For Quick Alerts
ALLOW NOTIFICATIONS  
For Daily Alerts

ಬಟ್ಟೆಗೆ ಅಂಟಿದ ವೈನ್‌ನ ಕಲೆ ತೆಗೆಯಲು ಹೀಗೆ ಮಾಡಿ...

By CM Prasad
|

ಈಗಿನ ಜನಾಂಗದವರಲ್ಲಿ ಹೆಚ್ಚಿನವರು ವೈನ್ನ ಸೊಗಸಿಗೆ ಮಾರುಹೋಗುತ್ತಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿಯೂ ಸಹ ವೈನ್ ಅನ್ನು ಸೇವಿಸುವ ಪ್ರತೀತಿಯಿದೆ. ಕೆಲವರು ಅದು ಮದ್ಯದ ಅಂಶವೆಂದು ದೂರ ಉಳಿಯುತ್ತಾರೆ. ಆದರೆ ಕೆಲವರು ಮಾತ್ರ ವೈನ್‌ನ ಮಜಾ ಸವಿಯಲು ಸಕಾರಣಗಳನ್ನು ಹುಡುಕತ್ತಲೇ ಇರುತ್ತಾರೆ. ಪಾರ್ಟಿಯಿರಲಿ ಅಥವಾ ಇಲ್ಲದಿರಲಿ, ನೀವು ವೈನ್ ಸವಿಯಲು ಒಂದು ಅನಂದದಾಯಕ, ಸಂತಸದ ಒಳ್ಳೆಯ ಕಾರಣ ಇದ್ದೇ ಇರುತ್ತದೆ. ಈ ಕಾರಣಗಳಿಂದ ವೈನ್ ಸವಿಯಲು ಪ್ರೇರೇಪಿಸುತ್ತದೆ. ಕೆಂಪು ವೈನ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಂತೆ!

ಅನೇಕ ಅಧ್ಯಯನಗಳು ಈ ನಿಟ್ಟಿನಲ್ಲಿ ಸಲಹೆ ನೀಡಿದ್ದು, ಒಂದು ಗ್ಲಾಸ್ ವೈನ್ ಅಥವಾ ದ್ರಾಕ್ಷಿರಸ ನಿಮ್ಮ ಆರೋಗ್ಯಕ್ಕೆ ಹೆಚ್ಚು ಸಹಕಾರಿ. ಒಂದು ಗ್ಲಾಸ್ ವೈನ್ ಸೇವಿಸದೆ ಬಿಸಿ ನೀರಿನ ಸ್ನಾನವು ನಿಜಕ್ಕೂ ಅಪೂರ್ಣ. ಹೀಗಿರುವಾಗ ವೈನ್ ಸೇವನೆಯ ಮಜಾ ಸವಿಯುವ ಸಂದರ್ಭವೇ ಅವಿಸ್ಮರಣೀಯ. ಆದರೆ ಕುಡಿಯುವ ಗಮತ್ತಿನಲ್ಲಿ ಇದರ ಕಲೆ ಬಟ್ಟೆಯ ಮೇಲೆ, ಅಥವಾ ಕಾರ್ಪೆಟ್ ಮೇಲೆ ಅಂಟಿಕೊಂಡರೆ, ಅದನ್ನು ನಿರಾಸದಾಯಕವಾಗಿ ತೆಗೆಯುವುದು ಸುಲಭದ ಮಾತಲ್ಲ, ಆದ್ದರಿಂದ ಚೆಲ್ಲಿದ ವೈನ್ ಅಂಶಗಳನ್ನು ಹೊರತೆಗೆಯಲು ಸುಲಭವಾದ ವಿಧಾನಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಈ ವಿಧಾನಗಳಿಂದ ವೈನ್ ಅಂಶಗಳನ್ನು ಸುಲಭವಾಗಿ ಹೊರತೆಗೆಯಿರಿ...

ಉಪ್ಪನ್ನು ಸವರಿ

ಉಪ್ಪನ್ನು ಸವರಿ

ಒಂದು ವೇಳೆ ವೈನ್ ಸೇವಿಸುವಾಗ, ಬಟ್ಟೆಯ ಮೇಲೆ ಅದರ ಕಲೆಗಳಾದರೆ, ಮೊದಲಿಗೆ ನೈಲನ್ ವಸ್ತ್ರದಿಂದ ಅದರ ಕಲೆಯನ್ನು ಹೊರತೆಗೆಯಲು ಪ್ರಯತ್ನಿಸಿ. ಇನ್ನು ಉಳಿಕೆಯ ಕಲೆಯ ಮೇಲೆ ಉಪ್ಪನ್ನು ಸವರಿ. ಇದನ್ನು ಕೆಂಪು ವೈನ್‌ನ ಸಂಪೂರ್ಣ ಅಂಶವು ಹೋಗುವವರೆಗೆ ಅನುಸರಿಸಿ. ಉಪ್ಪು ಒಣಗುವ ಸಂದರ್ಭದಲ್ಲಿ ಅದು ಹೀರಿಕೊಳ್ಳುತ್ತದೆ. ನಂತರ ಅದನ್ನು ಚೆನ್ನಾಗಿ ನಿರ್ವಾತಗೊಳಿಸಿ.

ಅಡುಗೆ ಸೋಡಾ ಬಳಸಿ

ಅಡುಗೆ ಸೋಡಾ ಬಳಸಿ

ಮತ್ತೊಂದು ವಿಧಾನವೆಂದರೆ ಸೋಡಾ ಬಳಕೆ. ಹೌದು, ಬಟ್ಟೆಯ ಮೇಲೆ ಬಿದ್ದಿರುವ, ವೈನ್ ಕಲೆ ಸಂಪೂರ್ಣವಾಗಿ ತೆಗೆಯಲು, ಒಂದು ಬಕೆಟ್ ನೀರಿನಲ್ಲಿ ಎರಡರಿಂದ, ಮೂರು ಚಮಚ ಅಡುಗೆ ಸೋಡವನ್ನು ಹಾಕಿ, ಬಟ್ಟೆಯನ್ನು 15 ನಿಮಿಷ ನೆನೆಯಲು ಬಿಡಿ, ತದನಂತರ ಅಂಟಿಕೊಂಡಿರುವ ಕಲೆ ಹೋಗುವವರೆಗೂ ಚೆನ್ನಾಗಿ ತಿಕ್ಕಿಕೊಳ್ಳಿ, ಕಲೆಯು ಸಂಪೂರ್ಣವಾಗಿ ಹೋದಮೇಲೆ ಬಟ್ಟೆಯನ್ನು ಒಣಗಲು ಬಿಡಿ.

ಟೂತ್ ಪೇಸ್ಟ್ ಬಳಕೆ

ಟೂತ್ ಪೇಸ್ಟ್ ಬಳಕೆ

ಹೌದು! ಟೂತ್ ಪೇಸ್ಟ್ ಬಳಕೆಯೂ ಸಹ ಮತ್ತೊಂದು ವಿಧಾನ. ಬಟ್ಟೆಯನ್ನು ತೊಳೆಯುವ ಮೊದಲು ಸ್ವಲ್ಪ ಪ್ರಮಾಣದ ಟೂತ್ ಪೇಸ್ಟ್ ಅನ್ನು ಕಲೆಯ ಜಾಗಕ್ಕೆ ಹಚ್ಚಿ. ವೈನ್ ಕಲೆಯನ್ನು ಹೊರತೆಗೆಯಲು ಟೂತ್ ಪೇಸ್ಟ್ ಉತ್ತಮ ಸಾಧನ.

 ವಿನೆಗರ್

ವಿನೆಗರ್

ಬಿಳಿ ವಿನೆಗರ್ ಅನ್ನು ಈ ಸಮಸ್ಯೆಗೆ ಬಳಸಬಹುದು. ಕಲೆಯ ಜಾಗಕ್ಕೆ ಬಿಳಿ ವಿನೆಗರ್ ಅನ್ನು ಸವರಿ. ಇದು ನೇರಳೆ ಮತ್ತು ಕೆಂಪು ದ್ರವ್ಯಗಳನ್ನು ಹೊರತೆಗೆಯಲು ನೆರವಾಗುತ್ತದೆ. ವಿನೆಗರ್ ಹಚ್ಚಿದ ತಕ್ಷಣ ದ್ರವ್ಯದ ಮಾರ್ಜಕದ ಸಹಾಯದಿಂದ ಬಿಸಿನೀರಿನಲ್ಲಿ ತೊಳೆಯಿರಿ. ಇದು ಉತ್ತಮ ಫಲಿತಾಂಶ ನೀಡುತ್ತದೆ.

English summary

ways to remove wine stains from clothes

While studies have also suggested that a glass of wine is good for health, hot bubble bath without a glass of wine, feels incomplete. And while indulging in it takes to another high, removing wine stains makes us all time low. So, here are some easy tricks that you can try as soon as that wine spills on you..
X
Desktop Bottom Promotion