For Quick Alerts
ALLOW NOTIFICATIONS  
For Daily Alerts

ಮರದ ಫರ್ನಿಚರ್ ಹೊಳಪು ಕಳೆದುಕೊಳ್ಳದಿರಲು ಹೀಗೆ ಮಾಡಿ

|
Wooden Furnitures Maintainance Tips
ಮರದ ವಸ್ತುಗಳು ಮನೆಗೆ ಅಂದ ನೀಡುತ್ತವೆ. ಮರದ ಸೋಫಾ, ಇನ್ನಿತರ ಫರ್ನಿಚರ್ ಗಳು ಮನೆಯ ಅಲಂಕಾರಕ್ಕೆ ಮೆರುಗು. ಆದರೆ ಅವುಗಳು ಕೊಳೆಯಾದರೆ ನಿರ್ವಹಣೆ ಕಷ್ಟ.

ಮರದ ಫರ್ನಿಚರ್ ಕೊಳೆಯನ್ನು ಹೋಗಲಾಡಿಸುವುದು ಹೇಗೆ?

1. ಮರದ ಪದಾರ್ಥಗಳ ಮೇಲೆ ಧೂಳಿದ್ದರೆ ಸ್ವಲ್ಪ ತೇವವಿರುವ ಬಟ್ಟೆಯಿಂದ ಒರೆಸಿ ನಂತರ ಒಣಗಿದ ಬಟ್ಟೆಯಿಂದ ಶುದ್ಧಗೊಳಿಸಬೇಕು.

2. ಧೂಳು ಅತಿಯಾಗಿ ಕೂತಿದ್ದರೆ ಅದನ್ನು ಕೈನಲ್ಲಿಯೇ ಒರೆಸಬಾರದು. ಇದರಿಂದ ಸ್ಕ್ರಾಚ್ ಮಾರ್ಕ್ ಹಾಗೆಯೇ ಉಳಿದುಕೊಂಡು ಬಿಡುತ್ತವೆ.

3. ಮರಕ್ಕೆ ಹಾಕುವ ಪಾಲಿಷಿಂಗ್ ಎಣ್ಣೆಯಿಂದ ಮರದ ಫರ್ನಿಚರ್ ಗಳನ್ನು ಮಿರುಗುವಂತೆ ಇಟ್ಟುಕೊಳ್ಳಬಹುದು.

4. ಮೃದುವಾಗಿರುವ ಟೂಥ್ ಬ್ರಶ್ ಅಥವಾ ಕಿವಿ ಶುದ್ಧ ಮಾಡುವ ಹತ್ತಿ ಬಡ್ಸ್ ಗಳನ್ನೂ ಫರ್ನಿಚರ್ ಸಂದಿಗಳಲ್ಲಿ ಸೇರಿಕೊಳ್ಳುವ ಧೂಳು ತೆಗೆಯಲು ಬಳಸಬಹುದು.

5. ಮರದ ವಸ್ತುಗಳ ಮೇಲಿನ ಧೂಳು ತೆಗೆಯಲು ಮೃದುವಾದ ಪೇಪರ್ ಟವಲ್ ನಿಂದ ಒರೆಸಬೇಕು.

6. ಕುಶನ್ ಕ್ಲೀನ್ ಮಾಡಲು ವ್ಯಾಕ್ಯೂಮ್ ಕ್ಲೀನರ್ ಬಳಸಿ ಅದರಲ್ಲಿ ಸೇರಿಕೊಂಡಿರುವ ಧೂಳನ್ನು ಹೊರಗೆ ತೆಗೆಯಬಹುದು.

7. ಮರದ ವಸ್ತುಗಳನ್ನು ಶುದ್ಧಗೊಳಿಸುವುದಕ್ಕೆ ನೀರು ಮತ್ತು ಲಿಕ್ವಿಡ್ ಡಿಟರ್ಜೆಂಟ್ ಬಳಸಿದರೆ ಮರವನ್ನು ದುರ್ಬಲಗೊಳಿಸಿ ಹೊಳಪು ಕಳೆದುಕೊಳ್ಳಬಹುದು. ಆದ್ದರಿಂದ ಇವುಗಳನ್ನು ಬಳಸದಿದ್ದರೆ ಉತ್ತಮ.

English summary

Wooden Furnitures | Wooden Furnitures Maintainance Tips | ಮರದ ಫರ್ನಿಚರ್ | ಮರದ ವಸ್ತುಗಳ ನಿರ್ವಹಣೆಗೆ ಟಿಪ್ಸ್

It is extremely difficult to maintain and care wooden furniture as there are many associated problems that take time and look complicated. Take a look to know how to maintain wooden furniture with these simple tips.
Story first published: Saturday, October 8, 2011, 16:21 [IST]
X
Desktop Bottom Promotion