For Quick Alerts
ALLOW NOTIFICATIONS  
For Daily Alerts

ಬಟ್ಟೆ ಮೇಲಿನ ಬೆವರಿನ ಕಲೆ ತೊಲಗಿಸುವುದು ಹೇಗೆ?

|
Sweat Stains Removal Tips
ಬಟ್ಟೆಯ ಮೇಲಿನ ಬೆವರಿನ ಕಲೆಯನ್ನು ಹೋಗಿಸುವುದು ಅಷ್ಟು ಸುಲಭವಲ್ಲ. ಒತ್ತಡ ಹೇರಿ ಉಜ್ಜಿದರೆ ಬಟ್ಟೆಯೇ ಹರಿದುಹೋಗಬಹುದು. ಅಷ್ಟೇ ಅಲ್ಲದೆ ಕಲೆ ಬಟ್ಟೆಯ ಅಂದವನ್ನೇ ಕೆಡಿಸುತ್ತೆ. ಆದ್ದರಿಂದ ಬಟ್ಟೆ ಮೇಲೆ ಬೆವರಿನ ಕಲೆ ಉಳಿಯದಂತೆ ಮಾಡಲು ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಬಹುದು.

ಬೆವರಿನ ಕಲೆಯನ್ನು ಸುಲಭವಾಗಿ ಹೋಗಲಾಡಿಸುವ ಕೆಲವು ಟಿಪ್ಸ್:

1. ಬಟ್ಟೆಯನ್ನು 10 ನಿಮಿಷ ನಿಂಬೆರಸ ಬೆರೆಸಿದ ನೀರಿನಲ್ಲಿ ಅಥವಾ ಸೊಡಾ ಬೆರೆಸಿದ ನೀರಿನಲ್ಲಿ ನೆನೆಸಬೇಕು. ಇದು ಬೆವರಿನ ಕಲೆಯನ್ನು ಹೋಗಲಾಡಿಸಿ ಬಟ್ಟೆಗೆ ತಾಜಾ ಗಂಧ ನೀಡುತ್ತದೆ.

2. ಬೆವರಿನ ಕಲೆ ಹೋಗಲಾಡಿಸಲು ಬ್ರಶ್ ಉಪಯೋಗಿಸುವುದಕ್ಕಿಂತ ಕೈಯ್ಯಲ್ಲೇ ಒಗೆದರೆ ಉತ್ತಮ. ಇದು ಬಟ್ಟೆಯನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ.

3. ಬಟ್ಟೆ ಒಗೆದ ನಂತರ ಬಟ್ಟೆಗೆ ಇರುವ ಕಂಡೀಶನರ್ ಬಳಸಿದರೆ ಬಟ್ಟೆಗಳು ತಾಜಾ ಮತ್ತು ಸುಗಂಧಭರಿತವಾಗಿರುತ್ತದೆ.

4. ಗಾಢ ಬಣ್ಣದ ಬಟ್ಟೆಗಳು ಒಗೆಯುತ್ತಾ ಒಗೆಯುತ್ತಾ ಬಣ್ಣ ಮಾಸುತ್ತದೆ. ಆದ್ದರಿಂದ ಇಂತಹ ಬಟ್ಟೆಗಳನ್ನು ಉಪ್ಪು ಬೆರೆಸಿದ ನೀರಿನಲ್ಲಿ ನೆನೆಸಿ ಒಗೆದರೆ ಬಹುಕಾಲ ಬಣ್ಣ ಮಾಸದಿರುವಂತೆ ನೋಡಿಕೊಳ್ಳುತ್ತದೆ.

5. ತುಂಬಾ ಬೆಲೆ ಬಾಳುವ ಸಿಲ್ಕ್ ಮತ್ತು ಹತ್ತಿ ಬಟ್ಟೆಗಳನ್ನು ಡ್ರೈ ವಾಶ್ ಗೆ ನೀಡುವುದೇ ಉತ್ತಮ.

6. ಬೆವರಿನ ಕಲೆ ಆಗುವುದಕ್ಕೆ ಮುನ್ನವೇ ಅದನ್ನು ತಡೆಯುವ ಹಲವು ಮಾರ್ಗಗಳಿವೆ. ಬೆವರಾಗದಿರಲೆಂದು ಲಭ್ಯವಿರುವ ಪ್ಯಾಡ್ ಗಳನ್ನು ತೊಟ್ಟುಕೊಂಡರೆ, ಬೆವರು ಬಟ್ಟೆಗೆ ತಾಕುವುದಿಲ್ಲ.

English summary

Maintaining Clothes | Sweat Stains Removal Tips | ಬಟ್ಟೆ ನಿರ್ವಹಣೆ ಹೇಗೆ | ಬಟ್ಟೆಯಿಂದ ಬೆವರಿನ ಕಲೆ ಹೋಗಿಸುವ ಟಿಪ್ಸ್

Sweat stains on your clothes look awful. Removing sweat stains on clothes is not easy as over washing and brushing may spoil the crispness and color of the clothes. Well, they will no longer taunt you if you know how to maintain clothes and remove sweat stains. Take a look.
Story first published: Tuesday, October 4, 2011, 15:09 [IST]
X
Desktop Bottom Promotion