For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಸೊಳ್ಳೆ ಕಾಟ : ಪಾರಾಗಲು ಸರಳ ಸೂತ್ರ

|
mosquito
ಈ ಮಳೆಗಾಲ ಬಂತೆಂದರೆ ಹಾಗೆ, ಮನೆ ಮುಂದೆ ಹಿಂದೆ ಎಲ್ಲ ನೀರು ತುಂಬಿಕೊಂಡು ಏನೋ ಕೊಳಕು ವಾತಾವರಣ, ಅದು ಸಾಲದು ಅಂತ ಈ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ಬೇರೆ ಹೆಚ್ಚು. ಮನೆಯಲ್ಲಿ ನೆಮ್ಮದಿಯಾಗಿ ಕೂರಲಿಕ್ಕೂ ಆಗದಷ್ಟು ಸೊಳ್ಳೆ ಕಾಟ. ಮಲಗಿದರೂ, ಎದ್ದರೂ, ಕೂತರೂ ಸೊಳ್ಳೆಗಳ ಗಾನ ಹುಚ್ಚು ಹಿಡಿಸುತ್ತೆ. ಹೊಡೆದು ಹೊಡೆದು ಸಾಕಾಗಿ ಕೈ ಚೆಲ್ಲಿ ಕುಳಿತುಕೊಳ್ಳುವಷ್ಟು ಬೇಜಾರಾಗಿ ಹೋಗುತ್ತೆ.

ಆದರೂ ಅದನ್ನು ನಿರ್ಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ, ಮಲೇರಿಯಾ, ಎಚ್ 1 ಎನ್ 1, ಡೆಂಗ್ಯೂ, ಚಿಕನ್ ಗುನ್ಯಾ ಮುಂತಾದ ಜಲಸಂಬಂಧಿ ರೋಗಗಳು ಹೆಚ್ಚಾಗಿ ಹರಡೋದು ಈ ಸೊಳ್ಳೆಗಳಿಂದಲೇ. ಒಮ್ಮೆ ಈ ರೋಗ ಬಂತೆಂದರೆ ರೋಗಿ ತಿಂಗಳುಗಟ್ಟಲೆ ಹಾಸಿಗೆ ಹಿಡಿಯೋದು ಗ್ಯಾರಂಟಿ. ಆದ್ದರಿಂದ ಈ ಸೊಳ್ಳೆಗಳಿಂದ ದೂರವಿದ್ದಷ್ಟು ನಮಗೇ ಒಳಿತು.

ಈ ಸಮಯದಲ್ಲಿ ಸೊಳ್ಳೆಗಳನ್ನು ನಿಯಂತ್ರಣ ಮಾಡುವುದು ಹೇಗೆ ಎಂದು ತಿಳಿದುಕೊಂಡರೆ ಸೊಳ್ಳೆ ಕಾಟದಿಂದ ಮುಕ್ತಿ ಹೊಂದಬಹುದು.

* ಮನೆಯ ಹೊರಗೆ ಮತ್ತು ಒಳಗೆ ನೀರು ತುಂಬಿರದಂತೆ ನೋಡಿಕೊಳ್ಳಿ. ನೀರು ತುಂಬಿದ್ದ ಡ್ರಮ್, ಬಕೆಟ್, ಪಾತ್ರೆ, ಮತ್ತು ಗಿಡದ ಪಾಟುಗಳನ್ನು ಆದಷ್ಟು ಸ್ವಲ್ಪ ಒಣಗಿದಂತಿರುವಂತೆ ನೋಡಿಕೊಳ್ಳಿ, ಇದರಿಂದ ಸೊಳ್ಳೆಗಳು ಬಂದು ಕೂರುವುದನ್ನು ತಡೆಯಬಹುದು. ಪಾಟ್ ಗಳಿಗೆ ಸೊಳ್ಳೆ ನಾಶಕಗಳನ್ನು ಸಿಂಪಡಿಸಿ.

* ಮನೆ ವಾತಾವರಣ ಶುದ್ಧವಾಗಿರಲಿ. ಕಸ ಕಡ್ಡಿ, ಪೇಪರ್ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳಿಂದ ಮುಕ್ತವಾಗಿದ್ದಷ್ಟು ಸೊಳ್ಳೆಗೆ ಆಯಸ್ಸು ಕಡಿಮೆ. ಮಳೆ ನೀರು ಸುಲಭವಾಗಿ ಹೊರಗಿನ ಚರಂಡಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಆದಷ್ಟು ಆ ಜಾಗ ತಗ್ಗಾಗಿದ್ದು, ನೀರು ಸರಾಗವಾಗಿ ಹರಿದು ಹೋಗಲಿ.

* ಸೊಳ್ಳೆ ಪರದೆ ಮತ್ತು ಕಿಟಕಿಗಳಿಂದ ಸೊಳ್ಳೆಗಳು ನುಗ್ಗದಂತೆ ಜಾಲರಿ ಹಾಕಿಸಿದರೆ ಉತ್ತಮ.

* ಸೊಳ್ಳೆ ಬತ್ತಿ, ಸೊಳ್ಳೆ ಅಥವಾ ಕ್ರಿಮಿ ನಾಶಕ, ಬೇವಿನ ಹೊಗೆ ಮುಂತಾದ ಸೊಳ್ಳೆ ನಿರೋಧಕಗಳನ್ನು ಉಪಯೋಗಿಸಿದರೆ ಒಳ್ಳೆಯದು.

* ಒಳಗಿನ ನೀರಿರುವ ವಸ್ತುಗಳು ಮತ್ತು ಹೊರಗೆ ಸ್ವಿಮ್ಮಿಂಗ್ ಪೂಲ್ ಇದ್ದರೆ ಅದು ಶುದ್ಧವಾಗಿರುವಂತೆ ಎಚ್ಚರವಹಿಸಿ. ಆಗಾಗ್ಗೆ ಅದರ ನೀರನ್ನು ಬದಲಾಯಿಸುವುದನ್ನು ಮರೆಯಬೇಡಿ.

* ಪುಟ್ಟ ಮಕ್ಕಳಿಗೆ ಇದರ ಅಗತ್ಯ ತುಂಬಾ ಇದೆ. ಮಕ್ಕಳಿಗೆ ಸೊಳ್ಳೆ ನಿರೋಧಕ ಲೋಶನ್ ಹಚ್ಚಬಹುದು.

ಈ ಮೇಲಿನ ಅಂಶಗಳನ್ನು ಪಾಲಸಿದರೆ ಖಂಡಿತ ಸ್ವಲ್ಪ ಮಟ್ಟಿಗಾದರೂ ಸೊಳ್ಳೆಗಳು ನಿಯಂತ್ರಣಕ್ಕೆ ಬರುತ್ತವೆ.

English summary

Mosquito and diseases | Mosquito controll methods | H1N1 influenza, Maleria, Chikungunya | ಸೊಳ್ಳೆ ಮತ್ತು ರೋಗಗಳು | ಸೊಳ್ಳೆ ನಿಯಂತ್ರಣ ಕ್ರಮ | ಎಚ್1ಎನ್1, ಮಲೇರಿಯಾ, ಚಿಕನ್ ಗುನ್ಯಾ

The biggest problem in many homes is mosquitoes. They are the most common insect species in the world and have caused many diseases. In this monsoon season, by controlling mosquitoes, we can controll many diseases like maleria, dengue, h1n1 and chicken gunya. let's take a look the ways to Control mosquitoes at home and yard
Story first published: Wednesday, August 17, 2011, 14:30 [IST]
X
Desktop Bottom Promotion