For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿನ ಇಂತಹ ಉಪಕರಣಗಳನ್ನು ಸರಿಯಾಗಿ ಬಳಸಿ

|

ಇಂದಿನ ಬದಲಾದ ಕಾಲಮಾನದಲ್ಲಿ ಗ್ಯಾಜೆಟ್‌ಗಳು, ಆಧುನಿಕ ತಂತ್ರಜ್ಞಾನ ಆಧರಿತ ಮನೆ ಬಳಕೆ ವಸ್ತುಗಳು ದಿನನಿತ್ಯದ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಇವೂ ಸೇರಿದಂತೆ ಇನ್ನೂ ಹಲವಾರು ಉಪಕರಣಗಳು, ಸಾಧನಗಳು ನಮ್ಮ ಜೀವನವನ್ನು ಅದೆಷ್ಟೊ ಸುಲಭವಾಗಿಸಿವೆ.

ಆದರೆ ದಿನನಿತ್ಯ ಬಳಸುವ ಹಲವಾರು ಉಪಕರಣಗಳನ್ನು ತಪ್ಪಾದ ರೀತಿಯಲ್ಲಿ ಉಪಯೋಗಿಸುವ ಮೂಲಕ ನಮಗೆ ಗೊತ್ತಿಲ್ಲದೆಯೆ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿಯುವುದು ಅಗತ್ಯವಾಗಿದೆ. ಮನೆಯ ದಿನಬಳಕೆಯ ವಸ್ತುಗಳನ್ನು ಬಳಸುವ ಸರಿಯಾದ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದ್ದು, ಮುಂದಿನ ಬಾರಿ ನೀವೂ ಸಹ ಮನೆ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ಬಳಸಲು ಕಲಿತುಕೊಳ್ಳಿ.

ಆಹಾರ ಸಂಗ್ರಹಣೆ ಪೊಟ್ಟಣಗಳು

ಆಹಾರ ಸಂಗ್ರಹಣೆ ಪೊಟ್ಟಣಗಳು

ಸ್ಟೀಲ್ ಹೊರತುಪಡಿಸಿ ಎಲ್ಲ ಬಗೆಯ ಪಾತ್ರೆಗಳನ್ನು ಮೈಕ್ರೊವೇವ್ ಓವನ್ ಒಳಗಡೆ ಬಿಸಿ ಮಾಡಬಹುದು ಎಂಬ ತಪ್ಪು ಕಲ್ಪನೆ ಬಹುತೇಕರಲ್ಲಿ ಮನೆ ಮಾಡಿದೆ. ಒಂದೇ ಪ್ಲಾಸ್ಟಿಕ್ ಪೊಟ್ಟಣವನ್ನು ಓವನ್‌ನಲ್ಲಿ ಪದೆ ಪದೆ ಬಿಸಿ ಮಾಡಿದಲ್ಲಿ ಪ್ಲಾಸ್ಟಿಕ್‌ನಲ್ಲಿನ ರಾಸಾಯನಿಕಗಳು ಆಹಾರದೊಂದಿಗೆ ಸೇರಿಕೊಳ್ಳುತ್ತವೆ. ಇಂಥ ಆಹಾರ ಸೇವಿಸಿದಾಗ ದೇಹದ ಟೆಸ್ಟೊಸ್ಟಿರಾನ್ ಹಾಗೂ ಈಸ್ಟ್ರೊಜೆನ್ ಹಾರ್ಮೋನ್‌ಗಳ ಮೇಲೆ ದುಷ್ಪರಿಣಾಮವಾಗಿ ಕ್ಯಾನ್ಸರ್‌ಗೆ ಸಹ ಕಾರಣವಾಗಬಹುದು. ಹೀಗಾಗಿ ಯಾವಾಗಲೂ 'ಮೈಕ್ರೊವೇವ್ ಸೇಫ್' ಅಥವಾ 'ಹೀಟಪ್ರೂಫ್' ಎಂದು ಪ್ರಮಾಣೀಕರಿಸಲಾದ ಪಾತ್ರೆಗಳನ್ನೇ ಓವನ್‌ನಲ್ಲಿ ಇಡಲು ಬಳಸಿ.

ಟೂಥಪೇಸ್ಟ್

ಟೂಥಪೇಸ್ಟ್

ಬ್ರಷ್‌ಗೆ ಹೆಚ್ಚು ಪೇಸ್ಟ್ ಹಾಕಿ ಹಲ್ಲುಜ್ಜುವುದರಿಂದ ಹಲ್ಲುಗಳು ಅಧಿಕ ಸ್ವಚ್ಛವಾಗುತ್ತವೆ ಅಲ್ಲವೆ? ಇಂಥದೊಂದು ತಪ್ಪು ಕಲ್ಪನೆ ಬಹು ಕಾಲದಿಂದ ನಮ್ಮೆಲ್ಲರಲ್ಲಿ ಬೆಳೆದು ಬಂದಿದೆ. ದಂತ ವೈದ್ಯರ ಪ್ರಕಾರ, ಎರಡು ನಿಮಿಷ ಹಲ್ಲುಜ್ಜಲು ಕೇವಲ ಒಂದು ಕಡಲೆ ಕಾಳಿನಷ್ಟು ಗಾತ್ರದ ಪೇಸ್ಟ್ ಸಾಕಂತೆ. ಇದಕ್ಕೂ ಹೆಚ್ಚು ಪೇಸ್ಟ್ ಬಳಸಿದಲ್ಲಿ ಫ್ಲೋರೈಡ್ ಸಮಸ್ಯೆ ಹಾಗೂ ವಸಡಿನ ತೊಂದರೆಗಳನ್ನು ಎದುರಿಸಬೇಕಾಗುತ್ತದಂತೆ.

Most Read: ಹಾವು ಕಚ್ಚಿದರೆ, ಕೂಡಲೇ ಈ ಟಿಪ್ಸ್ ಅನುಸರಿಸಿ ವ್ಯಕ್ತಿಯ ಪ್ರಾಣ ಉಳಿಸಿ

ಉಗುರು ಕತ್ತರಿ (Nail file)

ಉಗುರು ಕತ್ತರಿ (Nail file)

ಉಗುರುಗಳಿಗೆ ಆಕಾರ ನೀಡಲು ಉಗುರು ಕತ್ತರಿಗಳನ್ನು ಸೂಕ್ತ ರೀತಿಯಲ್ಲಿ ಬಳಸಬೇಕು. ಅಡ್ಡಾದಿಡ್ಡಿಯಾಗಿ ಉಗುರುಗಳ ಮೇಲೆ ಕತ್ತರಿ ಆಡಿಸಿದಲ್ಲಿ ಉಗುರಿನ ಬೇರು ದುರ್ಬಲವಾಗಿ ಉಗುರು ಸೀಳುವ ಸಾಧ್ಯತೆ ಇರುತ್ತದೆ. ಉಗುರುಗಳಿಗೆ ಶೇಪ್ ನೀಡುವಾಗ ಉಗುರಿನ ಒಂದು ಬದಿಯಿಂದ ಆರಂಭಿಸಿ ಮಧ್ಯಭಾಗಕ್ಕೆ ಬರುವುದು ಸರಿಯಾದ ಕ್ರಮವಾಗಿದೆ.

ಎಲ್ಲ ತಂದು ಫ್ರಿಜ್‌ನಲ್ಲಿ ತುರುಕಬೇಡಿ

ಎಲ್ಲ ತಂದು ಫ್ರಿಜ್‌ನಲ್ಲಿ ತುರುಕಬೇಡಿ

ತರಕಾರಿಗಳನ್ನು ತಂದಾಗ ಎಲ್ಲ ರೀತಿಯ ತರಕಾರಿಗಳನ್ನು ಫ್ರಿಜ್ ಒಳಗಡೆ ಇಡಬೇಕಿಲ್ಲ. ಬೇಗ ಕೊಳೆಯದ ತರಕಾರಿಗಳನ್ನು ಹೊರಗೆ ಇಡುವುದೇ ಸೂಕ್ತ. ಇದರಿಂದ ಅವು ನೈಜ ತಾಜಾತನ ಉಳಿಸಿಕೊಳ್ಳುತ್ತವೆ. ಫ್ರಿಜ್‌ನ ತೇವಾಂಶ ಮಟ್ಟವನ್ನು ಯಾವಾಗಲೂ ಕಡಿಮೆ ಇಟ್ಟು ತರಕಾರಿಗಳು ಬೇಗ ಹಾಳಾಗದಂತೆ ನೋಡಿಕೊಳ್ಳಬಹುದು.

Most Read: ರೆಫ್ರಿಜಿರೇಟರ್‌ನ ಸಹಾಯವಿಲ್ಲದೇ ತರಕಾರಿಗಳನ್ನು ಶೇಖರಿಸಿಡಬಹುದೇ?

ಹೇರ್ಬ್ರಶ್

ಹೇರ್ಬ್ರಶ್

ದಿನಕ್ಕೆಷ್ಟು ಬಾರಿ ಕೂದಲು ಬಾಚಬೇಕು? ಎಷ್ಟು ಕಡಿಮೆ ಬಾರಿ ಕೂದಲು ಬಾಚುತ್ತೀರೋ ಅಷ್ಟೆ ಒಳ್ಳೆಯದು ಎಂಬುದು ತಿಳಿದರೆ ಶಾಕ್ ಆಗಬೇಡಿ. ಕಡಿಮೆ ಬಾಚಿದಷ್ಟೂ ಕೂದಲುಗಳ ಸೀಳುವಿಕೆಯು ಕಡಿಮೆಯಾಗುತ್ತದೆ. ಇನ್ನು ಬ್ರಶ್ ಮಾಡುವಾಗ ಕೂದಲು ಬುಡದಿಂದ ಆರಂಭಿಸಿ ಮೇಲ್ಭಾಗಕ್ಕೆ ಬರಬೇಕು. ಇದರಿಂದ ಕೂದಲು ಸಿಕ್ಕಾಗುವುದನ್ನು ತಪ್ಪಿಸಬಹುದು.

ಟಿಶ್ಯು ಪೇಪರ್

ಟಿಶ್ಯು ಪೇಪರ್

ನೆಗಡಿಯಾದಾಗ ಟಿಶ್ಯು ಪೇಪರ್ ಬೇಕೆ ಬೇಕು. ಪದೆ ಪದೆ ಸೋರುವ ಮೂಗು ಒರೆಸಿಕೊಳ್ಳಲು ಟಿಶ್ಯು ಪೇಪರ್‌ಗಿಂತ ಬೆಸ್ಟ್ ಯಾವುದೂ ಇಲ್ಲ. ಆದರೆ ಸಿಂಬಳ ಸೋರುತ್ತಿರುವಾಗ ಜೋರಾಗಿ ಒತ್ತಡ ಹಾಕಿ ಸಿಂಬಳ ಹೊರತೆಗೆಯುವುದು ಸರಿಯಲ್ಲ. ಇದರಿಂದ ಮೂಗಿನ ಹೊಳ್ಳೆಗಳು ಬ್ಲಾಕ್ ಆಗಿ ಸೈನಸ್ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ. ಸಿಂಬಳ ಸೋರುತ್ತಿರುವಾಗ ಒಂದೊಂದೇ ಹೊಳ್ಳೆಯನ್ನು ನಿಧಾನವಾಗಿ ಒರೆಸಿಕೊಳ್ಳಬೇಕು.

ಕಿಚನ್ ರೂಂ ಸ್ಪಾಂಜ್

ಕಿಚನ್ ರೂಂ ಸ್ಪಾಂಜ್

ಅಡುಗೆ ಕೋಣೆಯಲ್ಲಿ ಬಳಸುವ ಸ್ಪಾಂಜ್‌ಗಳನ್ನು ನಿಯಮಿತವಾಗಿ ಶುದ್ಧಗೊಳಿಸುವುದು ಅತಿ ಅಗತ್ಯವಾಗಿದೆ. ಪ್ರತಿ 2 ರಿಂದ 3 ಬಾರಿ ಸ್ಪಾಂಜ್ ಉಪಯೋಗಿಸಿದ ನಂತರ ಅದನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟು ಸ್ವಚ್ಛಗೊಳಿಸಬೇಕು. ಹೀಗೆ ಮಾಡುವುದರಿಂದ ಸ್ಪಾಂಜ್‌ನಲ್ಲಿ ಜಮೆಯಾಗಿರುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ.

Most Read: ಅಡುಗೆ ಮನೆಯ ಸ್ವಚ್ಛತೆಗಾಗಿ ಖರ್ಚಿಲ್ಲದ ಕೆಲವೊಂದು ಸರಳ ಟಿಪ್ಸ್

ಡಿಟರ್ಜೆಂಟ್ ಪೌಡರ್

ಡಿಟರ್ಜೆಂಟ್ ಪೌಡರ್

ಬಟ್ಟೆಗಳು ಬಹಳ ಶುಭ್ರವಾಗಲಿ ಎಂದು ಮಿತಿಮೀರಿದ ಡಿಟರ್ಜೆಂಟ್ ಪೌಡರ್ ಬಳಸುವುದು ಸರಿಯಲ್ಲ. ವಾಶಿಂಗ್ ಮಶೀನಗೆ ಬಟ್ಟೆ ಹಾಕುವಾಗ ಡಿಟರ್ಜೆಂಟ್ ಪ್ಯಾಕ್ ಮೇಲೆ ತಿಳಿಸಲಾದ ಪ್ರಮಾಣದ ಡಿಟರ್ಜೆಂಟ್ ಮಾತ್ರ ಬಳಸಬೇಕು. ಅತಿಯಾದ ಡಿಟರ್ಜೆಂಟ್‌ನಿಂದ ಬಟ್ಟೆಗಳು ಹೊಳಪು ಕಳೆದುಕೊಂಡು ಬೇಗ ಹಳೆಯದರಂತೆ ಕಾಣಲಾರಂಭಿಸುತ್ತವೆ.

ಟೂತ್ ಬ್ರಶ್

ಟೂತ್ ಬ್ರಶ್

ಕೀಟಗಳು ಹಾಗೂ ಇನ್ನಿತರ ಬ್ಯಾಕ್ಟೀರಿಯಾಗಳು ತಗಲದಂತೆ ಟೂತಬ್ರಶ್ ಮೇಲೆ ಮುಚ್ಚಳ ಹಾಕಿ ಇಡುತ್ತೀರಿ ಅಲ್ಲವೆ? ಆದರೆ ಈ ಮುಚ್ಚಳ ಬಳಸುವುದರಿಂದ ದುಷ್ಪರಿಣಾಮಗಳೇ ಜಾಸ್ತಿ. ಮುಚ್ಚಳ ಹಾಕಿ ಇಟ್ಟಾಗ ಹಸಿಯಾಗಿರುವ ಬ್ರಶ್ ಒಣಗದೆ ಅದರಲ್ಲಿ ಮತ್ತಷ್ಟು ಬ್ಯಾಕ್ಟೀರಿಯಾಗಳು ಬೆಳೆಯಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಕಾಫಿ ಮೇಕರ್

ಕಾಫಿ ಮೇಕರ್

ಬೆಳಗ್ಗೆ ಎದ್ದಾಕ್ಷಣ ಅಥವಾ ಬೇಜಾರಾದಾಗ ಒಂದು ಕಪ್ ಬಿಸಿ ಕಾಫಿ ಮನಸಿಗೆ ಬೇಕಾದ ಚೈತನ್ಯ ನೀಡುತ್ತದೆ. ಬೇಗನೆ ಕಾಫಿ ಮಾಡಿಕೊಳ್ಳಲು ನಾವೆಲ್ಲ ಕಾಫಿ ಮೇಕರ್ ಬಳಸುತ್ತಿರುತ್ತೇವೆ. ಆದರೆ ಪ್ರತಿ ಬಾರಿ ಕಾಫಿ ಮಾಡಿಕೊಂಡ ನಂತರ ಕಾಫಿ ಮೇಕರ್‌ನ ಫಿಲ್ಟರ್ ಹಾಗೂ ಇತರ ಭಾಗಗಳನ್ನು ಸ್ವಚ್ಛವಾಗಿ ತೊಳೆದಿಡಬೇಕು. ಇದರಿಂದ ಫಿಲ್ಟರ್‌ನಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಆಗುವುದನ್ನು ತಡೆಗಟ್ಟಬಹುದು.

English summary

These household items you have been use correctly

It’s difficult to imagine our lives without technology and our everyday gadgets which come in so handy and helpful. But did you ever know, while these may be making our work easy, we might be actually doing harm unknowingly by using them in a wrong manner. So the next time you pick them up, be sure to remember these tips before risking a health hazard.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more