For Quick Alerts
ALLOW NOTIFICATIONS  
For Daily Alerts

ವಾಸ್ತು ಶಾಂತಿ ಪೂಜೆ ಏಕೆ ಮಾಡಬೇಕು? ಇದರ ಮಹತ್ವ, ಪೂಜೆಯ ಪ್ರಯೋಜನವೇನು?

|

ಮನೆಯ ವಾಸ್ತು ಚೆನ್ನಾಗಿದ್ದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲಸುತ್ತದೆ. ಕುಟುಂಬದವರ ನಡುವೆ ಉತ್ತಮ ಬಾಂಧವ್ಯ ಇರುತ್ತದೆ ಎಂಬುದು ನಂಬಿಕೆ. ಇದಕ್ಕಾಗಿಯೇ ಮನೆಯನ್ನು ಕಟ್ಟಿಸುವ ಮೊದಲೇ ಮೊದಲು ವಾಸ್ತು ನೋಡಿ ನಂತರ ಪ್ಲಾನ್‌ ತಯಾರಿಸಲಾಗುತ್ತದೆ.

123

ಆದರೆ ಮನೆಯ ವಾಸ್ತು ಸರಿಯಾಗಿ ಇರದೇ ಇದ್ದರೆ ಅಥವಾ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದರೆ ಅಥವಾ ಇನ್ನಾವುದೇ ಕಾರಣಗಳಿಂದ ವಾಸ್ತು ಸಮಸ್ಯೆ ಇದ್ದರೆ ಜ್ಯೋತಿಷಿಗಳು ಹಾಗೂ ವಾಸ್ತುಶಾಸ್ತ್ರಜ್ಞರು ನೀಡುವ ಸಲಹೆಯೇ ವಾಸ್ತು ಶಾಂತಿ ಪೂಜೆ. ವಾಸ್ತು ಶಾಂತಿ ಪೂಜೆಯ ಬಗ್ಗೆ ಈ ಲೇಖನದಲ್ಲಿ ಇನ್ನಷ್ಟು ಮಾಹಿತಿ ತಿಳಿಯೋಣ:

ವಾಸ್ತು ಶಾಂತಿ ಪೂಜೆಯನ್ನು ಏಕೆ ನಡೆಸಲಾಗುತ್ತದೆ?

ವಾಸ್ತು ಶಾಂತಿ ಪೂಜೆಯನ್ನು ಏಕೆ ನಡೆಸಲಾಗುತ್ತದೆ?

ಇತ್ತೀಚಿನ ದಿನಗಳಲ್ಲಿ, ಸೀಮಿತ ಸ್ಥಳಗಳಲ್ಲಿ ಮನೆಗಳನ್ನು ಕಟ್ಟಲಾಗುತ್ತಿದೆ, ಅದರಲ್ಲೂ ಅಪಾರ್ಟ್‌ಮೆಂಟ್‌ ಖರೀದಿಸುವವರೇ ಹೆಚ್ಚಾಗಿದ್ದಾರೆ. ಬದುಕು ಬಹಳ ವೇಗವಾಗಿದೆ ಇದೆಲ್ಲದರ ನಡುವೆ ಜನರಿಗೆ ವಾಸ್ತು ಶಾಸ್ತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಮನೆ ಕಟ್ಟಲು ಅಥವಾ ಖರೀದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜನರು ತಮ್ಮ ಮನೆಗಳಲ್ಲಿ ವಾಸ್ತು ದೋಷವನ್ನು ಸರಿಪಡಿಸಲು ವಾಸ್ತು ಶಾಂತಿ ಪೂಜೆಯನ್ನು ನಡೆಸುತ್ತಾರೆ.

ಈ ವಾಸ್ತು ಶಾಂತಿ ಪೂಜೆಯು ಮನೆ ಮತ್ತು ಪ್ರಕೃತಿಯ ಶಕ್ತಿಗಳು ಮತ್ತು ಅಂಶಗಳ ದಿಕ್ಕುಗಳಲ್ಲಿ ನೆಲೆಸಿರುವ ಭಗವಂತನಿಗೆ ವಿಶೇಷ ಅರ್ಪಣೆಯಾಗಿದೆ. ವಾಸ್ತು ದೋಷ ಪೂಜೆಯು ಮನೆಯಲ್ಲಿ ವಾಸಿಸುವ ಜನರ ಸುತ್ತಲಿನ ಗಾಳಿಯನ್ನು ಶುದ್ಧೀಕರಿಸುತ್ತದೆ. ವಾಸ್ತು ಶಾಂತಿ ಪೂಜೆಯನ್ನು ನಡೆಸುವ ಮೊದಲು ಯಾವಾಗಲೂ ಪರಿಣಿತ ವಾಸ್ತು ಜ್ಯೋತಿಷಿಗಳನ್ನು ಸಂಪರ್ಕಿಸಬೇಕು.

ವಾಸ್ತು ಶಾಂತಿ ಪೂಜೆಯ ಪ್ರಯೋಜನಗಳೇನು?

ವಾಸ್ತು ಶಾಂತಿ ಪೂಜೆಯ ಪ್ರಯೋಜನಗಳೇನು?

ವಾಸ್ತು ಶಾಂತಿ ಪೂಜೆಯು ನಿರ್ಮಾಣದಲ್ಲಿನ ದೋಷಗಳನ್ನು ನಿವಾರಿಸುವುದರ ಜೊತೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ.

  • ವಾಸ್ತು ಶಾಂತಿ ಪೂಜೆಯು ಮನೆಯಲ್ಲಿರುವ ಸದಸ್ಯರನ್ನು ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳಿಂದ ಮುಕ್ತಿಗೊಳಿಸುತ್ತದೆ.
  • ಗ್ರಹಗಳ ತಪ್ಪಾದ ಸ್ಥಾನದಿಂದಾಗಿ ಸಂಭವಿಸಬಹುದಾದ ಕೆಟ್ಟ ಪರಿಣಾಮಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ.
  • ಕುಟುಂಬ ಸದಸ್ಯರ ನಡುವಿನ ಸಂಬಂಧ ಮತ್ತು ಬಾಂಧವ್ಯವನ್ನು ಸುಧಾರಿಸುತ್ತದೆ.
  • ವಾಸ್ತು ಶಾಂತಿ ಪೂಜೆಯು ವೃತ್ತಿ, ಮದುವೆ ಅಥವಾ ಜೀವನದ ಇತರ ಕ್ಷೇತ್ರಗಳಲ್ಲಿ ಉಂಟಾಗಬಹುದಾದ ಅಡೆತಡೆಗಳನ್ನು ತೆಗೆದುಹಾಕುತ್ತದೆ.
  • ವಾಸ್ತು ಶಾಂತಿ ಪೂಜೆಯು ಕುಟುಂಬಕ್ಕೆ ಸಂತೋಷ ಮತ್ತು ಆನಂದವನ್ನು ನೀಡುತ್ತದೆ ಮತ್ತು ಆ ಮೂಲಕ ಅವರ ಜೀವನವನ್ನು ಸುಗಮಗೊಳಿಸುತ್ತದೆ.
  • ಇದು ಮನೆಯ ಪ್ರತಿಯೊಂದು ಮೂಲೆಯನ್ನು ಶುದ್ಧೀಕರಿಸುತ್ತದೆ ಮತ್ತು ಅದನ್ನು ವಾಸಿಸಲು ಮಾಂತ್ರಿಕ ಸ್ಥಳವನ್ನಾಗಿ ಮಾಡುತ್ತದೆ.
  • ನೀವು ವಾಸ್ತು ಶಾಂತಿ ಪೂಜೆಯನ್ನು ಯಾವಾಗ ಮಾಡಬಹುದು?

    ನೀವು ವಾಸ್ತು ಶಾಂತಿ ಪೂಜೆಯನ್ನು ಯಾವಾಗ ಮಾಡಬಹುದು?

    ಗೃಹ ಪ್ರವೇಶಕ್ಕೂ ಮುನ್ನ ವಾಸ್ತು ಶಾಂತಿ ಪೂಜೆಯನ್ನು ನಡೆಸುವುದು ಅನಿವಾರ್ಯವಲ್ಲ.

    • ಜನರು ಸಾಮಾನ್ಯವಾಗಿ ಈ ಸಂದರ್ಭಗಳಲ್ಲಿ ವಾಸ್ತು ಶಾಂತಿ ಪೂಜೆಯನ್ನು ಮಾಡುತ್ತಾರೆ:
    • ಮನೆ ಅಥವಾ ಕಚೇರಿಯ ನವೀಕರಣ.
    • ಸ್ಥಳಾವಕಾಶದ ಕೊರತೆ ಮತ್ತು ವೈದಿಕ ನಿಯಮಗಳನ್ನು ಅನುಸರಿಸುವಲ್ಲಿ ತೊಂದರೆಗಳು.
    • ಹಳೆಯ ಮನೆಯನ್ನು ಖರೀದಿಸಿದಾಗ.
    • ಮನೆಯ ಒಳಾಂಗಣ ವಿನ್ಯಾಸದಲ್ಲಿ ದೋಷಗಳು ಇದ್ದಾಗ.
    • ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಾದಾಗ ನಿವಾಸಿಗಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೆ.
    • ಸಾಕಷ್ಟು ವರ್ಷಗಳ ಕಾಲ ಮನೆಗೆ ಬೀಗ ಹಾಕಿ ಮತ್ತೆ ಹಿಂತಿರುಗಿದಾಗ.
    • ಮನೆಯಲ್ಲಿ ವಾಸ್ತು ಶಾಂತಿ ಪೂಜೆ ಮಾಡುವುದು ಹೇಗೆ?

      ಮನೆಯಲ್ಲಿ ವಾಸ್ತು ಶಾಂತಿ ಪೂಜೆ ಮಾಡುವುದು ಹೇಗೆ?

      • ವಾಸ್ತು ಶಾಂತಿ ಪೂಜೆಯನ್ನು ಮಾಡುವ ಮೊದಲು, ಅದರ ಮುಹೂರ್ತ ಪರಿಶೀಲಿಸಬೇಕು.
      • ಪೂಜೆಯನ್ನು ಮಾಡಲು ಮಂಗಳಕರ ತಿಥಿ ಮತ್ತು ನಕ್ಷತ್ರವನ್ನು ನೋಡುವುದು ಕಡ್ಡಾಯವಾಗಿದೆ.
      • ಪಂಚಾಂಗದ ಸಹಾಯದಿಂದ, ಪೂಜೆಗೆ ಶುಭ ಮುಹೂರ್ತವನ್ನು ನಿರ್ಧರಿಸಬಹುದು.
      • ಪುರೋಹಿತರ ಸಲಹೆಯಂತೆ ಅಗತ್ಯವಿರುವ ಎಲ್ಲಾ ಹವನಗಳು ಮತ್ತು ಪೂಜಾ ವಿಧಿಗಳನ್ನು ನಿರ್ವಹಿಸಿ.
      • ವಾಸ್ತು ಪೂಜೆಯನ್ನು ಮಾಡುವುದು ಹೇಗೆ?

        ವಾಸ್ತು ಪೂಜೆಯನ್ನು ಮಾಡುವುದು ಹೇಗೆ?

        • ಮನೆಯ ಮುಂಬಾಗಿಲನ್ನು ತೋರಣ ಹೂವುಗಳಿಂದ ಅಲಂಕರಿಸಿ.
        • ಪುರೋಹಿತರು ವಾಸ್ತು ಮಂತ್ರಗಳನ್ನು ಪಠಿಸುವಾಗ ಸಂಕಲ್ಪ ತೆಗೆದುಕೊಳ್ಳಿ.
        • ಗಣೇಶ ಪೂಜೆ ಮಾಡಬೇಕು.
        • ವಾಸ್ತು ಮಂಡಲ ರಚಿಸಬೇಕು
        • ವಾಸ್ತು ಪುರುಷ ಕಥೆ ಮತ್ತು ವಾಸ್ತು ಮಂಡಲವನ್ನು ಪಠಿಸುವುದು
        • ಕಲಶ ಸ್ಥಾಪನ ಮತ್ತು ನವ ಗ್ರಹ ಪೂಜೆ ನೆರವೇರಿಸುವುದು
        • ವರುಣ ಮತ್ತು ವಾಸ್ತು ಪುರುಷ ಪೂಜಾ ವಿಧಿವಿಧಾನಗಳನ್ನು ಮಾಡಬೇಕು
        • ವಾಸ್ತು ಪುರುಷ ಯಜ್ಞವನ್ನು ನಡೆಸಬೇಕು
        • ವಾಸ್ತು ಪುರುಷನಿಗೆ ಪ್ರಾರ್ಥನೆ ಸಲ್ಲಿಸಿ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳಿ
        • ಭೂಮಿಗೆ ಧಾನ್ಯಗಳು ಮತ್ತು ಹೂವಿನ ದಳಗಳನ್ನು ಅರ್ಪಿಸಿ.
        • ಮಾವಿನ ಎಲೆಗಳೊಂದಿಗೆ ಗಂಗಾಜಲವನ್ನು ಸಿಂಪಡಿಸಿ.
        • ಆರತಿ ಮತ್ತು ಪ್ರಸಾದವನ್ನು ನೆರವೇರಿಸಿ
        • ಮನೆಯ ಮೂಲೆಯೊಂದರಲ್ಲಿ ಗುಂಡಿ ತೋಡಿ, ಪೂಜೆಗೆ ಬಳಸಿದ ವಸ್ತುಗಳನ್ನು ಇಟ್ಟು ಮುಚ್ಚಬೇಕು.
        • ವಾಸ್ತು ದೋಷ ಪೂಜಾ ಸಾಮಗ್ರಿಗಳು

          ನಾಣ್ಯಗಳು, ಕುಂಕುಮ, ವೀಳ್ಯದೆಲೆ, ತೆಂಗಿನಕಾಯಿ, ಅಕ್ಕಿ, ಮಾವಿನ ಎಲೆಗಳು, ಬಾರ್ಲಿ, ಕಪ್ಪು ಎಳ್ಳು, ತುಪ್ಪ, ಪಂಚಮೇವಾ, ಐದು ವಿಧದ ಸಿಹಿತಿಂಡಿಗಳು, ಐದು ರೀತಿಯ ಹಣ್ಣುಗಳು, ಐದು ವಿವಿಧ ಹೂವುಗಳನ್ನು ಒಳಗೊಂಡಿರುತ್ತದೆ.

        • ವಾಸ್ತು ಶಾಂತಿ ಮಂತ್ರ

          ವಾಸ್ತು ಶಾಂತಿ ಮಂತ್ರ

          * ಓಂ ಜಸ ವೋ ಭವ ಯತ ಶಂ ಭವ ಭವ ಭವ ಭಾವ ದ ಶಂ ಶಂ

          * ಓಂ ವಾಸ್ತೋಷ್ಪತೇ ಪ್ರತಿ ಜಾನಿದ್ಯಸ್ಮಾನ್ ಸ್ವಾವೇಶೋ ಅನಾಮೀ ವೋ ಭವಾನ್ ಯತ್ವೇ ಮಹೇ ಪ್ರತಿತನ್ನೋ ಜುಷಸ್ವ ಸಹ್ನೋ ಭವ ದ್ವಿಪದೇ ಶಾಂ ಚತುಷ್ಪದೇ ಸ್ವಾಹಾ|

          ಈ ವಾಸ್ತು ಶಾಂತಿ ಮಂತ್ರದ ಅರ್ಥ

          ಓ ವಾಸ್ತು ಪ್ರಭು! ನಾವು ನಿಮ್ಮನ್ನು ನಮ್ಮ ಹೃದಯದಿಂದ ಆರಾಧಿಸುತ್ತೇವೆ. ನಮ್ಮ ಪ್ರಾರ್ಥನೆಯನ್ನು ಆಲಿಸಿ ಮತ್ತು ರೋಗ ಮತ್ತು ಬಡತನದಿಂದ ನಮ್ಮನ್ನು ಮುಕ್ತಗೊಳಿಸು. ಅಲ್ಲದೆ, ಸಂಪತ್ತಿನ ನಮ್ಮ ಆಸೆಯನ್ನು ಪೂರೈಸು. ವಾಸ್ತು ಪ್ರದೇಶದಲ್ಲಿ ಅಥವಾ ಮನೆಯಲ್ಲಿ ವಾಸಿಸುವ ಎಲ್ಲಾ ಕುಟುಂಬ ಸದಸ್ಯರು, ಪ್ರಾಣಿಗಳು ಮತ್ತು ವಹ್ನಾದಿಗಳಿಗೆ ಶುಭ.

English summary

Vastu Shanti Puja Benefits, Rituals, Importance and How to do at home in Kannada

Here we are discussing about Vastu Shanti Puja Benefits, Rituals, Importance and How to do at home in Kannada. Read more.
Story first published: Wednesday, December 14, 2022, 21:12 [IST]
X
Desktop Bottom Promotion