For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಈ ವಸ್ತುಗಳಿಡುವುದು ಬಹಳ ಅಪಾಯಕಾರಿ

|

ಇಡೀ ಪ್ರಪಂಚ ಸುತ್ತಲು ಮುಂದಾಗುವ ವ್ಯಕ್ತಿ ಕೊನೆಗೆ ನೆಮ್ಮದಿ ಕಾಣುವುದು ತನ್ನ ಸ್ವಂತ ಮನೆಯಲ್ಲೇ ಎಂದು ಹೇಳುತ್ತಾರೆ. ಎಲ್ಲರಿಗೂ ಅಷ್ಟೇ ಅವರವರ ಮನೆ ಎಂದರೆ ಅಷ್ಟು ಇಷ್ಟ. ತಮ್ಮ ಮನೆ ಹಾಗಿರಬೇಕು, ಹೀಗಿರಬೇಕು ಎಂದು ಕನಸು ಕಾಣುವವರೇ ಹೆಚ್ಚು.

ಮನೆಯಲ್ಲಿನ ಅಂದವನ್ನು ಹೆಚ್ಚಿಸಲು ಸಾಕಷ್ಟು ಬಗೆಯ ಕಸರತ್ತುಗಳನ್ನು ನಡೆಸುತ್ತಾರೆ ಜೊತೆಗೆ ನಾಲ್ಕು ಜನರ ಮಧ್ಯೆ ಸರಿಸಮನಾಗಿ ನಿಲ್ಲಬೇಕೆಂಬ ಹಂಬಲದಿಂದ ತಮ್ಮ ಜೀವನಶೈಲಿಯಲ್ಲಿ ಸಹ ಕೆಲವೊಂದು ಕೃತಕ ಬದಲಾವಣೆಗಳ ಮೊರೆ ಹೋಗುತ್ತಾರೆ. ಆದರೆ ಇಂತಹ ವಿಚಾರಗಳಲ್ಲಿ ನಮಗೆ ಸಹಕಾರಿಯಾಗುತ್ತವೆ ಎನಿಸುವ ವಸ್ತುಗಳೇ ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಕೆಲವು ಉದಾಹರಣೆಗಳು ಇಲ್ಲಿವೆ.

ಮನೆಯೊಳಗಿನ ಹೂಕುಂಡದ ಗಿಡಗಳು

ಮನೆಯೊಳಗಿನ ಹೂಕುಂಡದ ಗಿಡಗಳು

ಸಾಮಾನ್ಯವಾಗಿ ಗಿಡಗಳ ಸ್ವಭಾವ ಹೇಗೆಂದರೆ, ಮನುಷ್ಯರು ಉಸಿರಾಟದ ಮೂಲಕ ಹೊರಬಿಡುವ ಇಂಗಾಲದ ಡೈಯಾಕ್ಸೈಡ್ ಅನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಸುತ್ತಮುತ್ತಲಿನ ಪರಿಸರ ಸಾಕಷ್ಟು ಸ್ವಚ್ಛವಾಗುತ್ತದೆ. ಮನೆಗಳಲ್ಲಿ ಸಹ ಕೆಲವರು ಹೂವಿನ ಕುಂಡಗಳಲ್ಲಿ ತಮಗೆ ಬೇಕಾದ ಗಿಡಗಳನ್ನು ಬಹಳ ಪ್ರೀತಿ ಮತ್ತು ಆರೈಕೆಯಿಂದ ಬೆಳೆಸುತ್ತಾರೆ.

ಇವುಗಳಿಂದ ಕೇವಲ ಮನೆಯ ಅಂದ ಹೆಚ್ಚುವುದು ಮಾತ್ರವಲ್ಲದೆ ಮನೆಯೊಳಗಿನ ವಾತಾವರಣ ಮನೆಯ ಮಂದಿಗೆ ಸಾಕಷ್ಟು ಸಕಾರಾತ್ಮಕ ಪ್ರಭಾವಗಳನ್ನು ಉಂಟುಮಾಡುವುದರ ಜೊತೆಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುತ್ತದೆ. ಆದರೆ ತಜ್ಞರ ಪ್ರಕಾರ ಮನೆಯೊಳಗೆ ನೆರಳಿನಲ್ಲಿ ಬೆಳೆಯುವ ಗಿಡಗಳಿಗೆ ಹೊರಗಿನ ಬಿಸಿಲಿನಲ್ಲಿ ಬೆಳವಣಿಗೆ ಕಾಣುವ ಗಿಡಗಳಿಗೆ ಹೋಲಿಸಿದರೆ ಸಾಕಷ್ಟು ಕೀಟಗಳ ಹಾವಳಿ ಹೆಚ್ಚಿರುತ್ತದೆ.

ಹೀಗಾಗಿ ಹೂ ಕುಂಡದಲ್ಲಿರುವ ಗಿಡಗಳ ರಕ್ಷಣೆಗೆ ಕೆಲವೊಂದು ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸುವುದು ಅನಿವಾರ್ಯವಾಗುತ್ತದೆ. ಅಪಾಯ ಪ್ರಾರಂಭವಾಗುವುದು ಇಲ್ಲಿಂದಲೇ. ಮನೆಯಲ್ಲಿನ ಸಣ್ಣ ಪುಟ್ಟಮಕ್ಕಳು ತಮ್ಮ ಕೈಗಳಿಂದ ಈ ಗಿಡಗಳನ್ನು ಮುಟ್ಟಿ ಅಪ್ಪಿತಪ್ಪಿ ತಮ್ಮ ತಿಂಡಿತಿನಿಸುಗಳನ್ನು ತಿನ್ನಲು ಮುಂದಾದರೆ ಅದು ಅವರ ಜೀವಕ್ಕೇ ಮಾರಕ!!

ನೀರಿನ ಬಾಟಲ್

ನೀರಿನ ಬಾಟಲ್

ಹಿಂದಿನ ಕಾಲದಲ್ಲಾದರೆ ನೀರು ಕುಡಿಯಲು ತಾಮ್ರ, ಹಿತ್ತಾಳೆ ಜೊತೆಗೆ ಮಣ್ಣಿನ ಮಡಕೆಗಳನ್ನು ಬಳಸುತ್ತಿದ್ದರು ಮತ್ತು ಜನರು ಸಹ ತುಂಬಾ ಆರೋಗ್ಯವಾಗಿರುತ್ತಿದ್ದರು. ಆದರೆ ಈಗ ಲೋಹಗಳ ಬೆಲೆ ಗಗನಕ್ಕೇರಿದೆ. ಹಾಗಾಗಿ ಎಲ್ಲಾ ಕಡೆ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಎಲ್ಲರ ಮನೆಯಲ್ಲಿ ಪ್ಲಾಸ್ಟಿಕ್ ಬಾಟಲ್ ಇದ್ದೇ ಇರುತ್ತವೆ. ಆದರೆ ನೀವು ಬಹಳ ಇಷ್ಟಪಟ್ಟು ಫ್ರಿಡ್ಜ್ ಬಾಗಿಲು ತೆಗೆದು ಎತ್ತಿಕೊಂಡು ಕುಡಿಯುವ ಪ್ಲಾಸ್ಟಿಕ್ ಬಾಟಲ್ ಹಲವಾರು ರಾಸಾಯನಿಕ ಅಂಶಗಳಿಂದ ಮಾಡಲ್ಪಟ್ಟಿರುತ್ತದೆ.

ಅದರಲ್ಲಿ ಮುಖ್ಯವಾಗಿ ಬಿಸ್ಫೆನೋಲ್ ಎ ಅಥವಾ ಬಿ ಪಿ ಎ ಅಂಶ ಪ್ರಮುಖವಾಗಿರುತ್ತದೆ. ನೀವು ಕುಡಿಯುವ ನೀರಿನ ಜೊತೆ ಈ ಅಂಶ ನಿಮ್ಮ ದೇಹ ಸೇರಿದರೆ, ದೇಹದಲ್ಲಿನ ಈಸ್ಟ್ರೋಜನ್ ಹಾರ್ಮೋನ್ ಮಟ್ಟ ಬದಲಾವಣೆ ಕಾಣುತ್ತದೆ. ಹಾಗಾಗಿ ನೀರು ಕುಡಿಯುವ ಸಲುವಾಗಿ ನೀವು ಖರೀದಿಸುವ ಪ್ಲಾಸ್ಟಿಕ್ ಬಾಟಲ್ ಬಿ ಪಿ ಎ ಮುಕ್ತವಾಗಿರಲಿ.

ಆಹಾರ ಶೇಖರಣಾ ಸಾಮಗ್ರಿ

ಆಹಾರ ಶೇಖರಣಾ ಸಾಮಗ್ರಿ

ಇಂದಿನ ಜನರು ಎಷ್ಟೇ ಓದಿ ಬುದ್ಧಿವಂತರಾದರೂ ತಮಗೆ ಎದುರಾಗುವ ಅಪಾಯಗಳ ಮುನ್ಸೂಚನೆ ಸಿಕ್ಕಿದರೂ ಸಹ ಬಹಳ ನಿರ್ಲಕ್ಷ್ಯವಹಿಸುತ್ತಾರೆ. ಕೇವಲ ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲ್ ನಲ್ಲಿ ತುಂಬಿ ಕುಡಿಯುವುದು ಮಾತ್ರವಲ್ಲದೆ ಪ್ಲಾಸ್ಟಿಕ್ ಡಬ್ಬಿಯ ಅಂದಕ್ಕೆ ಮಾರುಹೋಗಿ ತಮ್ಮ ಮಧ್ಯಾಹ್ನದ ಆಹಾರವನ್ನು ಕೂಡ ಪ್ಲಾಸ್ಟಿಕ್ ಡಬ್ಬಿಯಲ್ಲೇ ಕಚೇರಿಗೆ ಕೊಂಡೊಯ್ಯುತ್ತಾರೆ. ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಇದಕ್ಕಿಂತ ಅಪಾಯಕಾರಿ ವಿಚಾರ ಮತ್ತೊಂದಿಲ್ಲ. ನಿಮ್ಮ ಮನೆಯಲ್ಲಿ ತಯಾರಾದ ಬಿಸಿ ಬಿಸಿ ಆಹಾರವನ್ನು ಸುರಕ್ಷತೆ ಮಾಡಲು ಮುಂದಾಗುವ ನಿಮ್ಮ ಪ್ಲಾಸ್ಟಿಕ್ ಡಬ್ಬಿ ತಯಾರಿಕೆಯಲ್ಲಿ ಥಾಲೇಟ್ ಎಂಬ ಮಾರಕ ರಾಸಾಯನಿಕದ ಬಳಕೆಯಾಗಿರುತ್ತದೆ.

ನಿಮ್ಮ ಆಹಾರ ಹೆಚ್ಚು ಬಿಸಿ ಇರುವ ಕಾರಣ ಈ ಅಂಶಗಳನ್ನು ಕ್ರಮೇಣವಾಗಿ ಹೀರಿಕೊಳ್ಳುತ್ತದೆ. ಮಹಿಳೆಯರು ಥಾಲೇಟ್ ರಾಸಾಯನಿಕ ಸೇರಿದ ಆಹಾರವನ್ನು ತಿನ್ನುವುದರಿಂದ ಮುಂದಿನ ದಿನಗಳಲ್ಲಿ ಗರ್ಭಧರಿಸುವಿಕೆಯಲ್ಲಿ ತುಂಬಾ ಕಷ್ಟ ಪಡಬೇಕಾಗುತ್ತದೆ ಮತ್ತು ಪುರುಷರಿಗೆ ತಮ್ಮ ವೀರ್ಯಾಣುಗಳ ಗುಣಮಟ್ಟ ಸಾಕಷ್ಟು ಕಡಿಮೆಯಾಗುತ್ತದೆ ಎಂದು ಕೆಲವು ಸಂಶೋಧನೆಗಳು ಎಚ್ಚರಿಸಿವೆ. ಹಾಗಾಗಿ ಯಾವುದೇ ಬಿಸಿ ಇರುವ ಆಹಾರವನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿ ಶೇಖರಿಸುವುದು ಬಿಟ್ಟು ಗಾಜಿನ ಅಥವಾ ಸ್ಟೀಲ್ ಪಾತ್ರೆಗೆ ವರ್ಗಾಯಿಸಿ.

ನೆಲದ ಮೇಲಿರುವ ಕಾರ್ಪೆಟ್

ನೆಲದ ಮೇಲಿರುವ ಕಾರ್ಪೆಟ್

ಮನೆಯ ಮೆರುಗನ್ನು ಹೆಚ್ಚಿಸಲು ಸಾಕಷ್ಟು ಹೋಮ್ ಡೆಕೋರೇಟಿವ್ ವಸ್ತುಗಳನ್ನು ಬಳಸುತ್ತೇವೆ. ಅದರಲ್ಲಿ ಕಾರ್ಪೆಟ್ ಕೂಡ ಒಂದು. ಬಣ್ಣ ಬಣ್ಣಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಸಿಗುವ ಕಾರ್ಪೆಟ್ ನೋಡುಗರ ಮನಸೂರೆಗೊಳ್ಳದೇ ಇರದು. ಕೆಲವು ಕಾರ್ಪೆಟ್ ಗಳು ಕಲೆ ವಿರೋಧಿ ಗುಣಲಕ್ಷಣಗಳನ್ನು ಪಡೆದಿರುತ್ತವೆ. ಹಾಗಾಗಿ ಎಷ್ಟೇ ದಿನಗಳು ಕಳೆದರೂ ಬಣ್ಣ ಮಾಸುವುದಿಲ್ಲ. ಆದರೆ ಇಂತಹ ಕಾರ್ಪೆಟ್ ಗಳು ಪಿ ಎಫ್ ಎ ಎಂಬ ರಾಸಾಯನಿಕ ಅಂಶಗಳನ್ನು ಹೊಂದಿರುತ್ತವೆ ಎಂದು ಹೇಳುತ್ತಾರೆ.

ಪಿ ಎಫ್ ಎ ಅಂಶಗಳು ತುಂಬಾ ಹಗುರವಾಗಿದ್ದು, ಗಾಳಿಯಲ್ಲಿ ಹರಡುವಂತಹ ಗುಣಲಕ್ಷಣಗಳನ್ನು ಪಡೆದಿರುತ್ತವೆ. ಒಂದು ವೇಳೆ ಮನೆಯಲ್ಲಿ ಬಾಣಂತಿಯರು ಇದ್ದರೆ, ಈ ಅಂಶಗಳು ಸುಲಭವಾಗಿ ಅವರ ದೇಹ ಸೇರಿ ಹಾಲುಣಿಸುವ ಸಂದರ್ಭದಲ್ಲಿ ಮಗುವಿಗೂ ಸಹ ರವಾನೆಯಾಗುತ್ತವೆ. ಇದರಿಂದ ಎಳೆ ಮಗುವಿನ ಆರೋಗ್ಯದಲ್ಲಿ ಸಾಕಷ್ಟು ಕೆಟ್ಟ ಪ್ರಭಾವ ಉಂಟಾಗುತ್ತದೆ. ಹಾಗಾಗಿ ಉಣ್ಣೆಯಿಂದ ತಯಾರು ಮಾಡಿದ ಕಾರ್ಪೆಟ್ ಗಳ ಬಳಕೆ ಹೆಚ್ಚು ಮಾಡಿಕೊಳ್ಳುವುದು ಒಳ್ಳೆಯದು.

ಪಿಜ್ಜಾ ಬಾಕ್ಸ್‌

ಪಿಜ್ಜಾ ಬಾಕ್ಸ್‌

ಪಿಜ್ಜಾ ಬಾಕ್ಸ್ ಗಳಲ್ಲಿ ಸಹ ಜೀವಕ್ಕೇ ಮಾರಕವಾಗಿರುವ ರಾಸಾಯನಿಕ ಅಂಶಗಳು ಬಳಕೆಯಾಗಿರುತ್ತದೆ ಎಂದು ಹೇಳುತ್ತಾರೆ. ಮೇಲಿರುವ ಕಾರ್ಡ್ಬೋರ್ಡ್ ಪೆಟ್ಟಿಗೆಯಿಂದ ಪಿಜ್ಜಾವನ್ನು ಅಂಟಿಕೊಳ್ಳದಂತೆ ಕಾಪಾಡಲು ಒಂದು ಸ್ಪಷ್ಟವಾದ ಕೋಟಿಂಗ್ ಹಾಕಿರುತ್ತಾರೆ. ಒಂದು ವೇಳೆ ಈ ಅಂಶ ದೇಹ ಸೇರಿದರೆ ಮಕ್ಕಳಾಗುವಿಕೆಯ ತೊಂದರೆಯ ಜೊತೆಗೆ ಕ್ಯಾನ್ಸರ್ ಗೂ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಮನೆಗೆ ಪಿಜ್ಜಾ ಡೆಲಿವರಿ ಆದ ತಕ್ಷಣ ಮೊದಲು ಕಾರ್ಡ್ಬೋರ್ಡ್ ಬಾಕ್ಸ್ ತೆಗೆದುಹಾಕಿ.

English summary

Don't Keep These Dangerous Things At Home

Here we are discussing about Alert: Dont Keep These Common Dangerous Things At Home. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X