For Quick Alerts
ALLOW NOTIFICATIONS  
For Daily Alerts

ನೆಲದ ಮೇಲೆ ಬಿದ್ದ ಎಣ್ಣೆ ಕಲೆ ಹೋಗಲಾಡಿಸಲು ಟಿಪ್ಸ್

By Super
|

ಮತ್ತೆ ಬೆಳಕಿನ ಹಬ್ಬ ದೀಪಾವಳಿ ಬಂದಿತು, ಹೋಯಿತು. ಈ ದೀಪಾವಳಿ ಹಬ್ಬವು ಒಳ್ಳೆಯತನವು ಕೆಟ್ಟತನದ ಮೇಲೆ, ಬೆಳಕು ಅಙ್ಞಾನದ ಮೇಲೆ ಸಾಧಿಸಿದ ವಿಜಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಆಡಂಬರದ ನಡುವೆ ಎಲ್ಲಾರ ಮನೆಯಲ್ಲಿ ದೀಪದ ಎಣ್ಣೆಯಿಂದ ಉಂಟಾದ ಕಲೆಗಳು ಮೂಡಿರುತ್ತವೆ. ಅವುಗಳನ್ನು ಹೋಗಲಾಡಿಸುವುದು ಹೇಗೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಅದನ್ನು ನಿವಾರಿಸುವ ಕುರಿತು ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ.

ದೀಪಾವಳಿಯು ಮೂಲತಃ ದೀಪಗಳ ಆವಳಿ ಅಂದರೆ ದೀಪಗಳ ಹಬ್ಬವೆಂದೆ ಖ್ಯಾತಿಯನ್ನು ಪಡೆದಿದೆ. ಈ ಹಬ್ಬದ ಶುಭ ಸಂದರ್ಭದಲ್ಲಿ ಪ್ರತಿ ಮನೆಯಲ್ಲು ದೀಪಗಳನ್ನು ಹಚ್ಚಿ ಆರಾಧಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ದೀಪದಲ್ಲಿರುವ ಎಣ್ಣೆಯು ನೆಲದ ಮೇಲೆ ಚೆಲ್ಲಿ ಹೋಗುವುದು ಸಹಜ. ನಾವು ದೀಪವನ್ನು ಹಚ್ಚಲು ಎಷ್ಟು ಕಷ್ಟ ಪಡುತ್ತೇವೆಯೋ, ಅಷ್ಟೇ ಕಷ್ಟವನ್ನು ಆ ಎಣ್ಣೆಯ ಕಲೆಗಳನ್ನು ನಿವಾರಿಸುವಾಗ ನಾವು ಪಡಬೇಕು.

Remove Oil Stains Of Diya From Floor

ಒಮ್ಮೊಮ್ಮೆ ಈ ಕಲೆಗಳು ಶಾಶ್ವತವಾಗಿ ಉಳಿದುಬಿಡುತ್ತವೆ. ಆದರೂ ಸಹ ಇಂತಹ ಕಲೆಗಳನ್ನು ನಿವಾರಿಸಲು ಹಲವಾರು ಉಪಾಯಗಳು ನಮಗೆ ದೊರೆಯುತ್ತವೆ. ಆದರೆ ಇವುಗಳಲ್ಲಿ ಹಲವಾರು ಉತ್ಪನ್ನಗಳು ಅಂಗಡಿಯಲ್ಲಿ ಸಿಗುತ್ತವೆ. ಇವುಗಳಲ್ಲಿ ಆಸಿಡ್ ಅಂಶಗಳು ಸಹ ಇರುತ್ತವೆ. ಹಾಗಾಗಿ ಇವುಗಳನ್ನು ಬಳಸಿದಾದಲ್ಲಿ ನಿಮ್ಮ ಫ್ಲೋರಿಂಗ್‍ಗೆ ಹಾನಿಯುಂಟಾಗಬಹುದು.

ನಿಮಗೆ ಎಣ್ಣೆಯ ಕಲೆಗಳನ್ನು ಹೋಗಲಾಡಿಸುವ ಪರಿಹಾರಗಳು ಬೇಕಾದರೆ ಕೆಳಗೆ ನೀಡಿರುವ ಪಟ್ಟಿಗಳನ್ನು ನೋಡಿ.

1. ನಿಮ್ಮ ಬೆಕ್ಕಿನ ಮರಿಯ ವಿಸರ್ಜನೆ ನಿಮ್ಮ ನೆರವಿಗೆ ಬರುತ್ತದೆ

ದೀಪದ ಎಣ್ಣೆಯ ಕಲೆಗಳನ್ನು ನಿವಾರಿಸಲು ಈ ಪ್ರಾಣಿ ಜನ್ಯ ವಿಸರ್ಜಿತ ಪಸ್ತುಗಳನ್ನು ಸಹ ನಾವು ಬಳಸಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ. ಕಲೆಯಿರುವ ಭಾಗಕ್ಕೆ ಈ ಮಿಶ್ರಣವನ್ನು ಚಿಮುಕಿಸಿ. ಇಡೀ ರಾತ್ರಿಯೆಲ್ಲಾ ಹಾಗೆಯೇ ಇರಲಿ ಬಿಡಿ. ಬೆಳಗ್ಗೆ ಅದನ್ನು ಸ್ವಚ್ಛಮಾಡಿದರೆ ಕಲೆಗಳು ಮಂಗಮಾಯವಾಗುತ್ತವೆ.

2. ಸಾಡಸ್ಟ್ ಮತ್ತು ಪೈಂಟ್ ಥಿನ್ನರ್

ಪೈಂಟ್ ಥಿನ್ನರ್ ಮತ್ತು ಸಾ ಡಸ್ಟ್ ಎರಡನ್ನು ಬೆರೆಸಿ ಮಿಶ್ರಣ ಮಾಡೀಕೊಳ್ಳಿ. ಇದನ್ನು ಕಲೆಯಿರುವ ಭಾಗಕ್ಕೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ಇದರ ಮೇಲೆ ಈ ಮಿಶ್ರಣವನ್ನು ಹಾಕಿ, ಕಲೆ ಹೋಗಲಿಲ್ಲವಾದಲ್ಲಿ ಮತ್ತೊಮ್ಮೆ ಪ್ರಯತ್ನಿಸಿ. ಈಗ ಆಲೋಚಿಸಿ ನೋಡಿ, ದೀಪದ ಎಣ್ಣೆ ಕಲೆಗಳನ್ನು ನಿವಾರಿಸಲು ಇದಕ್ಕಿಂತ ಸುಲಭವಾದ ಉಪಾಯ ನಮಗೆ ಗೋಚರಿಸುವುದಿಲ್ಲ.

3. ಬೇಕಿಂಗ್ ಸೋಡಾದ ಪ್ರಯೋಜನವನ್ನು ಪಡೆಯಿರಿ

ಅಡುಗೆಗೆಂದು ಬಳಸಲಾಗುವ ಬೇಕಿಂಗ್ ಸೋಡಾವನ್ನು ಪ್ರಯತ್ನಿಸಿ ನೋಡಿ. ಇದು ದೀಪದ ಎಣ್ಣೆಯ ಕಲೆಗಳನ್ನು ಹೋಗಲಾಡಿಸುವುದರಲ್ಲಿ ಹೆಸರುವಾಸಿಯಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಬೇಕಿಂಗ್ ಸೋಡಾವನ್ನು ಕಲೆಯಿರುವ ಭಾಗಕ್ಕೆ ಹಚ್ಚಿ, ಅಥವಾ ಚಿಮುಕಿಸಿ, ಸ್ವಲ್ಪ ಹೊತ್ತಿನ ನಂತರ ಬಿಸಿನೀರಿನಲ್ಲಿ ಕಲೆಯಿರುವ ಭಾಗಗಳನ್ನು ತೊಳೆಯಿರಿ.

4. ಡಿಷ್‍ವಾಷರ್ ಡಿಟರ್ಜೆಂಟ್

ದೀಪದ ಎಣ್ಣೆಯಿಂದ ಉಂಟಾದ ಕಲೆಗಳನ್ನು ಸಮರ್ಥವಾಗಿ ಹೋಗಲಾಡಿಸುವ ಸಾಧನವಾಗಿದೆ. ಇದಕ್ಕಾಗಿ ಅಂತಹ ದೊಡ್ಡ ಕಷ್ಟವೇನು ಪಡಬೇಕಾಗಿಲ್ಲ. ಮೊದಲು ಕಲೆಯಿರುವ ಜಾಗಕ್ಕೆ ಎಷ್ಟು ಬೇಕೋ ಅಷ್ಟು ಡಿಟರ್ಜೆಂಟ್ ಹಾಕಿ. ಸ್ವಲ್ಪ ಹೊತ್ತು ಬಿಟ್ಟು ನಂತರ ಅದನ್ನು ಬಿಸಿ ನೀರಿನಿಂದ ತೊಳೆಯಿರಿ. ಕಲೆಗಳು ಮಾಯವಾಗಿರುವುದನ್ನು ನೀವೇ ಗಮನಿಸುವಿರಿ.

5. TSP ಯನ್ನು ಪ್ರಯೋಗಿಸಿ

TSP ಅಥವಾ ಟ್ರೈ ಸೋಡಿಯಂ ಫಾಸ್ಫೇಟ್ ಎಂದು ಕರೆಯಲ್ಪಡುವ ರಾಸಾಯನಿಕವು ಎಂತಹ ಗಡಸು ಕಲೆಗಳನ್ನು ಸಹ ಹೋಗಲಾಡಿಸುತ್ತದೆ. ಅದರಲ್ಲೂ ದೀಪದ ಎಣ್ಣೆಯಿಂದ ಉಂಟಾದ ಕಲೆಗಳ ಮೇಲೆ ಇದು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.ಕಲೆಯಿರುವ ಸ್ಥಳಕ್ಕೆ TSPಯನ್ನು ಲೇಪಿಸಿ, 20-30 ನಿಮಿಷಗಳ ಕಾಲ ಬಿಟ್ಟು ನಂತರ ಸ್ವಚ್ಛ ಮಾಡಿ.

6. WD4೦ ಪರಿಣಾಮ

WD4೦ಯು ಒಂದು ಅತ್ಯುತ್ತಮವಾದ ಲೂಬ್ರಿಕೆಂಟ್ ಆಗಿದ್ದು, ಮನೆಯಲ್ಲಿಯೇ ದೊರೆಯುತ್ತದೆ. ಎಣ್ಣೆ ಕಲೆಗಳನ್ನು ತೆಗೆಯಲು ಇದನ್ನು ಕಲೆಗಳಿರುವ ಜಾಗದಲ್ಲಿ ಸ್ಪ್ರೇ ಮಾಡಿ. 30 ನಿಮಿಷ ಬಿಟ್ಟು ನಂತರ ಅದನ್ನು ತೊಳೆಯಿರಿ. ಕಲೆಗಳು ಮಾಯವಾಗಿರುತ್ತದೆ.

7. ಒಂದು ವೇಳೆ ಕಲೆಯು ಹೋಗಲಿಲ್ಲವಾದರೆ

ಒಮ್ಮೊಮ್ಮೆ ಹಠಮಾರಿ ಕಲೆಗಳು ಯಾವ ಪರಿಹಾರಕ್ಕು ಜಗ್ಗದೆ ಕುಳಿತು ಬಿಡುತ್ತವೆ. ಆಗ ಗಡಸಾದ ಅಲ್ಕಾಲೈನ್ ಸೋಪನ್ನು ಕಲೆಗಳ ಮೇಲೆ ಉಜ್ಜಿ. ಇದರಿಂದ ಕಲೆಗಳ ನಿವಾರಣೆಯಾಗುತ್ತದೆ.

English summary

Remove Oil Stains Of Diya From Floor

Diwali literally means a row of lamps and when we light our houses with lamps on this auspicious day, there is every possibility that the oil in the Diya may fall on the floor. Here are tips clean the floor.
X
Desktop Bottom Promotion