ ಆರಂಭವಾಗಿದೆ. ಈ ಸಮಯದಲ್ಲಿ ಮನೆಯ ಪ್ರತಿಯೊಂದು ಮೂಲೆಯ ಆಳವಾದ ಶುಚಿಗೊಳಿಸುವಿಕೆಯನ್ನು ಮಾಡುತ್ತಿದ್ದು, ವಾರ್ಡೋಬ್‌ ಕನ್ನಡಿ ಅಥವಾ ಇತರ ಗಾಜಿನ ಕನ್ನಡಿಗಳನ್ನೂ ಸ್ವಚ್ಛಗೊಳಿಸಲು ಮರೆಯುವುದಿಲ್ಲ. ಆದರೆ, ಮನೆಯ ಕನ್ನಡಿಗಳನ್ನು ದೀರ್ಘಕಾಲದವರೆಗೆ ಸ್ವಚ್ಛಗೊಳಿಸದಿದ್ದರೆ, ಅವುಗಳ ಮೇಲೆ ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹೀಗಾಗಿ, ಅವುಗಳನ್ನು ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ.

ನಿಮ್ಮ ಮನೆಯಲ್ಲೂ ಅಂತಹ ಕನ್ನಡಿ ಇದ್ದರೆ, ಅದನ್ನು ಸ್ವಚ್ಛಗೊಳಿಸಲು ಕೆಲವು ಹ್ಯಾಕ್‌ಗಳನ್ನು ಅನುಸರಿಸಬಹುದು. ಈ ಹ್ಯಾಕ್‌ಗಳ ಸಹಾಯದಿಂದ, ನಿಮ್ಮ ಕನ್ನಡಿ ಕ್ಲೀನಿಂಗ್ ಕೆಲಸವು ಸುಲಭವಾಗುತ್ತದೆ.

ಗಾಜಿನ ಕನ್ನಡಿಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಕೆಲವೊಂದು ಹ್ಯಾಕ್‌ಗಳನ್ನು ಈ ಕೆಳಗೆ ನೀಡಲಾಗಿದೆ:

1) ನಿಂಬೆ:

1) ನಿಂಬೆ:

ಶುಚಿಗೊಳಿಸುವ ಕೆಲಸದಲ್ಲಿ ನಿಂಬೆಹಣ್ಣು ಅಗ್ರಸ್ಥಾನದಲ್ಲಿದೆ. ಅನೇಕ ವರ್ಷಗಳಿಂದ ಇದನ್ನು ಕಲೆಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತಿದೆ. ನಿಂಬೆಯಲ್ಲಿರುವ ಆಮ್ಲೀಯ ಗುಣಲಕ್ಷಣಗಳಿಂದಾಗಿ, ಕೆಲವೇ ನಿಮಿಷಗಳಲ್ಲಿ ಏನನ್ನು ಬೇಕಾದರೂ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ನೀವು ಸ್ಪ್ರೇ ಬಾಟಲಿಯಲ್ಲಿ ನಿಂಬೆ ರಸವನ್ನು ಹಾಕಿ, ನಂತರ ಅದಕ್ಕೆ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದನ್ನು ಕನ್ನಡಿಯ ಮೇಲೆ ಸಿಂಪಡಿಸಿ ಮತ್ತು ನಂತರ ಟಿಶ್ಯೂನಿಂದ ಗಾಜನ್ನು ಸ್ವಚ್ಛಗೊಳಿಸಿ. ಪಳಪಳ ಹೊಳೆಯುವ ಕನ್ನಡಿ ನಿಮ್ಮದಾಗುವುದನ್ನು ನೀವೇ ನೋಡಿ.

2) ಟೂತ್‌ಪೇಸ್ಟ್:

2) ಟೂತ್‌ಪೇಸ್ಟ್:

ಗ್ಲಾಸ್ ಸ್ವಚ್ಛಗೊಳಿಸಲು ಟೂತ್ ಪೇಸ್ಟ್ ಅನ್ನು ಸಹ ಬಳಸಬಹುದು. ಇದು ಎಲ್ಲಾ ರೀತಿಯ ಕಠಿಣ ಕಲೆಗಳನ್ನು ತೆಗೆದುಹಾಕುತ್ತದೆ, ಇದರಿಂದ ನೀವು ಟೈಲ್ಸ್ ಅನ್ನು ಸಹ ಸ್ವಚ್ಛಗೊಳಿಸಬಹುದು. ಇದಕ್ಕಾಗಿ, ಕನ್ನಡಿಯ ಮೇಲೆ ಸ್ವಲ್ಪ ಟೂತ್ ಪೇಸ್ಟ್ ಹಚ್ಚಿ ಮತ್ತು ಅದನ್ನು ಕೈಗಳ ಸಹಾಯದಿಂದ ಹರಡಿ. ಅದನ್ನು 10 ರಿಂದ 15 ನಿಮಿಷಗಳ ಕಾಲ ಬಿಟ್ಟು ನಂತರ ಒದ್ದೆಯಾದ ಬಟ್ಟೆಯಿಂದ ಸ್ವಚ್ಛಗೊಳಿಸಿ. ಇದಕ್ಕಾಗಿ ಬಿಳಿ ಟೂತ್‌ಪೇಸ್ಟ್ ಅನ್ನು ಬಳಸಬೇಕು, ಯಾವುಏ ರೀತಿಯ ಜೆಲ್ ರೀತಿಯ ಟೂತ್‌ಪೇಸ್ಟ್ ಅಲ್ಲ ಎಂಬುದನ್ನು ನೆನಪಿನಲ್ಲಿಡಿ.

3) ಕ್ಲೋರಿನ್ ಪರಿಹಾರ:

3) ಕ್ಲೋರಿನ್ ಪರಿಹಾರ:

ಕ್ಲೋರಿನ್ ಸಹಾಯದಿಂದ, ನೀವು ಸುಲಭವಾಗಿ ಕನ್ನಡಿಯ ಮೇಲಿನ ಕಲೆಗಳನ್ನು ತೆಗೆದುಹಾಕಬಹುದು. ಕ್ಲೋರಿನ್‌ನಲ್ಲಿರುವ ಶುಚಿಗೊಳಿಸುವ ಗುಣವು ಗಾಜಿನ್ನು ನಿಮಿಷಗಳಲ್ಲಿ ಸ್ವಚ್ಛಗೊಳಿಸುತ್ತದೆ ಮತ್ತು ಅದನ್ನು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಗಿ, ಒಂದು ಕಪ್ನಲ್ಲಿ ಕ್ಲೋರಿನ್ ಪುಡಿ ಮತ್ತು ಬಿಸಿ ನೀರನ್ನು ಮಿಶ್ರಣ ಮಾಡಿ. ಚೆನ್ನಾಗಿ ಮಿಶ್ರಣ ಮಾಡಿ ನಂತರ ಈ ದ್ರಾವಣವನ್ನು ಕನ್ನಡಿಯ ಮೇಲೆ ಹಚ್ಚಿ, ಅದು ಒಣಗುವವರೆಗೆ ಬಿಡಿ. ನಂತರ ಅದನ್ನು ನೀರಿನ ಸಹಾಯದಿಂದ ಸ್ವಚ್ಛಗೊಳಿಸಿ.

4) ವಿನೇಗರ್:

4) ವಿನೇಗರ್:

ಬಿಳಿ ವಿನೇಗರ್ ಅಥವಾ ಆಪಲ್ ಸೈಡರ್ ವಿನೇಗರ್ ಕಲೆಯಿರುವ ಕನ್ನಡಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಸ್ಪ್ರೇ ಬಾಟಲಿಯಲ್ಲಿ, ಒಂದು ಕಪ್ ವಿನೆಗರ್ ಸೇರಿಸಿ ಮತ್ತು ಒಂದು ಕಪ್ ನೀರು ಸೇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಲು, ಸ್ಪ್ರೇ ಬಾಟಲಿಯನ್ನು ಮುಚ್ಚಿ ಮತ್ತು ಅಲ್ಲಾಡಿಸಿ. ಈ ಮಿಶ್ರಣ ಸಹಾಯದಿಂದ ನಿಮ್ಮ ಬಾತ್‌ರೂಮ್ ಕನ್ನಡಿ ಸ್ವಚ್ಛಗೊಳ್ಳುವುದು.

5) ಉಪಯೋಗಿಸಿದ ಪತ್ರಿಕೆಗಳು:

5) ಉಪಯೋಗಿಸಿದ ಪತ್ರಿಕೆಗಳು:

ಬಳಸಿದ ಪತ್ರಿಕೆಗಳು ಕನ್ನಡಿಗಳನ್ನು ಹೊಳಪು ಮಾಡುವಲ್ಲಿ ಪರಿಣಾಮಕಾರಿ. ಕನ್ನಡಿಯ ಮೇಲ್ಮೈಗೆ ನೀರನ್ನು ಸಿಂಪಡಿಸಿ. ನಂತರ, ದಿನಪತ್ರಿಕೆಗಳನ್ನು ಮಡಿಚಿ, ಕನ್ನಡಿಯನ್ನು ಸ್ಕ್ರಬ್ ಮಾಡಲು ಅವುಗಳನ್ನು ಬಳಸಿ. ಕಠಿಣ ಕಲೆಗಳು ಮತ್ತು ಕೊಳೆಯನ್ನು ತೆಗೆದುಹಾಕಲು ಸ್ಕ್ರಬ್ ಮಾಡುವಾಗ ಸ್ವಲ್ಪ ಒತ್ತಡವನ್ನು ಸೇರಿಸಲು ಮರೆಯದಿರಿ.

6) ಲಿಕ್ವಿಡ್ ಬ್ಲೀಚ್:

6) ಲಿಕ್ವಿಡ್ ಬ್ಲೀಚ್:

ಬಟ್ಟೆಗಳನ್ನು ಹೊಳಪುಗೊಳಿಸುವುದರ ಜೊತೆಗೆ, ಬಾತ್‌ರೂಮ್ ಕನ್ನಡಿಯನ್ನು ಸ್ವಚ್ಛಗೊಳಿಸಲು ಬ್ಲೀಚ್ ಅನ್ನು ಸಹ ಬಳಸಬಹುದು. ಇದಕ್ಕಾಗಿ ಸ್ವಚ್ಛ, ಒಣ ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಬ್ಲೀಚ್ ಸುರಿದು, ಬಟ್ಟೆಯಿಂದ ಸಮವಾಗಿ ಹರಡಿ. ಅದರ ನಂತರ, ಮತ್ತೊಂದು ಹೊಸ, ಕ್ಲೀನ್ ಬಟ್ಟೆಯನ್ನು ತೆಗೆದುಕೊಂಡು ಬ್ಲೀಚ್ ಒರೆಸಿ. ಇದಕ್ಕಾಗಿ ನೀರು ಅಥವಾ ಒದ್ದೆ ಬಟ್ಟೆಯನ್ನು ಬಳಸಬೇಕಾಗಿಲ್ಲ ಎಂಬುದನ್ನು ಗಮನಿಸಿ.

7)ಫೇಸ್ ಟಾನಿಕ್:

7)ಫೇಸ್ ಟಾನಿಕ್:

ಕಾಟನ್ ಪ್ಯಾಡ್‌ನಲ್ಲಿ ಹೆಚ್ಚಿನ ಪ್ರಮಾಣದ ಫೇಸ್ ಟಾನಿಕ್ ಅನ್ನು ಸುರಿಯಿರಿ, ನಂತರ ಅದನ್ನು ಕನ್ನಡಿಯನ್ನು ಒರೆಸಲು ಬಳಸಿ. ಅದರ ನಂತರ, ಸ್ವಚ್ಛವಾದ, ಒಣಗಿದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಒರೆಸಿ.

ಸ್ನಾನಗೃಹದ ಕನ್ನಡಿಗಳನ್ನು ಹೊರತುಪಡಿಸಿ, ನಿಮ್ಮ ಮನೆಯಲ್ಲಿ ಇತರ ಗಾಜಿನ ಮೇಲ್ಮೈಗಳನ್ನು ಸ್ವಚ್ಛಗೊಳಿಸಲು ನೀವು ಈ ವಿಧಾನಗಳನ್ನು ಬಳಸಬಹುದು. ಗಾಜಿನ ಬಾಗಿಲುಗಳಿಂದ ಹಿಡಿದು ಅಡಿಗೆ ಕೌಂಟರ್‌ಟಾಪ್‌ಗಳು ಮತ್ತು ಶವರ್ ಸ್ಟಾಲ್‌ಗಳವರೆಗೆ, ಇವುಗಳು ನಿಮ್ಮ ಮನೆಯನ್ನು ಹೊಸದಾಗಿ ಮತ್ತು ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ.

English summary

How to Clean Mirrors in Easy Way in Kannada

Here we talking about How to clean mirrors in easy way in kannada, read on
Story first published: Saturday, October 30, 2021, 17:13 [IST]
X
Desktop Bottom Promotion