For Quick Alerts
ALLOW NOTIFICATIONS  
For Daily Alerts

ಹ್ಯಾಂಡ್‌ ಸ್ಯಾನಿಟೈಸರ್‌ನಿಂದ ಬೆಂಕಿ ಹೊತ್ತಿಕೊಳ್ಳುವ ಅಪಾಯವಿದೆಯೇ?

|

ಕೊರೊನಾವೈರಸ್ ತಡೆಗಟ್ಟುವ ಸಲುವಾಗಿ ಸ್ಯಾನಿಟೈಸರ್ ಬೇಡಿಕೆ ಹೆಚ್ಚಾಗಿದೆ. ಮೊದಲೆಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವವರು ಮಾತ್ರ ಸ್ಯಾನಿಟೈಸರ್‌ ಹೆಚ್ಚಾಗಿ ಬಳಸುತ್ತಿದ್ದರು. ಇದೀಗ ಪ್ರತಿಯೊಬ್ಬರು ಬಳಸಲು ಪ್ರಾರಂಭಿಸಿದ್ದರಿಂದ ಸ್ಯಾನಿಟೈಸರ್‌ಗೆ ಭಾರೀ ಬೇಡಿಕೆ ಇದೆ.

Could Hand Sanitizer Make You Catch On Fire? Fire hazard of hand sanitisers

ಕೊರೊನಾವೈರಸ್ ತಡೆಗಟ್ಟಲು ಸ್ಯಾನಿಟೈಸರ್ ಬಳಸುವುದು, ಆಗಾಗ ಕೈಗಳನ್ನು ತೊಳೆಯುವುದು ತುಂಬಾ ಪರಿಣಾಮಕಾರಿಯಾಗಿರುವುದರಿಂದ ಗಂಟೆಗೊಮ್ಮೆ ಸ್ಯಾನಿಟೈಸರ್ ಬಳಸುವ ರೂಢಿಯನ್ನು ಹೆಚ್ಚಿನವರು ಬೆಳೆಸಿಕೊಂಡಾಗಿದೆ. ಆಫೀಸ್‌ಗಳಲ್ಲಿಯೂ ಸ್ಯಾನಿಟೈಸರ್ ಇಡಲಾಗಿದ್ದು ಅದನ್ನು ಬಳಸುವಂತೆ ಸೂಚಿಸಲಾಗಿದೆ.

ಕೊರೊನಾವೈರಸ್‌ ಸೋಂಕಿತ ಮುಟ್ಟಿದ ವಸ್ತುಗಳನ್ನು ಆರೋಗ್ಯವಂತರು ಮುಟ್ಟಿ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಆಲ್ಕೋಹಾಲ್‌ ಇರುವ ಸ್ಯಾನಿಟೈಸರ್ ಪರಿಣಾಮಕಾರಿ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ಸ್ಯಾನಿಟೈಸರ್‌ ಬಳಸಿ ಸ್ಟೌವ್ ಬಳಿ ಹೋದ ವ್ಯಕ್ತಿಯ ಕೈಗಳಿಗೆ ಬೆಂಕಿ ಹತ್ತಿಕೊಂಡಿತು ಎಂದು ಕೈಗಳೆರಡು ಸುಟ್ಟಿರುವ ಫೋಟೊ ವೈರಲ್ ಆಗಿವೆ.

ಆದರೆ ಈ ಫೋಟೋ ಫೇಕ್ ಎಂದು ಇಂಡಿಯಾ ಟುಡೇ ಆ್ಯಂಟಿ ನ್ಯೂಸ್ ವಾರ್‌ ರೂಮ್‌ ಹೇಳಿದೆ.
ಹ್ಯಾಂಡ್‌ ಸ್ಯಾನಿಟೈಸರ್ ಹೇಗೆ ಬಳಸಬೇಕು, ಇದು ಬಳಸುವುದರಿಂದ ಕೈ ಒಣಗುವುದೇ? ಇದಕ್ಕೆ ಬೆಂಕಿ ಹತ್ತಿಕೊಳ್ಳುವ ಅಪಾಯವಿದೆಯೇ? ಎಂಬುವುದರ ವಿಶ್ವ ಆರೋಗ್ಯ ಸಂಸ್ಥೆ ನೀಡಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ....

ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ?

ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ?

ಪ್ರ: ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್‌ಗೆ ಬೆಂಕಿ ಹತ್ತಿಕೊಳ್ಳುವ ಅಪಾಯವಿದೆಯೇ?

ಉ: ಎಲ್ಲಾ ಆಲ್ಕೋಹಾಲ್ ಅಂಶವಿರುವ ವಸ್ತುಗಳು ಬೆಂಕಿಹತ್ತಿಕೊಳ್ಳುವ ಗುಣವನ್ನು ಹೊಂದಿದೆ. ಆದ್ದರಿಂದ ಅವುಗಳನ್ನು ಕಡಿಮೆ ಉಷ್ಣತೆ ಇರುವ ಕಡೆ ಹಾಗೂ ಬೆಂಕಿಯಿಂದ ದೂರ ಇಡಬೇಕು.

ಬೆಂಕಿ ಅಪಾಯವಿದೆಯೇ?

ಬೆಂಕಿ ಅಪಾಯವಿದೆಯೇ?

ಕೈಗೆ ಹಚ್ಚಿದ ಹ್ಯಾಂಡ್‌ ಸ್ಯಾನಿಟೈಸರ್‌ನಿಂದ ಬೆಂಕಿ ಅಪಾಯ ತಡೆಗಟ್ಟುವುದು ಹೇಗೆ?

ಕೈಗೆ ಸ್ಯಾನಿಟೈಸರ್ ಹಚ್ಚಿದ ಬಳಿಕ ಒಣಗಲು ಬಿಡಬೇಕು, ಅದರಲ್ಲಿರುವ ತೇವಾಂಶ ಆರಿಹೋದ ಮೇಲೆ ನಮ್ಮ ಕೈಗಳು ಸುರಕ್ಷಿತ.

ಹ್ಯಾಂಡ್‌ ಸ್ಯಾನಿಟೈಸರ್ ಎಲ್ಲಿಡುವುದು ಸುರಕ್ಷಿತವಲ್ಲ?

ಹ್ಯಾಂಡ್‌ ಸ್ಯಾನಿಟೈಸರ್ ಎಲ್ಲಿಡುವುದು ಸುರಕ್ಷಿತವಲ್ಲ?

ಇದೀಗ ಎಲ್ಲಾ ಮನೆಗಳಲ್ಲಿ ಹ್ಯಾಂಡ್‌ ಸ್ಯಾನಿಟೈಸರ್ ತಂದಿರುತ್ತೀರಿ. ಕೆಲವರಂತೂ ಮೆಡಿಕಲ್‌ನಲ್ಲಿ ಲಭ್ಯವಿರುವ ಹ್ಯಾಂಡ್‌ಸ್ಯಾನಿಟೈಸರ್‌ ಎಲ್ಲಾವನ್ನು ಮನೆಗೆ ತಂದು ಇಟ್ಟುಕೊಂಡವರೂ ಕೂಡ ಇದ್ದಾರೆ. ಹೀಗೆ ಸ್ಯಾನಿಟೈಸರ್ ಸ್ಟಾಕ್ ಇಂದಿಟ್ಟುಕೊಂಡವರು ಅದನ್ನು ಸಂಗ್ರಹಿಸಿಡುವಾಗ ತುಂಬಾ ಮುನ್ನೆಚ್ಚರಿಕೆವಹಿಸಬೇಕು.

  • ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಹೆಚ್ಚು ಉಷ್ಣತೆ ಇರುವ ಕಡೆ ಇಡಬೇಡಿ. ಲೈಟ್, ದೀಪ, ಮೇಣದ ಬತ್ತಿ ಇವುಗಳನ್ನು ಸ್ಯಾನಿಟೈಸರ್ ಸಮೀಪ ಇಡಿ.
  • ಹ್ಯಾಂಡ್ ಸ್ಯಾನಿಟೈಸರ್ ಚೆಲ್ಲಿ ಹೋದರೆ ಏನು ಮಾಡಬೇಕು?

    ಹ್ಯಾಂಡ್ ಸ್ಯಾನಿಟೈಸರ್ ಚೆಲ್ಲಿ ಹೋದರೆ ಏನು ಮಾಡಬೇಕು?

    • ಒಂದು ವೇಳೆ ಸ್ಯಾನಿಟೈಸರ್ ಸ್ವಲ್ಪ ಅಧಿಕ ಚೆಲ್ಲಿನ ಹೀದರೆ ಅಲ್ಲಿ ನೀರು ಹಾಕಿ ಚೆನ್ನಾಗಿ ಒರೆಸಬೇಕು, ನಂತರ ಆ ಬಟ್ಟೆಯನ್ನು ಚೆನ್ನಾಗಿ ಒರೆಸಬೇಕು.
    • ಗಾಳಿಯಾಡುವಂತೆ ರೂಂನ ಕಿಟಕಿಗಳನ್ನು ತೆರೆದಿಡಿ.
    • ಸ್ಯಾನಿಟೈಸರ್ ಹಾಗೂ ಧೂಮಪಾನ

      ಸ್ಯಾನಿಟೈಸರ್ ಹಾಗೂ ಧೂಮಪಾನ

      1. ಸ್ಯಾನಿಟೈಸರ್ ತುಂಬಾ ಕೈಗೆ ಹಚ್ಚಬೇಡಿ, ಸ್ವಲ್ಪವಷ್ಟೇ ಹಚ್ಚಿ.

      ಸ್ಯಾನಿಟೈಸರ್ ಕೈಗೆ ಹಚ್ಚಿದ ತಕ್ಷಣ ಲೈಟರ್ ಹಚ್ಚುವುದು, ಸಿಗರೇಟ್ ಸೇದುವುದು ಮಾಡಬೇಡಿ.

      ಸ್ಯಾನಿಟೈಸರ್ ಎಷ್ಟು ಬಾರಿ ಹಚ್ಚಬಹುದು?

      ಸ್ಯಾನಿಟೈಸರ್ ಎಷ್ಟು ಬಾರಿ ಹಚ್ಚಬಹುದು?

      ಕೈಗೆ 4-5ಬಾರಿ ಸ್ಯಾನಿಟೈಸರ್ ಹಚ್ಚಿದ ಬಳಿಕ ಕೈತೊಳೆಯಬೇಕೆಂಬುವುದು ತಪ್ಪು ಕಲ್ಪನೆ. ಕೈ ತೊಳೆಯಬೇಕೆಂದು ಅನಿಸಿದಾಗ, ಕೈಗಳು ತುಂಬಾ ಒಣಗಿದ್ದರೆ ಮಾತ್ರ ಕೈಗಳನ್ನು ತೊಳೆಯಬಹುದು.

      ಸ್ಯಾನಿಟೈಸರ್ ಹಚ್ಚುವುದರಿಂದ ಕೈಗಳು ಒಣಗುವುದೇ?

      ಸ್ಯಾನಿಟೈಸರ್ ಹಚ್ಚುವುದರಿಂದ ಕೈಗಳು ಒಣಗುವುದೇ?

      ಹಿಂದೆ ಬರುತ್ತಿದ್ದ ಸ್ಯಾನಿಟೈಸರ್ ಬಳಸುತ್ತಿದ್ದಾಗ ಕೈಗಳು ತುಂಬಾ ಶುಷ್ಕವಾಗುತ್ತಿದ್ದೆವು. ಆದರೆ ಈಗ ಬರುವ ಸ್ಯಾನಿಟೈಸರ್‌ಗಳಲ್ಲಿ ಕೈಗಳನ್ನು ಮೃದುವಾಗಿಡುವ ಅಂಶವಿರುತ್ತದೆ. ಸೋಪ್ ಬಳಸಿ ಆಗಾಗ ಕೈ ತೊಳೆಯುವುದಕ್ಕಿಂತಲೂ ಸ್ಯಾನಿಟೈಸರ್ ಬಳಸುವವರ ಕೈಗಳು ಮೃದುವಾಗಿರುತ್ತವೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಇನ್ನು ಆಲ್ಕೋಹಾಲ್ ಸ್ಯಾನಿಟೈಸರ್ ಬಳಸಿ ಕೈಗಳಲ್ಲಿ ಅಲರ್ಜಿ ಉಂಟಾಗಿರುವ ಪ್ರಕರಣಗಳು ತುಂಬಾ ಅಪರೂಪವಾಗಿವೆ.

English summary

Could Hand Sanitizer Make You Catch On Fire? Fire hazard of hand sanitisers

There are precautions you can take with hand sanitizer. Use the minimal amount, and to store follow safty tips.
Story first published: Friday, April 3, 2020, 16:08 [IST]
X
Desktop Bottom Promotion