For Quick Alerts
ALLOW NOTIFICATIONS  
For Daily Alerts

ನೀರೆಯ ಝರಿ ಸೀರೆ ಸಂರಕ್ಷಿಸುವುದು ಹೀಗೆ

|
Zari Saree Maintenance Tips
ತುಂಬಾ ಬೆಲೆ ಕೊಟ್ಟು ಖರೀದಿಸಿದ ಝರಿ ಸೀರೆ ಹಾಳಾದರೆ ತುಂಬಾ ಬೇಸರವಾಗುತ್ತೆ. ಎಬ್ರಾಯ್ಡರಿ, ಝರಿ ಇನ್ನಿತರ ದುಬಾರಿ ಸೀರೆಗಳು ತುಂಬಾ ಸೂಕ್ಷ್ಮ. ಅದರ ನಿರ್ವಹಣೆಯಲ್ಲಿ ಒಂದಿಷ್ಟು ವ್ಯತ್ಯಾಸವಾದರೂ ಲುಕ್ ಕಳೆದುಕೊಳ್ಳುತ್ತೆ. ಆದ್ದರಿಂದ ಝರಿ ಸೀರೆ ನಿರ್ವಹಣೆ ಹೇಗಿರಬೇಕೆಂಬುದಕ್ಕೆ ಕೆಲ ಸಲಹೆ ಇಲ್ಲಿವೆ.

ಝರಿ ಸೀರೆ ನಿರ್ವಹಣೆ ಹೀಗಿರಲಿ:

1. ಮಣಿ, ಇನ್ನಿತರ ಅಲಂಕಾರಿಕ ಹರಳನ್ನು, ಝರಿಯನ್ನು ಒಳಗೊಂಡ ಸೀರೆಗೆ ತೆಳುವಾದ ನೆಟ್ ಹಾಕಿಸಿದರೆ ಆಭರಣಗಳಿಂದ ಮತ್ತು ಇನ್ನಿತರ ವಸ್ತುಗಳಿಂದ ಝರಿ ಕಿತ್ತು ಬರುವುದು ತಪ್ಪುತ್ತದೆ.

2. ಝರಿ ಸೀರೆಗಳ ಹೊಳಪು ಹಾಗೆಯೇ ಉಳಿಯಬೇಕೆಂದರೆ ತೆಳುವಾದ ಕಾಟನ್ ಲುಂಗಿಯಲ್ಲಿ ಅಥವಾ ಹತ್ತಿ ಬಟ್ಟೆಯಲ್ಲಿ ಸುತ್ತಿಡಬೇಕು.

3. ಒಗೆದ ಮತ್ತು ಒಗೆಯದ ಸೀರೆಗಳನ್ನು ಪ್ರತ್ಯೇಕವಾಗಿಡಿ.

4. ಬಿಚ್ಚಿದ ನಂತರವೇ ಸೀರೆಯನ್ನು ಮಡಚಿಡಬೇಡಿ. ಕೆಲವು ಗಂಟೆ ನೆರಳಲ್ಲಿ ಒಣಗಿ ಹಾಕಿದ ನಂತರ ಹ್ಯಾಂಗರ್ ನಲ್ಲಿ ಹಾಕಿ ಮುಂದಿನ ಬಾರಿ ಉಟ್ಟುಕೊಳ್ಳಬಹುದು. ಇದರಿಂದ ಬೆವರಿನ ವಾಸನೆ ಮತ್ತು ಕಲೆ ಉಳಿಯುವುದು ತಪ್ಪುತ್ತದೆ.

5. ಬಟ್ಟೆಗಳ ನಡುವೆ ನುಸಿನುಂಡೆ ಇಡುವುದನ್ನು ಮರೆಯಬೇಡಿ.

6. ಝರಿ ಸೀರೆ ಮತ್ತು ಇನ್ನಿತರ ಅಲಂಕಾರಿಕ ಸೀರೆಗಳನ್ನು ಸ್ವತಃ ಒಗೆಯದೆ ಡ್ರೈ ವಾಶ್ ಗೆ ನೀಡಿದರೆ ಉತ್ತಮ. ಒಗೆಯಲೇಬೇಕೆಂದ ಪಕ್ಷದಲ್ಲಿ ಗಡುಸಲ್ಲದ ಸೋಪಿನಿಂದ ಒಗೆದು ನೆರಳಿನಲ್ಲಿ ಒಣಗಿಹಾಕಬಹುದು.

7 ಕಾಸ್ಮೆಟಿಕ್ ಅಥವಾ ಆಹಾರ ಕಲೆಗಳಾಗಿದ್ದರೆ ಮೃದುವಾದ ಬ್ರಶ್ ನಿಂದ ಮೊದಲು ಕಲೆಯಾದ ಜಾಗದಲ್ಲಿ ಸೂಕ್ಷ್ಮವಾಗಿ ಉಜ್ಜಿ ಒಣಗಿಸಿಬಿಡಬೇಕು.

8. ಸೀರೆಯ ಬ್ಲೌಸ್ ಗಳನ್ನು ಸೀರೆಯೊಂದಿಗೆ ಮಡಚಿಡಬೇಡಿ. ಅದನ್ನು ಪ್ರತ್ಯೇಕವಾಗಿಟ್ಟು ಆಗಾಗ್ಗೆ ತೆಗೆದು ಒಣಗಿಸುತ್ತಿರಿ.

English summary

Zari Saree Maintenance Tips | Preserve Saree | ಝರಿ ಸೀರೆ ನಿರ್ವಹಣೆ ಹೇಗೆ | ಸೀರೆಗಳ ಸಂರಕ್ಷಣೆ

After buying such expensive heavy work, zari sarees it is hard to see them losing the new look, thus maintenance plays a very important role in keeping these sarees as new as ever. There are many more ideas listed below to preserve and maintain sarees.
Story first published: Monday, October 10, 2011, 15:23 [IST]
X
Desktop Bottom Promotion