For Quick Alerts
ALLOW NOTIFICATIONS  
For Daily Alerts

ಪುಸ್ತಕಗಳನ್ನು ಸಂರಕ್ಷಿಸುವ ಸುಲಭ ವಿಧಾನ

|
Tips To Prserve Books
ಪುಸ್ತಕ ಸ್ನೇಹಿ ವ್ಯಕ್ತಿಗಳ ಜ್ಞಾನ, ಪುಸ್ತಕವನ್ನು ಹೆಚ್ಚಾಗಿ ಓದದೆ ಇರುವವರಿಗಿಂತ ತುಂಬಾ ಮೇಲ್ಮಟ್ಟದಲ್ಲಿರುತ್ತದೆ. ಪುಸ್ತಕಗಳು ವ್ಯಕ್ತಿಯ ಜ್ಞಾನವನ್ನು ಹೆಚ್ಚುಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲಿ ಕೆಲವರಿಗೆ ಪ್ರಮುಖವಾದ ಪುಸ್ತಕಗಳನ್ನು ಸಂಗ್ರಹಿಸುವ ಅಭ್ಯಾಸವಿರುತ್ತದೆ.

ಆದರೆ ಸಂಗ್ರಹ ಮಾಡಿದ ಪುಸ್ತಕಗಳನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡದಿದ್ದರೆ ಅದು ಹಾಳಾಗಿ ಹೋಗುವುದು. ಕೆಲವುಪುಸ್ತಕಗಳು ಹಾಳಾಗಿ ಹೋದರೆ ಮತ್ತೆ ಅವುಗಳು ಸಿಗುವುದೇ ಇಲ್ಲ. ಆದ್ದರಿಂದ ಪುಸ್ತಕಗಳನ್ನು ಹಾಳಾಗದಂತೆ ಕಾಪಾಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

1. ಬುಕ್ ಬೈಂಡ್ : ಪುಸ್ತಕಗಳನ್ನು ಬೈಂಡ್ ಮಾಡಿಸಿದರೆ ಹಾಳಾಗುವುದಿಲ್ಲ. ಪ್ಲಾಸ್ಟಿಕ್ ಬುಕ್ ಬೈಂಡ್ ಮಾಡಿದರೆ ಅದು ವಾಟರ್ ಫ್ರೂಫ್ ಆಗಿದ್ದು ಪುಸ್ತಕಗಳನ್ನು ಹಾಳಾಗದಂತೆ ತಡೆಯುತ್ತದೆ. ಲೆದರ್ ಬುಕ್ ಬೈಂಡ್ ಮಾಡಿಸಬಹುದಾಗಿದ್ದು ಇಂತಹ ಪುಸ್ತಕಗಳನ್ನ ದೂಳು ಮತ್ತು ಸೂರ್ಯನ ಕಿರಣಗಳು ನೇರವಾಗಿ ಬೀಳದಂತಹ ಜಾಗದಲ್ಲಿ ಇಟ್ಟು ಇವುಗಳನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು.

2. ಪುಸ್ತಕಗಳನ್ನು ಅಲ್ಮೆರಾದಲ್ಲಿ ನೇರವಾಗಿ ಇಡಬೇಕು, ಹೀಗೆ ಇಟ್ಟರೆ ತುಂಬಾ ಕಾಲ ಆ ಪುಸ್ತಕಗಳನ್ನು ಮುಟ್ಟದಿದ್ದರೂ ಪುಸ್ತಕಕ್ಕೆ ಯಾವುದೇ ಹಾನಿಯಾಗುವುದಿಲ್ಲ.

3. ಬುಕ್ ಅಲ್ಮೆರಾವನ್ನು ಮುಚ್ಚಿ ಇಡಬೇಕು, ಪುಸ್ತಕಗಳ ಸಂಗ್ರಹವನ್ನು ಎಲ್ಲರಿಗೆ ಕಾಣಿಸುವಂತೆ ಗ್ಲಾಸ್ ಡೋರ್ ಇರುವ ಅಲ್ಮೆರಾದಲ್ಲಿ ಇಡಬಹುದು. ಡೋರ್ ಇರುವ ಅಲ್ಮೆರಾದಲ್ಲಿ ಇಡುವುದರಿಂದ ಪುಸ್ತಕಗಳಲ್ಲಿ ದೂಳು ಸೇರುವುದಿಲ್ಲ.

4. ಪುಸ್ತಕಗಳನ್ನು ಬಾಕ್ಸ್ ನಲ್ಲಿ ಹಾಕಿ ಸಂಗ್ರಹಿಸಿ ಇಡುವವರು, ಪುಸ್ತಕಗಳನ್ನು ಮುಸ್ಲೀನ್ ಬಟ್ಟೆಯಲ್ಲಿ ಸುತ್ತಿ, ಗಟ್ಟಿಯಾಗಿರುವ ಬಾಕ್ಸ್ ನಲ್ಲಿ ಹಾಕಿ ಇಟ್ಟರೆ ಗೆದ್ದಲು ಹಿಡಿಯುವುದಿಲ್ಲ.

5. ಪುಸ್ತಕಗಳ ಸಂರಕ್ಷಣೆಗೆ ಅಗ್ಯತವಾದ ಗಾಳಿ ಬೇಕು. ಪುಸ್ತಕಗಳನ್ನು ಗಾಳಿ ಸೇರದ ಬಾಕ್ಸ್ ನಲ್ಲಿ ಹಾಕಿ 10 ವರ್ಷಗಳ ಬಳಕ ನೋಡಿದರೆ ಪುಸ್ತಕಗಳು ಹಾಳಾಗಿ ಹೋಗಿರುತ್ತದೆ, ಆದ್ದರಿಂದ ಸಮಯ ಸಿಕ್ಕಿದಾಗ ಅಲ್ಮೆರಾವನ್ನು ಓಪನ್ ಮಾಡಿ, ಪುಸ್ತಕಗಳ ದೂಳು ಕೊಡವಿ ಇಡಬೇಕು.

6. ಪುಸ್ತಕಗಳನ್ನು ಸಂಗ್ರಹಿಸಿ ಇಡುವಾಗ ನುಸಿನುಂಡೆ (ನಾಫ್ತಲೀನ್ ಬಾಲ್ ) ಹಾಕಿ ಇಡಬೇಕು. ಇದರಿಂದ ಪುಸ್ತಕಗಳಿಗೆ ಗೆದ್ದಲು ಹಿಡಿಯುವುದಿಲ್ಲ.

7. ಪುಸ್ತಕಗಳನ್ನು ಸಮಯ ಸಿಕ್ಕಾಗ ದೂಳು ಕೊಡವಿ ಇಡಬೇಕು. ಈ ರೀತಿ ಪುಸ್ತಕಗಳು ಎಷ್ಟು ಕಾಲವಾದರೂ ಹಾಳಾಗುವುದಿಲ್ಲ.

English summary

Tips To Preserve Books | Maintenance Of Book Shelves | ಪುಸ್ತಕಗಳನ್ನು ಸಂರಕ್ಷಣೆಗೆ ಕೆಲ ಸಲಹೆ | ಪುಸ್ತಕ ಅಲ್ಮೆರಾದ ನಿರ್ವಹಣೆ

If collecting old and priceless books is your hobby then you need to learn how to preserve a book as well. If you are not preserve books in a proper way because they can be easily destroyed by mishandling or improper storage. Here are a few tips to help you do it the right way.
Story first published: Monday, December 12, 2011, 13:44 [IST]
X
Desktop Bottom Promotion