For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಇಂತಹ ಪೈಂಟಿಂಗ್‪ಗಳಿದ್ದರೆ-ಮೊದಲು ಹೊರಗಡೆ ಹಾಕಿ!!

|

ನಮ್ಮ ಮನೆಯಲ್ಲಿ ಹಲವಾರು ವಿನ್ಯಾಸದ ವಸ್ತುಗಳು ಹಾಗೂ ಬಣ್ಣಗಳಿಂದ ಶೃಂಗರಿಸಲು ಬಯಸುತ್ತೇವೆ. ಕೆಲವೊಮ್ಮೆ ಶೋಪೀಸ್ ಗಳನ್ನು ಕೂಡ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ಆದರೆ ಇದು ನಮಗೆ ನಿಜವಾಗಿಯೂ ಲಾಭಕಾರಿಯೇ ಎನ್ನುವ ಬಗ್ಗೆ ಆಲೋಚನೆ ಮಾಡುವುದಿಲ್ಲ. ಮನೆಯ ಸೌಂದರ್ಯ ಹೆಚ್ಚಿಸಲು ಹೋಗಿ ಶಾಂತಿ ಕದಡಿ ಹೋದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ.

ಕೆಲವೊಂದು ವಸ್ತುಗಳು ಧನಾತ್ಮಕ ಹಾಗೂ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ. ಸುಂದರವಾಗಿ ಕಾಣುವಂತಹ ಪ್ರತಿಯೊಂದು ವಸ್ತುವನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳುವ ಹವ್ಯಾಸ ಕೆಲವರಿಗೆ ಇದೆ. ಕೆಲವರಿಗೆ ಪೈಂಟಿಂಗ್ ಎಂದರೆ ತುಂಬಾ ಇಷ್ಟ. ಹೀಗಾಗಿ ತಮಗೆ ಇಷ್ಟವಾದ ಪೈಂಟಿಂಗ್ ಮನೆಗೆ ತಂದು ತೂಗು ಹಾಕುವರು. ಆದರೆ ಮನೆಯಲ್ಲಿ ಇಡಲೇಬಾರದ ಕೆಲವು ಪೈಂಟಿಂಗ್ ಬಗ್ಗೆ ಈ ಲೇಖನದಲ್ಲಿ ಹೇಳಿಕೊಡಲಿದ್ದೇವೆ.

ನಟರಾಜ

ನಟರಾಜ

ನಟರಾಜವು ನೃತ್ಯರೂಪದಲ್ಲಿ ಶಿವ ದೇವರನ್ನು ಪ್ರತಿನಿಧಿಸುವರು. ಈ ಕಲಾಕೃತಿಯು ಎಷ್ಟೇ ಸುಂದರವಾಗಿ ಕಾಣಿಸಿದರೂ ಶಿವನ ಸಿಟ್ಟಿನ ರೂಪವಾಗಿದೆ. ಶಿವ ತುಂಬಾ ಕೋಪಗೊಂಡು, ಧ್ವಂಸ ಮಾಡುವರು. ಕೋಪದಲ್ಲಿರುವ ದೇವರ ಚಿತ್ರಗಳು ಮನೆಗೆ ಒಳ್ಳೆಯದಲ್ಲವೆಂದು ಪರಿಗಣಿಸಲಾಗಿದೆ.

ಉಗ್ರ ಪಾಣಿಗಳು

ಉಗ್ರ ಪಾಣಿಗಳು

ಪ್ರಾಣಿಗಳ ಕಲಾಕೃತಿಗಳೂ ಎಷ್ಟೇ ಸುಂದರವಾಗಿದ್ದರೂ ಹಿಂಸೆ ಮಾಡುವ ಪ್ರಾಣಿಗಳು ಹಿಂಸೆಯನ್ನೇ ಸೂಚಿಸುವುದು. ಇದನ್ನು ಮನೆಯಲ್ಲಿ ಇಟ್ಟರೆ ಅದರಿಂದ ಮನೆಮಂದಿ ಮಧ್ಯೆ ಜಗಳ ಹಾಗೂ ತಪ್ಪು ಗ್ರಹಿಕೆ ಉಂಟಾಗಬಹುದು. ಇದು ಮನೆಯಲ್ಲಿ ಜನರ ಕೋಪವನ್ನು ಉತ್ತೇಜಿಸುವುದು.

Most Read:ಅಂಗೈ ನೋಡಿ ನೀವು ಲಾಟರಿ ಗೆಲ್ಲುತ್ತೀರಾ, ಇಲ್ಲವಾ? ಎಂದು ಹೇಳಬಹುದಂತೆ!!

ಮಹಾಭಾರತದ ದೃಶ್ಯಗಳು

ಮಹಾಭಾರತದ ದೃಶ್ಯಗಳು

ಮಹಾಭಾರತವು ಹಿಂದೂಗಳಿಗೆ ತುಂಬಾ ಪವಿತ್ರವೆಂದು ಪರಿಗಣಿಸಿದರೂ ಇದರ ದೃಶ್ಯಗಳು ಅಥವಾ ಪೈಂಟಿಂಗ್ ಗಳನ್ನು ಮನೆಯಲ್ಲಿ ಇಡಬಾರದು. ಮಹಾಭಾರತದ ಸಂದೇಶವು ಧನಾತ್ಮಕವಾಗಿದ್ದರೂ ಅದರಿಂದ ಬರುವ ತರಂಗಗಳು ನಕಾರಾತ್ಮಕವಾಗಿರುವುದು ಮತ್ತು ಇದರಿಂದ ಸಮಸ್ಯೆ, ಜಗಳ ಹಾಗೂ ಮನಸ್ತಾಪ ಕಾಡುವುದು. ಈ ಪೈಂಟಿಂಗ್ ಕುಟುಂಬ ಸದಸ್ಯರ ನಡುವಿನ ಜಗಳಕ್ಕೆ ಕಾರಣವಾಗಬಹುದು.

ಮ್ಯಾಜಿಕ್ ಅಥವಾ ಯುದ್ಧ

ಮ್ಯಾಜಿಕ್ ಅಥವಾ ಯುದ್ಧ

ಮಹಾಭಾರತದಂತೆ ಬೇರೆ ಯುದ್ಧದ ಕಲಾಕೃತಿಗಳು ಕೂಡ ನಕಾರಾತ್ಮಕತೆ ಉಂಟು ಮಾಡುವುದು. ಇದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಹಾಳಾಗಬಹುದು. ಇದರಿಂದಾಗಿ ಕುಟುಂಬ ಸದಸ್ಯರ ಮಧ್ಯೆ ಜಗಳವಾಗಬಹುದು. ದೆವ್ವಗಳ ಕಲಾಕೃತಿಗಳನ್ನು ಕೂಡ ಇಡಬಾರದು. ಇದು ಕೂಡ ನಕಾರಾತ್ಮಕತೆ ಉಂಟು ಮಾಡುವುದು.

ಹರಿಯುವ ನೀರು

ಹರಿಯುವ ನೀರು

ಹರಿಯುವ ನೀರು ಅಸ್ಥಿರತೆಯ ಸಂಕೇತವಾಗಿದೆ. ಹರಿಯುವ ನೀರಿನ ಕಲಾಕೃತಿಯು ತುಂಬಾ ಅಪವಿತ್ರವೆಂದು ಪರಿಗಣಿಸಲಾಗಿದೆ. ಇದರಿಂದಾಗಿ ಮನೆಯಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಬಹುದು. ಮನೆಯಿಂದ ಹಣವು ಹೊರಗೆ ಹರಿದುಹೋಗುವುದು.

Most Read:ನೆನಪಿಡಿ ಇಂತಹ ತಪ್ಪುಗಳನ್ನು ಎಂದೂ ಮಾಡಬೇಡಿ- 'ಪಿತೃ ದೋಷ' ಬರಬಹುದು!

ಮುಳುಗುವ ಹಡಗು

ಮುಳುಗುವ ಹಡಗು

ಮುಳುಗುವ ಹಡಗು ತೊಂದರೆ ಮತ್ತು ಅವಘಡದ ಸೂಚನೆ. ಇಂತಹ ಯಾವುದೇ ರೀತಿಯ ಕಲಾಕೃತಿ ಅಥವಾ ಫೋಟೊಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದರಿಂದ ನಿಮ್ಮ ಮನೆಯ ಸಂತೋಷವೇ ಮುಳುಗಿಹೋಗಬಹುದು.

ತಾಜ್ ಮಹಲ್

ತಾಜ್ ಮಹಲ್

ತಾಜ್ ಮಹಲ್ ತುಂಬಾ ಸುಂದರ ಕಟ್ಟಡ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ರಾಜ ಶಾಹಜಹಾನ್ ತನ್ನ ಪತ್ನಿಯ ಸಮಾಧಿ ಮೇಲೆ ಕಟ್ಟಿಸಿದ. ಇಂತಹ ಕಲಾಕೃತಿಗಳು ನಕಾರಾತ್ಮಕತೆ ತರುವುದು. ಸಮಾಧಿ ಅಥವಾ ಸ್ಮಶಾನದ ಪೈಂಟಿಂಗ್ ಮನೆಯಲ್ಲಿ ಇಡಬಾರದು. ಇದರಿಂದ ಇದನ್ನು ಮನೆಯಲ್ಲಿ ಇಡಬಾರದು.

English summary

Wall Paintings That Might Be Inauspicious For Your House

We often choose any painting that just looks beautiful for the walls of our house. However, this is wrong. Vastu Shastra says that every object radiates some form of energy or vibrations. This vibrations spreading in the environment can cause the aura to change. There are seven kinds of paintings which should never be put on the walls, says Vastu Shastra.
Story first published: Wednesday, October 3, 2018, 18:14 [IST]
X
Desktop Bottom Promotion