For Quick Alerts
ALLOW NOTIFICATIONS  
For Daily Alerts

ಥಂಡಿಯಿಂದ ಮರದ ಪೀಠೋಪಕರಣ ಕಾಪಾಡಿ

|

ಚಳಿಗಾಲ ಬಂತೆಂದರೆ ಮನೆಯಲ್ಲಿರುವ ಮರದ ಪೀಠೋಪಕರಣಗಳ ಮೇಲೆ ಬೂಜು ಕಟ್ಟಿದಂತೆ ಬಿಳಿ ಬಿಳಿಯಾದ ಮಚ್ಚೆಗಳನ್ನು ನೀವು ನೋಡಿರುತ್ತೀರಿ. ಇದರಿಂದ ನಿಮ್ಮ ಪೀಠಪಕರಣಗಳನ್ನು ಸಂರಕ್ಷಿಸಿಕೊಳ್ಳುವುದಕ್ಕೆ ಇಲ್ಲಿವೆ ಕೆಲವು ಟಿಪ್ಸ್.

ಪರಿಣಿತರ ಪ್ರಕಾರ ಮರದ ಪೀಠೋಪಕರಣಗಳು ಒದ್ದೆಯಾದರೆ ಅಥವ ಥಂಡಿ ಹತ್ತಿದರೆ ಅದನ್ನು ಬಿಸಿಲಿನಲ್ಲಿಟ್ಟು ಚೆನ್ನಾಗಿ ಒಣಗಿಸಬೇಕು. ಒಂದು ವೇಳೆ ಬಿಸಿಲಿಗೆ ಇವುಗಳನ್ನು ಇಡದೆ ಹೋದರೆ ಅವುಗಳ ಮೇಲೆ ಬೂಜು ಕಟ್ಟಲು ಆರಂಭವಾಗುತ್ತದೆ.

Get Rid Of Mold On Damp Furniture

ಇದರಿಂದ ಪಾರಾಗಲು ನೀವು ಈ ಕೆಳಗಿನ ಕೆಲವು ಸರಳ ವಿಧಾನಗಳನ್ನು ಅನುಸರಿಸಿ:
1. ಬಿಸಿಲು ಚೆನ್ನಾಗಿ ಬೀಳುವ ಜಾಗದಲ್ಲಿ ಇವನ್ನು ಜೋಡಿಸಿ.
2. ತೆಂಗಿನ ಪೊರಕೆಯಿಂದ ಬೂಜು ಕಟ್ಟಿದ ಪೀಠೋಪಕರಣಗಳನ್ನು ಚೆನ್ನಾಗಿ ಉಜ್ಜಿ ಅದನ್ನು ಸ್ವಚ್ಛಗೊಳಿಸಿ.
3. ಹೀಗೆ ಉಜ್ಜಿದ ನಂತರ ಕಲೆಗಳು ಉಳಿದಿರುತ್ತವೆ. ವಿನಿಗರ್ ಬಳಸಿ ಬಟ್ಟೆಯಿಂದ ಇದನ್ನು ಒರೆಸಿಬಿಡಿ.
4. ಬಿಸಿಲಿನಲ್ಲಿ ಒಣಗಲು ಇಡಿ. ವಿನಿಗರ್ ವಾಸನೆ ಹೋದ ನಂತರ ಒಣಗಿದ ಬಟ್ಟೆ ಬಳಸಿ ಅದನ್ನು ಮತ್ತೆ ಒರೆಸಿ.
5. ಹತ್ತಿಯನ್ನು ತೆಗೆದುಕೊಂಡು ನಿಂಬೆರಸ ಮತ್ತು ನೀರನ್ನು ಬೆರೆಸಿ ಅದರಲ್ಲಿ ಅದ್ದಿ ಒರೆಸಿ. ನಿಂಬೆ ರಸದಲ್ಲಿನ ಆಮ್ಲ ಮತ್ತೆ ಬೂಜು ಬರದಂತೆ ತಡೆಯುತ್ತದೆ.
6. ಇಷ್ಟನ್ನು ಮಾಡಿ ಮತ್ತೆ ಅರ್ಧ ಗಂಟೆ ಕಾಲ ನಿಮ್ಮ ಪೀಠೋಪಕರಣವನ್ನು ಬಿಸಿಲಿನಲ್ಲಿ ಒಣಗಿಸಿ.
ಈ ವಿಧಾನದಿಂದ ನೀವು ನಿಮ್ಮ ಪೀಠೋಪಕರಣಗಳು ಬೂಜು ಕಟ್ಟಿ ಹಾಳಾಗದಂತೆ ಕಾಪಾಡಿಕೊಳ್ಳಬಹುದು.

English summary

Get Rid Of Mold On Damp Furniture

Mold is one of the main causes for wrecking your good furniture in your homes. During the winter season, one of the most common problems when it comes to wooden furniture is the white molds that forms on the furniture.
Story first published: Thursday, November 28, 2013, 15:34 [IST]
X
Desktop Bottom Promotion