ಜಿರಳೆ ಹಾಗೂ ಹಲ್ಲಿಗಳನ್ನು ಮನೆಯಿಂದ ಓಡಿಸಬೇಕೆ? ಇಲ್ಲಿದೆ ನೋಡಿ ಟಿಪ್ಸ್

Posted By: Deepu
Subscribe to Boldsky

ಮನೆಯೆಂದಾದಲ್ಲಿ ಜಿರಳೆ ಮತ್ತು ಹಲ್ಲಿಗಳ ಕಾಟ ತಪ್ಪಿದ್ದಲ್ಲ. ಮನೆಯೆಲ್ಲಾ ಜಿರಳೆಗಳು ಓಡಾಡಿಕೊಂಡಿದ್ದರೆ ಹಲ್ಲಿಗಳು ಗೋಡೆಯ ತುಂಬೆಲ್ಲಾ ಹರಿದಾಡಿಕೊಂಡಿರುತ್ತಿದ್ದರೆ ನಮಗೆ ಮುಜುಗರ ಖಂಡಿತ ಇದ್ದೇ ಇರುತ್ತದೆ. ಹಲ್ಲಿಗಳು ಕೀಟಗಳನ್ನು ತಿಂದು ನಮ್ಮ ಮನೆಯನ್ನು ಸುರಕ್ಷಿತವಾಗಿರಿಸುತ್ತವೆ ಆದರೆ ಅವುಗಳ ಮಾಡುವ ಕೊಳಕಂತೂ ಅಸಹ್ಯವನ್ನುಂಟು ಮಾಡುತ್ತಿರುತ್ತದೆ. ಇನ್ನು ಜಿರಳೆಗಳಂತೂ ಬಚ್ಚಲು ಮನೆ, ಅಡುಗೆ ಮನೆಯಲ್ಲಿ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು ಮನೆಯನ್ನು ಕೊಳಕಿನ ಗೂಡನ್ನಾಗಿಸುತ್ತವೆ.

ಮನೆಯಲ್ಲಿ ಸದಸ್ಯರ ಬದಲಿಗೆ ಈ ಕೀಟಗಳೇ ತುಂಬಿಕೊಂಡಿವೆ ಎಂದಾದಲ್ಲಿ ಅವುಗಳಿಗೆ ತಕ್ಕ ಪರಿಹಾರವನ್ನು ಮಾಡಲೇಬೇಕು. ಮಾರುಕಟ್ಟೆಯಲ್ಲಿ ಇವುಗಳನ್ನು ನಾಶಮಾಡಲು ರಾಸಾಯನಿಕಗಳು ದೊರೆಯುತ್ತಿದ್ದರೂ ಇವುಗಳು ನಮಗೂ ಹಾನಿಯನ್ನುಂಟು ಮಾಡುವುದು ಖಂಡಿತ. ಮನೆಯಲ್ಲಿ ಮಕ್ಕಳಿದ್ದರಂತೂ ಈ ಕೀಟನಾಶಕಗಳಿಂದ ಅಪಾಯ ಖಂಡಿತ. ಹಾಗಿದ್ದರೆ ನೈಸರ್ಗಿಕವಾಗಿ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮವನ್ನು ಪಡೆದುಕೊಳ್ಳದೇ ಪರಿಹಾರಗಳನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ. ನಿಮ್ಮ ಮನೆಯಿಂದ ಶಾಶ್ವತವಾಗಿ ಜಿರಳೆ ಮತ್ತು ಹಲ್ಲಿಗಳನ್ನು ನೀಗಿಸುವ ಅತ್ಯುತ್ತಮ ನೈಸರ್ಗಿಕ ವಿಧಾನಗಳು ಇಲ್ಲಿದ್ದು ಇವುಗಳನ್ನು ಬಳಸಿ ಇವುಗಳ ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ.... 

ಕರಿಬೇವು ಸೊಪ್ಪುಗಳನ್ನು ಬಳಸಿ

ಕರಿಬೇವು ಸೊಪ್ಪುಗಳನ್ನು ಬಳಸಿ

ಸುವಾಸನೆ ಭರಿತ ಕರಿಬೇವು ಸೊಪ್ಪನ್ನು ಜಿರಳೆ, ಹಲ್ಲಿಗಳು ಓಡಾಡುವ ಜಾಗದಲ್ಲಿ ಹಾಕಿಡಿ. ಇದರ ವಾಸನೆಗೆ ಅವುಗಳು, ಗೂಡು ಬಿಟ್ಟು ಓಡಿ ಹೋಗುತ್ತವೆ, ಜೊತೆಗೆ ನಿಮ್ಮ ಮನೆಯನ್ನು ಸಹ ತೊರೆದು ಹೋಗುತ್ತವೆ. ಇದು ಜಿರಳೆಗಳನ್ನು ನಿಮ್ಮ ಮನೆಯಿಂದ ಓಡಿಸಲು ಇರುವ ಅತ್ಯುತ್ತಮವಾದ ಉಪಾಯಗಳಲ್ಲಿ ಒಂದಾಗಿದೆ.

ಮೆಣಸು, ಈರುಳ್ಳಿ ಮತ್ತು ಬೆಳ್ಳುಳ್ಳಿ ದ್ರಾವಣ

ಮೆಣಸು, ಈರುಳ್ಳಿ ಮತ್ತು ಬೆಳ್ಳುಳ್ಳಿ ದ್ರಾವಣ

ಇದು ಸಹ ಒಂದು ಪರಿಣಾಮಕಾರಿಯಾದ ರಾಸಾಯನಿಕ ಮುಕ್ತ ವಿಧಾನವಾಗಿದೆ. ಮೆಣಸಿನ ಪುಡಿ, ಈರುಳ್ಳಿ ಪೇಸ್ಟ್ ಮತ್ತು ಬೆಳ್ಳುಳ್ಳಿಗಳನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಜಿರಳೆಗಳು ಹಾಗೂ ಹಲ್ಲಿಗಳು ಓಡಾಡುವ ಭಾಗದಲ್ಲಿ ಹಾಕಿ. ಈ ಮಿಶ್ರಣದ ವಾಸನೆಗೆ ಜಿರಳೆಗಳು ಮನೆಯಿಂದ ಹೊರಗೆ ಹೋಗುತ್ತವೆ.

ಜಿರಳೆಗಳನ್ನು ಓಡಿಸಲು ಬೇ ಎಲೆಗಳು!

ಜಿರಳೆಗಳನ್ನು ಓಡಿಸಲು ಬೇ ಎಲೆಗಳು!

ಜಿರಳೆಗಳನ್ನು ನಾಶಮಾಡಲು ಸೂಕ್ತ ಸಲಹೆ ಬೇಕೇ? ಈ ವಿಧಾನವನ್ನು ಪರಿಗಣಿಸಿ. ಈ ರೀತಿಯ ಸುವಾಸಿತ ಬೇ ಎಲೆಗಳನ್ನು ನಿಮ್ಮ ಅಡುಗೆ ಮನೆಯಲ್ಲಿ ಇರಿಸಿಕೊಳ್ಖುವುದು ಸೂಕ್ತ. ಎಲ್ಲಾ ಅಂಗಡಿಗಳಲ್ಲೂ ಈ ಎಲೆಗಳು ಸಿಗುತ್ತವೆ. ಈ ಎಲೆಯ ಪಟ್ಟಣವನ್ನು ಕೊಠಡಿಯ ಒಳಗೆ, ಇತರೆ ಮೂಲೆಗಳಲ್ಲಿ ಇರಿಸಿ. ಈ ಎಲೆಗಳ ವಾಸನೆಗೆ ಜಿರಳೆಗಳು ಮಂಗಮಾಯ!

ಜಿರಳೆ ಉಂಡೆಗಳನ್ನು ಬಳಸಿ

ಜಿರಳೆ ಉಂಡೆಗಳನ್ನು ಬಳಸಿ

ಜಿರಳೆಗಳನ್ನು ಪರಿಣಾಮಕಾರಿಯಾಗಿ ಮನೆಯಿಂದ ಹೊರಹಾಕಲು ಈ ಜಿರಳೆ ಉಂಡೆಗಳ ಬಳಕೆಯೂ ಸಹ ಒಂದು ಪರಿಣಾಮಕಾರಿ ವಿಧಾನ. ಜಿರಳೆಗಳಿಗೆ ಈ ಜಿರಳೆಉಂಡೆಗಳ ವಾಸನೆಯು ಅಪ್ರಿಯವಾಗಿದ್ದು,ಇವುಗಳನ್ನು ಪಾತ್ರೆ ತೊಳೆಯುವ ಸಿಂಕ್, ಪೀಠೋಪಕರಣಗಳು, ಕೊಠಡಿಯೊಳಗೆ ಇತ್ಯಾದಿ ಕಡೆ ಇರಿಸಿ. ಇದು ಮಾನವರಿಗೂ ಸಹ ಒಳ್ಳೆಯದಲ್ಲ. ಆದ್ದರಿಂದ ಇದನ್ನು ಆಹಾರ ಪದಾರ್ಥಗಳಿಂದ ದೂರವಿರಿಸಿ.

ಬಿಸಿ ಸಾಸ್ ಸಿಂಪಡಿಸಿ

ಬಿಸಿ ಸಾಸ್ ಸಿಂಪಡಿಸಿ

ಜಿರಳೆ ಹಾಗೂ ಹಲ್ಲಿಗಳಿಂದ ನಿಮ್ಮ ಮನೆಯನ್ನು ಮುಕ್ತಗೊಳಿಸಲು ಇದೊಂದು ಸರಳ ಉಪಾಯ. 2 ಚಮಚ ಬಿಸಿ ಸಾಸ್ ಮತ್ತು ನೀರನ್ನು ಮಿಶ್ರಣ ಮಾಡಿಕೊಳ್ಳಿ. ಈಗ ಒಂದು ಸಿಂಪಡಿಸುವ ಬಾಟಲ್ ಗೆ ಈ ಮಿಶ್ರಣವನ್ನು ಹಾಕಿಕೊಳ್ಳಿ. ಜಿರಳೆಗಳು ಹಾಗೂ ಹಲ್ಲಿಗಳು ಓಡಾಡುವ ಜಾಗಗಳಲ್ಲಿ ಈ ಮಿಶ್ರಣವನ್ನು ಸಿಂಪಡಿಸಿ. ಮೆಣಸಿನ ಸಾಸ್ ಅನ್ನು ಸಿಂಪಡಿಸುವಾಗ ನಿಮ್ಮ ಮುಖಕ್ಕೆ ಮಾಸ್ಕ್ ಮತ್ತು ಕೈಗಳಿಗೆ ಗ್ಲೌಸ್ ಗಳನ್ನು ಧರಿಸದಿರಲು ಮರೆಯದಿರಿ.

ಕಾಫಿಯ ಬೀಜಗಳು ಮತ್ತು ತಂಬಾಕು ಹುಡಿ

ಕಾಫಿಯ ಬೀಜಗಳು ಮತ್ತು ತಂಬಾಕು ಹುಡಿ

ಕಾಫಿಯ ಸಣ್ಣ ಉಂಡೆಗಳು ಮತ್ತು ತಂಬಾಕು ಹುಡಿಯನ್ನು ಕಡ್ಟಿ ಅಥವಾ ಟೂತ್ ಪಿಕ್‎ನಲ್ಲಿ ನೇತು ಹಾಕಿ. ಇದನ್ನು ಕಬರ್ಡ್ ಅಥವಾ ಹಲ್ಲಿಗಳು ಹೆಚ್ಚು ಇರುವ ಸ್ಥಳಗಳಲ್ಲಿ ಇಡಿ. ಈ ಮಿಶ್ರಣ ಅವುಗಳಿಗೆ ಆಗುವುದಿಲ್ಲ. ನಂತರ ಸತ್ತ ಹಲ್ಲಿಗಳನ್ನು ನೀವು ಹೊರಹಾಕಬೇಕಾಗುತ್ತದೆ.

ಬೋರಾಕ್ಸ್ ಮತ್ತು ಸಕ್ಕರೆ

ಬೋರಾಕ್ಸ್ ಮತ್ತು ಸಕ್ಕರೆ

ಜಿರಳೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಲು ಇವುಗಳ ಪ್ರಯೋಜವನ್ನು ಪಡೆದುಕೊಳ್ಳಬಹುದಾಗಿದೆ. ಮೂರು ಭಾಗದಷ್ಟು ಬೋರಾಕ್ಸ್‎ಗೆ ಒಂದು ಭಾಗ ಸಕ್ಕರೆಯನ್ನು ತೆಗೆದುಕೊಂಡು ಮಿಶ್ರಣ ಮಾಡಿ ಜಿರಳೆಗಳು ಹೆಚ್ಚಿರುವ ಭಾಗದಲ್ಲಿ ಸ್ಪ್ರೇ ಮಾಡಿ. ಕೆಲವೇ ಗಂಟೆಗಳಲ್ಲಿ ಜಿರಳೆಗಳಿಂದ ಮುಕ್ತಿ ನೀಡಲು ಇದು ಪರಿಣಾಮಕಾರಿ.

ಬೇಕಿಂಗ್ ಸೋಡಾ ಮತ್ತು ಸಕ್ಕರೆ

ಬೇಕಿಂಗ್ ಸೋಡಾ ಮತ್ತು ಸಕ್ಕರೆ

ಬೋರಾಕ್ಸ್ ಬಳಸಲು ನಿಮಗೆ ಮನಸ್ಸಿಲ್ಲ ಎಂದಾದಲ್ಲಿ, ಬೇಕಿಂಗ್ ಸೋಡಾ ಮತ್ತು ಸಕ್ಕರೆ ಮಿಶ್ರಣವನ್ನು ಬಳಸಿಕೊಳ್ಳಬಹುದಾಗಿದೆ. ಸಮ ಪ್ರಮಾಣದಲ್ಲಿ ಈ ಎರಡೂ ವಸ್ತುಗಳನ್ನು ತೆಗೆದುಕೊಂಡು ಬೇಕಾದಲ್ಲಿ ಚಿಮುಕಿಸಿ. ಇದು ಜಿರಳೆಗಳ ನಾಶ ಮಾಡುವುದು ಖಂಡಿತ.

ಸೋಪ್ ದ್ರಾವಣ

ಸೋಪ್ ದ್ರಾವಣ

ಸ್ನಾನ ಮಾಡುವ ಸೋಪ್ ಮತ್ತು ನೀರಿನ ಮಿಶ್ರಣವನ್ನು ತಯಾರಿಸಿಕೊಳ್ಳಿ. ಈ ದ್ರಾವಣವನ್ನು ನೇರವಾಗಿ ಜಿರಳೆಗಳ ಮೇಲೆ ಸಿಂಪಡಿಸಿ, ಈ ದ್ರಾವಣವು ಅವುಗಳನ್ನು ತಕ್ಷಣ ಕೊಲ್ಲುತ್ತದೆ. ಇದನ್ನು ನೀವು ಸ್ಪ್ರೇ ಮೂಲಕ ಸಹ ಸಿಂಪಡಿಸಬಹುದು.

ಬೋರಿಕ್ ಆಮ್ಲ

ಬೋರಿಕ್ ಆಮ್ಲ

ಬೋರಿಕ್ ಆಮ್ಲವನ್ನು ಬಳಸಿ ಜಿರಳೆಗಳನ್ನು ಕೊಲ್ಲಬಹುದು. ಇದಕ್ಕಾಗಿ ಬೋರಿಕ್ ಆಮ್ಲ ಮತ್ತು ಹಿಟ್ಟನ್ನು ಬಳಸಿಕೊಂಡು, ಉಂಡೆಗಳನ್ನು ಮಾಡಿಕೊಳ್ಳಿ. ಇದನ್ನು ಜಿರಳೆಗಳು ಓಡಾಡುವ ಭಾಗದಲ್ಲಿ ಹಾಕಿ, ಇದನ್ನು ಸೇವಿಸಿದ ಜಿರಳೆಗಳು, ಇದರಲ್ಲಿನ ಆಸಿಡ್ ಅಂಶಕ್ಕೆ ಜೀವವನ್ನು ಬಿಡುತ್ತವೆ.

ನಪ್ತಾಲಿನ್ ಬಾಲ್

ನಪ್ತಾಲಿನ್ ಬಾಲ್

ಹಲ್ಲಿಗಳನ್ನು ದೂರಮಾಡಲು ನಪ್ತಾಲಿನ್ ಬಾಲ್ ಕೂಡ ಉತ್ತಮ ನೈಸರ್ಗಿಕ ವಿಧಾನವಾಗಿದೆ. ಅಡುಗೆ ಮನೆಯ ಶೆಲ್ಫ್‎ಗಳಲ್ಲಿ ಅಥವಾ ಕಬರ್ಡ್‎ಗಳಲ್ಲಿ ಅಂತೆಯೇ ಹಲ್ಲಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇರುವ ಎಡೆಗಳಲ್ಲಿ ಈ ಬಾಲ್ ಅನ್ನು ಇರಿಸಿ.

ಕಾಫಿ ಬೀಜಗಳು

ಕಾಫಿ ಬೀಜಗಳು

ನಿಮ್ಮ ಮನೆಯಿಂದ ಜಿರಳೆಗಳನ್ನು ಹೊರಹಾಕಲು ಇದು ಪರಿಣಾಮಕಾರಿ. ಬೇರೆ ಬೇರೆ ಸ್ಥಳಗಳಲ್ಲಿ ಸಣ್ಣ ಪಾತ್ರೆಗಳಲ್ಲಿ ಇದನ್ನು ಇರಿಸಿ. ಇದರಿಂದ ಜಿರಳೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

ಹಲ್ಲಿಗಳಿಗಾಗಿ

ಹಲ್ಲಿಗಳಿಗಾಗಿ

ಮೊಟ್ಟೆಯ ಹೊರಕವಚ ಹಲ್ಲಿಗಳಿಗೆ ಮೊಟ್ಟೆಗಳ ವಾಸನೆ ಸಹ್ಯವಾಗುವುದಿಲ್ಲ. ಬಾಗಿಲು, ಕಿಟಕಿ ಅಥವಾ ಇತರ ಕೆಲವು ಸ್ಥಳಗಳ ಸುತ್ತಲೂ ಮೊಟ್ಟೆಯ ಹೊರಕವಚವನ್ನು ಇರಿಸುವುದರಿಂದ ಅವುಗಳನ್ನು ದೂರವಿಟ್ಟುಕೊಳ್ಳಬಹುದಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಹಲ್ಲಿಗಳಿಗೆ ಬೆಳ್ಳುಳ್ಳಿಯ ವಾಸನೆ ಕೂಡ ಹಿತವಾಗುವುದಿಲ್ಲ. ಬೆಳ್ಳುಳ್ಳಿಯನ್ನು ಕಟ್ಟಿ ನೇತು ಹಾಕುವುದು ಅಥವಾ ಬೆಳ್ಳುಳ್ಳಿ ರಸವನ್ನು ಸ್ಪ್ರೇ ಮಾಡುವುದರಿಂದ ನಿಮ್ಮ ಮನೆಯಿಂದ ಹಲ್ಲಿಗಳನ್ನು ದೂರವಿರಿಸಿ ಕೊಳ್ಳಬಹುದಾಗಿದೆ.

English summary

simple home remedies to get rid of lizards and cockroaches

Here, in this article, we have got for you some effective remedies to get rid of lizards and cockroaches that are not only inexpensive but are also eco-friendly in nature. Follow these simple tips to get rid of lizards and cockroaches permanently from your house.
Story first published: Friday, April 13, 2018, 23:32 [IST]