For Quick Alerts
ALLOW NOTIFICATIONS  
For Daily Alerts

ಜೀವನದಲ್ಲಿ ಹಣ, ಯಶಸ್ಸು , ಅದೃಷ್ಟ ತರುವ 6 ವಾಸ್ತು ಗಿಡಗಳು

|

ಅದೃಷ್ಟ ಎಂಬುವುದು ಎಲ್ಲರಿಗೂ ದಕ್ಕುವ ಸೊತ್ತಲ್ಲ. ಕೆಲವರು ಮುಟ್ಟಿದ್ದೆಲ್ಲಾ ಚಿನ್ನ, ಕೆಲವರು ಮುಟ್ಟಿದ್ದೆಲ್ಲಾ ಮಣ್ಣು. ಇದಕ್ಕೆ ಅನುಭವಸ್ಥರು ಪೂರ್ವಗ್ರಹಚಾರ ಎಂದು ಕರೆಯುತ್ತಾರೆ. ಕೆಲವೊಮ್ಮೆ ಇನ್ನೇನು ಕೈಗೆ ದಕ್ಕಿತು ಎನ್ನುವ ಸಮಯದಲ್ಲಿ ಕೈತಪ್ಪಿ ಹೋಗುವ ಹಲವು ಅವಕಾಶಗಳಿಗೆ ಮಾತ್ರ ದುರಾದೃಷ್ಟಕ್ಕಿಂತಲೂ ಆ ಅದೃಷ್ಟವನ್ನು ಹಿಡಿದುಕೊಳ್ಳುವ ಭಾಗ್ಯ ಇಲ್ಲದಿರುವುದೇ ಕಾರಣವಾಗುತ್ತದೆ. ಈ ಭಾಗ್ಯವನ್ನು ಪಡೆಯಲು ಕೆಲವು ವಸ್ತುಗಳು ಹಾಗೂ ಬದಲಾವಣೆಗಳು ನೆರವಾಗುತ್ತವೆ. ಈ ಶಕ್ತಿಯನ್ನು ಪಡೆಯಲು ಮನೆಯ ಒಳಾಂಗಣದ ಉಪಕರಣಗಳು, ಅಲಂಕಾರಿದ ಸಾಧನಗಳು, ಮಕ್ಕಳು, ದಾನ, ಇತರರಿಗೆ ನೀಡುವ ಉಪಕಾರ, ಪ್ರಾಣಿ ದಯೆ ಇತ್ಯಾದಿಗಳು ನೆರವಾಗುತ್ತವೆ.

ಮನೆಯಂಗಳದಲ್ಲಿ ತುಳಸಿಯ ಗಿಡವೊಂದಿದ್ದರೆ ಬಹಳಷ್ಟು ಅದೃಷ್ಟವಿದೆ. ಈ ಗಿಡಕ್ಕೆ ಧನಾತ್ಮಕ ಮತ್ತು ಪವಿತ್ರ ತರಂಗಗಳನ್ನು ಮನೆಯೊಳಗೆ ಪ್ರವಹಿಸಿ ಅದೃಷ್ಟ ತರಲು ನೆರವಾಗುತ್ತದೆ. ಭಾರತದಲ್ಲಿ ತುಳಸಿ ಗಿಡವಾದರೆ ಇತರ ದೇಶಗಳಲ್ಲಿ ಇತರ ಶಕ್ತಿ ಇರುವ ಇತರ ಗಿಡಗಳನ್ನೂ ಮನೆಯಂಗಳದಲ್ಲಿ ಮತ್ತು ಮನೆಯೊಳಗೂ ಬೆಳೆಸುತ್ತಾರೆ ಎಂದು ಈಗ ಅಂತರ್ಜಾಲದ ಮೂಲಕ ಲಭ್ಯವಾಗುತ್ತಿರುವ ಮಾಹಿತಿಗಳ ಮೂಲಕ ಕಂಡುಬಂದಿದೆ. ಆ ದೇಶಗಳ ಜನರಿಗೆ ಅದೃಷ್ಟ ತರುವಂತಹದ್ದು ನಮ್ಮ ಮನೆಗೂ ಏಕಾಗಬಾರದು? ನಿಮ್ಮ ಆಲೋಚನೆಯೂ ಇದೇ ಆಗಿದ್ದರೆ ಈ ಲೇಖನ ನಿಮ್ಮ ನೆರವಿಗೆ ಬರಲಿದೆ ಮುಂದೆ ಓದಿ

ತುಳಸಿ

ತುಳಸಿ

ತುಳಸಿಯು ತುಂಬಾ ಪವಿತ್ರ ಹಾಗೂ ಆರೋಗ್ಯವನ್ನು ಉಂಟು ಮಾಡುವಂತಹ ಗಿಡ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ತುಳಸಿಯನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಪ್ರತಿಯೊಂದು ಹಿಂದೂ ಮನೆಯ ಮುಂದೆಯು ಒಂದು ತುಳಸಿ ಗಿಡ ಇರುತ್ತದೆ.

ವೈಶಿಷ್ಟ್ಯಗಳು: ತುಳಸಿ ಗಿಡವು ಧಾರ್ಮಿಕ ಕಾರಣಗಳಿಂದಾಗಿ ಮಾತ್ರ ತುಂಬಾ ಪ್ರಾಮುಖ್ಯತೆ ಪಡೆದಿಲ್ಲ. ಇದರಲ್ಲಿ ಅದ್ಭುತವಾದ ಆಯುರ್ವೇದ ಮತ್ತು ಚಿಕಿತ್ಸಕ ಗುಣಗಳನ್ನು ಹೊಂದಿದೆ. ಇದನ್ನು ಸಾಮಾನ್ಯ ಶೀತ, ಕೆಮ್ಮು, ಜೀರ್ಣಕ್ರಿಯೆ ಸಮಸ್ಯೆ ಮತ್ತು ಇತರ ಕೆಲವೊಂದು ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಇದು ರಕ್ತವನ್ನು ಶುದ್ಧೀಕರಿಸುವುದು ಮತ್ತು ದೇಹದಲ್ಲಿನ ವಿಷಕಾರಿ ಅಂಶವನ್ನು ಕಡಿಮೆ ಮಾಡುವುದು. ಲಾಭಗಳು: ವಾಸ್ತು ಪ್ರಕಾರ ತುಳಸಿ ತುಂಬಾ ಪ್ರಾಮುಖ್ಯತೆ ಪಡೆದಿದೆ. ಇದು ಗಾಳಿಯನ್ನು ಶುದ್ಧೀಕರಿಸುವುದು ಮತ್ತು ಇದರಿಂದಾಗಿಯೇ ಇದು ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿರುವುದು. ತುಳಸಿ ಗಿಡವನ್ನು ನೀವು ಮನೆಯ ಉತ್ತರ, ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಇಡಬಹುದು. ಇದರಿಂದ ತುಳಸಿ ಗಿಡಕ್ಕೆ ಸೂರ್ಯನ ಬೆಳಕು ಮತ್ತು ಗಾಳಿಯು ಸಿಗುವುದು. ಹಿಂದಿನ ಕಾಲದಲ್ಲಿ ಮನೆಯ ಎದುರು ಒಂದು ತುಳಸಿ ಗಿಡವನ್ನು ನೆಡುತ್ತಿದ್ದರು. ಆದರೆ ಆಧುನಿಕ ಮನೆಯಲ್ಲಿ ಜಾಗದ ಕೊರತೆ ಇರುವ ಕಾರಣದಿಂದಾಗಿ ತುಳಸಿ ಗಿಡವನ್ನು ಮನೆಯ ಉತ್ತರ ಅಥವಾ ಈಶಾನ್ಯ ಭಾಗದಲ್ಲಿ ಬಾಲ್ಕನಿಯಲ್ಲಿ ಇಡಬಹುದು.

Most Read: ಬಾಡಿ ಹೀಟ್ ಕಡಿಮೆ ಮಾಡಲು ಸೇವಿಸಬಹುದಾದ ಬೇಸಿಗೆಯ ಆಹಾರಗಳು ಮತ್ತು ಪಾನೀಯಗಳು

ಅದೃಷ್ಟದ ಬಿದಿರು

ಅದೃಷ್ಟದ ಬಿದಿರು

ವಾಸ್ತುಶಾಸ್ತ್ರದ ಪ್ರಕಾರವಾಗಿ ಅದೃಷ್ಟದ ಬಿದಿರು ತುಂಬಾ ಪ್ರಾಮುಖ್ಯವಾಗಿರುವಂತಹ ಗಿಡ. ಈ ಗಿಡವು ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಅಂಶಗಳು ಬರದಂತೆ ರಕ್ಷಣೆ ಮಾಡುವುದು. ವೈಶಿಷ್ಟ್ಯಗಳು: ಈ ಹಸಿರು ಬಣ್ಣದ ಗಿಡವು ತುಂಬಾ ಜನಪ್ರಿಯವಾಗಿದೆ. ಇದು ಮನೆ ಹಾಗೂ ಹಣಕ್ಕೆ ತುಂಬಾ ಒಳ್ಳೆಯದು. ಇದು ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುವುದು.

ಲಾಭಗಳು: ಅದೃಷ್ಟದ ಬಿದಿರು ಯಾವ ರೀತಿಯ ಲಾಭಗಳನ್ನು ತರಲಿದೆ ಎಂದರೆ ಅದು ಅದರ ಕೊಂಬೆಗಳು ಮತ್ತು ಅದರ ವ್ಯವಸ್ಥೆ ಮೇಲೆ ಅವಲಂಬಿತವಾಗಿದೆ. ಎರಡು ಕೊಂಬೆಯು ದಂಪತಿಗೆ ಪ್ರೀತಿ ಮತ್ತು ಅದೃಷ್ಟ ತರುವುದು. ಮೂರು ಕೊಂಬೆಗಳು ಸಂತೋಷ ಹಾಗೂ ದೀರ್ಘಾಯುಷ್ಯ ತರುವುದು. ಆರು ಕೊಂಬೆಗಳು ಅದೃಷ್ಟ ಮತ್ತು ಸೌಹಾರ್ದತೆ ತರಲಿದೆ. ಅದೇ ಐದು ಕೊಂಬೆಗಳು ಆರೋಗ್ಯವನ್ನು ಕೊಡುವುದು. ಏಳು ಕೊಂಬೆಗಳಿದ್ದರೆ ಆಗ ಸಂಪೂರ್ಣ ಮನೆಗೆ ಉತ್ತಮ ಆರೋಗ್ಯವು ಸಿಗುವುದು. ಈ ಗಿಡವನ್ನು ಮನೆಯ ಪೂರ್ವ ಭಾಗದಲ್ಲಿಟ್ಟರೆ ಆರೋಗ್ಯ ಸಿಗುವುದು. ಅದೇ ಅಗ್ನೇಯ ಭಾಗದಲ್ಲಿಟ್ಟರೆ ಅದರಿಂದ ಸಂಪತ್ತು ಸಿಗುವುದು.

ಅದಾಗ್ಯೂ, ನೀವು ಮಲಗುವ ಕೋಣೆಯಲ್ಲಿ ಅದೃಷ್ಟ ಬಿದಿರನ್ನು ಇಡುವುದು ಒಳ್ಳೆಯ ವಿಚಾರವಲ್ಲ. ಯಾಕೆಂದರೆ ಇದು ಶಕ್ತಿಯ ಹೀರಿಕೊಳ್ಳುವುದು ಮತ್ತು ಇದರಿಂದ ನಿದ್ರೆಗೆ ತುಂಬಾ ಸಮಸ್ಯೆಯಾಗಬಹುದು.

ಅಲೋವೆರಾ

ಅಲೋವೆರಾ

ವಾಸ್ತು ಗಿಡಗಳ ಪಟ್ಟಿಯಲ್ಲಿ ಅಲೋವೆರಾವು ಧನಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುವಂತಹ ತುಂಬಾ ಪ್ರಬಲ ಗಿಡವೆಂದು ಪರಿಗಣಿಸಲಾಗಿದೆ.

ವೈಶಿಷ್ಟ್ಯಗಳು: ಅಲೋವೆರಾದ ಗಿಡದಲ್ಲಿ ಇರುವಂತಹ ದೊಡ್ಡ ರಂಧ್ರಗಳು ದೊಡ್ಡ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ನ್ನು ಹೀರಿಕೊಳ್ಳುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ ಮತ್ತು ಇದು ಆಮ್ಲಜನಕವನ್ನು ಹೊರಗೆ ಹಾಕುವುದು. ಇದರಿಂದಾಗಿ ಇದು ಗಾಳಿಯ ಶುದ್ಧೀಕರಣಕ್ಕೆ ಅದ್ಭುತವಾಗಿರುವ ಗಿಡವಾಗಿದೆ ಮತ್ತು ಇದು ನಮ್ಮ ಸುತ್ತಲಿನ ಶಕ್ತಿಯನ್ನು ಶುದ್ಧೀಕರಿಸುವುದು.

ಲಾಭಗಳು

ಮನೆಯ ಒಳಗಡೆ ಅಲೋವೆರಾದ ಗಿಡವನ್ನು ಇಡುವುದರಿಂದ ಅದು ಆರೋಗ್ಯ ಮತ್ತು ಸಂಪೂರ್ಣ ಸಮೃದ್ಧಿಗೆ ತುಂಬಾ ಲಾಭಕಾರಿ ಆಗಿ ಇರುವುದು. ಇದರ ಹೊರತಾಗಿ ನೀವು ಅಲೋವೆರಾದ ಲೋಳೆಯನ್ನು ಕೆಲವೊಂದು ಸಂದರ್ಭದಲ್ಲಿ ತೆಗೆದುಕೊಂಡು ಅದನ್ನು ಕುಡಿಯಬಹುದು ಅಥವಾ ಫೇಸ್ ಪ್ಯಾಕ್ ಆಗಿಯೂ ಬಳಸಿಕೊಂಡರೆ ಲಾಭವಿದೆ. ವಾಸ್ತು ಪ್ರಕಾರ ಅಲೋವೆರಾ ಗಿಡವನ್ನು ಪೂರ್ವ ಅಥವಾ ಉತ್ತರ ಭಾಗದಲ್ಲಿ ಇಡಬೇಕು.

Most Read: ನಿಮ್ಮ ಮನೆಯ ಪ್ರಧಾನ ಬಾಗಿಲಿಗೆ ಸರಿ ಹೊಂದುವ ವಾಸ್ತು ಸಲಹೆಗಳು

ಮನಿ ಪ್ಲ್ಯಾಂಟ್

ಮನಿ ಪ್ಲ್ಯಾಂಟ್

ಈ ಗಿಡವು ಗಾಳಿಯನ್ನು ಶುದ್ಧೀಕರಿಸುತ್ತದೆ ಎಂದು ನಾಸಾ ಕೂಡ ಅದಕ್ಕೆ ಮೊಹರು ಹಾಕಿದೆ. ಹೌದು, ಬೇರೆ ಯಾವುದೇ ಗಿಡಕ್ಕಿಂತಲೂ ಚೆನ್ನಾಗಿ ಮನಿಪ್ಲ್ಯಾಂಟ್ ಗಾಳಿಯನ್ನು ಶುದ್ಧೀಕರಿಸುವುದು. ಇದು ಮಾಲಿನ್ಯ ಮತ್ತು ಎಲೆಕ್ಟ್ರಾನಿಕ್ ಸಾಧನಗಳಿಂದ ಹೊರಬರುವಂತಹ ಹಾನಿಕಾರಕ ವಿಕಿರಣವನ್ನು ಹೀರಿಕೊಳ್ಳುವುದು. ಇದು ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬುವುದು ಮತ್ತು ಅದು ಆಮ್ಲಜನಕ ಮಟ್ಟವನ್ನು ಹೆಚ್ಚು ಮಾಡುವುದು.

ವೈಶಿಷ್ಟ್ಯಗಳು: ಗಾಳಿಯಲ್ಲಿ ಇರುವಂತಹ ಹಾನಿಕಾರಕ ವಿಕಿರಣವನ್ನು ಇದು ತೆಗೆದು ಹಾಕುವ ಕಾರಣದಿಂದಾಗಿ ವಾಸ್ತು ಗುರುಗಳು ಮತ್ತು ವಿಜ್ಞಾನಿಗಳು ಈ ಗಿಡವನ್ನು ಎಲೆಕ್ಟ್ರಾನಿಕ್ ಸಾಧನಗಳಾಗಿರುವಂತಹ ಲ್ಯಾಪ್ ಟಾಪ್, ವೈಫೈ ರೌಟರ್, ಟಿವಿ ಮತ್ತು ಇತರ ಸಾಧನಗಳ ಸಮೀಪ ಇಡಬೇಕೆಂದು ಹೇಳುವರು.

ಲಾಭಗಳು: ಮನಿಪ್ಲ್ಯಾಂಟ್ ಒತ್ತಡ, ಆತಂಕ, ವಾಗ್ವಾದ ಮತ್ತು ನಿದ್ರಾಹೀನತೆ ಕಡಿಮೆ ಮಾಡುವುದು ಎಂದು ಹೇಳಲಾಗುತ್ತದೆ. ಇದನ್ನು ಮಲಗುವ ಕೋಣೆ ಅಥವಾ ಯಾವುದಾದರೂ ಒಂದು ಮೂಲೆಯಲ್ಲಿ ಇಡಬಹುದು. ಮನಿ ಪ್ಲ್ಯಾಂಟ್ ನ್ನು ಇಡುವಂತಹ ಸೂಕ್ತ ಸ್ಥಳವೆಂದರೆ ಕೋಣೆಯ ಅಗ್ನೇಯ ಭಾಗ ಅಥವಾ ವಾಸಿಸುವ ಕೋಣೆಯ ಆಗ್ನೇಯ ಭಾಗದಲ್ಲಿ ಇಡಬೇಕು. ಈ ಭಾಗದಲ್ಲಿ ಗಣೇಶನು ನೆಲೆಸಿರುವನು. ಗಣೇಶನು ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯನ್ನು ತರುವರು ಮತ್ತು ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡುವರು. ಮನೆಯಲ್ಲಿ ವಾಸ್ತು ಗಿಡಗಳಿಂದಾಗಿ ಸಂಪತ್ತು ಬರುವುದು. ಇದನ್ನು ಮನೆಯ ಒಳಗಿನ ಭಾಗದಲ್ಲಿ ಇಡಬೇಕು. ಹೊರಗಡೆ ಇಡಲೇಬಾರದು. ಮನಿ ಪ್ಲ್ಯಾಂಟ್ ನ ಮನೆಯ ಒಳಗಡೆ ಇಡಲು ಸೂಕ್ತ. ಆದರೆ ಇದನ್ನು ಮನೆಯ ಹೊರಗಿನ ತೋಟದಲ್ಲಿ ಇಡಬಾರದು.

ಪೀಸ್ ಲಿಲಿ

ಪೀಸ್ ಲಿಲಿ

ಇದರ ಹೆಸರೇ ಸೂಚಿಸುವಂತೆ ಈ ಗಿಡವು ಮಾನಸಿಕ ನೆಮ್ಮದಿ, ಆರೋಗ್ಯ ಮತ್ತು ಧನಾತ್ಮಕ ಶಕ್ತಿ ತಂದುಕೊಡುವುದು.

ವೈಶಿಷ್ಟ್ಯ: ಈ ಸುಂದರ ಗಿಡದ ಬಿಳಿಯ ಹೂವುಗಳು ಸ್ಪೂರ್ತಿಯನ್ನು ಹೆಚ್ಚಿಸುವುದು. ಪೀಸ್ ಲಿಲಿ ತುಂಬಾ ಚೆನ್ನಾಗಿ ಬೆಳೆಯುವುದು. ಇದು ತುಂಬಾ ಶಾಂತವಾಗಿರುವ ಮನೆಯ ಮೂಲೆಯಲ್ಲಿ ಬೆಳೆಯುವಂತದ್ದಾಗಿದೆ. ಇದನ್ನು ಮಲಗುವ ಕೋಣೆಯಲ್ಲಿ ಇಟ್ಟಾಗ ಅದರಿಂದ ಶಾಂತಿ ಮತ್ತು ಒಳ್ಳೆಯ ನಿದ್ರೆಯು ಬರುವುದು.

ಲಾಭಗಳು: ಇದು ಮನೆಯಲ್ಲಿರುವಂತಹ ನಕರಾತ್ಮಕ ಶಕ್ತಿಯನ್ನು ದೂರ ಮಾಡುವುದು ಮತ್ತು ಒಳ್ಳೆಯ ಅವಕಾಶಗಳಿಗೆ ದಾರಿ ಮಾಡಿಕೊಡುವುದು. ನಾಸಾವು ಈ ಗಿಡದಲ್ಲಿರುವಂತಹ ಶುದ್ಧೀಕರಿಸುವ ಗುಣವನ್ನು ಪತ್ತೆ ಮಾಡಿದೆ.

ವಾಸ್ತು ಪ್ರಕಾರ ಈ ಗಿಡವು ಇನ್ನಷ್ಟು ಮಾಡಬಲ್ಲದು. ಪೀಸ್ ಲಿಲಿ ಶಾಂತಿ ಹಾಗೂ ಸೌಹಾರ್ದತೆ ಉಂಟು ಮಾಡುವುದು. ಇದು ಸುತ್ತಲಿನಲ್ಲಿ ಇರುವಂತಹ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವುದು ಮತ್ತು ಅದನ್ನು ಧ್ವಂಸ ಮಾಡುವುದು. ಈ ಗಿಡದಲ್ಲಿ ಅದ್ಭುತವಾಗಿರುವಂತಹ ರಕ್ಷಣಾ ಶಕ್ತಿಯು ಇದೆ ಎಂದು ಹೇಳಲಾಗುತ್ತದೆ.

Most Read: ಪೂಜಾ ಕೋಣೆಯಲ್ಲಿ ಇಂತಹ ದೇವರ ಪ್ರತಿಮೆ ಇರಿಸಬೇಡಿ, ಇಲ್ಲಾಂದ್ರೆ ಕಷ್ಟದ ಮೇಲೆ ಕಷ್ಟ ಬರಬಹುದು!

ಮಲ್ಲಿಗೆ

ಮಲ್ಲಿಗೆ

ಬಿಳಿ ಹೂಗಳಿಂದ ಸುವಾಸನೆ ನೀಡುವಂತಹ ಮಲ್ಲಿಗೆ ಗಿಡವು ನಿಮ್ಮ ಇಂದ್ರಿಯಗಳಿಗೆ ಮಾತ್ರ ಒಳ್ಳೆಯದಲ್ಲ. ಇದರಿಂದ ಇನ್ನಿತರ ಹಲವಾರು ಲಾಭಗಳು ಇವೆ.

ವೈಶಿಷ್ಟ್ಯಗಳು: ಮಲ್ಲಿಗೆ ಗಿಡವು ಧನಾತ್ಮಕ ಶಕ್ತಿಯನ್ನು ಆಕರ್ಷಿಸುವುದು ಮತ್ತು ಇದು ಒತ್ತಡ ನಿವಾರಣೆ ಮಾಡುವುದು ಮತ್ತು ನಿಶ್ಯಕ್ತಿ ದೂರ ಮಾಡುವುದು.

ಲಾಭಗಳು: ವಾಸ್ತು ಪ್ರಕಾರ ಇದು ಸಂಬಂಧ ಬಲಪಡಿಸುವುದು ಮತ್ತು ರೋಮ್ಯಾನ್ಸ್ ಹೆಚ್ಚಿಸುವುದು.

ಫೆಂಗ್ ಶೂಯಿ ಪ್ರಕಾರ ಈ ಗಿಡವನ್ನು ಇಡುವಂತಹ ಜಾಗವು ತುಂಬಾ ಮುಖ್ಯವಾಗಿದೆ. ಮಲ್ಲಿಗೆ ಗಿಡವನ್ನು ದಕ್ಷಿಣ ಭಾಗದಲ್ಲಿ ಇಡಬೇಕು. ದಕ್ಷಿಣಕ್ಕೆ ಮುಖ ಮಾಡಿರುವಮತಹ ಕಿಟಿಕಿಯಲ್ಲಿ ಇದನ್ನು ಇಡಬಹುದು. ಅದಾಗ್ಯೂ, ಇದನ್ನು ಹೊರಗಡೆ ನೆಟ್ಟರೆ ಆಗ ಪೂರ್ವ, ಉತ್ತರ ಅಥವಾ ಈಶಾನ್ಯದಲ್ಲಿ ಇಡಬಹುದು.

English summary

These 6 Vastu Plants That Bring Good Luck in your Life

We must not only know which plants to place but in Feng Shui where to place plants is also equally important. There are plants for the bedrooms and those for the living room as well. In the same way, there are certain rules in Vastu that one needs to follow with respect to choice of plants and their placements .
Story first published: Wednesday, March 13, 2019, 17:46 [IST]
X
Desktop Bottom Promotion