For Quick Alerts
ALLOW NOTIFICATIONS  
For Daily Alerts

ನೀವು ಪಾಲಿಸಬೇಕಾದ 11 ಫೆಂಗ್‌ಶುಯಿ ನಿಯಮಗಳು

By Poornima Hegde
|

ನಿಮ್ಮ ಕನಸಿನ ಮನೆ ಸರಳ, ಸುಂದರ ಹಾಗೂ ಪ್ರಶಾಂತವಾಗಿರಬೇಕೆಂದರೆ ಹೆಚ್ಚು ಶ್ರಮವಹಿಸಬೇಕಿಲ್ಲ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿಲ್ಲ. ಅಲ್ಪ ಮೊತ್ತದಲ್ಲೇ ಸುಂದರ ಹಾಗೂ ಓರಣವಾಗಿ ನಿರೂಪಿಸಬಹುದು. ಫೆಂಗ್‌ಶುಯಿ ಶಾಸ್ತ್ರ ತಿಳಿಸಿರುವ ಸಿಂಪಲ್ ಯೋಜನೆಯನ್ನು ಉಪಯೋಗಿಸಿದರೆ ಸಾಕು. ಫೆಂಗ್‌ಶುಯಿ ಎಂದರೆ ಗೊಂದಲ ರಹಿತ ಮನೆ ನಿರ್ಮಾಣ ಎಂದರ್ಥ.

ಸಾಮಾನ್ಯವಾಗಿ ಹಲವರಿಗೆ ಜೀವನದಲ್ಲಿ ಮನೆ ಕಟ್ಟುವ, ಕೊಂಡುಕೊಳ್ಳುವ ಕನಸು ಇದ್ದೇ ಇರುತ್ತದೆ. ತಮ್ಮದೇ ಆದ ಮನೆಯನ್ನು ಮಾಡಿಕೊಂಡು ತಮಗೆ ಬೇಕಾದ ಹಾಗೆ ಅದರ ವಿನ್ಯಾಸವನ್ನು ಮಾಡಿಕೊಳ್ಳಲು ಆಸೆಪಡುತ್ತಾರೆ. ಆದರೆ ಇದನ್ನು ಯಶಸ್ವಿಯಾಗಿ ಬಳಕೆಗೆ ತರುವುದು ಇಲ್ಲಿ ವ್ಯಾಖ್ಯಾನ ನೀಡಿದಷ್ಟು ಸುಲಭದ ಮಾತಲ್ಲ. ಹಾಗಾಗಿ ಇಲ್ಲಿ ನಾವು ಫೆಂಗ್‌ಶುಯಿ ಯನ್ನು ಹೇಗೆ ಕರಗತ ಮಾಡಿಕೊಳ್ಳಬಹುದೆಂಬ ಹತ್ತು ನಿಯಮಗಳನ್ನು ನೀಡಿದ್ದೇವೆ. ಇವನ್ನು ಪಾಲಿಸಿ.

ಮನೆಯ ಪ್ರವೇಶ ದ್ವಾರ

ಮನೆಯ ಪ್ರವೇಶ ದ್ವಾರ

ಮನೆಯ ಪ್ರವೇಶ ದ್ವಾರದ ಮೂಲಕವೇ ಧನಾತ್ಮಕ ಶಕ್ತಿಯ ಪ್ರವೇಶ ಸಾಧ್ಯ. ಹಾಗಾಗಿ ಪ್ರವೇಶ ದ್ವಾರ ಇದನ್ನು ಆಮಂತ್ರಿಸುವಂತೆ ಇರಬೇಕು. ಹೀಗಾಗಿ ಇಲ್ಲಿ ಯಾವುದೇ ರೀತಿಯ ಅಡೆ ತಡೆಗಳಾಗಲಿ ಅಥವಾ ಸತ್ತ ಸಸ್ಯಗಳು ಅಥವಾ ಇನ್ನಿತರ ಕಸ ಕಡ್ಡಿಗಳಾಗಲಿ ಇರಬಾರದು.

ಕೊಠಡಿಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿರಿ

ಕೊಠಡಿಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿರಿ

ಇದು ನಮ್ಮ ದೈನಂದಿನ ಜೀವನದಲ್ಲೂ ಬಹಳ ಅಗತ್ಯ. ಮನೆಯ ಕೊಠಡಿಗಳಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದರೆ ಈ ಧನಾತ್ಮಕ ಶಕ್ತಿಯ ಸಂಚಲನೆ ಸಾಧ್ಯವಿಲ್ಲ. ಸಣ್ಣ ಮತ್ತು ನೀಟಾದ ಮನೆ ಶಾಂತ ಮತ್ತು ಆರಾಮದಾಯಕ ಜೀವನದ ಪ್ರತೀಕ. ಬಳಕೆಯಲ್ಲಿಲ್ಲದ ಅಥವಾ ಮುರಿದ ವಸ್ತುಗಳನ್ನು ಯಾವುದೇ ರೀತಿಯಲ್ಲೂ ಮನೆಯ ಕೊಠಡಿಯ ಒಳಗೆ ಇಡಬೇಡಿ.

ಮನೆಯ ಪೀಠೋಪಕರಣಗಳನ್ನು ಸುಸ್ಥಿಯಲ್ಲಿಡಿ

ಮನೆಯ ಪೀಠೋಪಕರಣಗಳನ್ನು ಸುಸ್ಥಿಯಲ್ಲಿಡಿ

ಮನೆಯ ಓಡಾಡುವ ದಾರಿಯಲ್ಲಿ ಅಡ್ಡ ಬಾರದಂತೆ ಮನೆಯ ಪೀಠೋಪಕರಣಗಳನ್ನು ಇಡಿ. ಎಲ್ಲಾ ಕಡೆಗಳಲ್ಲಿ ಕುಳಿತ ಜನರು ಗೋಡೆಯ ಕಡೆಗೆ ಬೆನ್ನು ಮಾಡಿ ಕುಳಿತಿರುವಂತೆ ಕುರ್ಚಿಗಳನ್ನು ಜೋಡಿಸಿಡಿ.

ಮನೆಯ ದುರಸ್ತಿ ಕಾರ್ಯಗಳನ್ನು ತಕ್ಷಣ ಮಾಡಿ

ಮನೆಯ ದುರಸ್ತಿ ಕಾರ್ಯಗಳನ್ನು ತಕ್ಷಣ ಮಾಡಿ

ಮನೆ ಎಂದ ಮೇಲೆ ಹಲವು ಸಾಮಾನುಗಳು ಇದ್ದೇ ಇರುತ್ತವೆ, ಹಾಗೂ ಇವು ಮುರಿಯುವುದು ಹಾಗೂ ದುರಸ್ತಿಗೆ ಬರುವುದು ಸಾಮಾನ್ಯ. ಹಾಗಾಗಿ ಇವನ್ನು ಆಗಾಗ ಸರಿಪಡಿಸಿ. ಯಾವುದೇ ಮುರಿದ ವಸ್ತುಗಳನ್ನು ಮನೆಯಲ್ಲಿಡಬೇಡಿ.

ಕನ್ನಡಿಗಳನ್ನು ತೂಗುಹಾಕಿ

ಕನ್ನಡಿಗಳನ್ನು ತೂಗುಹಾಕಿ

ಮನೆಯ ಕನ್ನಡಿಗಳು ಧನಾತ್ಮಕ ಶಕ್ತಿಯನ್ನು ಪ್ರತಿಫಲಿಸುತ್ತವೆ ಎಂಬ ನಂಬಿಕೆ ಇದೆ. ಇವು ಮನೆಯಲ್ಲಿ ಋಣಾತ್ಮಕ ಶಕ್ತಿಯ ಸಂಚಲನವನ್ನೂ ಕಡಿಮೆ ಮಾಡುತ್ತವೆ. ಆದರೆ ಮನೆಯ ಮುಖ್ಯದ್ವಾರಕ್ಕೆ ಮುಖ ಮಾಡಿ ಕನ್ನಡಿಯನ್ನು ಯಾವಾಗಲೂ ಇಡಬೇಡಿ. ಇದು ಮನೆಯ ಒಳಗೆ ಪ್ರವೇಶಿಸುವ ಧನಾತ್ಮಕ ಶಕ್ತಿಯನ್ನು ಹೊರಗೆ ಪ್ರತಿಫಲಿಸುತ್ತದೆ.

ಗಿಡಗಳು

ಗಿಡಗಳು

ಹೂವುಗಳು ಮತ್ತು ಹಣ್ಣುಗಳನ್ನು ಕಾಣುವಂತೆ ಇಡಿ. ತಾಜಾ ಹೂವುಗಳು ಹಣ್ಣುಗಳು ಮತ್ತು ಸಣ್ಣ ಗಿಡಗಳನ್ನು ಮನೆಯ ಒಳಗಡೆ ಕಾಣುವಂತೆ ಇಡಿ. ಮನೆಯ ಮಲಗುವ ಕೋಣೆಯಲ್ಲಿ ಹೂವುಗಳಿಗಿಂತ ಹಣ್ಣುಗಳನ್ನು ಇಟ್ಟರೆ ಲೈಂಗಿಕ ಜೀವನಕ್ಕೆ ಬಹಳ ಸಹಕಾರಿ. ಕಿತ್ತಳೆ ಮತ್ತು ಲಿಂಬೆ ಹಣ್ಣುಗಳನ್ನು ಮನೆಯ ಒಳಗಡೆ ಇಟ್ಟರೆ ಬಹಳ ಉತ್ತಮ.

ಮನೆಯ ಎಲ್ಲಾ ಕೊಠಡಿಗಳಿಗೆ ಸರಿಯಾದ ಬಣ್ಣ ಕೊಡಿ

ಮನೆಯ ಎಲ್ಲಾ ಕೊಠಡಿಗಳಿಗೆ ಸರಿಯಾದ ಬಣ್ಣ ಕೊಡಿ

ಬಣ್ಣಗಳು ಫೆಂಗ್‌ಶುಯಿ ಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಬೇರೆ ಬೇರೆ ಬಣ್ಣಗಳು ಬೇರೆ ಬೇರೆ ವಿಷಯಗಳನ್ನು ಸೂಚಿಸುತ್ತವೆ.ಉದಾಹರಣೆಗೆ ಹಸಿರು ಪರಿಸರವನ್ನು ಪ್ರತಿಬಿಂಬಿಸುತ್ತದೆ ಹಾಗೂ ಇದು ಜೀವನ ಹಾಗೂ ಆಸೆಯ ಪ್ರತೀಕವಾಗಿದೆ. ಹಳದಿ ಶಕ್ತಿಯ ಸೂಚಕ. ಕೆಂಪು ಮತ್ತು ನೇರಳೆ ಅದೃಷ್ಟದ ಸೂಚಕಗಳು. ತಂಪಾದ ಬಣ್ಣಗಳನ್ನು ಮನೆಯ ವಾಸದ ಕೊಠಡಿಗಳಲ್ಲಿ ಬಳಸಿದಷ್ಟು ಉತ್ತಮ.

ಚೂಪಾದ ಗೆರೆಗಳು

ಚೂಪಾದ ಗೆರೆಗಳು

ಫೆಂಗ್ ಶುಯಿ ಯಲ್ಲಿ ಗೋಳಾಕಾರಕ್ಕೆ ಹೆಚ್ಚಿನ ಪ್ರಾಧಾನ್ಯವಿದೆ. ಚೂಪಾದ ತುದಿಗಳು ಋಣಾತ್ಮಕ ಶಕ್ತಿಯನ್ನು ಹೊರಸೂಸುತ್ತವೆ ಎಂದು ನಂಬಲಾಗಿದೆ. ಬೆಡ್ ಅಥವಾ ಕುರ್ಚಿಗಳ ಕಡೆಗೆ ಈ ತುದಿಗಳು ಎಂದೂ ಬೊಟ್ಟು ಮಾಡಬಾರದು. ಇವು ನಿಮ್ಮ ಶಾಂತಿಗೆ ಭಂಗ ತರುವುದರಲ್ಲಿ ಅನುಮಾನವಿಲ್ಲ.

ಮನೆಯ ಕಾರ್ಪೆಟ್ ಹೇಗಿರಬೇಕು?

ಮನೆಯ ಕಾರ್ಪೆಟ್ ಹೇಗಿರಬೇಕು?

ಯಾವ ದಿಕ್ಕಿನಲ್ಲಿ ಕಾರ್ಪೆಟ್ ಮತ್ತು ರಗ್ಗುಗಳು ಹಾಕುತ್ತೀರಿ ಎನ್ನುವುದನ್ನು ಗಮನಿಸಿ ಬಣ್ಣವನ್ನು ಆಯ್ಕೆ ಮಾಡಿ. ನಿಮ್ಮ ಇಡೀ ಕೋಣೆಯನ್ನು ಆವರಿಸುವಂತಹ ಕಾರ್ಪೆಟ್ ಕೊಠಡಿ ದಿಕ್ಕಿಗೆ ಸರಿಯಾಗಿ ಹೊಂದಿಕೊಳ್ಳುವಂತೆ ನೋಡಿಕೊಳ್ಳಿ.

ಮನೆಯ ಸಾಕುಪ್ರಾಣಿ

ಮನೆಯ ಸಾಕುಪ್ರಾಣಿ

ನಾಯಿಗಳು ಭೂಮಿಯ ಅಂಶಕ್ಕೆ ಸೇರಿದ್ದೆಂದು ಹೇಳಲಾಗುತ್ತದೆ. ಅವುಗಳಿಗೆ ಕಂದು ಅಥವಾ ಹಳದಿ ಬಣ್ಣದ ಬುಟ್ಟಿಯನ್ನು ಆಯ್ಕೆ ಮಾಡಿ. ಬಿಳಿ ಬುಟ್ಟಿಗಳು ನಾಯಿಗಳನ್ನು ಅನಾರೋಗ್ಯಕ್ಕೀಡು ಮಾಡಬಹುದು. ನೈಋತ್ಯ, ಈಶಾನ್ಯ ಮತ್ತು ದಕ್ಷಿಣಕ್ಕೆ ಬಾಗಿಲುಗಳಿದ್ದರೆ ನಾಯಿಗಳನ್ನು ಬಲಶಾಲಿ ಹಾಗೂ ಆರೋಗ್ಯಕರವನ್ನಾಗಿಸುತ್ತದೆ. ಪೂರ್ವ ಅಥವಾ ಆಗ್ನೇಯ ಬಾಗಿಲುಗಳು ಅವುಗಳು ಅನಾರೋಗ್ಯಕ್ಕೀಡಾಗುವಂತೆ ಮಾಡಬಹುದು.

ಸಮೃದ್ಧ ಮತ್ತು ಸಹಬಾಳ್ವೆಯ ಮನೆಯನ್ನಾಗಿಸಿಕೊಳ್ಳಿ

ಸಮೃದ್ಧ ಮತ್ತು ಸಹಬಾಳ್ವೆಯ ಮನೆಯನ್ನಾಗಿಸಿಕೊಳ್ಳಿ

ಇದು ನಿಮ್ಮ ಮನೆಯನ್ನು ಸಮೃದ್ಧ ಮತ್ತು ಸಹಬಾಳ್ವೆಯ ಮನೆಯನ್ನಾಗಿಸಲು ಬಹಳ ಅಗತ್ಯ. ಈ ನಿಯಮಗಳು ಜಗತ್ತಿನಾದ್ಯಂತ ಹಲವು ಜನರಿಗೆ ತಮ್ಮ ಬದುಕನ್ನು ಹಸನು ಮಾಡಲು ನೆರವಾಗಿವೆ. ಇವಿಷ್ಟೇ ಅಲ್ಲದೇ ಫೆಂಗ್ ಶುಯಿಯಲ್ಲಿ ಇನ್ನೂ ಹತ್ತು ಹಲವು ನಿಯಮಗಳಿವೆ. ಇಲ್ಲಿ ಹೇಳಿರುವುದು ಕೇವಲ ಮೂಲಭೂತ ನಿಯಮಗಳಷ್ಟೇ. ಇವು ನಿಮ್ಮ ಬದುಕನ್ನು ಒಂದು ವಿಭಿನ್ನ ರೀತಿಯಲ್ಲಿ ಆರಂಭಿಸಲು ಸಾಕು. ಇದರಿಂದ ನಿಮ್ಮ ಬದುಕು ಹಸನಾಗುವುದರಲ್ಲಿ ಅನುಮಾನವೇ ಇಲ್ಲ.

English summary

Top Fengshui to follow

Feng shui is the art and science of organizing space to maximize positive energy, or chi. It originated in ancient China, and has become very popular in the western world. Successfully practicing feng shui is a lot more complicated than the very basic definition given here. For this reason
X
Desktop Bottom Promotion