For Quick Alerts
ALLOW NOTIFICATIONS  
For Daily Alerts

ಅಡುಗೆ ಕೋಣೆ ಹೊಳೆಯಲು ಇವನ್ನು ಬಳಸಿ

By Hemanth P
|

ಮನೆಯಲ್ಲಿ ಅಡುಗೆ ಕೋಣೆ ತುಂಬಾ ಪ್ರಾಮುಖ್ಯವಾದ ಜಾಗ. ಇದು ನಿಮ್ಮ ದೈನಂದಿನ ಆಹಾರದ ಮೂಲ ಮತ್ತು ಜೀವನ ಇಲ್ಲಿಂದಲೇ ಆರಂಭವಾಗುತ್ತದೆ. ಅಡುಗೆ ಕೋಣೆಯನ್ನು ಸ್ವಚಗೊಳಿಸುವುದು ಮನೆಯ ಕೆಲಸದ ಒಂದು ಭಾಗ ಮತ್ತು ಅಡುಗೆಯ ಒಂದು ಪ್ರಮುಖ ಭಾಗ. ಆರೋಗ್ಯವೇ ಭಾಗ್ಯ ಎಂಬ ನಾಣ್ನುಡಿಯಲ್ಲಿ ತುಂಬಾ ಅರ್ಥವಿದೆ. ಆಹಾರವನ್ನು ಅತ್ಯಂತ ಶುಚಿಯಾದ ಜಾಗದಲ್ಲಿ ತಯಾರಿಸಿದಾಗ ಮಾತ್ರ ಒಳ್ಳೆಯ ಆರೋಗ್ಯ ನಮ್ಮೊಂದಿಗಿರುತ್ತದೆ. ಶುಚಿಯಾದ ಅಡುಗೆ ಮನೆಯಲ್ಲಿ ಅಡುಗೆ ಮಾಡುವುದರಿಂದ ನಿಮ್ಮ ಮತ್ತು ನಿಮ್ಮ ಮನೆಯವರನ್ನು ಆರೋಗ್ಯಕರ ಹಾಗೂ ಸುರಕ್ಷಿತವಾಗಿಡಬಲ್ಲದು. ನಿಮ್ಮ ಅಡುಗೆ ಮನೆ ಯಾವತ್ತೂ ಅಸ್ತವ್ಯಸ್ತವಾಗಿರದಂತೆ ನೋಡಿಕೊಳ್ಳುವುದು ಶುಚಿತ್ವದ ಕೀಲಿಗೈ. ಅಡುಗೆ ಮನೆಯನ್ನು ಆಗಾಗ ಸ್ವಚಗೊಳಿಸುತ್ತಿರಬೇಕು.

ಶುಚಿಯಾದ ಮತ್ತು ಹೊಳೆಯುವ ಅಡುಗೆ ಮನೆಯನ್ನು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಶುಚಿಯಾದ ಅಡುಗೆ ಮನೆ ತುಂಬಾ ಒಳ್ಳೆಯ ರೀತಿ ಕಾಣಿಸುತ್ತದೆ ಮತ್ತು ಅಡುಗೆ ಮಾಡಲು ಹಾಗೂ ಆಹಾರವನ್ನು ಸಂಗ್ರಹಿಸಿಡಲು ಇದನ್ನು ಶುಚಿಯಾಗಿಟ್ಟುಕೊಳ್ಳಬೇಕು. ಅಡುಗೆ ಮನೆ ಹೊಳೆಯುವಂತೆ ಮಾಡಲು ಕೆಲವೊಂದು ಟಿಪ್ಸ್ ಮತ್ತು ತಂತ್ರಗಳನ್ನು ಕಲಿಯುವುದು ತುಂಬಾ ಮುಖ್ಯ. ಅಡುಗೆ ಮನೆಯಲ್ಲಿ ಪ್ರತಿಯೊಂದಕ್ಕೂ ಸ್ಥಳವಿರುವಂತೆ ನೋಡಿಕೊಳ್ಳಬೇಕು. ಎಲ್ಲಾ ಪಾತ್ರೆಗಳನ್ನು ಸೂಕ್ತ ರೀತಿಯಲ್ಲಿ ಜೋಡಿಸಿಡಬೇಕು ಮತ್ತು ಇದನ್ನು ಪ್ರತೀ ಸಲ ಸ್ವಚಗೊಳಿಸಬೇಕು. ಅಡುಗೆ ಮನೆಯಲ್ಲಿ ಎಲ್ಲಿ ಚೆಲ್ಲಾಪಿಲ್ಲಿಯಾಗಿದೆ ಎಂದು ಮೊದಲು ಗುರುತಿಸಿಕೊಂಡು ಅದನ್ನು ಸ್ವಚಗೊಳಿಸಬೇಕು. ಇಲ್ಲಿ ಕೊಟ್ಟಿರುವ ಕೆಲವೊಂದು ಪದಾರ್ಥಗಳನ್ನು ಬಳಸಿಕೊಂಡು ಅಡುಗೆ ಮನೆಯನ್ನು ಶುಚಿಗೊಳಿಸಿ ಅದನ್ನು ಹೊಳೆಯುವಂತೆ ಮಾಡಬಹುದು.

1. ನೈಸರ್ಗಿಕ-ಬಹುಉಪಯೋಗಿ ಕ್ಲೀನರ್

1. ನೈಸರ್ಗಿಕ-ಬಹುಉಪಯೋಗಿ ಕ್ಲೀನರ್

ನೈಸರ್ಗಿಕ ಬಹುಉಪಯೋಗಿ ಕ್ಲೀನರ್ ಅಡುಗೆ ಮನೆಯನ್ನು ಶುಚಿಗೊಳಿಸಲು ಇರುವ ಒಂದು ಅಂಶ ಮತ್ತು ಇದನ್ನು ಕ್ಯಾಬಿನೆಟ್ ಗಳನ್ನು ಶುಚಿಗೊಳಿಸಲು ಬಯಸಬಹುದು. ಅಡುಗೆ ಮನೆಯಲ್ಲಿ ಕ್ಯಾಬಿನೆಟ್ ಗಳು ನಿಮ್ಮ ಕೈಬೆರಳಿನ ಗುರುತು ಇತ್ಯಾದಿಗಳಿಂದ ಬೇಗನೆ ಕೊಳೆಯಾಗುತ್ತದೆ. ಇದನ್ನು ಶುಚಿಗೊಳಿಸುವುದು ತುಂಬಾ ಕಷ್ಟ. ಬಹುಉಪಯೋಗಿ ಕ್ಲೀನರ್ ನಲ್ಲಿ ಮೈಕ್ರೊಫೈಬರ್ ನ್ನು ಅದ್ದಿಟ್ಟರೆ ಅಡುಗೆ ಮನೆ ಹೊಳೆಯುವಂತೆ ಮಾಡಬಹುದು.

2. ಅಲ್ಕೋಹಾಲ್ ನಿಂದ ಮನೆಯಲ್ಲೇ ಮಾಡಲ್ಪಟ್ಟ ಕ್ಲೀನರ್

2. ಅಲ್ಕೋಹಾಲ್ ನಿಂದ ಮನೆಯಲ್ಲೇ ಮಾಡಲ್ಪಟ್ಟ ಕ್ಲೀನರ್

ಗ್ರಾನೈಟ್ ಮತ್ತು ಮಾರ್ಬಲ್ ನಿಮ್ಮ ಅಡುಗೆ ಕೋಣೆಗೆ ಅತ್ಯಾಕರ್ಷಕ ರೂಪವನ್ನು ನೀಡುತ್ತದೆ ಮತ್ತು ಇದು ಯಾವಾಗಲೂ ಹೊಳೆಯುವಂತೆ ಮಾಡಲು ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಮನೆಯಲ್ಲೇ ಆಲ್ಕೋಹಾಲ್ ನಿಂದ ಮಾಡಿದಂತಹ ಕ್ಲೀನರ್ ನಿಂದ ಮಾರ್ಬಲ್ ಗಳನ್ನು ಶುಚಿಗೊಳಿಸಿದರೆ ಅದು ಹೊಳೆಯುತ್ತದೆ. ನಿಂಬೆರಸ ಅಥವಾ ವಿನೇಗರ್ ನ್ನು ಬಳಸಬೇಡಿ. ಇದು ಕಲ್ಲು ಸವೆಯುವಂತೆ ಮಾಡಬಹುದು.

3. ವಿನೇಗರ್

3. ವಿನೇಗರ್

ಅಡುಗೆ ಕೋಣೆ ಶುಚಿಗೊಳಿಸಲು ವಿನೇಗರ್ ಅತ್ಯುತ್ತಮ ಅಂಶ. ಇದು ಅಡುಗೆ ಕೋಣೆಯ ನೆಲವನ್ನು ಶುಚಿಗೊಳಿಸಲು ತುಂಬಾ ಉಪಯೋಗಿ. ವಿನೇಗರ್ ಮತ್ತು ನೀರನ್ನು ಮಿಶ್ರ ಮಾಡಿ ನೆಲವನ್ನು ಸ್ವಚ್ಚಗೊಳಿಸಿ. ಇದರಿಂದ ಅದು ಹೊಳೆಯುತ್ತದೆ. ಬಹುಉಪಯೋಗಿ ಕ್ಲೀನರ್ ನ್ನು ಕೂಡ ಬಳಸಬಹುದು.

4. ಅಡುಗೆ ಸೋಡಾ

4. ಅಡುಗೆ ಸೋಡಾ

ಅಡುಗೆ ಸೋಡಾವು ಅಡುಗೆ ಕೋಣೆ ಶುಚಿಗೊಳಿಸುವ ಪ್ರಮುಖ ಅಂಶ. ಹೈಡ್ರೋಜನ್ ಪೆರೊಕ್ಸೈಡ್ ನೊಂದಿಗೆ ಅಡುಗೆ ಸೋಡಾ ಹಾಕಿ ಮತ್ತು ಇದನ್ನು ನೆಲವನ್ನು ಸ್ವಚ್ಛಗೊಳಿಸಲು ಬಳಸಿ. ಇದನ್ನು ಒರೆಸುವ ಮೊದಲು ಕೆಲವು ನಿಮಿಷ ಹಾಗೆ ಇರಲಿ. ಇದರಿಂದ ನಿಮ್ಮ ಅಡುಗೆ ಮನೆ ಹೊಳೆಯುವಂತೆ ಮಾಡಬಹುದು.

5. ಪಾತ್ರೆ ತೊಳೆಯುವ ಸೋಪು

5. ಪಾತ್ರೆ ತೊಳೆಯುವ ಸೋಪು

ಪಾತ್ರೆಗಳಿಲ್ಲದೆ ಅಡುಗೆ ಮನೆಯುಂಟೇ? ಪಾತ್ರೆ ತೊಳೆಯುವ ಸೋಪು ಅಡುಗೆ ಮನೆ ಶುಚಿತ್ವದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಶುಚಿಯಾಗಿರುವ ಪಾತ್ರೆಗಳಿಂದ ಅಡುಗೆ ಮಾಡಿದರೆ ಅದು ಆರೋಗ್ಯಕರವಾಗಿರುತ್ತದೆ ಮತ್ತು ಪಾತ್ರೆಗಳು ಚೆನ್ನಾಗಿ ತೊಳೆಯುವ ಬಗ್ಗೆ ಗಮನಹರಿಸಬೇಕು. ಪಾತ್ರೆಗಳು ಹೊಳೆಯುವಂತೆ ಆಗಲು ಸೂಕ್ತ ಸೋಪುಗಳನ್ನು ಬಳಸಿ.

6. ನೀರಿನೊಂದಿಗೆ ಅಡುಗೆ ಸೋಡಾ

6. ನೀರಿನೊಂದಿಗೆ ಅಡುಗೆ ಸೋಡಾ

ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ಅದಕ್ಕೆ ನೀರನ್ನು ಸಿಂಪಡಿಸಿ. ಅದು ದಪ್ಪಿಗಿನ ಪೇಸ್ಟ್ ಆಗುತ್ತದೆ. ಓವನ್ ನ ನೆಲದ ಮೇಲೆ ರಾತ್ರಿ ವೇಳೆ ಇದನ್ನು ಹಾಕಿ ಮತ್ತು ಮರುದಿನ ಸ್ವಚ್ಛ ಮಾಡಿ. ಇದು ಓವನ್ ಶುಚಿಗೊಳಿಸುವ ಒಳ್ಳೆಯ ವಿಧಾನ. ಅಡುಗೆ ಸೋಡಾ ಅಡುಗೆ ಮನೆ ಶುಚಿಗೊಳಿಸಲು ಅತ್ಯುತ್ತಮ ಅಂಶವೆಂದು ನಿಮಗನಿಸುವುದಿಲ್ಲವೇ?

8. ಕಾಗದದ ಟವೆಲ್

8. ಕಾಗದದ ಟವೆಲ್

ನೀವು ಅಡುಗೆ ಕೋಣೆಯಲ್ಲಿ ಸ್ಪಂಜ್ ಬಳಸುವ ಬದಲು ಕಾಗದವನ್ನು ಬಳಸಿ. ಸ್ಪಂಜ್ ನಿಂದ ಕ್ರಿಮಿಗಳು ಬೇಗನೆ ಹರಡುತ್ತದೆ. ಇದರಿಂದ ಪೇಪರ್ ಟವೆಲ್ ಬಳಸಿ ಮತ್ತು ಉಪಯೋಗಿಸಿದ ಬಳಿಕ ಅದನ್ನು ಎಸೆಯಿರಿ.

9. ಕ್ಲೀನರ್ ಗಳು

9. ಕ್ಲೀನರ್ ಗಳು

ಅಡುಗೆ ಕೋಣೆಯ ಪ್ರತಿಯೊಂದು ಭಾಗಕ್ಕೂ ಮನೆಯಲ್ಲಿ ಮಾಡಿದಂತಹ ಕ್ಲೀನರ್ ಗಳು ಕೆಲಸ ಮಾಡದು. ಗ್ಲಾಸ್ ನ್ನು ಶುಚಿಗೊಳಿಸಲು ನೀವು ಕೆಲವೊಂದು ಕ್ಲೀನರ್ ಗಳನ್ನು ಮಾರುಕಟ್ಟೆಯಿಂದ ಖರೀದಿಸಬೇಕು. ಇದು ಒಳ್ಳೆಯ ರೀತಿ ಕೆಲಸ ಮಾಡುತ್ತದೆ.

10. ದಾಲ್ಚಿನ್ನಿ ಮತ್ತು ಉಪ್ಪು

10. ದಾಲ್ಚಿನ್ನಿ ಮತ್ತು ಉಪ್ಪು

ನಿಮ್ಮ ಆಹಾರ ಓವನ್ ನಲ್ಲಿ ಸುಟ್ಟು ಹೋಗಿದೆ ಎಂದಾದರೆ ಆಗ ಉಪ್ಪನ್ನು ಬಳಸಿ ಇದನ್ನು ತೊಳೆಯಿರಿ. ಸುಟ್ಟ ವಾಸನೆ ಬರುವುದನ್ನು ತಡೆಯಲು ಉಪ್ಪಿಗೆ ಸ್ವಲ್ಪ ದಾಲ್ಚಿನ್ನಿ ಹಾಕಬೇಕು.

ಮೇಲಿನ ಎಲ್ಲಾ ಟಿಪ್ಸ್ ಗಳನ್ನು ಪಾಲಿಸಿ ಮತ್ತು ಅಡುಗೆ ಕೋಣೆ ಹೊಳೆಯುವಂತೆ ಮಾಡಿ!

English summary

Ingredients To Make Your Kitchen Shine

Kitchen is the most important part of a home. It is here the root for your daily food and survival begins. Cleaning the kitchen is also a part of household work, and an essential part of cooking.
X
Desktop Bottom Promotion