For Quick Alerts
ALLOW NOTIFICATIONS  
For Daily Alerts

ದಾಂಪತ್ಯದಲ್ಲಿ ಪ್ರೀತಿ ಹೆಚ್ಚಲು ಮನೆಯ ವಾಸ್ತು ಹೀಗಿರಲಿ

|

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಪ್ರಣಯ, ಸಂಬಂಧ ಹಾಗೂ ಕರ್ತವ್ಯಗಳ ನಿಭಾಯಿಸುವ ಕೆಲಸವನ್ನು ಒಳಗೊಂಡಿರುತ್ತದೆ. ಅವು ಸುಗಮವಾಗಿ ದೀರ್ಘ ಕಾಲ ಮುಂದುವರಿಯಲು ಧಾರ್ಮಿಕವಾದ ಹಾಗೂ ದೈವ ಶಕ್ತಿಯ ಆಶೀರ್ವಾದ ಅತ್ಯಗತ್ಯವಾಗಿರುತ್ತದೆ. ಹೆಣ್ಣು ಕಾಲಿಟ್ಟ ಮನೆಯ ವಾಸ್ತು ಸರಿಯಾಗಿಲ್ಲ ಎಂದಾದರೆ ಅದು ವಿವಾಹಿತರ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ವಾಸ್ತು ಶಾಸ್ತ್ರ ಎನ್ನುವುದು ನಮ್ಮ ವೈಯಕ್ತಿಕ ಜೀವನ ಹಾಗೂ ಸುತ್ತಮುತ್ತಲಿನ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುವಂತೆ ಮಾಡುವುದು. ಉತ್ತಮ ವಾಸ್ತು ಸ್ಥಿತಿಯು ಮನೆಯನ್ನು ಹಾಗೂ ಅಲ್ಲಿ ವಾಸವಿರುವ ನವ ವಿವಾಹಿತರ ಜೀವನವನ್ನು ಸಂತೋಷದಿಂದ ಇಡುವುದು. ಅದೇ ವಾಸ್ತು ದೋಷಗಳು ಇದ್ದರೆ ವಿವಾಹಿತರ ಜೀವನದಲ್ಲಿ ಹೊಂದಾಣಿಕೆ ಹಾಗೂ ಪ್ರೀತಿ-ವಾತ್ಸಲ್ಯದ ಕೊರತೆ ಉಂಟಾಗುವುದು ಎಂದು ಹೇಳಲಾಗುತ್ತದೆ.

Vastu Tips To Improve Your Love Life

ಯಾವೆಲ್ಲಾ ವಾಸ್ತು ದೋಷ ಪ್ರೀತಿಯ ಜೀವನಕ್ಕೆ ಧಕ್ಕೆಯಾಗುತ್ತದೆ, ದಾಂಪತ್ಯದಲ್ಲಿ ಪ್ರೀತಿ ಇರಬೇಕಾದರೆ ಮನೆಯ ವಾಸ್ತು ಹೇಗಿರಬೇಕು ಮುಂದೆ ಓದಿ.

ಆಗ್ನೇಯ ದಿಕ್ಕಿನಲ್ಲಿ ಮನೆ

ಆಗ್ನೇಯ ದಿಕ್ಕಿನಲ್ಲಿ ಮನೆ

ಮೊದಲು ಮನೆಯು ಯಾವ ದಿಕ್ಕಿನಲ್ಲಿ ಇದೆ ಹಾಗೂ ಯಾವ ದಿಕ್ಕಿನ ಬಾಗಿಲನ್ನು ಹೊಂದಿದೆ ಎನ್ನುವುದು ಅತ್ಯಂತ ಪ್ರಮುಖವಾದ ಸಂಗತಿಯಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಇರುವ ಮನೆಯು ಉತ್ತಮ ಶಕ್ತಿಗಳನ್ನು ವಿಭಜಿಸುತ್ತದೆ. ಟಿ ಆಕಾರದಲ್ಲಿ ಇರುವ ಮನೆಯಲ್ಲಿ ಯಾವುದೇ ರಚನಾತ್ಮಕ ಬದಲಾವಣೆ ಮಾಡಲು ಆಗುವುದಿಲ್ಲ. ಅಲ್ಲಿ ವಾಸವಿರುವ ವ್ಯಕ್ತಿಗಳು ಅಥವಾ ದಂಪತಿಗಳ ನಡುವೆ ಸಾಕಷ್ಟು ಬೇಸರ ಹಾಗೂ ಹೊಂದಾಣಿಕೆಯ ಸಮಸ್ಯೆ ಉಂಟಾಗಬಹುದು. ಎಸ್ ಮತ್ತು ಟಿಯನ್ನು ಸೃಷ್ಟಿಸುವಂತಹ ಜಕ್ಷನ್ ಅಥವಾ ಸ್ಥಳದಲ್ಲಿ ಕನ್ನಡಿಯನ್ನು ನೇತಾಕಿದರೆ ಸಮಸ್ಯೆಗಳನ್ನು ಮತ್ತು ದೋಷಗಳನ್ನು ಸ್ವಲ್ಪ ಮಟ್ಟಿಗೆ ತಟಸ್ಥಗೊಳಿಸಬಹುದು.

ನೈರುತ್ಯ ದಿಕ್ಕಿನಲ್ಲಿ ಮಲಗುವ ಕೋಣೆ

ನೈರುತ್ಯ ದಿಕ್ಕಿನಲ್ಲಿ ಮಲಗುವ ಕೋಣೆ

ನವ ದಂಪತಿಗಳು ಅಥವಾ ಮನೆಯ ಯಜಮಾನ ಮತ್ತು ಯಜಮಾನಿಯ ಕೋಣೆಗಳು ನೈರುತ್ಯ ದಿಕ್ಕಿನಲ್ಲಿ ಇರಬೇಕು. ಕೋಣೆಯ ಒಳಗೆ ನೀಲಿ ಬಣ್ಣದ ದೀಪಗಳನ್ನು ಹೊಂದಿರುವ ಲ್ಯಾಂಪ್ ಶೇಡ್ ಗಳನ್ನು ಇರಿಸಬೇಕು ಎಂದು ವಾಸ್ತುಶಾಸ್ತ್ರ ಸೂಚಿಸುವುದು. ಗುಲಾಬಿ ಅಥವಾ ತಿಳಿ ಬಣ್ಣದ ಹಾಳೆಗಳನ್ನು ಹೂವಿನ ಆಕಾರದಲ್ಲಿ ಕತ್ತರಿಸಿ ಹರಡಿಟ್ಟರೆ ನವ ವಿವಾಹಿತರಿಗೆ ಶುಭ ಉಂಟಾಗುವುದು. ಜೀವನದಲ್ಲಿ ಉತ್ತಮ ಸಂತೋಷ ಹಾಗೂ ಪರಸ್ಪರ ಹೊಂದಾಣಿಕೆಯನ್ನು ಕಂಡುಕೊಳ್ಳುವರು.

ಹಾಸಿಗೆಗೆ ಎದುರಾಗಿ ಕನ್ನಡಿ ಇಡಬಾರದು

ಹಾಸಿಗೆಗೆ ಎದುರಾಗಿ ಕನ್ನಡಿ ಇಡಬಾರದು

ದಂಪತಿಗಳ ಕೋಣೆಯಲ್ಲಿ ಮಲಗಿದಾಗ ಕಾಲು ಬರುವ ದಿಕ್ಕಿನಲ್ಲಿ ಅಥವಾ ಎದ್ದಾಗ ನೇರವಾಗಿ ಮುಖ ಕಾಣುವಂತೆ ಕನ್ನಡಿಯನ್ನು ಇಡಬಾರದು. ಅದು ದಾಂಪತ್ಯ ಜೀವನಕ್ಕೆ ಹಾನಿಕಾರಕ ಎನ್ನಲಾಗುತ್ತದೆ. ಹಾಗಾಗಿ ಅಂತಹ ಕನ್ನಡಿಗಳನ್ನು ತೆಗೆದು ಹಾಕುವುದು ಅಥವಾ ಬೇರೆ ಸ್ಥಳದಲ್ಲಿ ಜೋಡಿಸುವುದು ಉತ್ತಮ. ಎದ್ದಾಗ ದೇವರ ಚಿತ್ರ ಇರುವಂತೆ ಕೋಣೆಯನ್ನು ಸಜ್ಜು ಗೊಳಿಸುವುದನ್ನು ವಾಸ್ತು ಶಾಸ್ತ್ರ ಸೂಚಿಸುವುದು.

ಪಶ್ಚಿಮದಲ್ಲಿ ನೆಲಮಾಳಿಗೆ

ಪಶ್ಚಿಮದಲ್ಲಿ ನೆಲಮಾಳಿಗೆ

ಮನೆಯ ವಾಸ್ತು ಪ್ರಕಾರ ಪಶ್ಚಿಮ ಭಾಗದಲ್ಲಿ ನೆಲ ಮಾಳಿಗೆಯನ್ನು ಹೊಂದಿರಬಾರದು. ಅದು ಸಂಗಾತಿಗಳ ನಡುವೆ ನಕರಾತ್ಮಕ ವರ್ತನೆಯನ್ನು ಪ್ರಚೋದಿಸುತ್ತದೆ. ಖಿನ್ನತೆಯ ಮನೋಭಾವ ಉಂಟಾಗುವಂತೆ ಮಾಡುವುದು. ಹಾಗೊಮ್ಮೆ ನೆಲ ಮಾಳಿಗೆಯನ್ನು ಹೊಂದಿದ್ದರೆ ಅದನ್ನು ಭರ್ತಿಮಾಡುವುದು ಸೂಕ್ತ. ಮನೆಯಲ್ಲಿ ಹಿತ್ತಾಳೆಯ ಗಂಟೆಗಳನ್ನು ತೂಗಾಕಿದ್ದರೆ ಅದನ್ನು ತೆಗೆಯಿರಿ ಅಥವಾ ಸ್ಥಗಿತ ಗೊಳಿಸಿ. ಅದರ ಕಂಪನವು ನಕಾರಾತ್ಮಕ ಶಕ್ತಿಯನ್ನು ಪ್ರೇರೇಪಿಸುವುದು.

ನೈರುತ್ಯ ಮೂಲೆಯಲ್ಲಿ ಹೂವು

ನೈರುತ್ಯ ಮೂಲೆಯಲ್ಲಿ ಹೂವು

ಮಲಗುವ ಕೋಣೆಯ ನೈರುತ್ಯ ಮೂಲೆಯಲ್ಲಿ ಯಾವುದೇ ವಸ್ತುಗಳನ್ನು ಅಸ್ತವ್ಯಸ್ಥವಾಗಿ ಹರಡಿರಬಾರದು. ಕೋಣೆಯಲ್ಲಿ ಒಳಾಂಗಣ ಸಸ್ಯಗಳನ್ನು ಇಡಬಹುದು. ನೈರುತ್ಯ ಮೂಲೆಯಲ್ಲಿ ಬಿಳಿ, ಕೆಂಪು ಗುಲಾಬಿ ಅಥವಾ ನೆರಳೆ ಬಣ್ಣದ ಹೂವಿನ ಕುಂಡ ಅಥವಾ ಗಿಡವನ್ನು ಇಡಬೇಕು. ಅದು ಪ್ರೀತಿಯ ಭಾವಪರವಶವನ್ನು ಆನಂದಿಸಲು ಪ್ರಚೋದನೆ ನೀಡುವುದು. ಜೊತೆಗೆ ದಂಪತಿಗಳ ನಡುವೆ ಉತ್ತಮ ಪ್ರೀತಿ-ವಿಶ್ವಾಸ ಬೆಳೆಯುವುದು.

ಅಗ್ನಿ ಮೂಲೆಯಲ್ಲಿ ಕೋಣೆ ಇರಬಾರದು

ಅಗ್ನಿ ಮೂಲೆಯಲ್ಲಿ ಕೋಣೆ ಇರಬಾರದು

ಮನೆಯ ಯಜಮಾನ ಅಥವಾ ನವದಂಪತಿಗಳ ಕೋಣೆಯು ಮನೆಯ ಅಗ್ನಿ ಮೂಲೆಯಲ್ಲಿ ಅಥವಾ ಅಗ್ನಿ ಮೂಲೆಯ ಮೇಲ್ಭಾಗದಲ್ಲಿ ಬರಬಾರದು. ಅದು ದಂಪತಿಗಳ ನಡುವೆ ದ್ವೇಷ, ಸಿಟ್ಟು ಹಾಗೂ ಕಲಹಕ್ಕೆ ಪ್ರಚೋದನೆ ನೀಡುವುದು. ಕುಬೇರ ಮೂಲೆಯಲ್ಲಿ ಮಲಗುವ ಕೋಣೆ ಬರಬೇಕು. ಕೋಣೆಯಲ್ಲಿ ಮಲಗುವ ಹಾಸಿಗೆಯನ್ನು ಉತ್ತರ ಮತ್ತು ಪೂರ್ವ ವಲಯದಲ್ಲಿ ಇಡಬಾರದು. ಅದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಜೊತೆಗೆ ಆರ್ಥಿಕ ಸ್ಥಿತಿಯನ್ನು ಅಸ್ಥಿರಗೊಳಿಸುತ್ತದೆ.

 ದಕ್ಷಿಣ ದಿಕ್ಕಿಗೆ ತಲೆ ಇರಲಿ

ದಕ್ಷಿಣ ದಿಕ್ಕಿಗೆ ತಲೆ ಇರಲಿ

ಮಲಗುವ ಕೋಣೆಯಲ್ಲಿ ಮಲಗುವಾಗ ನಿಮ್ಮ ತಲೆಯು ದಕ್ಷಿಣಕ್ಕೆ ಇರುವಂತೆ ನೋಡಿ. ಮಲಗುವ ಕೋಣೆಯು ಚೌಕ ಅಥವಾ ಆಯತ ಆಕಾರದಲ್ಲಿ ಇದ್ದರೆ ಜೀವನವು ಸುಖ, ಶಾಂತಿ ಹಾಗೂ ಪ್ರೀತಿಯಿಂದ ಕೂಡಿರುತ್ತದೆ. ಕೆಲವರು ಮಲಗುವ ಕೋಣೆಯಲ್ಲಿ ಗ್ಯಾಸ್ ಸ್ಟೋವ್, ಕೈತೊಳೆಯುವ ಸಿಂಕ್ ಗಳನ್ನು ಜೋಡಿಸಿಕೊಂಡಿರುತ್ತಾರೆ. ಇದು ಸಂಬಂಧವನ್ನು ಹಾಳು ಮಾಡುವುದು. ಸಂಬಂಧದಲ್ಲಿ ಬೆಂಕಿಯ ರೂಪದ ವೈಮನಸ್ಸು, ಹೊಂದಾಣಿಕೆ ಇಲ್ಲದೆ ಇರುವುದು, ಪ್ರೀತಿಯಲ್ಲಿ ನಂಬಿಕೆ ಇಲ್ಲದೆ ಹೋಗುವುದು.

ಈಶಾನ್ಯ ಕೋಣೆಯಲ್ಲಿ ಮಲಗಬೇಡಿ

ಈಶಾನ್ಯ ಕೋಣೆಯಲ್ಲಿ ಮಲಗಬೇಡಿ

ನವ ದಂಪತಿಗಳು ಅಥವಾ ಮಕ್ಕಳನ್ನು ಹೊಂದಲು ಬಯಸುವ ದಂಪತಿಗಳು ಈಶಾನ್ಯ ದಿಕ್ಕಿನಲ್ಲಿ ಇರುವ ಕೋಣೆಯಲ್ಲಿ ಮಲಗಬಾರದು. ಬಲವಾದ ಕಾಂತೀಯ ಶಕ್ತಿಯು ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಕಂಪ್ಯೂಟರ್ ಮತ್ತು ಟಿವಿಯನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಅದು ನಿಮ್ಮ ಸಂಬಂಧಗಳ ಮೇಲೆ ಗಂಭೀರವಾದ ಪರಿಣಾಮ ಬೀರುವುದು. ಹಾಗೊಮ್ಮೆ ಕೋಣೆಯಲ್ಲಿ ಇಟ್ಟಿದ್ದರೆ ಮಲಗುವಾಗ ಅವುಗಳಿಗೆ ಒಂದು ಬಟ್ಟೆಯನ್ನು ಸುತ್ತಿ ಮಲಗಿ.

ಮಲಗುವ ಕೋಣೆಯಲ್ಲಿ ದೇವರ ಮೂರ್ತಿಗಳು ಬೇಡ

ಮಲಗುವ ಕೋಣೆಯಲ್ಲಿ ದೇವರ ಮೂರ್ತಿಗಳು ಬೇಡ

ನೀವು ಮಲಗುವ ಕೋಣೆಯಲ್ಲಿ ದೇವರ ಮೂರ್ತಿಗಳನ್ನು ಇಡಬಾರದು. ದೇವರ ಮೂರ್ತಿ ಇರುವಲ್ಲಿ ಪ್ರಾರ್ಥನೆ ಹಾಗೂ ಮಡಿವಂತಿಕೆ ಇರಬೇಕಾಗುತ್ತದೆ. ನೀವು ದೇವರ ಮೂರ್ತಿಯನ್ನು ಇಟ್ಟಿದ್ದರೆ ಅದನ್ನು ದೇವರ ಮನೆಯಲ್ಲಿ ಇರಿಸಿ. ಅನಗತ್ಯ ವಸ್ತುಗಳನ್ನು ಕೋಣೆಯಲ್ಲಿ ಹರಡಿ ಇಡಬೇಡಿ. ಕಣ್ಣಿಗೆ ಮತ್ತು ಮನಸ್ಸಿಗೆ ಹಿತ ನೀಡುವ ತಿಳಿ ಬಣ್ಣದ ಆಕರ್ಷಕ ದೀಪಗಳು ಮತ್ತು ಹರಳುಗಳನ್ನು ಜೋಡಿಸಿ. ಅದು ನಿಮ್ಮ ಪ್ರಣಯದ ಕ್ಷಣಗಳನ್ನು ಹೆಚ್ಚಿಸುತ್ತವೆ.

ಎರಡು ಹಾಸಿಗೆಯನ್ನು ಇಡಬೇಡಿ

ಎರಡು ಹಾಸಿಗೆಯನ್ನು ಇಡಬೇಡಿ

ದಂಪತಿಗಳು ಮಲಗುವ ಹಾಸಿಗೆಯು ಒಂದೇ ಹಾಸಿಗೆಯಾಗಿದ್ದು, ವಿಶಾಲತೆಯಿಂದ ಕೂಡಿರಬೇಕು. ಬೇರೆ ಬೇರೆ ಹಸೆಯನ್ನು ಜೋಡಿಸಿ, ಎರಡು ಹಸೆಗಳನ್ನು ಮಾಡಬೇಡಿ. ನಿಮ್ಮ ಕೋಣೆಯಲ್ಲಿ ಸದಾ ಕಾಲ ತಾಜಾ ಹೂವುಗಳು ಇರುವಂತೆ ನೋಡಿಕೊಳ್ಳಿ. ಅದು ನಿಮ್ಮ ಭಾವನೆಗಳನ್ನು ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ. ಕೋಣೆಯು ಸ್ವಚ್ಛ ಹಾಗೂ ಪರಿಮಳದಿಂದ ಕೂಡಿರಲಿ. ಸ್ವಚ್ಛ ಮತ್ತು ಸುವಾಸನೆಯಿಂದ ಕೂಡಿರುವ ಕೋಣೆಯು ಮನಸ್ಸಿಗೆ ಮುದ ಹಾಗೂ ನಿರಾಳತೆಯನ್ನು ನೀಡುವುದು. ಜೊತೆಗೆ ಸಂಬಂಧವು ಉತ್ತಮವಾಗಿರುವಂತೆ ಮಾಡುವುದು. ಆಗಾಗ ಗುಲಾಬಿ, ಕಿತ್ತಳೆ, ಕೆಂಪು ಬಣ್ಣಗಳಿಂದ ಕೂಡಿರುವ ಮೇಣದ ಬತ್ತಿಯ ದೀಪವನ್ನು ಬೆಳಗಿಸಿ, ಕೋಣೆಯನ್ನು ಆಕರ್ಷಣೆಯಿಂದ ಕೂಡಿರುವಂತೆ ಮಾಡಿ.

ಕೋಣೆಯಲ್ಲಿ ಗಾಳಿ ಬೆಳಕು ಇರಲಿ

ಕೋಣೆಯಲ್ಲಿ ಗಾಳಿ ಬೆಳಕು ಇರಲಿ

ಮಲಗುವ ಕೋಣೆಯು ರಾತ್ರಿ ವೇಳೆ ಸುರಕ್ಷತೆಯ ದೃಷ್ಟಿಯಿಂದ ಮುಚ್ಚುವುದು ಸಹಜ. ಅದನ್ನು ಹಗಲಿನ ವೇಳೆ ತೆರೆದಿಡಿ. ಗಾಳಿ ಬೆಳಕು ಸರಿಯಾಗಿ ಇದ್ದರೆ ಕೋಣೆಯು ಆರೋಗ್ಯಕರ ಗಾಳಿಯಿಂದ ಕೂಡಿರುತ್ತದೆ. ಜೊತೆಗೆ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುವುದು.

English summary

Vastu Tips To Improve Your Love Life

Vastu Shastra can make your love life gather huge benefits by creating a balanced environment around your living and working space. Here are some of the useful Vastu advices to brighten up your love life and drown in the reservoir of the unflinching love of your partner.
X
Desktop Bottom Promotion