For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಯು ಇನ್ನಷ್ಟು ಅಂದವಾಗಿ ಕಾಣಬೇಕೇ? ಇಲ್ಲಿದೆ ಸೂಕ್ತ ಸಲಹೆ

|

ಕೆಲವೊಂದು ಮನೆಯ ಅಲಂಕಾರ ಸುಂದರವಾಗಿ ಮೂಡಿಬರುತ್ತದೆ. ಮನೆಯು ಇನ್ನಷ್ಟು ಅಂದವಾಗಿ ಕಾಣಬೇಕೆಂದರೆ ಮನೆಯ ಒಳಗಿನ ಡಿಸೈನ್‌ಗೆ ಅತಿ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಸುಂದರವಾದ ಇಂಟೀರೀಯರ್ ಡಿಸೈನ್, ಮಾಸಿದ ಬಣ್ಣದ ಸಾಮಗ್ರಿಯ ಬಳಕೆ ಅದರೊಂದಿಗೆ ಕಡುಬಣ್ಣದ ನೆಲಹಾಸು (ಟೈಲ್ಸ್) ಹಾಕಿದರೆ ಮನೆಯು ಸುಂದರವಾಗಿ ಕಾಣುತ್ತದೆ.

ಮನೆಯು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರು ಆರಾಮವಾಗಿರಬಹುದಾದ ಸ್ಥಳವಾಗಿದೆ. ಮನೆಯ ಒಳಗಿನ ಅಲಂಕಾರ ಹೇಗಿರಬೇಕೆಂದರೆ ಅದು ದೀರ್ಘ ಶ್ವಾಸ ತೆಗೆದುಕೊಳ್ಳುವಂತಿರಬೇಕು. ನಿಮ್ಮ ಮನೆ ಅಥವಾ ಒಂದು ಕೋಣೆಯನ್ನು ಆರಾಮದಾಯಕವಾಗಿ ಮಾಡಲು ಕೆಲವೊಂದು ಟಿಪ್ಸ್‌ಗಳು ಇಲ್ಲಿವೆ.

Five steps to a comfortable and cosy home

ಮನೆಯ ಮುಂಬಾಗಿಲು ಹೇಗಿರಬೇಕೆಂಬ ವಾಸ್ತು ಟಿಪ್ಸ್

ಮೊದಲೇ ಯೋಜನೆ ಹಾಕಿಕೊಳ್ಳಿ:

ಮನೆ ಕಟ್ಟಲು ಯೋಜನೆ ಮಾಡಿಕೊಳ್ಳುತ್ತಿದ್ದಂತೆಯೇ ಆರ್ಕಿಟೆಕ್ಟ್ ಮತ್ತು ಬಿಲ್ಡರ್ ಜತೆ ಚರ್ಚಿಸಬೇಕು. ಏನಾದರೂ ಬದಲಾವಣೆ ಬೇಕಾದರೆ ಪ್ರಾರಂಭದ ಹಂತದಲ್ಲೇ ಮಾಡಿಕೊಳ್ಳಬೇಕು. ಗೊಂದಲವಿಲ್ಲದ, ಮರುಬಳಕೆ, ಕುಗ್ಗಿಸುವುದು. ಈ ಮೂರು ಪದಗಳನ್ನು ನೆನಪಿನಲ್ಲಿಡಿ ಮತ್ತು ನಿಮ್ಮ ಮನೆಯ ಸುತ್ತ ಎಲ್ಲವನ್ನು ಕಾರ್ಯಗತಗೊಳಿಸಿ.

ಆಸನದ ಸೆಟ್:

ನಿಮ್ಮ ಮನೆಯಲ್ಲಿ ಆರಾಮದಾಯಕ ಆಸನದ ವ್ಯವಸ್ಥೆ ಮಾಡಿ. ನಿಮ್ಮ ಸೋಫಾದ ಮೇಲೆ ಮೃದುವಾದ ಪಿಲ್ಲೊಗಳು ಅಥವಾ ಕುಷನ್ ಹಾಕಿ. ಆಸನದ ಪ್ರದೇಶವನ್ನು ಹೆಚ್ಚು ಆಹ್ವಾನಿತ ಮತ್ತು ಆರಾಮದಾಯಕ ಮಾಡಲು ನೀವು ಅಲಂಕಾರ ಮಾಡಬಹುದು.

ನೆಲ ಆಕರ್ಷಕವಾಗಿರಲಿ:

ನಿಮ್ಮ ನೆಲವು ಬದಲಾವಣೆ ಉಂಟುಮಾಡಬಹುದು. ನೆಲದಲ್ಲಿ ಡ್ಯುರಿ ಅಥವಾ ಮ್ಯಾಟ್ ಹಾಕಿದರೆ ಅಥವಾ ನೆಲಹಾಸು (ಟೈಲ್ಸ್) ಹಾಕಿದರೆ ಮನೆಯು ಸುಂದರವಾಗಿ ಕಾಣುತ್ತದೆ. ನಿಮ್ಮ ಬೆಡ್ ಅಥವಾ ಕುರ್ಚಿಯ ಬದಿಯಲ್ಲಿ ಕೆಂಪು ಬಣ್ಣದ ಮೃದುವಾದ ರಗ್ ಹಾಕಿದರೆ ಮನೆಯ ನೆಲ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.

ಬೆಡ್ ಸರಿಯಾಗಿರಲಿ:
ನಿಮ್ಮ ಬೆಡ್ ಶೀಟ್‌ಗಳು ತುಂಬಾ ಆರಾಮದಾಯಕವಾಗಿರುಂತಹ ಭಾವನೆ ಮೂಡಿಸುತ್ತಿರಲಿ.

ಬಾಲ್ಕನಿ:

ಬಾಲ್ಕನಿಯು ಮನೆಯ ಅತ್ಯಂತ ಪ್ರಾಶಸ್ತ್ಯ ಸ್ಥಳ. ಮನೆಯೊಳಗೆ ಕುಳಿತು ಬೋರ್ ಆದಾಗ ಬಾಲ್ಕ್ಕನಿಯಲ್ಲಿ ಕುಳಿತು ರಿಲಾಕ್ಸ್ ಆಗಬಹುದು. ಬಾಲ್ಕನಿಯ ನೆಲಕ್ಕೆ ಬಣ್ಣ ಬಣ್ಣದ ಟೈಲ್ಸ್ ಹಾಕುವುದರಿಂದ ಮನಸ್ಸಿಗೆ ಉಲ್ಲಾಸ ನೀಡುತ್ತದೆ.

1BHK ಮನೆಗೆ ಕೂಲ್ ಇಂಟೀರಿಯರ್ ಐಡಿಯಾ

ಊಟದ ಕೋಣೆ:

ಡೈನಿಂಗ್ ರೂಮ್‌ನಲ್ಲಿ ಕುರ್ಚಿಗಳಿಗೆ ಬಣ್ಣ ಬಣ್ಣದ ವಸ್ತ್ರದಿಂದ ಕವರ್ ಮಾಡಿದರೆ ಹೊಸ ಲುಕ್ ಕೊಡುತ್ತದೆ. ಟೇಬಲ್ ಅನ್ನು ಸೂಕ್ತವಾದ ಸ್ಥಳದಲ್ಲಿ ಇಡಿ. ಆಗಾಗ ಈ ಟೇಬಲ್‌ನ ಸ್ಥಳವನ್ನು ಬದಲಾಯಿಸುತ್ತಿರಿ.ಟೇಬಲ್‌ನ ಮಧ್ಯದಲ್ಲಿ ಬಣ್ಣದ ಕ್ಯಾಂಡಲ್ ಮತ್ತು ಫ್ರೆಶ್ ಹೂವು ಮತ್ತು ಹಣ್ಣುಗಳನ್ನು ಜೋಡಿಸಿ ಇಡಿ.

ಅಂದವಾದ ಮೂಲೆ:
ಇದಿಲ್ಲದೆ ಎಲ್ಲಾ ಅಂಶಗಳು ಕಳಕೊಳ್ಳುತ್ತದೆ. ನಿಮ್ಮ ಮನೆಯಲ್ಲಿನ ಒಂದು ಮೂಲೆಯು ಒಂದು ಪುಸ್ತಕ, ಐಪಾಡ್, ಒಂದು ಕಪ್ ಕಾಫಿ ಇಡುವಂತಹ ಜಾಗವಾಗಿರಬೇಕು. ನಿಮ್ಮ ಸಣ್ಣ ಸ್ವರ್ಗದಲ್ಲಿ ಈ ಜಾಗ ಮಾಡಿ. ನಿಮ್ಮ ಫೇವರಿಟ್ ಕುರ್ಚಿ ಅಥವಾ ಸೋಫಾವನ್ನು ಅಲ್ಲಿಡಿ. ಇಲ್ಲಿ ಮೇಜಿನ ಮೇಲಿನ ಲ್ಯಾಂಪ್ ಅಥವಾ ಬದಿಯಲ್ಲಿ ಹೊರಗಿನ ದೃಶ್ಯ ವೀಕ್ಷಿಸಲು ದೊಡ್ಡದಾದ ಕಿಟಕಿಯಿರಬೇಕು.

Read more about: home tips ಮನೆ ಸಲಹೆ
English summary

Five steps to a comfortable and cosy home

There are beautiful homes and then there are comfortable homes. And, there are some lucky ones that are an amalgamation of both. There are beautiful homes and then there are comfortable homes. And, there are some lucky ones that are an amalgamation of both. 
Story first published: Monday, April 28, 2014, 17:46 [IST]
X
Desktop Bottom Promotion