For Quick Alerts
ALLOW NOTIFICATIONS  
For Daily Alerts

ಬೋರ್ಡ್ ಮೇಲೆ ಬರೆಯುವ ಚಾಕ್ ಪೀಸ್ ನಿಮ್ಮ ಮನೆ ಸ್ವಚ್ಚತೆಗೆ ಎಷ್ಟೆಲ್ಲಾ ಸಹಕಾರಿ ಗೊತ್ತೇ?

|

ನೆನಪು ಯಾವಾಗಲೂ ಮಧುರವಾಗಿರುವುದು, ಅದರಲ್ಲೂ ನಮ್ಮ ಶಾಲಾ ದಿನಗಳ ನೆನಪು ಅತೀ ಆನಂದವನ್ನು ನೀಡುವಂತಹ ಕ್ಷಣಗಳು. ಗೆಳೆಯರೊಂದಿಗಿನ ಜಗಳ, ಆಟ, ನಮ್ಮ ಮೆಚ್ಚಿನ ಶಿಕ್ಷಕ-ಶಿಕ್ಷಕಿ ಬಂದಾಗ ಎಲ್ಲರಿಗಿಂತಲೂ ಜೋರಾಗಿ ನಮಸ್ತೆ ಹೇಳುವುದು ಇತ್ಯಾದಿ. ಅದರಲ್ಲೂ ಬೋರ್ಡ್ ಮೇಲೆ ಟೀಚರ್ ಬರೆದು ಹೋದ ಬಳಿಕ ಉಳಿದಿದ್ದ ಸಣ್ಣ ಸಣ್ಣ ತುಂಡು ಚಾಕ್ ಗಳನ್ನು ಎತ್ತಿಟ್ಟುಕೊಳ್ಳಲು ಸ್ಪರ್ಧೆಗೆ ಬಿದ್ದವರಂತೆ ಓಡಿಹೋಗುವುದು. ಶಾಲಾ ದಿನಗಳ ನೆನಪುಗಳು ಖಂಡಿತವಾಗಿಯೂ ಮುಗಿಯದ ಅಧ್ಯಾಯ.

Alternative Uses of Chalk at Your Home

ನಾವೆಲ್ಲರು ಶಾಲಾ ದಿನಗಳಲ್ಲಿ ಹೆಕ್ಕಿಡುತ್ತಿದ್ದ ಚಾಕ್ ನ್ನು ಬರೆಯಲು ಬಳಸುತ್ತಿದ್ದೆವು. ಆದರೆ ಇದೇ ಚಾಕ್ ಇಂದು ನಿಮಗೆ ಮನೆಯ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಲು ನೆರವಾಗಲಿದೆ ಎಂದು ಹೇಳಿದರೆ ಅಚ್ಚರಿಯಾಗಬಹುದು. ಈ ಚಾಕ್ ಬಳಸಿ ಜಿಡ್ಡಿನಿಂದ ಆಗಿರುವ ಕಲೆಗಳಿಂದ ಹಿಡಿದು ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ನೀವು ನಂಬಲು ಸಾಧ್ಯವಿಲ್ಲದೆ ಇರುವಂತಹ ಕೆಲವು ಸಮಸ್ಯೆಗೆ ಇದು ಪರಿಹಾರ ನೀಡುವುದು. ಅದು ಯಾವುದು ಎಂದು ತಿಳಿಯಿರಿ.

ಜಿಡ್ಡಿನ ಕಲೆ ನಿವಾರಿಸುವುದು

ಜಿಡ್ಡಿನ ಕಲೆ ನಿವಾರಿಸುವುದು

ಸಾಸ್ ನಿಂದ ತುಂಬಿರುವಂತಹ ಜಂಕ್ ಫುಡ್ ಅನ್ನು ನೀವು ಇಷ್ಟಪಡುತ್ತಲಿದ್ದರೆ ಮತ್ತು ಅದರ ಸಾಸ್ ನಿಮ್ಮ ಬಿಳಿ ಅಥವಾ ಬೇರೆ ಬಣ್ಣದ ಬಟ್ಟೆ ಮೇಲೆ ಬೀಳುತ್ತಲಿದೆಯಾ? ಹಾಗಾದರೆ ನೀವು ಈ ಟಿಪ್ಸ್ ಅನ್ನು ಪ್ರಯತ್ನಿಸಿ. ಕಲೆ ಇರುವ ಜಾಗಕ್ಕೆ ಚಾಕ್ ನ್ನು ಸ್ವಲ್ಪ ಉಜ್ಜಿಕೊಳ್ಳಿ ಮತ್ತು ಹತ್ತು ನಿಮಿಷ ಬಿಟ್ಟು ಅದನ್ನು ವಾಷಿಂಗ್ ಮೆಷಿನ್ ಗೆ ಹಾಕಿ. ಚಾಕ್ ಜಿಡ್ಡಿನ ಕಲೆ ನಿವಾರಣೆ ಮಾಡುವುದು.

ಕಪಾಟಿನಲ್ಲಿ ದುರ್ವಾಸನೆ ತಡೆಯುವುದು

ಕಪಾಟಿನಲ್ಲಿ ದುರ್ವಾಸನೆ ತಡೆಯುವುದು

ತುಂಬಿರುವ ಬಟ್ಟೆಗಳು, ಮರ ಮತ್ತು ಇತರ ಕೆಲವೊಂದು ಸಾಮಗ್ರಿಗಳಿಂದಾಗಿ ಕಪಾಟಿನಲ್ಲಿ ವಾಸನೆ ಬರುವುದು ಸಹಜ. ಹಾನಿಕಾರಕ ಸುವಾಸನೆ ಫ್ರೆಶ್ನರ್ ಬಳಸುವ ಬದಲು ನೀವು ಚಾಕ್ ಬಳಸಬಹುದು. ಇದು ನೈಸರ್ಗಿಕವಾಗಿ ಸರಂಧ್ರಯುಕ್ತವಾಗಿದ್ದು, ಇದು ಕೆಟ್ಟ ದುರ್ವಾಸನೆ ಹೀರಿಕೊಳ್ಳುವುದು.

ಬೆರಳಿನ ಉಗುರುಗಳಿಗೆ ತಕ್ಷಣವೇ ಕಾಂತಿ ನೀಡುವುದು

ಬೆರಳಿನ ಉಗುರುಗಳಿಗೆ ತಕ್ಷಣವೇ ಕಾಂತಿ ನೀಡುವುದು

ಬಿಳಿ ಚಾಕ್ ಗೆ ಉಗುರಿನ ಬ್ರಶ್ ನ್ನು ಉಜ್ಜಿಕೊಳ್ಳಿ. ಇದರ ಬಳಿಕ ಈ ಬ್ರಶ್ ನ್ನು ಉಗುರಿನ ಅಡಿಭಾಗಕ್ಕೆ ಉಜ್ಜಿಕೊಂಡರೆ ಆಗ ತಕ್ಷಣವೇ ಉಗುರಿಗೆ ಕಾಂತಿ ಸಿಗುವುದು. ಉಗುರಿನ ಅಡಿಭಾಗದಲ್ಲಿ ಇರುವಂತಹ ಕೊಳೆ ಹಾಗೂ ಇತರ ಕಲೆಗಳನ್ನು ಇದು ತೆಗೆಯುವುದು ಮತ್ತು ಕಾಂತಿಯುತವಾಗಿ ಕಾಣುವಂತೆ ಮಾಡುವುದು.

ಬಿಳಿಯಾಗಿಯೇ ಇಡಿ

ಬಿಳಿಯಾಗಿಯೇ ಇಡಿ

ಶರ್ಟ್ ನ ಕಾಲರ್ ಮತ್ತು ಕಫ್ಸ್ ನ್ನು ಶುಚಿಗೊಳಿಸುವುದು ತುಂಬಾ ಕಠಿಣ ಕೆಲಸವಾಗಿರುವುದು. ಆದರೆ ಚಾಕ್ ನಿಂದ ನೀವು ಅದ್ಭುತ ಲಾಭ ಪಡೆಯಬಹುದು. ಈ ಭಾಗಕ್ಕೆ ಚಾಕ್ ನಿಂದ ಉಜ್ಜಿಕೊಂಡು ಬಳಿಕ ತೊಳೆದರೆ ತುಂಬಾ ಒಳ್ಳೆಯದು. ಇದರಿಂದ ಬಟ್ಟೆಯ ಈ ಎರಡೂ ಭಾಗಗಳು ಬಿಳಿಯಾಗಿಯೇ ಇರುವುದು.

ಗೋಡೆಗಳ ಕಲೆ ತೆಗೆಯಲು

ಗೋಡೆಗಳ ಕಲೆ ತೆಗೆಯಲು

ಗೋಡೆಗಳಲ್ಲಿ ಕಲೆಗಳು ಮೂಡುವುದು ಸಹಜ. ಇದನ್ನು ತೆಗೆಯಲು ಸರಳ ವಿಧಾನವೆಂದರೆ ನೀವು ಈ ಕಲೆಗಳ ಮೇಲೆ ಚಾಕ್ ನ್ನು ಉಜ್ಜಿ. ಗೋಡೆಗಳಲ್ಲಿ ಇರುವಂತಹ ಸಣ್ಣ ಬಿರುಕುಗಳಿಗೆ ಕೂಡ ಇದನ್ನು ಬಳಸಬಹುದು ಮತ್ತು ಅದು ಕಾಣದಂತೆ ಮಾಡಬಹುದು.

ಬೆಳ್ಳಿ ಮತ್ತು ಪಾತ್ರೆಗಳು ಕಾಂತಿ ಕಳೆದುಕೊಳ್ಳದಂತೆ ಮಾಡುವುದು

ಬೆಳ್ಳಿ ಮತ್ತು ಪಾತ್ರೆಗಳು ಕಾಂತಿ ಕಳೆದುಕೊಳ್ಳದಂತೆ ಮಾಡುವುದು

ಪಾತ್ರೆಗಳು ಮತ್ತು ಬೆಳ್ಳಿ ಸಾಮಗ್ರಿಗಳಿಗೆ ತೇವ ತಾಗಿದರೆ ಆಗ ಅದು ಕಾಂತಿ ಕಳೆದುಕೊಂಡು ಕಪ್ಪಾಗುವುದು. ಇದಕ್ಕೆ ಒಂದು ಸರಳ ವಿಧಾನವೆಂದರೆ ಬೆಳ್ಳಿ ಸಾಮಗ್ರಿ ಮತ್ತು ಪಾತ್ರೆಗಳನ್ನು ಇಡುವ ಜಾಗದಲ್ಲಿ ನೀವು ಒಂದು ತುಂಡು ಚಾಕ್ ಇಟ್ಟುಬಿಡಿ. ಬೇಕೆಂದಾಗ ಚಾಕ್ ಬದಲಾಯಿಸಿ.

ಇರುವೆ ಬರದಂತೆ ತಡೆಯುವುದು

ಇರುವೆ ಬರದಂತೆ ತಡೆಯುವುದು

ಕೆಲವೊಂದು ಕಾರಣಗಳಿಂದ ಇರುವೆಯು ಚಾಕ್ ನ ಗೆರೆಯನ್ನು ದಾಟುವುದಿಲ್ಲ. ನಿಮ್ಮ ಬಾಗಿಲು, ಕಿಟಕಿ ಬಳಿಯಲ್ಲಿ ಚಾಕ್ ನಿಂದ ಗೆರೆ ಹಾಕಿ. ಇರುವೆ ಎಲ್ಲಿಂದ ಬರುತ್ತಿದೆ ಎನ್ನುವುದನ್ನು ನೋಡಿಕೊಂಡು ನೋಡಿ ಗೆರೆ ಹಾಕಿ. ಅದರ ಸೈನ್ಯವೇ ಮರಳಿ ಹೋಗುವುದು.

ಲೋಹ ಮತ್ತು ಮಾರ್ಬಲ್ ಗೆ ಕಾಂತಿ ನೀಡುವುದು

ಲೋಹ ಮತ್ತು ಮಾರ್ಬಲ್ ಗೆ ಕಾಂತಿ ನೀಡುವುದು

ಒಂದು ಸಣ್ಣ ಪಾತ್ರೆಗೆ ಕೆಲವು ತುಂಡು ಚಾಕ್ ಹಾಕಿಕೊಂಡು ಅದನ್ನು ಹುಡಿ ಮಾಡಿಕೊಳ್ಳಿ. ಮೆತ್ತಗಿನ ಬಟ್ಟೆಯನ್ನು ಸ್ವಲ್ಪ ಒದ್ದೆ ಮಾಡಿಕೊಳ್ಳಿ ಮತ್ತು ಇದರ ತುದಿಯನ್ನು ಚಾಕ್ ನ ಹುಡಿಯಲ್ಲಿ ಅದ್ದಿ ಮತ್ತು ಲೋಹ ಮತ್ತು ಮಾರ್ಬಲ್ ನ್ನು ಇದರಿಂದ ಉಜ್ಜಿಕೊಳ್ಳಿ. ಬಿಸಿ ನೀರಿನಿಂದ ತೊಳೆದ ಬಳಿಕ ಸರಿಯಾಗಿ ಒಣಗಿಸಿ. ಇದು ಲೋಹಕ್ಕೆ ಯಾವುದೇ ಹಾನಿ ಮಾಡದೆ ಕಲೆಗಳನ್ನು ಹೀರಿಕೊಳ್ಳುವುದು.

ತಕ್ಷಣವೇ ಗೋಡೆ ಸರಿಪಡಿಸಿ

ತಕ್ಷಣವೇ ಗೋಡೆ ಸರಿಪಡಿಸಿ

ಗೋಡೆಯ ಬಣ್ಣವು ಕೆಲವೊಂದು ಕಡೆಗಳಲ್ಲಿ ಮಾಸಿದ್ದರೆ ಆಗ ನೀವು ಇದೇ ಬಣ್ಣದ ಚಾಕ್ ನ್ನು ಬಳಸಿಕೊಂಡು ಅದನ್ನು ಗೋಡೆ ಮೇಲೆ ಉಜ್ಜಿಕೊಳ್ಳಿ ಮತ್ತು ಬಣ್ಣವು ಮರಳಿ ಬರುವುದು.

English summary

Alternative Uses of Chalk at Your Home

One of the most memorable school items about our school days is the chalk. We all loved collecting those pack of chalks and writing on classroom board was a privilege. But did you know that this tiny piece of chalk can also fix numerous problems in your household? From preventing the silverware to get rusted to remove grease stains, chalk can fix these amazing and unbelievable problems in your house!
X
Desktop Bottom Promotion