For Quick Alerts
ALLOW NOTIFICATIONS  
For Daily Alerts

ಮೊಟ್ಟೆಯ ತಾಜಾತನ ಪರೀಕ್ಷಿಸುವುದು ಹೇಗೆ?

|

ಅಂಗಡಿಯಿಂದ ಮೊಟ್ಟೆ ತಂದಾಗ ಅದು ತಾಜಾ ಮೊಟ್ಟೆಯೇ? ಕೋಳಿ ಈ ಮೊಟ್ಟೆ ಇಟ್ಟು ಎಷ್ಟು ದಿನಗಳಾಗಿರಬಹುದು? ಎಂಬ ಪ್ರಶ್ನೆ ಮಾಡುವುದು ಸಹಜ. ಕೆಲವೊಂದು ಮೊಟ್ಟೆ ಪ್ಯಾಕ್‌ಗಳಲ್ಲಿ ಅದರ ಎಕ್ಸ್‌ಪೆರಿ ಡೇಟ್‌ ಇದ್ದರೂ ಕೂಡ ಅವುಗಳನ್ನು ತಂದು ಒಡೆದು ನೋಡುವವರಿಗೆ ಅದು ಚೆನ್ನಾಗಿದೆಯೇ, ಇಲ್ಲಾ ಹಾಳಾಗಿದೆಯೇ ಎಂಬ ಸಂಶಯವಿದ್ದೇ ಇರುತ್ತದೆ.

Tips to check egg freshness

ಮೊಟ್ಟೆ ತಾಜಾತನ ಪರೀಕ್ಷಿಸಲು ಬರೀ ಅದರ ಎಕ್ಸ್‌ಪೆರಿ ಡೇಟ್‌ ಪರೀಕ್ಷೆ ಮಾಡಿದರಷ್ಟೇ ಸಾಲದು, ಅದನ್ನು ಪರೀಕ್ಷಿಸುವುದು ಒಳ್ಳೆಯದು. ಏಕೆಂದರೆ ತುಂಬಾ ಹಳೆಯದಾದ ಮೊಟ್ಟೆಗಳು ಹಾಳಾಗುತ್ತವೆ, ಇಂಥ ಮೊಟ್ಟೆ ತಿಂದಾಗ ಹೊಟ್ಟೆ ಹಾಳಾಗಬಹುದು.

ಇನ್ನು ಹಾಳಾದ ಮೊಟ್ಟೆ ಒಡೆದರೆ ಅದು ಬೀರುವ ದುರ್ವಾಸನೆಗೆ ಮತ್ತೆ ಮೊಟ್ಟೆ ತಿನ್ನಬೇಕೆಂದು ಅನಿಸುವುದೇ ಇಲ್ಲ, ಅಷ್ಟೊಂದು ಅಸಹ್ಯಕರವಾಗಿರುತ್ತದೆ. ಇಲ್ಲಿ ನಾವು ಮೊಟ್ಟೆಯ ತಾಜಾತನ ಪರೀಕ್ಷಿಸುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

1. ಮೊಟ್ಟೆ ನೀರಿನಲ್ಲಿ ಮುಳುಗಿತೇ ಇಲ್ಲಾ ತೇಲಿತೇ?

1. ಮೊಟ್ಟೆ ನೀರಿನಲ್ಲಿ ಮುಳುಗಿತೇ ಇಲ್ಲಾ ತೇಲಿತೇ?

ಮೊಟ್ಟೆಯ ತಾಜಾತನ ಪರೀಕ್ಷಿಸಲು ಈ ಟಿಪ್ಸ್ ತುಂಬಾ ಸಹಕಾರಿಯಾಗಿದೆ. ನೀವು ತಂದ ಮೊಟ್ಟೆಯನ್ನು ನೀರು ತುಂಬಿದ ಲೋಟದಲ್ಲಿ ಹಾಕಿದಾಗ ಅದು ಎಷ್ಟು ಮುಳುಗಿದೆ ಎನ್ನುವುದರ ಮೇಲೆ ಅದರ ತಾಜಾತನ ಅಳೆಯಬಹುದು. ಮೊಟ್ಟೆ ಕೆಳ ಭಾಗಕ್ಕೆ ಹೋದರೆ ಫ್ರೆಷ್ ಮೊಟ್ಟೆ ಎನ್ನಬಹುದು. ಒಂದೆರಡು ದಿನವಾದರೆ ಮೊಟ್ಟೆ ಲೋಟದ ತಳದಿಂದ ಸ್ವಲ್ಪ ಮೇಲಕ್ಕೆ ಬರುತ್ತದೆ. ಇನ್ನು ಎರಡು ಮೂರು ವಾರ ಕಳೆದಿದ್ದರೆ ಅಂಥ ಮೊಟ್ಟೆ ನೀರಿನ ಮೇಲ್ಬಾಗ ತೇಲುತ್ತದೆ.

2. ಮೊಟ್ಟೆಯನ್ನು ಅಲುಗಾಡಿಸಿ

2. ಮೊಟ್ಟೆಯನ್ನು ಅಲುಗಾಡಿಸಿ

ಮತ್ತೊಂದು ವಿಧಾನವಿದೆ. ಅದು ಅಷ್ಟೊಂದು ನಿಖರವಾದ ವಿಧಾನ ಎಂದು ಹೇಳಲು ಸಾಧ್ಯವಿಲ್ಲ. ಮೊಟ್ಟೆಯನ್ನು ತೆಗೆದು ಕಿವಿ ಬಳಿ ಹಿಡಿದು ಅಲುಗಾಡಿಸಿದರೆ ಅದರೊಳಗಿನಿಂದ ತುಂಬಾ ಗುಳ-ಗುಳ ಅಂತ ನೀರಿನ ಶಬ್ದದ ರೀತಿ ಕೇಳಿಸಿದರೆ ಆ ಮೊಟ್ಟೆ ಹಾಳಾಗಿದೆ ಎಂದು ಹೇಳಬಹುದು. ಹೆಚ್ಚೇನು ಶಬ್ದ ಬಾರದಿದ್ದರೆ ಆ ಮೊಟ್ಟೆ ತಿನ್ನಲು ಯೋಗ್ಯವಿದೆ ಎಂದು ಹೇಳಬಹುದು.

3. ಮೊಟ್ಟೆಯ ವಾಸನೆ ಮೂಲಕ

3. ಮೊಟ್ಟೆಯ ವಾಸನೆ ಮೂಲಕ

ಮೊಟ್ಟೆಯನ್ನು ಒಡೆದಾಗ ಅದು ಮಾಮೂಲಿಗಿಂತ ಬೇರೆ ವಾಸನೆ ಬೀರಿದರೆ ಅಂಥ ಮೊಟ್ಟೆ ಹಾಳಾಗಿದೆ ಎಂದು ಹೇಳಬಹುದು.

4. ಮೊಟ್ಟೆಯ ಬಿಳಿ ಮತ್ತು ಹಳದಿ ಗಮನಿಸಿ

4. ಮೊಟ್ಟೆಯ ಬಿಳಿ ಮತ್ತು ಹಳದಿ ಗಮನಿಸಿ

ಮೊಟ್ಟೆಯನ್ನು ಒಡೆದು ಬೌಲ್‌ಗೆ ಹಾಕಿ ಅದರಿಂದ ರುಚಿ-ರುಚಿಯಾದ ಆಮ್ಲೆಟ್ ಮಾಡುವ ಮುನ್ನ ಅದರ ಬಿಳಿ ಹಾಗೂ ಹಳದಿಯನ್ನು ಗಮನಿಸಿ. ಬಿಳಿ ಹಳದಿಗೆ ಅಂಟಿದಂತೆ ಇದ್ದು, ತಕ್ಷಣ ಹರಡಿದರೆ ಅದು ತಾಜಾ ಮೊಟ್ಟೆಯಲ್ಲ. ಇನ್ನು ಮೊಟ್ಟೆ ಹಳೆಯದಾದರೆ ಅದರ ಹಳದಿ ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ.

ಮೊಟ್ಟೆ ಹಾಳಾಗುತ್ತದೆ ಎಂದಾಗ ಏನು ಮಾಡಬಹುದು?

ಮೊಟ್ಟೆ ಹಾಳಾಗುತ್ತದೆ ಎಂದಾಗ ಏನು ಮಾಡಬಹುದು?

ಮೊಟ್ಟೆಯ ತಾಜಾತನ ಪರೀಕ್ಷಿಸುವುದು ಹೇಗೆ ಎಂದು ತಿಳಿದಿರಿ. ಈಗ ಮೊಟ್ಟೆ ಇನ್ನೊಂದು ವಾರ ಇಟ್ಟರೆ ಹಾಳಾಗುತ್ತದೆ ಎಂಬ ಹಂತ ತಲುಪಿದಾಗ ಏನು ಮಾಡುವುದು ಎಂದು ನೋಡೋಣ:

ಮೊಟ್ಟೆ ಇಟ್ಟರೆ ಹಾಳಾಗುತ್ತದೆ ಎಂದಾದಾಗ ಅದನ್ನು ಚೆನ್ನಾಗಿ ಬೇಯಿಸಿ, ಅದರಿಂದ ಉಪ್ಪಿನಕಾಯಿ ಮಾಡಿ ಬಳಸಬಹುದಾಗಿದೆ. ಇನ್ನು ಡೆವಿಲ್ ಎಗ್‌ ರೆಸಿಪಿಯೂ ಟ್ರೈ ಮಾಡಬಹುದಾಗಿದೆ.

English summary

How To Check Egg Freshness

When we buy egg from shops we don't weather that is fresh or not, here are tips to check egg freshness, have alook.
Story first published: Friday, February 28, 2020, 15:23 [IST]
X
Desktop Bottom Promotion