For Quick Alerts
ALLOW NOTIFICATIONS  
For Daily Alerts

ಮನೆಯ ಸ್ವಚ್ಛತೆಯನ್ನು ನಿತ್ಯವೂ ಮಾಡಬೇಕು ಏಕೆಂದು ಗೊತ್ತೇ?

|

ಮನೆಯನ್ನು ಸ್ವಚ್ಛಗೊಳಿಸುವುದು ಎಂದರೆ ಪರಿಶ್ರಮದ ಕೆಲಸವಾದರೂ ಮನೆ ಹೊಳೆಯುವಂತಿದ್ದರೆ ಅದೊಂದು ರೀತಿಯ ನೆಮ್ಮದಿ ಮನಸ್ಸಿಗೆ ದೊರೆಯುತ್ತದೆ. ಸ್ವಚ್ಛತೆ ಎಂದರೆ ಅದೊಂದು ದೈವಿಕತೆ ಎಂಬುದಾಗಿ ಹೇಳುತ್ತಾರೆ. ಸ್ವಚ್ಛತೆಯು ನಿಮ್ಮನ್ನು ಸಂತೋಷಗೊಳಿಸುವುದು ಮಾತ್ರವಲ್ಲದೆ ಸೋಂಕುಗಳು ಮತ್ತು ರೋಗಾಣುಗಳನ್ನು ದೂರ ಮಾಡುತ್ತದೆ. ಮನೆಯೊಳಗೆ ಧೂಳು ತುಂಬಿದ್ದರೆ ಅದು ಕೊಳಕನ್ನು ಉಂಟುಮಾಡುತ್ತಿರುತ್ತದೆ. ಮನೆಯಲ್ಲಿ ಮಕ್ಕಳಿದ್ದರಂತೂ ಮನೆಯನ್ನು ಸ್ವಚ್ಛ ಮಾಡುವುದೇ ಒಂದು ಕೆಲಸವಾಗಿಬಿಡುತ್ತದೆ. ಈ ಧೂಳು ಕೊಳಕು ಸೋಂಕು ಮತ್ತು ರೋಗಾಣುಗಳಿಗೆ ಕಾರಣವಾಗಿಬಿಡುತ್ತದೆ. ಕಚೇರಿಗೆ ಹೋಗುವ ಧಾವಂತ ಮತ್ತು ಇನ್ನಿತರ ಕೆಲಸಗಳಲ್ಲಿ ನಾವು ವ್ಯಸ್ಥರಾಗಿರುವುದರಿಂದ ನಿತ್ಯವೂ ಮನೆಯನ್ನು ಸ್ವಚ್ಛ ಮಾಡುವುದು ಕಷ್ಟವೇ ಸರಿ. ಮನೆಯಲ್ಲಿ ಪತಿ ಪತ್ನಿ ಇಬ್ಬರೂ ದುಡಿಯುತ್ತಾರೆ ಎಂದಾದಲ್ಲಿ ವಾರಕ್ಕೊಮ್ಮೆ ಸ್ವಚ್ಛ ಮಾಡುವುದೇ ಉತ್ತಮ ವಿಧಾನವಾಗಿದ್ದು ಇದರಿಂದ ಸ್ವಾಸ್ಥ್ಯ ಮತ್ತು ನೆಮ್ಮದಿ ದೊರೆಯುತ್ತದೆ.

ಸ್ವಚ್ಛತೆಯ ವಿಷಯಕ್ಕೆ ಬಂದಾಗ ಮನೆಯಲ್ಲಿರುವ ಕೆಲವೊಂದು ಭಾಗಗಳತ್ತ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಕೆಲವೊಮ್ಮೆ ನಾವು ಈ ಭಾಗಗಳತ್ತ ಗಮನ ಹರಿಸದೆಯೇ ಆ ಭಾಗದ ಸ್ವಚ್ಛತೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಇಂತಹ ಸ್ಥಳಗಳತ್ತ ಹೆಚ್ಚಿನ ಗಮನವನ್ನು ಹರಿಸಿ ಸ್ವಚ್ಛ ಮಾಡಬೇಕಾಗುತ್ತದೆ. ಇಂದಿನ ಲೇಖನದಲ್ಲಿ ನೀವು ಹೆಚ್ಚು ಗಮನ ನೀಡಬೇಕಾದ ಮನೆಯ ಮುಖ್ಯ ಭಾಗಗಳ ವಿವರಗಳನ್ನು ನಾವು ನೀಡುತ್ತಿದ್ದು ನೀವು ಈ ಸ್ಥಳಗಳತ್ತ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.

things that you dont clean in your house

1. ಶವರ್ ಹೆಡ್ಸ್

ಇದನ್ನು ನೀವು ನಿಯಮಿತವಾಗಿ ಸ್ವಚ್ಛ ಮಾಡಿಲ್ಲ ಎಂದಾದಲ್ಲಿ ಇಲ್ಲಿ ಧೂಳು ಶೇಖರಣೆಯಾಗುತ್ತದೆ. ಒಣ ಬಟ್ಟೆಯನ್ನು ಬಳಸಿಕೊಂಡು ಇದನ್ನು ನಿತ್ಯವೂ ಸ್ವಚ್ಛ ಮಾಡಬೇಕು. ವಾರಕ್ಕೊಮ್ಮೆಯಾದರೂ ಶವರ್ ಹೆಡ್ಸ್ ಅನ್ನು ಸ್ವಚ್ಛ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಒಂದು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸಮಪ್ರಮಾಣದಲ್ಲಿ ವಿನೇಗರ್ ಮತ್ತು ನೀರನ್ನು ತೆಗೆದುಕೊಳ್ಳಿ. ಶವರ್ ಹೆಡ್ ಅನ್ನು ಈ ದ್ರಾವಣದಲ್ಲಿ ಮುಳುಗಿಸಿ ಮತ್ತು ಪ್ಲಾಸ್ಟಿಕ್ ಅನ್ನು ಸುತ್ತಿ ರಬ್ಬರ್ ಬ್ಯಾಂಡ್‌ನಿಂಬ ಬಿಗಿಯಾಗಿ ಕಟ್ಟಿ. 3 ನಿಮಿಷಗಳ ನಂತರ ಇದನ್ನು ಚೆನ್ನಾಗಿ ಬ್ರಶ್ ಬಳಸಿ ತೊಳೆಯಿರಿ.

2. ಕಾರ್ಪೆಟ್‌ಗಳು

ನಿಮ್ಮ ಮನೆಯಲ್ಲಿರುವ ಕಾರ್ಪೆಟ್‌ನ ಸ್ವಚ್ಛತೆಯನ್ನು ನೀವು ಹೆಚ್ಚು ಅಸ್ಥೆಯಿಂದ ಮಾಡಬೇಕಾಗುತ್ತದೆ. ಇದರಲ್ಲಿ ಕೊಳಕು ತುಂಬಿಕೊಂಡರೆ ಇದು ಮಕ್ಕಳಿಗೆ ಅಪಾಯವನ್ನುಂಟು ಮಾಡಬಹುದು ಮತ್ತು ನಿಮಗೂ ಕೂಡ. ಕಾರ್ಪೆಟ್ ಅನ್ನು ವಾರಕ್ಕೊಮ್ಮೆ ಸ್ವಚ್ಛ ಮಾಡಿ. ನಿಮ್ಮ ಕಾರ್ಪೆಟ್ ಅನ್ನು ವಾಕ್ಯೂಮ್ ಮಾಡಿ ಅದರಲ್ಲಿರುವ ಧೂಳನ್ನು ತೆಗೆಯಿರಿ. ಇದರಿಂದ ಕಾರ್ಪೆಟ್ ಸ್ವಚ್ಛತೆ ಸುಲಭವಾಗಿ ಆಗುತ್ತದೆ.

3. ವಾಶಿಂಗ್ ಮೆಶೀನ್‌ನ ಒಳಭಾಗ

ವಾಶಿಂಗ್ ಮೆಶೀನ್‌ನ ಒಳಭಾಗದಲ್ಲಿ ಕೂಡ ಕೊಳಕು ತುಂಬಿರುತ್ತದೆ. ಈ ಕೊಳಕನ್ನು ಹೋಗಲಾಡಿಸಲು ನೀವು ಕಾಲು ಭಾಗದಷ್ಟು ಬ್ಲೀಚ್ ಅನ್ನು ವಾಶಿಂಗ್ ಮೆಶೀನ್ ಒಳಭಾಗದಲ್ಲಿ ಚಲಾಯಿಸಿ. ಇಲ್ಲದಿದ್ದರೆ ಮೂರು ಚಮಚಗಳಷ್ಟು ಬ್ಲೀಚ್ ಅನ್ನು ಪೂರ್ಣ ನೀರಿನೊಂದಿಗೆ ಚಲಾಯಿಸಿ. ಇದು ನಿಮ್ಮ ವಾಶಿಂಗ್ ಮೆಶೀನ್ ಅನ್ನು ಸ್ವಚ್ಛ ಮಾಡುತ್ತದೆ.

4. ಓವನ್ ರಾಕ್ಸ್

ಆಹಾರವನ್ನು ಬೇಯಿಸುವ ಓವನ್ ರಾಕ್ಸ್‌ನಲ್ಲಿ ಕೂಡ ಆಹಾರದ ತುಣುಕುಗಳನ್ನು ನೀವು ಕಾಣುತ್ತೀರಿ ಅದನ್ನು ಆಗಾಗ್ಗೆ ಸ್ವಚ್ಛ ಮಾಡಿ ಅದನ್ನು ಒರೆಸುತ್ತಿರಿ. ಕಾಲು ಕಪ್‌ನಷ್ಟು ಬಿಳಿ ವಿನೇಗರ್ ಅನ್ನು ಬಳಸಿಕೊಂಡು ತೊಳೆಯುವ ದ್ರಾವಣವನ್ನು ಅದೇ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ. ಓವರ್ ರಾಕ್‌ಗೆ ಇದನ್ನು ಸಿಂಪಡಿಸಿ ಅರ್ಧ ಗಂಟೆಯ ನಂತರ ಇದನ್ನು ತೊಳೆಯಿರಿ.

5. ಶೂ ರಾಕ್

ವಾರಕ್ಕೊಮ್ಮೆ ಸ್ವಚ್ಛ ಬಟ್ಟೆಯನ್ನು ಬಳಸಿಕೊಂಡು ಈ ರಾಕ್ ಅನ್ನು ಸ್ವಚ್ಛ ಮಾಡಿ. ನೀವು ಇದನ್ನು ನಿತ್ಯವೂ ಮಾಡುತ್ತೀರಿ ಎಂದಾದಲ್ಲಿ ಇಲ್ಲಿ ಯಾವುದೇ ಧೂಳು ನಿಲ್ಲುವುದಿಲ್ಲ.

6. ಫ್ರಿಡ್ಜ್ ಕಾಯಿಲ್ಸ್

ಫ್ರಿಡ್ಜ್‌ನ ಹಿಂಭಾಗದಲ್ಲಿರುವ ಕಾಯಿಲ್‌ನಲ್ಲಿ ಆಗಾಗ್ಗೆ ಧೂಳು ನೆಲೆ ನಿಂತಿರುತ್ತದೆ. ಬ್ರಶ್ ಬಳಸಿ ಈ ಭಾಗವನ್ನು ನೀವು ಸ್ವಚ್ಛ ಮಾಡಬಹುದು. ಈ ಸಮಯದಲ್ಲಿ ಫ್ರಿಡ್ಜ್ ಅನ್ನು ಆಫ್ ಮಾಡಿ. ನಿತ್ಯವೂ ಸ್ವಚ್ಛ ಮಾಡುವುದರಿಂದ ನಿಮ್ಮ ಫ್ರಿಡ್ಜ್ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.

7. ಚಾಕು ಬ್ಲಾಕ್

ಚಾಕು ಬ್ಲಾಕ್ ಅನ್ನು ವಿನೇಗರ್ ಬಳಸಿ ಅದರಲ್ಲಿ ಚಾಕು ಬ್ಲಾಕ್ ಅನ್ನು ಮುಳುಗಿಸಿ. ಇದರಿಂದ ಹೆಚ್ಚಿನ ಧೂಳು ಮಾಯವಾಗುತ್ತದೆ. ನಂತರ ಸೋಪು ನೀರಿನಲ್ಲಿ 20 ನಿಮಿಷ ಕಾಲ ಇರಿಸಿ. ನಂತರ ತಣ್ಣೀರಿನಿಂದ ಇದನ್ನು ತೊಳೆಯಿರಿ.

8. ಮ್ಯಾಟ್ರಸ್

ಮ್ಯಾಟ್ರಸ್‌ನಲ್ಲಿ ಧೂಳು ಆಗಾಗ್ಗೆ ಸೇರಿಕೊಳ್ಳುವುದು ಖಂಡಿತ. ಮೈಕ್ರೊಫೈಬರ್ ಟವಲ್ ಅನ್ನು ಬಳಸಿಕೊಂಡು ಈ ಧೂಳನ್ನು ತೆಗೆಯಿರಿ. ನಂತರ ನೀರಿನಿಂದ ಒದ್ದೆ ಮಾಡಿಕೊಂಡ ಟವೆಲ್ ಅನ್ನು ಬಳಸಿ ಈ ಸ್ಥಳವನ್ನು ಒರೆಸಿ. ಇದರಿಂದ ಸೋಂಕುಗಳಿಂದ ಮುಕ್ತಿ ದೊರೆಯುತ್ತದೆ.

9. ಪುಸ್ತಕಗಳು

ಪುಸ್ತಕಗಳನ್ನಿರಿಸುವ ರಾಕ್‌ನಲ್ಲಿ ಕೂಡ ಧೂಳು ತುಂಬಿರುತ್ತದೆ. ಈ ಸಮಯದಲ್ಲಿ ಆಗಾಗ್ಗೆ ಒಣ ಬಟ್ಟೆಯನ್ನು ಬಳಸಿ ಈ ಸ್ಥಳವನ್ನು ಸ್ವಚ್ಛ ಮಾಡುತ್ತಿರಿ. ನಿತ್ಯವೂ ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ನಿಮಗೆ ವಾರಾಂತ್ಯದಲ್ಲಿ ಅಷ್ಟೊಂದು ಹೊರೆ ಇರುವುದಿಲ್ಲ.

10. ಆಟಿಕೆಗಳು

ನಿಮ್ಮ ಮಗು ಆಟವಾಡುವ ಆಟಿಕೆಗಳಲ್ಲಿ ಕೂಡ ಧೂಳು ತುಂಬುವ ಸಾದ್ಯತೆ ಇರುತ್ತದೆ. ಇದರಲ್ಲಿ ಧೂಳಿದೆ ಎಂದಾದರೆ ನಿಮ್ಮ ಮಗುವಿಗೆ ಇದರಿಂದ ಅಪಾಯ ಖಂಡಿತ. ತಿಂಗಳಿಗೊಮ್ಮೆ ಈ ಆಟಿಕೆಗಳನ್ನು ತೊಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಮೃದುವಾದ ಆಟಿಕೆಗಳನ್ನು ವಾಶಿಂಗ್ ಮೆಶೀನ್‌ನಲ್ಲಿ ಸ್ವಲ್ಪ ಸೋಪು ದ್ರಾವಣವನ್ನು ಬಳಸಿಕೊಂಡು ನೀವು ತೊಳೆಯಬಹುದು.

English summary

Things In Your Home You Never Clean, But You Should

Cleanliness is next to godliness. The perks of having a clean home are something most of us are familiar with. It not just makes you feel good about yourself but also plays an instrumental role in keeping infections and diseases at bay. The daily accumulation of dust is what makes homes dirty. The problem amplifies itself in homes with children as the little ones are the ones who make the home all the way dirtier. Indeed, the dirty corners of the house are the root cause for most of the infections at home.
Story first published: Thursday, July 5, 2018, 15:19 [IST]
X
Desktop Bottom Promotion