For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಶಾಂತಿ-ನೆಮ್ಮದಿ ಇರಬೇಕೇ? ಗೋಡೆಗಳ ಬಣ್ಣ ಹೀಗಿರಲಿ

|

ಮನೆಯಲ್ಲಿನ ಗೋಡೆಗಳಿಗೆ ನಿಮ್ಮ ಇಷ್ಟದಂತೆ ಬಣ್ಣ ಬಳಿಯುವ ಬದಲು, ಯಾವ ರೀತಿಯ ಬಣ್ಣ ನೀಡಬೇಕು ಎಂದು ನೀವು ವಾಸ್ತುವಿನಿಂದ ತಿಳಿದುಕೊಳ್ಳಬಹುದು. ಇದರಿಂದ ಮನೆಯಲ್ಲಿ ಸಂಪೂರ್ಣವಾಗಿ ಧನಾತ್ಮಕತೆಯು ಬರುವುದು. ಮನೆಗಳಿಗೆ ತಿಳಿಬಣ್ಣವನ್ನು ಬಳಸಬೇಕೆಂದು ವಾಸ್ತುಶಾಸ್ತ್ರವು ಹೇಳುತ್ತದೆ. ಛಾವಣಿಗೆ ಬಿಳಿ ಬಣ್ಣವನ್ನು ಬಳಸಬಹುದು. ಆದರೆ ಗೋಡೆಗಳಿಗೆ ಬಿಳಿ ಬಣ್ಣವು ಸರಿಯಲ್ಲವೆಂದು ವಾಸ್ತುಶಾಸ್ತ್ರವು ಹೇಳುವುದು. ತಿಳಿನೀಲಿ ಬಣ್ಣವು ತುಂಬಾ ಧನಾತ್ಮಕ ಶಕ್ತಿ ಹಾಗೂ ಪವಿತ್ರತೆ ಉಂಟು ಮಾಡುವುದು.

Choose The Colours Of The Walls As Per Vastu Shastra

ಮನೆಯಲ್ಲಿ ಶಾಂತಿ ಹಾಗೂ ಸಂತೋಷವನ್ನು ಕಾಪಾಡಲು ಕೆಲವು ತಟಸ್ಥ ಬಣ್ಣಗಳನ್ನು ಬಳಸಿಕೊಳ್ಳಬಹುದು ಎಂದು ವಾಸ್ತುಶಾಸ್ತ್ರವು ಹೇಳುತ್ತದೆ. ಮನೆಯ ಗೋಡೆಯ ಬಣ್ಣವು ವ್ಯಕ್ತಿಯ ಭಾವನೆಗಳ ಮೇಲೆ ಪರಿಣಾಮ ಬೀರುವುದು. ಜೀವನದಲ್ಲಿ ಸಂತೋಷವಾಗಿರಲು ಮನೆಯ ಗೋಡೆಗಳಿಗೆ ಯಾವ ಬಣ್ಣ ಬಳಿಯಬೇಕು ಎಂದು ಈ ಲೇಖನದಲ್ಲಿ ನೀವು ತಿಳಿಯಿರಿ.

ಕೆಂಪು ಬಣ್ಣ

ಕೆಂಪು ಬಣ್ಣ

ಕೆಂಪು ಬಣ್ಣವು ಭಾವೋದ್ರಿಕತೆ, ಭೌತಿಕತೆ, ಧೈರ್ಯ, ನಾಟಕ, ಭಾವನೆ ಇತ್ಯಾದಿಗಳ ಸಂಕೇತವಾಗಿದೆ. ವಾಸದ ಕೊಠಡಿ(ಲಿವಿಂಗ್ ರೂಮ್)ಗೆ ಈ ಬಣ್ಣ ಹಚ್ಚಬಹುದು. ಇದು ಹಸಿವಿನ ಸಂಕೇತದ ಬಣ್ಣವು ಹೌದು. ಇದರಿಂದಾಗಿ ರೆಸ್ಟೋರೆಂಟ್ ಗಳು ವಾಸ್ತುಶಾಸ್ತ್ರವನ್ನು ಪಾಲಿಸಿ, ಗೋಡೆಗಳಿಗೆ ಕೆಂಪು ಬಣ್ಣ ಬಳಿಯುತ್ತವೆ. ಇದು ವೃತ್ತಿಪರ ಪ್ರಗತಿಗೆ ಉತ್ತೇಜನೆ ಮತ್ತು ಭೌತಿಕತೆ ಸಂತೋಷ ನೀಡುವುದು.

Most Read:ನೋಡಿ ಇದೇ ಕಾರಣಕ್ಕೆ ಕಣ್ಣುಗಳಲ್ಲಿ ಸದಾ ನೀರು ತುಂಬಿಕೊಂಡಿರುವುದು!

ನೀಲಿ ಬಣ್ಣ

ನೀಲಿ ಬಣ್ಣ

ಈ ಬಣ್ಣವು ಆಗಸ ಹಾಗೂ ನೀರಿನ ಸಂಕೇತವಾಗಿದೆ. ಎರಡು ಕೂಡ ಶಾಂತಿ ಹಾಗೂ ಸ್ವತಂತ್ರಕ್ಕೆ ಸಂಬಂಧಿಸಿದೆ. ಇವೆರಡನ್ನು ಹೊರತುಪಡಿಸಿ ಇದು ಸೌಂದರ್ಯ, ಭಾವನೆ, ಸತ್ಯ, ಸೌಜನ್ಯ ಮತ್ತು ಆಧ್ಯಾತ್ಮದ ಸಂಕೇತವಾಗಿದೆ. ಈ ಬಣ್ಣವು ನೋವು ಮತ್ತು ಸಂಕಷ್ಟ ನಿವಾರಿಸುವುದು. ತಿಳಿನೀಲಿ ಬಣ್ಣವು ಧನಾತ್ಮಕತೆ ಮತ್ತು ಶಮನಕಾರಿಯಾಗಿದೆ. ಮನೆಯ ದೊಡ್ಡ ಗೋಡೆಗಳಿಗೆ ಇದನ್ನು ಬಳಸಿ. ಆದರೆ ಮನೆಯ ಸಣ್ಣ ಗೋಡೆಗಳಿಗೆ ಇದನ್ನು ಬಳಸಬೇಡಿ. ಅದರಲ್ಲೂ ಕಡುನೀಲಿ ಬಣ್ಣವನ್ನು. ಕಚೇರಿ, ಅಂಗಡಿ ಅಥವಾ ಫ್ಯಾಕ್ಟರಿಗೆ ಈ ಬಣ್ಣ ಬಳಿಯಬೇಡಿ.

ಹಸಿರು ಬಣ್ಣ

ಹಸಿರು ಬಣ್ಣ

ಹಸಿರು ಬಣ್ಣವು ಶಮನಕಾರಿ, ಫಲವತ್ತತೆ, ಶಾಂತಿ, ಪ್ರಗತಿ ಮತ್ತು ನಿಸರ್ಗದ ಸಂಕೇತ. ಇದು ಒಬ್ಬನ ಹಿಂದಿನ ಜೀವನ ಮತ್ತು ನೆನಪನ್ನು ಪ್ರತಿನಿಧಿಸುವುದು. ಇದು ಕೋಪ ಮತ್ತು ದುಃಖ ಶಮನಗೊಳಿಸುವುದು. ದಂಪತಿಯ ಜೀವನದಲ್ಲಿ ಅತಿಯಾಗಿ ಜಗಳವಾಗುತ್ತಲಿದ್ದರೆ ಆಗ ನೀವು ಹಸಿರು ಬಣ್ಣವನ್ನು ಕೋಣೆಗೆ ಬಳಿಯಿರಿ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ.

ಕಿತ್ತಳೆ ಬಣ್ಣ

ಕಿತ್ತಳೆ ಬಣ್ಣ

ಕಿತ್ತಳೆ ಬಣ್ಣವು ಬದ್ಧತೆ, ಗುರಿ, ದೃಷ್ಟಿ, ಸಾಧನೆ ಮತ್ತು ತಾಳ್ಮೆಯ ಸಂಕೇತ. ಖಿನ್ನತೆ ಮತ್ತು ತುಂಬಾ ಒತ್ತಡಕ್ಕೆ ಒಳಗಾಗಿರುವವರ ಕೋಣೆಯ ಗೋಡೆಗೆ ಈ ಬಣ್ಣ ಬಳಿಯಿರಿ. ಕಠಿಣ ಪರಿಶ್ರಮದ ಹೊರತಾಗಿಯೂ ಯಶಸ್ಸು ನಿಮಗೆ ಸಿಗುತ್ತಿಲ್ಲವೆಂದಾದರೆ ಆಗ ನೀವು ಕಿತ್ತಳೆ ಬಣ್ಣ ಬಳಸಿ.

Most Read : ಒಣಕೆಮ್ಮು, ಗಂಟಲ ಕೆರೆತ, ಕಫ ನಿವಾರಣೆಗೆ: ಏಲಕ್ಕಿ ಪರ್ಫೆಕ್ಟ್ ಮನೆಮದ್ದು

ನೇರಳೆ ಬಣ್ಣ

ನೇರಳೆ ಬಣ್ಣ

ನೇರಳೆ ಬಣ್ಣವು ಸ್ವಗೌರವ, ಸಮೃದ್ಧಿ ಮತ್ತು ಸಮತೋಲಿತ ಜೀವನದ ಸಂಕೇತವಾಗಿದೆ. ಇದನ್ನು ಪುರುಷರ ಕೋಣೆಗಳಿಗೆ ಬಳಿಯಬೇಕು. ಆತ್ಮವಿಶ್ವಾಸದ ಕೊರತೆ ಇರುವಂತಹ ವ್ಯಕ್ತಿಗಳು ಕೋಣೆಯ ಗೋಡೆಗಳಿಗೆ ಈ ಬಣ್ಣ ಬಳಸಿ. ಇದರಿಂದ ಸಾಧನೆ ಕಡೆ ದೃಷ್ಟಿ ಹರಿಸಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗುವುದು.

Most Read: 'ಬಿ' ಅಕ್ಷರದಿಂದ ಹೆಸರು ಶುರುವಾಗುವ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ನೋಡಿ...

ಕಂದು ಬಣ್ಣ

ಕಂದು ಬಣ್ಣ

ಕಂದು ಬಣ್ಣವು ಜೀವನದಲ್ಲಿ ಸಂತೃಪ್ತಿ ಮತ್ತು ಸ್ಥಿರತೆಯ ಸಂಕೇತವಾಗಿದೆ. ಇದು ನಿಸರ್ಗದಲ್ಲಿ ಮಣ್ಣಿನ ಸಂಕೇತವಾಗಿದೆ. ಕಂದು ಬಣ್ಣವು ಪುರುಷರಿಗೆ ಸಂಬಂಧಿಸಿದ್ದಾಗಿದೆ. ಶಾಂತಿ, ಸಂತೋಷ ಮತ್ತು ಜೀವನದಲ್ಲಿ ಸ್ಥಿರತೆ ಬಯಸುವವರು ಇದನ್ನು ಬಳಸಬಹುದು.

English summary

Choose The Colours Of The Walls As Per Vastu Shastra

Vastu Shastra prescribes some rules for the colours of the walls of the house also. One can ensure positivity in the entire house by following these rules. According to it, only the lighter shades should be used for the walls of the house. A white colour should ideally be chosen for the roof and the walls should not be painted in white. Almost all the pastel colours of lighter shades can be used as a source of positive energy and auspiciousness. Similarly, neutral colours can also be chosen for the walls of the house in order to maintain peace and happiness, says Vastu.
X
Desktop Bottom Promotion