Just In
Don't Miss
- Finance
ದಾಖಲೆಯತ್ತ ಮುನ್ನುಗ್ಗುತ್ತಿರುವ ಬಿಟ್ಕಾಯಿನ್: ಏಪ್ರಿಲ್ 11ರ ಬೆಲೆ ಇಲ್ಲಿದೆ
- News
ದಿವ್ಯ ಸಪ್ತತಿ ಪೂರ್ತಿ ಮಹೋತ್ಸವ; ಶೃಂಗೇರಿಗೆ ಭಕ್ತರ ಭೇಟಿಗೆ ಅವಕಾಶವಿಲ್ಲ
- Sports
ಈ ವಿಶಿಷ್ಟ ದಾಖಲೆಯಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಧವನ್
- Automobiles
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- Movies
'ಇಂದಿರಾನಗರದ ಗೂಂಡಾ ನಾನೇ' ಎಂದು ದ್ರಾವಿಡ್ಗೆ ಸೆಡ್ಡು ಹೊಡೆದ ಖ್ಯಾತ ನಟಿ
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021 (ಫೆ-ಡಿ): ಈ ದಿನಾಂಕಗಳಲ್ಲಿ ಗೃಹಪ್ರವೇಶವಾದರೆ ಮನೆಗೆ ಅದೃಷ್ಟ
ಎಲ್ಲರ ಜೀವನದಲ್ಲಿ ಒಂದೊಳ್ಳೆ ಮನೆ ಕಟ್ಟಬೇಕೆಂಬ ಆಸೆ ಇರುತ್ತದೆ, ಮನೆಯೇ ಇಲ್ಲದಿದ್ದರೆ ಒಂದು ಮನೆ ಕಟ್ಟಬೇಕೆಂಬ ಹೆಬ್ಬಯಕೆಯಿಂದ ಅದಕ್ಕಾಗಿ ಹಗಲು-ಇರುಳು ಶ್ರಮಿಸುತ್ತಿರುತ್ತಾರೆ. ಸಾಧಾರಣ ಮನೆಯಿದ್ದವರಿಗೆ ಅದಕ್ಕಿಂತ ಒಳ್ಳೆಯ ಮನೆಕಟ್ಟಬೇಕೆಂಬ ಆಸೆ, ಸುಂದರವಾದ ಮನೆಯಿದ್ದವರಿಗೆ ಅದಕ್ಕಿಂತ ದೊಡ್ಡ ಬಂಗಲೆ ಕಟ್ಟಬೇಕೆಂಬ ಆಸೆ. ಹೀಗೆ ಬಡವ ಇರಲಿ, ಶ್ರೀಮಂತ ಇರಲಿ ಮನೆಕೊಳ್ಳಬೇಕು ಅಥವಾ ಕಟ್ಟಬೇಕೆಂಬ ಆಸೆ ಎಲ್ಲರಲ್ಲೂ ಇದ್ದೇ ಇರುತ್ತದೆ.
ನಮ್ಮ ಕನಸ್ಸಿನ ಮನೆ ಹೀಗಿರಬೇಕು,ಆಗಿರಬೇಕು ಎಂದು ಬಯಸಿ ಅದೇ ರೀತಿಯ ಮನೆಯ ಕಟ್ಟುತ್ತೇವೆ ಇಲ್ಲಾ ಕೊಂಡುಕೊಳ್ಳುತ್ತೇವೆ, ಇಷ್ಟೆಲ್ಲಾ ಆದ ಮೇಲೆ ಒಂದು ಪ್ರಮುಖ ಕೆಲಸವೆಂದರೆ ಗೃಹ ಪ್ರವೇಶ. ಗೃಹ ಸಂಪ್ರದಾಯವನ್ನು ಒಂದು ಒಳ್ಳೆಯ ದಿನ ಸೇರಬೇಕೆಂಬ ನಂಬಿಕೆ ಎಲ್ಲರಲ್ಲಿ ಇರುತ್ತದೆ. ಏಕೆಂದರೆ ಮುಂದೆ ಮನೆ-ಮಂದಿಯೆಲ್ಲಾ ಕೂಡಿ ಬಾಳುವುದು ಅದೇ ಮನೆಯಲ್ವಾ, ನಾವು ಬಾಳುವ ಮನೆಯಲ್ಲಿ ಖುಷಿ ನೆಲೆಸಿರಬೇಕು, ಲಕ್ಷ್ಮಿ ನೆಲೆಸಿರಬೇಕು, ಆ ಮನೆ ನಮ್ಮ ಪಾಲಿಗೆ ಅದೃಷ್ಟದ ಮನೆಯಾಗಿರಬೇಕು ಎಂದು ಬಯಸುತ್ತೇವೆ.
ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ ಇರಬೇಕೆಂದರೆ ಶುಭ ದಿನ, ಶುಭ ಘಳಿಗೆಯಲ್ಲಿ ಮನೆ ಸೇರಬೇಕು. ಈ ವರ್ಷ ನೀವು ಗೃಹ ಪ್ರವೇಶ ಮಾಡಬೇಕೆಂದು ಯೋಚಿಸುತ್ತಿದ್ದರೆ ಫೆಬ್ರವರಿಯಿಂದ ಡಿಸೆಂಬರ್‌ವರೆಗೆ ಯಾವ ದಿನಗಳು ತುಂಬಾ ಶುಭವಾಗಿದೆ ಎಂದು ಹೇಳಿದ್ದೇವೆ.

ಫೆಬ್ರವರಿ, ಮಾರ್ಚ್, ಏಪ್ರಿಲ್
ಈ ತಿಂಗಳುಗಳಲ್ಲಿ ಗೃಹ ಪ್ರವೇಶಕ್ಕೆ ಸೂಕ್ತವಾದ ಯಾವ ದಿನಾಂಕವಿಲ್ಲ.

ಮೇ ತಿಂಗಳಿನಲ್ಲಿ ಗೃಹ ಪ್ರವೇಶಕ್ಕೆ 6 ದಿನಗಳು ಗೃಹಪ್ರವೇಶಕ್ಕೆ ಶುಭವಾಗಿವೆ
* ಮೇ 13
* ಮೇ 14
* ಮೇ 21
* ಮೇ 22
* ಮೇ 24
* ಮೇ 26

ಜೂನ್ ತಿಂಗಳಿನಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನಾಂಕಗಳು
* ಜೂನ್ 4
* ಜೂನ್ 5
* ಜೂನ್ 19
* ಜೂನ್ 26

ಜುಲೈನಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನಾಂಕ
ಜುಲೈನಲ್ಲಿ ಗೃಹ ಪ್ರವೇಶಕ್ಕೆ ಒಂದೇ ಒಂದು ದಿನಾಂಕವಿದೆ.
ಜುಲೈ 1

ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್
ನೀವು ಗೃಹ ಪ್ರವೇಶ ಈ ಮೂರು ತಿಂಗಳಿನಲ್ಲಿ ಮಾಡಲು ಯೋಚನೆ ಮಾಡಬೇಡಿ, ಏಕೆಂದರೆ ಈ ಮೂರು ತಿಂಗಳಿನಲ್ಲಿ ಗೃಹ ಪ್ರವೇಶಕ್ಕೆ ಯೋಗ್ಯವಾದ ಒಂದೇ ಒಂದು ದಿನಾಂಕವಿಲ್ಲ.
ನವೆಂಬರ್‌ನಲ್ಲಿ ಗೃಹ ಪ್ರವೇಶಕ್ಕೆ ಸೂಕ್ತವಾದ ಶುಭ ದಿನಾಂಕಗಳು
ಈ ತಿಂಗಳಿನಲ್ಲಿ 5 ದಿನಗಳು ಗೃಹ ಪ್ರವೇಶಕ್ಕೆ ಯೋಗ್ಯವಾಗಿದೆ.
*ನವೆಂಬರ್ 5
* ನವೆಂಬರ್ 6
* ನವೆಂಬರ್ 10
* ನವೆಂಬರ್ 20
* ನವೆಂಬರ್ 29

ಡಿಸೆಂಬರ್‌ನಲ್ಲಿ ಗೃಹ ಪ್ರವೇಶಕ್ಕೆ ಸೂಕ್ತವಾದ ದಿನಾಂಕ
ಡಿಸೆಂಬರ್‌ನಲ್ಲಿ ನೀವು ಗೃಹ ಪ್ರವೇಶ ಮಾಡಬಯಸುವುದಾದರೆ ಒಂದು ದಿನಾಂಕ ತುಂಬಾ ಶುಭವಾಗಿದೆ. ಅದುವೇ
ಡಿಸೆಂಬರ್ 13