For Quick Alerts
ALLOW NOTIFICATIONS  
For Daily Alerts

ಫ್ಲ್ಯಾಟ್‌ ಟಿವಿ ಸ್ವಚ್ಛ ಹೀಗೆ ಮಾಡದಿದ್ದರೆ ಹಾಳಾಗುವುದು

|

ಇಂದು ವಿಶ್ವ ಟಿವಿ ದಿನ. ಈ ದಿನ ಮನೆಯಲ್ಲಿ ಪ್ರಮುಖ ಮನರಂಜನೆ ಸಾಧನವಾಗಿರುವ ಟಿವಿ ಹಾಳಾಗದಂತೆ ಸ್ವಚ್ಛ ಮಾಡುವುದು ಹೇಗೆ ಎಂದು ಈ ಲೇಖನದಲ್ಲಿ ನೀಡಲಾಗಿದೆ.

ಮನೆಗೆ ಯಾರೇ ಬರಲಿ ಒಂದು ಕ್ಷಣ ಹಾಲ್‌ನಲ್ಲಿರುವ ಟಿವಿ ಪರದೆ ಮೇಲೆ ಕಣ್ಣಾಡಿಸುತ್ತಾರೆ. ಟಿವಿ ಪರದೆ ಮೇಲೆ ದೂಳು ಕೂತರೆ, ಅದರ ಮೇಲೆ ಕೈಯ ಅಚ್ಚು ಕಂಡು ಬಂದರೆ, ನೀವು ಮನೆಯನ್ನು ಸ್ವಚ್ಛವಾಗಿಟ್ಟರೂ, ಟಿವಿ ಇಷ್ಟು ದೂಳು ಹಿಡಿದಿದೆ, ಇನ್ನು ಮನೆ ಎಷ್ಟು ಸ್ವಚ್ಛವಾಗಿ ಇಟ್ಟಿರಬಹುದು ಎಂದು ಭಾವಿಸಬಹುದು. ಇನ್ನು ನಾವು ಟಿವಿ ನೋಡುವಾಗಲೂ ಅದರ ಪರದೆ ಸ್ವಚ್ಛವಾಗಿದ್ದರೆ ಅದರಲ್ಲಿ ಮೂಡುವ ದೃಶ್ಯಗಳು ಮತ್ತಷ್ಟು ಆಕರ್ಷಕವಾಗಿ ಕಾಣುವುದು.

smart tips to clean your flat tv

ಈಗೆಲ್ಲಾ ಬಹುತೇಕ ಮನೆಗಳಲ್ಲಿ ಕಂಡು ಬರುವುದು ಫ್ಲ್ಯಾಟ್‌ ಟಿವಿ, ಈ ಟಿವಿಯನ್ನು ಮೊದಲಿದ್ದ ಡೂಮ್‌ ಟಿವಿ ಕ್ಲೀನ್‌ ಮಾಡುವಂತೆ ಸ್ವಲ್ಪ ನೀರು ಹಾಕಿ ತೊಳೆದರೆ ಟಿವಿ ಪರದೆ ಬೇಗನೆ ಹಾಳಾಗಬಹುದು. ಇನ್ನು ಟಿವಿ ಕ್ಲೀನ್‌ಗೆ ಅಂತ ಅನೇಕ ವಸ್ತುಗಳು ಸಿಗುತ್ತವೆ. ಅವುಗಳಿಗೆ ದುಡ್ಡು ಹಾಕುವ ಹೆಚ್ಚಿನ ಹಣ ಖರ್ಚಿ ಇಲ್ಲದೆ ಫ್ಲ್ಯಾಟ್ ಟಿವಿಯನ್ನು ಸ್ವಚ್ಛ ಮಾಡುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ.

ಫ್ಲ್ಯಾಟ್‌ ಪ್ಲಾಸ್ಮಾ, ಎಲ್‌ಇಡಿ, ಎಲ್ಚಿಡಿ ಹಾಗೂ ಓಎಲ್ಇಡಿ ಟಿವಿ ಸ್ವಚ್ಛತೆ

* ಈ ಟಿವಿಗಳ ಪರದೆಗಳನ್ನು ಹಳೆ ಟಿವಿಗಳನ್ನು ಸ್ವಚ್ಛ ಮಾಡಿದಂತೆ ಒದ್ದೆ ಬಟ್ಟೆಯಿಂದ ಒರೆಸಿದರೆ ಅದರ ಪರದೆ ಮೇಲೆ ಗೀಟುಗಳು ಬಿದ್ದು ಟಿವಿ ಹಾಳಾಗಬಹುದು. ಅದರ ಬದಲಿಗೆ ಟಿವಿ ಸ್ಕ್ರೀನ್ ಸ್ವಚ್ಛ ಮಾಡಲು ಮೃದುವಾದ ಒಣ ಬಟ್ಟೆ ಬಳಸಿ, ಇನ್ನು ಪರದೆ ಮೇಲೆ ಕಲೆ ಇದ್ದರೆ ಅದನ್ನು ತೆಗೆಯಲು ಎಲೆಕ್ಟ್ರಾನಿಕ್ಸ್ ವಸ್ತುಗಳಿಗಾಗಿಯೇ ಇರುವ ಪ್ರೀ-ಮಾಯಿಶ್ಚೈಂಡ್ ವೈಪ್‌ ಬಳಸಿ ಸ್ವಚ್ಛ ಮಾಡಿ. ಮೈಕ್ರೋಫೈಬರ್ ಬಟ್ಟೆ ಬಳಸಿ ಅಂದರೆ ಎಲೆಕ್ಟ್ರಾನಿಕ್ಸ್ ವಸ್ತು ಒರೆಸುವ ಮೃದುವಾದ ಬಟ್ಟೆ ಧರಿಸಿ ಅದರ ಬಟನ್, ಟಿವಿಯ ಹಿಂಭಾಗ ಒರೆಸಿ.

* ಟಿವಿಯನ್ನು ಒರೆಸುವ ಮುನ್ನ ಅದರ ವಿದ್ಯುತ್‌ ಕಲೆಕ್ಷನ್ ತೆಗೆಯಿರಿ, ನಂತರ ಮೃದುವಾದ ಬಟ್ಟೆಯಿಂದ ಮೆಲ್ಲನೆ ಒರೆಸಿ, ಪರದೆ ಮೇಲೆ ನೀರು ಸ್ಪ್ರೇ ಮಾಡಬೇಡಿ. ಇನ್ನು ಮದ್ಯ, ಥಿನ್ನರ್, ಬೆಂಜೈನ್ ಇವುಗಳನ್ನು ಬಲಸಿ ಉಜ್ಜಬೇಡಿ.

* ಟಿವಿ ಮುಂಭಾಗವನ್ನು ಒರೆಸುವಾಗ ಜಾಗ್ರತೆವಹಿಸಬೇಕು. ಟಿವಿಯನ್ನು ಒರೆಸಿದ ಬಳಿಕ ಅದರ ಮೇಲೆ ಸ್ವಲ್ಪ ದೂಳು ಕಂಡು ಬಂದರೆ ಅದನ್ನು ಒರೆಸಿದಾಗ ಹೋಗದಿದ್ದರೆ ಸ್ವಲ್ಪ ಸೋಪು ನೀರಿನಲ್ಲಿ ಟವಲ್‌ ಅನ್ನು ಅದ್ದಿ, ಚೆನ್ನಾಗಿ ಹಿಂಡಿ ಮೆಲ್ಲನೆ ಒರೆಸಬೇಕು, ಆದರೆ ಹೀಗೆ ಸ್ವಚ್ಛಮಾಡುವಾಗ ಪರದೆ ಮೇಲೆ ಒರೆಸಬೇಡಿ, ಪರದೆ ಮೇಲೆ ಒರೆಸಿದೆ ಟಿವಿಯ ಕ್ವಾಲಿಟಿ ಹಾಳಾಗುವುದು.

ಟಿವಿ ರಿಮೋಟ್‌ ಸ್ವಚ್ಛ ಮಾಡಲು ಟಿಪ್ಸ್‌

ಮೊದಲಿಗೆ ಬ್ಯಾಟರಿಯನ್ನು ಬಿಚ್ಚಿ, ಅದರ ಮೇಲಿರುವ ಕವರ್‌ ಅನ್ನು ತೆಗೆಯಿರಿ, ನಂತರ ಅದನ್ನು ಉಲ್ಟಾ ಹಿಡಿದು ಮೆಲ್ಲಗೆ ಟೇಬಲ್ ಮೇಲೆ ಬಡೆಯಿರಿ, ನಂತರ ಮೃದುವಾದ ಬಟ್ಟೆಯಿಂದ ಒರೆಸಿ, ರಿಮೋಟ್‌ನ ಎರಡೂ ಬದಿ ಸ್ವಚ್ಛ ಮಾಡಿ. ಹೀಗೆ ಸ್ವಚ್ಛ ಮಾಡುವಾಗ ಟಿವಿಯ ಬಟನ್‌ಗಳು ಹಾಳಾಗದಿರುವಂತೆ ಎಚ್ಚರವಹಿಸಿ, ಅದರೊಳಗೆ ಸೇರಿಕೊಂಡಿರುವ ಕೊಳೆ ತೆಗೆಯಲು ಮೃದು ಬಟ್ಟೆಗೆ ಟೂತ್‌ ಪಿಕ್‌ ಹಾಕಿ ಬಳಸಿ. ಏರ್‌ ಡ್ರೈಯಿದ್ದರೆ ರಿಮೋಟ್‌ ಕಂಟ್ರೋಲ್ ಅನ್ನು ಸ್ವಲ್ಪ ಹೊತ್ತು ಏರ್‌ಡ್ರೈ ಮುಂದೆ ಹಿಡಿದು, ನಂತರ ಬ್ಯಾಟರಿ ಹಾಕಿ,ಕವರ್‌ ಒರೆಸಿ ಹಾಕಿ.

ಟಿವಿ ಸ್ಪೀಕರ್ ಸ್ವಚ್ಛತೆ

ನಿಮ್ಮ ಸ್ಪೀಕರ್‌ ಮೇಲಿರುವ ಕವರ್‌ ತೆಗೆಯಲು ಸಾಧ್ಯವಾದರೆ(ಅದನ್ನು ತಿಳಿಯಲು ಮ್ಯಾನ್ಯುಯಲ್ ಚೆಕ್ ಮಾಡಿ) ಅದನ್ನು ತೆಗೆದು ವ್ಯಾಕ್ಯೂಮ್ ಮಾಡಿದರೆ ದೂಳು ಹೋಗುತ್ತದೆ. ಅದರ ಕವರ್‌ ತೆಗೆಯಲು ಸಾಧ್ಯವಾಗದಿದ್ದರೆ ಒಣ ಬಟ್ಟೆಯಿಂದ ಒರೆಸಿ ಸ್ವಚ್ಚ ಮಾಡಿ.

ಟಿವಿಯನ್ನು ತಿಂಗಳಿಗೊಮ್ಮೆ ಕ್ಲೀನ್ ಮಾಡುವುದಕ್ಕಿಂತ ವಾರದಲ್ಲೊಮ್ಮೆ ಸ್ವಚ್ಛ ಮಾಡಿದರೆ ಬೇಗನೆ ಸ್ವಚ್ಛ ಮಾಡಬಹುದು, ಕೆಲಸವೂ ಕಡಿಮೆಯಾಗುವುದು.

English summary

Ways To clean Flat TV Screen

Cleaning a TV screen seems easy.But Most modern flat tv have special coatings on their surface that can be ruined by your traditional cleaning method. Here are useful tips to clean TV, have a look.
Story first published: Thursday, November 21, 2019, 15:24 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more