ಮನೆಯ ಕೆಲವು ಸ್ಥಳದಲ್ಲಿ ಹಣವನ್ನು ಇಡುವುದರಿಂದ ಶ್ರೀಮಂತಿಕೆ ಹೆಚ್ಚುವುದು!

Posted By: Deepu
Subscribe to Boldsky

ಹಣ ಯಾರಿಗೆ ಬೇಡಾ? ಎಲ್ಲರಿಗೂ ಬೇಕು. ಇಂದು ನಮ್ಮ ಜೀವನ ನಿಂತಿರುವುದೇ ಹಣದ ಮೇಲೆ ಎಂದರೆ ತಪ್ಪಾಗಲಾರದು. ಹಾಗಾಗಿ ಪ್ರತಿಯೊಬ್ಬರು ಹೆಚ್ಚು ಹೆಚ್ಚು ಹಣವನ್ನು ಸಂಪಾದಿಸಲು ಪ್ರಯತ್ನಿಸುತ್ತಾರೆ. ಜೊತೆಗೆ ದುಡಿದ ಹಣವು ಸುರಕ್ಷಿತವಾಗಿರಲಿ ಎಂದು ಬಯಸುತ್ತಾರೆ. ಇನ್ನೂ ಕೆಲವರು ಉಳಿಸಿಕೊಂಡ ಹಣವು ಇನ್ನಷ್ಟು ದ್ವಿಗುಣವಾಗಲಿ ಎಂದು ಬ್ಯಾಂಕ್‍ಗಳ ಮೊರೆ ಹೋಗುವುದು ಸಹಜ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ, ಅಲ್ಲಿ ಹಣವನ್ನು ಇಡಬೇಕು. ಇದರಿಂದ ನಮ್ಮ ಹಣವು ಹೆಚ್ಚುವುದು ಹಾಗೂ ನಮ್ಮ ಆರ್ಥಿಕ ಸ್ಥಿತಿಯು ಸುಧಾರಣೆಯಾಗುವುದು ಎಂದು ಹೇಳಲಾಗುತ್ತದೆ.

ಹೌದು, ವಾಸ್ತು ಎನ್ನುವುದು ಮನೆಯ ನಿರ್ಮಾಣಕ್ಕೆ ಹಾಗೂ ಮನೆಯ ನೆಮ್ಮದಿಯನ್ನು ಕಾಪಾಡುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಮನೆಯ ವಾಸ್ತು ಸೂಕ್ತ ರೀತಿಯಲ್ಲಿದೆ ಎಂದಾದರೆ ಮನೆಯಲ್ಲಿ ಸದಾ ಶಾಂತಿ, ಸಕಾರಾತ್ಮಕ ಶಕ್ತಿಯು ನೆಲೆಗೊಂಡಿರುತ್ತದೆ. ಜೊತೆಗೆ ಜೀವನದಲ್ಲಿ ಅನೇಕ ಬಗೆಯ ಅಭಿವೃದ್ಧಿಯನ್ನು ತಂದುಕೊಡುವುದು. ಅದರಲ್ಲೂ ಮನೆಯಲ್ಲಿ ವಾಸ್ತುವಿಗೆ ಅನುಗುಣವಾಗಿ ಹಣವನ್ನು ಇಡುವುದರಿಂದ ನಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗುವುದು. ಶ್ರೀಮಂತಿಕೆ ಎನ್ನುವುದು ಒಲಿದು ಬರುವುದು ಎಂದು ಹೇಳಲಾಗುತ್ತದೆ. ನಿಮಗೂ ಈ ವಿಚಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳ ಬೇಕು ಎನ್ನುವ ಕುತೂಹಲವಿದ್ದರೆ ಮುಂದಿರುವ ವಿವರಣೆಯನ್ನು ಓದಿ...

ಉತ್ತರ ದಿಕ್ಕಿನಲ್ಲಿ ಇರಿಸಿ

ಉತ್ತರ ದಿಕ್ಕಿನಲ್ಲಿ ಇರಿಸಿ

ಉತ್ತರ ದಿಕ್ಕನ್ನು ಬಗವಂತನಾದ ಕುಬೇರನ ಮೂಲೆ ಎಂದು ಹೇಳಲಾಗುತ್ತದೆ. ವಾಸ್ತುವಿನ ಪ್ರಕಾರ ಮನೆಯಲ್ಲಿ ಅಮೂಲ್ಯವಾದ ವಸ್ತು ಹಾಗೂ ಹಣವನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಇದರಿಂದ ನಿಮ್ಮ ಅದೃಷ್ಟ ದ್ವಿಗುಣವಾಗುವುದು. ಸಂಪತ್ತು ಸಹ ವೃದ್ಧಿಯಾಗುವುದು ಎಂದು ಹೇಳಲಾಗುತ್ತದೆ.

ದಕ್ಷಿಣ ದಿಕ್ಕಿನಲ್ಲಿ ಇರಿಸುವುದು ಸುರಕ್ಷಿತವಲ್ಲ

ದಕ್ಷಿಣ ದಿಕ್ಕಿನಲ್ಲಿ ಇರಿಸುವುದು ಸುರಕ್ಷಿತವಲ್ಲ

ನೀವು ನಿಮ್ಮ ಹಣದ ಪೆಟ್ಟಿಗೆಯನ್ನು ಉತ್ತರ ದಿಕ್ಕಿನಲ್ಲಿ ಇಡುವಾಗ ಅದರ ಬಾಗಿಲು ದಕ್ಷಿಣ ಮುಖವಾಗಿ ಇರಬಾರದು. ಸಂಪತ್ತಿನ ಅಧಿದೇವತೆ ದಕ್ಷಿಣ ಮುಖವಾಗಿ ಚಲಿಸುತ್ತಾಳೆ ಹಾಗೂ ಉತ್ತರ ದಿಕ್ಕಿನಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುವುದು. ಹಾಗಾಗಿ ಹಣವನ್ನು ಹಾಗೂ ಹಣದ ಪೆಟ್ಟಿಗೆಯನ್ನು ಇಡುವಾಗ ಸೂಕ್ತ ರೀತಿಯಲ್ಲಿ ಚಿಂತನೆ ನಡೆಸಬೇಕು.

ಪೂರ್ವ ದಿಕ್ಕಿನಲ್ಲಿ ಇರಿಸಿ

ಪೂರ್ವ ದಿಕ್ಕಿನಲ್ಲಿ ಇರಿಸಿ

ಪೂರ್ವ ದಿಕ್ಕಿಗೆ ಅನುಗುಣವಾಗಿ ನಿಮ್ಮ ಹಣದ ಪೆಟ್ಟಿಗೆಯ ಬಾಗಿಲು ಇರುವಂತೆ ಇರಿಸಬೇಕು. ಅಂಗಡಿಯಲ್ಲಿ ಕ್ಯಾಶಿಯರ್ ಅಥವಾ ಹಣಪಡೆಯುವವನು ನೈರುತ್ಯ ದಿಕ್ಕಿನೆಡೆಗೆ ಮುಖವಾಗಿ ಕುಳಿತರೆ ತನ್ನ ಎಡಗೈ ಭಾಗದಲ್ಲಿ ಹಣವನ್ನು ಇರಿಸಬೇಕು. ಪೂರ್ವ ಮುಖವಾಗಿ ಕುಳಿತಿದ್ದರೆ ಬಲ ಭಾಗದ ಕಡೆಗೆ ಹಣವನ್ನು ಇಟ್ಟುಕೊಂಡಿರಬೇಕು.

ನಾಲ್ಕು ಮೂಲೆ ಬರುವ ಸ್ಥಳದಲ್ಲಿ ಹಣದ ಪೆಟ್ಟಿಗೆ ಇಡದಿರಿ!

ನಾಲ್ಕು ಮೂಲೆ ಬರುವ ಸ್ಥಳದಲ್ಲಿ ಹಣದ ಪೆಟ್ಟಿಗೆ ಇಡದಿರಿ!

ಮನೆಯಲ್ಲಿ ನಾಲ್ಕು ಮೂಲೆಗಳು ಇರುವಂತಹ ಸ್ಥಳದಲ್ಲಿ ಹಣದ ಡಬ್ಬಿಯನ್ನು ಇಡಬಾರದು. ವಿಶೇಷವಾಗಿ ಈಶಾನ್ಯ, ಆಗ್ನೇಯ ಮತ್ತು ನೈಋತ್ಯ ಮೂಲೆಯಲ್ಲಿ ಹಣವನ್ನು ಇಡಬಾರದು. ನಿಮ್ಮ ಸುರಕ್ಷತೆ ಎನ್ನುವುದು ಉತ್ತರ ದಿಕ್ಕಿನಲ್ಲಿರುತ್ತದೆ. ದಕ್ಷಿಣ ಭಾಗದಲ್ಲಿ ಹಣವನ್ನು ಇಡುವುದು ತಪ್ಪಿಸಿ. ಇದರಿಂದ ಕೆಟ್ಟ ಅದೃಷ್ಟಗಳು ಎದುರಾಗುವುದು.

ದೇವರ ಕೋಣೆಯಲ್ಲಿ ಹಣವನ್ನು ಇಡದಿರಿ

ದೇವರ ಕೋಣೆಯಲ್ಲಿ ಹಣವನ್ನು ಇಡದಿರಿ

ಪೂಜಾ ಕೋಣೆಯಲ್ಲಿ ಅಥವಾ ದೇವರ ಮನೆಯಲ್ಲಿ ಹಣದ ಪೆಟ್ಟಿಗೆಯನ್ನು ಇಡಬಾರದು. ವಾಸ್ತು ಪ್ರಕಾರ ಹಣವನ್ನು ದೇವರ ಮನೆಯಲ್ಲಿ ಇಡಬಾರದು. ಬದಲಿಗೆ ಮಲಗುವ ಕೋಣೆಯಲ್ಲಿ ಭದ್ರವಾಗಿ ಇಡಬಹುದು ಎಂದು ಹೇಳಲಾಗುತ್ತದೆ.

 ಹಣದ ಪೆಟ್ಟಿಗೆಯ ಬಾಗಿಲು ಮುಖ್ಯ ದ್ವಾರ ಅಥವಾ ಗೇಟ್ ನಿಂದ ಗೋಚರವಾಗುವಂತೆ ಇರಬಾರದು

ಹಣದ ಪೆಟ್ಟಿಗೆಯ ಬಾಗಿಲು ಮುಖ್ಯ ದ್ವಾರ ಅಥವಾ ಗೇಟ್ ನಿಂದ ಗೋಚರವಾಗುವಂತೆ ಇರಬಾರದು

ಹಣದ ಪೆಟ್ಟಿಗೆಯ ಬಾಗಿಲು ಮುಖ್ಯ ದ್ವಾರ ಅಥವಾ ಗೇಟ್ ನಿಂದ ಗೋಚರವಾಗುವಂತೆ ಇದ್ದರೆ ನಿಮ್ಮ ಎಲ್ಲಾ ಹಣವು ಹೊರಹೋಗುವುದು. ವಾಸ್ತು ಪ್ರಕಾರ ನಿಮ್ಮ ಸ್ನಾನ ಗೃಹ, ಶೌಚಾಲಯ, ಅಡಿಗೆ ಮನೆ, ನೆಲ ಮಾಳಿಗೆ ಅಥವಾ ಮೆಟ್ಟಿಲುಗಳ ಸಾಲಲ್ಲಿ ಗೌಪ್ಯವಾಗಿ ಹಣವನ್ನು ಇಡುವುದು ತಪ್ಪಿಸಿ. ಇದರಿಂದ ಹಣ ಉಳಿಯುವುದಕ್ಕಿಂತ ನಷ್ಟವಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.

ಹಣದ ಸುರಕ್ಷತೆಗೆ ಕೆಲವು ಸಲಹೆಗಳು

ಹಣದ ಸುರಕ್ಷತೆಗೆ ಕೆಲವು ಸಲಹೆಗಳು

- ಅಚ್ಚುಕಟ್ಟಾದ ಹಾಗೂ ಸ್ವಚ್ಛವಾದ ಸ್ಥಳದಲ್ಲಿ ಹಣವನ್ನು ಇರಿಸಿ. ಇದು ನಿಮ್ಮ ಹಣದ ಸುರಕ್ಷತೆಯನ್ನು ಪ್ರತಿಬಿಂಬಿಸುತ್ತದೆ.

- ನೀವು ನಿಮ್ಮ ಮನೆಯಲ್ಲಿ ಉತ್ತರ ದಿಕ್ಕಿನ ಗೋಡೆಯ ಮೇಲೆ ಲಕ್ಷ್ಮಿ ದೇವಿಯೊಂದಿಗೆ ನಾಣ್ಯವನ್ನು ಇರಿಸಿ.

- ನಗದು ಹಣವನ್ನು ಫೈಲ್‍ಗಳು ಅಥವಾ ಇನ್ಯಾವುದಾದರೂ ಕಾಗದ ಪತ್ರದೊಂದಿಗೆ ಇರಿಸದಿರಿ.

ಹಣದ ಸುರಕ್ಷತೆಗೆ ಕೆಲವು ಸಲಹೆಗಳು

ಹಣದ ಸುರಕ್ಷತೆಗೆ ಕೆಲವು ಸಲಹೆಗಳು

- ನಿಮ್ಮ ಮನೆಯ ಮೊದಲ ಅಥವಾ ಕೊನೆಯ ಕೊಠಡಿಯಲ್ಲಿ ಹಣದ ಪೆಟ್ಟಿಗೆ ಇಡುವುದನ್ನು ತಪ್ಪಿಸಿ.

- ಕಿಟಕಿಯ ಬಳಿ ಹಣವನ್ನು ಇರಿಸದಿರಿ. ಇದು ಸಂಪತ್ತು ನಿಮ್ಮ ಮನೆಯಿಂದ ಆಚೆ ಹೋಗುವುದನ್ನು ಸೂಚಿಸುತ್ತದೆ.

- ಹಣವನ್ನು ಸದಾ ಸೂಕ್ತ ಸ್ಥಳದಲ್ಲಿ ವಾಸ್ತು ಪ್ರಕಾರ ಇರಿಸಿಕೊಳ್ಳಬೇಕು. ಆಗ ಧನಾತ್ಮಕ ವೈಭವಗಳು ಹೆಚ್ಚುವುದು.

English summary

where-to-keep-money-according-to-vastu

Vastu is a Hindu system related to the science of architecture. It originates from different energies in the atmosphere and is said to bring in peace, positive vibes and prosperity. A lot of people who believe in Vastu swear by it.Do you believe in Vastu? Do you believe that following Vastu recommendations brings in good luck? If you do, then read on for some useful tips pertaining to your wealth.
Story first published: Thursday, March 8, 2018, 7:01 [IST]