For Quick Alerts
ALLOW NOTIFICATIONS  
For Daily Alerts

ಮನೆಯ ಒಳಗೆ ಈ ಸಸ್ಯಗಳಿದ್ದರೆ ನಮಗೇ ಹಾಗೂ ಪ್ರಾಣಿಗೂ ಹಾನಿಕರ

|

ಇತ್ತೀಚೆಗೆ ಮನೆ ಕಚೇರಿಗಳಲ್ಲಿ ಸಸ್ಯಗಳನ್ನು ಇಡುವುದು ಟ್ರೆಂಡ್‌ ಆಗಿದೆ. ಜನರು ಇದನ್ನು ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದಾರೆ. ಮನೆ ಅಥವಾ ಕಚೇರಿಯಲ್ಲಿ ಸಸ್ಯಗಳನ್ನು ಇಡುವುದರಿಂದ ಮನಸ್ಸಿಗೆ ತಾಜಾ ಆದ ಭಾವನೆಯನ್ನು ನೀಡುತ್ತದೆ, ಗಾಳಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಶುದ್ಧೀಕರಿಸುತ್ತವೆ, ಆಕರ್ಷಕವಾಗಿ, ಅಲಂಕಾರವಾಗಿಯೂ ಕಾಣುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ಅನಗತ್ಯ ಶಬ್ದವನ್ನು ಕಡಿಮೆ ಮಾಡುತ್ತದೆ, ನಮ್ಮನ್ನು ಪ್ರಕೃತಿಯೊಂದಿಗೆ ಮರು-ಸಂಪರ್ಕಿಸುತ್ತದೆ ಹೀಗೆ ಹತ್ತು ಹಲವು ಲಾಭಗಳಿವೆ.

ಹೀಗೆ ಸಸ್ಯಗಳನ್ನು ಇಡುವುದರಿಂದ ಸಾಕಷ್ಟು ಪ್ರಯೋಜನಗಳಿದ್ದರೂ, ಯಾವ ಸಸ್ಯವನ್ನು ಮನೆಯ ಒಳಗಡೆ ಇಡಬೇಕು, ಯಾವುದು ಮನೆಯ ಹೊರಗಡೆ ಇಡಬೇಕು ಎಂಬ ಪ್ರಾತಮಿಕ ಮಾಹಿತಿಯನ್ನು ತಿಳಿದಿರಲೇಬೇಕು. ಏಕೆಂದರೆ ಕೆಲವು ಮನೆಯ ಒಳಗಡೆ ಸಸ್ಯಗಳನ್ನು ಮೆಯ ಒಳಗಡೆ ಇಟ್ಟರೆ ಇದರಿಂದ ನಕಾರಾತ್ಮಕ ಪ್ರಕ್ರಿಯೆಗಳೇ ಆಗಬಹುದು, ಮನಸ್ಸಿಗೆ ಕಹಿ ಎನಿಸಬಹುದು, ಕೀಟಗಳ ಹಾವಳಿ ಹೆಚ್ಚಾಗಬಹುದು, ಚರ್ಮದ ದದ್ದುಗಳು, ಅಲರ್ಜಿಯ ಸಮಸ್ಯೆಗಳು ಕಾಡಬಹುದು.

ಈ ಎಲ್ಲಾ ಕಾರಣಗಳಿಂದ ನಾವಿಂದು ಈ ಲೇಖನದಲ್ಲಿ ಯಾವ ಸಸ್ಯಗಳನ್ನು ಮನೆಯ ಒಳಗಡೆ ಇಡಬಾರದು ಮತ್ತು ಏಕೆ ಎಂಬುದರ ಬಗ್ಗೆ ಸವಿವರ ಮಾಹಿತಿ ನೀಡಲಿದ್ದೇವೆ:

1. ರಸಭರಿತ ಸಸ್ಯಗಳು

1. ರಸಭರಿತ ಸಸ್ಯಗಳು

ಈ ಸಸ್ಯಗಳಿಂದ ಎದುರಾಗುವ ಪ್ರಮುಖ ಸಮಸ್ಯೆಯೇ ಕೀಟಗಳ ಹಾವಳಿ. ಕಳೆದ ಕೆಲವು ವರ್ಷಗಳಲ್ಲಿ ರಸಭರಿತ ಸಸ್ಯಗಳು ಬಹಳ ಜನಪ್ರಿಯವಾಗಿವೆ, ಏಕೆಂದರೆ ಅವುಗಳು ಚಿಕ್ಕದಾಗಿದೆ ಮತ್ತು ಎಲ್ಲಿಯಾದರೂ ಇರಿಸಲು ಸುಲಭ, ಅಗ್ಗದ ಮತ್ತು ಸರಳವಾಗಿದೆ ಕಣ್ಣಿಗೆ ಇಷ್ಟವಾಗುವಂತೆ, ಆಕರ್ಷಕವಾಗಿ ಕಾಣುತ್ತದೆ. ಬಹುತೇಕರು ತ್ಮ ಮನೆಗಳಲ್ಲಿ ಈ ಸಸ್ಯಗಳನ್ನು ಹೊಂದಿದ್ದಾರೆ ಸಹ, ಆದರೆ ಈ ಸಸ್ಯಗಳನ್ನು ಖರೀದಿಸುವ ಮುನ್ನ ಮೀಲಿಬಗ್‌ಗಳು, ಬೆಚ್ಚಗಿನ ಸ್ಥಳಗಳಲ್ಲಿ ಕಂಡುಬರುವ ಕೀಟಗಳು ಇಲ್ಲದ ಬಗ್ಗೆ ಖಚಿತಪಡಿಸಿಕೊಳ್ಳಿ. ಕಾರಣ ಈ ಸಸ್ಯಗಳು ನಿಮಗೆ ಮಾತ್ರವಲ್ಲದೆ, ನೆರೆಯ ಸಸ್ಯಗಳಿಗೆ ಸಹ ಸುಲಭವಾಗಿ ಹರಡುತ್ತವೆ,ಇವುಒಮ್ಮೆ ಹೊಕ್ಕರೆ ಮತ್ತೆ ನಿವಾರಿಸುವುದು ತುಂಬಾ ಕಷ್ಟ.

2. ಒಲಿಯಾಂಡರ್

2. ಒಲಿಯಾಂಡರ್

ಈ ಸಸ್ಯಗಳ ಪ್ರಮುಖ ಸಮಸ್ಯೆ ಎಂದರೆ ಇದು ಮಾನವರು ಮತ್ತು ಪ್ರಾಣಿಗಳಿಗೆ ವಿಷಕಾರಿ ಎನ್ನುತ್ತಾರೆ. ಒಲಿಯಾಂಡರ್ ಅಥವಾ ನೆರಿಯಮ್ ಒಂದು ಪೊದೆ ಸಸ್ಯವಾಗಿದ್ದು, ಸುಂದರವಾದ ಹೂವುಗಳನ್ನು ನೀಡುತ್ತದೆ. ಇದನ್ನು ಪೂಜೆಗೆ ಬಳಸುತ್ತೇವೆ, ಈ ಹೂವುಗಳು ಬೆಲೆ ಸಹ ಹೆಚ್ಚಿದೆ. ಯುಎಸ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಒಲಿಯಾಂಡರ್ ಮಾನವರು ಮತ್ತು ಪ್ರಾಣಿಗಳಿಗೆ ಹೆಚ್ಚು ವಿಷಕಾರಿಯಾಗಿದ್ದು, ತೀವ್ರ ವಾಂತಿ, ತಲೆನೋವು ಮತ್ತು ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ. ಕೆಲವರು ಈ ಸಸ್ಯವನ್ನು ಸೇವಿಸಿ ಸಾವನ್ನಪ್ಪಿದ್ದಾರೆ ಎಂದೂ ಹೇಳಲಾಗಿದೆ. ಆದ್ದರಿಂದ ನೀವು ಸಸ್ಯ ನಿಮ್ಮ ಮನೆಯಲ್ಲಿ ಇದ್ದರೂ ಇದರಿಂದ ಕನಿಷ್ಠ ಅಂತರವನ್ನು ಕಾಪಾಡುವುದು ಒಳ್ಳೆಯದು, ಮಕ್ಕಳನ್ನು ಇದರ ಬಳಿ ಬರಲು ಬಿಡಬೇಡಿ.

3. ಅರೆಕಾ ಪಾಮ್ಸ್

3. ಅರೆಕಾ ಪಾಮ್ಸ್

ಈ ಸಸ್ಯಗಳಿಂದ ಎದುರಾಗುವ ಪ್ರಮುಖ ಸಮಸ್ಯೆ ಕೀಟಗಳು. ಇದನ್ನು ಗೋಲ್ಡನ್ ಕಬ್ಬಿನ ಪಾಮ್, ಹಳದಿ ಪಾಮ್ ಅಥವಾ ಚಿಟ್ಟೆ ಪಾಮ್ ಎಂದೂ ಕರೆಯುತ್ತಾರೆ. ಸಾಮಾನ್ಯಕ್ಕಿಂತ ದೊಡ್ಡದಾದ ಸಸ್ಯವನ್ನು ಬಯಸುವವರಿಗೆ ಅರೆಕಾ ಪಾಮ್ಸ್‌ ಬಹಳ ಜನಪ್ರಿಯವಾಗಿವೆ. ಇವು ಯಾವುದೇ ಜಾಗವನ್ನು ಉತ್ತಮವಾಗಿಸುತ್ತದೆ ಮತ್ತು ಅವು ಸುತ್ತಮುತ್ತ ಸ್ಥಳವನ್ನು ಉಷ್ಣವಲಯದ ವೈಬ್ ಆಗಿಸುತ್ತದೆ. ಆದರೆ ಈ ಸಸ್ಯಗಳ ಬೆಲೆ ಇತರೆ ಗಿಡಗಳಿಗಿಂತ ತುಸು ಹೆಚ್ಚೇ ಇರತ್ತವೆ. ನೀವು ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ ಈ ಸಸ್ಯಗಳು ಜೇಡ ಹುಳಗಳಿಗೆ ಉತ್ತಮವಾದ ಸ್ಥಳವಾಗಿ, ಈ ಸಸ್ಯದಲ್ಲಿ ಜೇಡ ಮನೆ ಕಟ್ಟಲು ಸುಲಭವಾಗಿಸುತ್ತದೆ. ಅಲ್ಲದೇ, ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವ ಮತ್ತು ಅವುಗಳ ಎಲೆಗಳನ್ನು ತಿನ್ನುವ 8 ಕಾಲಿನ ಅರಾಕ್ನಿಡ್‌ಗಳಿಗೂ ಸಹ ಈ ಸಸ್ಯ ಆಹಾರವಾಗಿದೆ.

4. ಬೋನ್ಸಾಯ್‌

4. ಬೋನ್ಸಾಯ್‌

ಎಲ್ಲರ ಬಹುಪ್ರೀತಿಯ ಬೋನ್ಸಾಯ್‌ ಸಸ್ಯಗಳ ಪ್ರಮುಖ ಸಮಸ್ಯೆ ಎಂದರೆ ಅಲರ್ಜಿಗಳು, ಚರ್ಮದ ಮೇಲೆ ಬೀರಬಹುದಾದ ನಕಾರಾತ್ಮಕ ಪರಿಣಾಮ. ವಿಶೇಷವಾಗಿ ಮರಗಳನ್ನು ಪ್ರೀತಿಸುವವರು ಮನೆಯೊಳಗೆ ನಿಜವಾದ ಗಾತ್ರದ ಮರವನ್ನು ಹೊಂದಲು ಸಾಧ್ಯವಿಲ್ಲದವರು ತಪ್ಪದೇ ಒಂದು ಬೋನ್ಸಾಯ್‌ ಮರವನ್ನು ಇಟ್ಟುಕೊಂಡಿರುತ್ತಾರೆ. ಆದರೆ ಚರ್ಮದ ಅಲರ್ಜಿ ಇರುವವರಿಗೆ ಬೊನ್ಸಾಯ್ ನಿಜವಾಗಿಯೂ ಕೆರಳಿಸಬಹುದು ಮತ್ತು ಅದರೊಂದಿಗೆ ಸಂಪರ್ಕಕ್ಕೆ ಬಂದಾಗ ಕೆಲವು ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸಸ್ಯವನ್ನು ಮುಟ್ಟುವಾಗ ನೀರು ಹಾಕುವಾಗ ಕೈಗವಸುಗಳನ್ನು ಹಾಕಲು ಮರೆಯದಿರಿ.

5. ಮನಿ ಪ್ಲಾಂಟ್‌ /ಪೊಥೋಸ್

5. ಮನಿ ಪ್ಲಾಂಟ್‌ /ಪೊಥೋಸ್

ಬಹುತೇಕ ಪ್ರತಿಯೊಬ್ಬರ ಮನೆಗಳಲ್ಲೂ ಇರುವ ಮನಿ ಪ್ಕಾಂಟ್‌ ಸಸ್ಯದ ಪ್ರಮುಖ ಸಮಸ್ಯೆ ಎಂದರೆ ಮನುಷ್ಯರು ಮತ್ತು ಪ್ರಾಣಿಗಳಿಗೆ ಇದು ವಿಷಕಾರಿ. ಅತ್ಯಂತ ಜನಪ್ರಿಯ ಒಳಾಂಗಣ ಸಸ್ಯಗಳಲ್ಲಿ ಒಂದಾಗಿರುವ ಇದು ನಾವು ಉಸಿರಾಡುವ ಗಾಳಿಯನ್ನು ಶುದ್ಧೀಕರಿಸುವಲ್ಲಿ ಅತ್ಯುತ್ತಮವಾಗಿದೆ. ಆದರೆ, ದುರದೃಷ್ಟವಶಾತ್ ಇದು ಕೆಲವು ಅನಾನುಕೂಲಗಳನ್ನು ಸಹ ಹೊಂದಿದೆ. ಈ ಸಸ್ಯವು ಸ್ವಲ್ಪ ವಿಷಕಾರಿಯಾಗಿದೆ, ವಿಶೇಷವಾಗಿ ಸಾಕುಪ್ರಾಣಿಗಳಿಗೆ. ನೀವು ಆಕಸ್ಮಿಕವಾಗಿ ಅದನ್ನು ಸೇವಿಸಿದರೆ ಹೊಟ್ಟೆಗೆ ಕಿರಿಕಿರಿ, ವಾಂತಿ, ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಸಾಕುಪ್ರಾಣಿಗಳಿಗೆ ಇದು ಇನ್ನೂ ಹೆಚ್ಚು ಕೆಟ್ಟದಾಗಿದೆ. ಅಲ್ಲದೇ, ಉಸಿರುಗಟ್ಟುವಿಕೆ, ಉರಿಯೂತ, ಉಸಿರಾಟದ ತೊಂದರೆ ಮತ್ತು ಮೂತ್ರಪಿಂಡ ವೈಫಲ್ಯ ಸೇರಿದಂತೆ ಸಾವು ಸಹ ಸಂಭವಿಸಬಹುದು.

6. ಡಂಬ್‌ ಕೇನ್ಸ್‌/ ಡಿಫೆನ್‌ಬಾಚಿಯಾ

6. ಡಂಬ್‌ ಕೇನ್ಸ್‌/ ಡಿಫೆನ್‌ಬಾಚಿಯಾ

ಎಲ್ಲೆಡೆ ಸುಲಭವಾಗಿ ಬೆಳೆಯಬಹುದಾದ ಈ ಸಸ್ಯದ ಪ್ರಮುಖ ಸಮಸ್ಯೆಯೆಂದರೆ ಇದು ಪ್ರಾಣಿಗಳಿಗೆ ವಿಷಕಾರಿ. ಸಾಮಾನ್ಯ ಒಳಾಂಗಣ ಸಸ್ಯವಾಗಿದ್ದರೂ, ನೀವು ಸಾಕುಪ್ರಾಣಿಗಳನ್ನು ಹೊಂದಿದ್ದರೆ ಅದು ಉತ್ತಮವಲ್ಲ. ಈ ಸಸ್ಯಗಳು ಕ್ಯಾಲ್ಸಿಯಂ ಆಕ್ಸಲೇಟ್ ಅನ್ನು ಹೊಂದಿರುತ್ತವೆ, ಇದು ಬೆಕ್ಕುಗಳು ಅಥವಾ ನಾಯಿಗಳು ಸೇವಿಸಿದರೆ ಬಾಯಿಯ ತೀವ್ರ ಸುಡುವಿಕೆ ಮತ್ತು ಉರಿಯೂತ ಉಂಟಾಗಬಹುದು ಎನ್ನಲಾಗಿದೆ.

7. ಸ್ಪೈಡರ್ / ಹಾವಿನ ಸಸ್ಯಗಳು / ಕ್ಲೋರೊಫೈಟಮ್ ಕೊಮೊಸಮ್

7. ಸ್ಪೈಡರ್ / ಹಾವಿನ ಸಸ್ಯಗಳು / ಕ್ಲೋರೊಫೈಟಮ್ ಕೊಮೊಸಮ್

ಪ್ರಮುಖ ಸಮಸ್ಯೆಗಳು: ಅಲರ್ಜಿಗಳು

ಯಾವುದೇ ಒಳಾಂಗಣ ಪರಿಸರಕ್ಕೆ ಉತ್ತಮ ಆಯ್ಕೆ ಸ್ಪೈಡರ್. ಅಗ್ಗದ, ಪ್ರಕಾಶಮಾನವಾದ ಹಸಿರು, ನಿರ್ವಹಿಸಲು ಸುಲಭ ಮತ್ತು ಗಾಳಿಯನ್ನು ಶುದ್ಧೀಕರಿಸುವ ಬಲವಾದ ಸಾಮರ್ಥ್ಯವನ್ನು ಹೊಂದಿರುವ ಈ ಸಸ್ಯ ತ್ವಚೆಯ ಅಲರ್ಜಿಗೆ ಕಾರಣವಾಗಬಹುದು. ಈ ಸಸ್ಯಗಳು ಅಲರ್ಜಿ ಉಳ್ಳವರಿಗೆ ಶತ್ರುವಾಗಬಹುದು. ಈ ಸಸ್ಯದ ಸಮೀಪವಿರುವವರಿಗೆ ಅಲರ್ಜಿಯಂತಹ ಸೀನುವಿಕೆ, ಶೀತ, ಇತ್ಯಾದಿಗಳನ್ನು ಗಮನಿಸಲು ಸಮಸ್ಯೆ ಕಾಡಬಹುದು.

8. ಅಲೋವೆರಾ

8. ಅಲೋವೆರಾ

ಮನುಷ್ಯನ ಹಲವಾರು ಆರೋಗ್ಯ ಮತ್ತು ತ್ವಚೆಯ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದಾಗಿರುವ ಅಲೊವೆರಾ ಸಾಕುಪ್ರಾಣಿ ಹಾಗೂ ನಾಯಿಗಳಿಗೆ ವಿಷ ಆಗಬಹುದು. ಅವುಗಳೊಳಗಿನ ಜೆಲ್ ಸಮಸ್ಯೆಯಲ್ಲ, ಆದರೆ ಸಸ್ಯದ ಇತರ ಅಂಶಗಳನ್ನು ಸೇವಿಸಿದರೆ ನಾಯಿಗಳ ಜೀರ್ಣಾಂಗ ವ್ಯವಸ್ಥೆಗೆ ಹಾನಿಸಯಾಗಬಹುದು.

9. ಇಂಗ್ಲಿಷ್ ಐವಿ/ ಹೆಡೆರಾ ಹೆಲಿಕ್ಸ್

9. ಇಂಗ್ಲಿಷ್ ಐವಿ/ ಹೆಡೆರಾ ಹೆಲಿಕ್ಸ್

ಐವಿ ಎಂದು ಸರಳವಾಗಿ ಕರೆಯಲ್ಪಡುವ ಈ ಸಸ್ಯಗಳು ವಿಶೇಷವಾಗಿ ಮೇಲ್ಮುಖವಾಗಿ ಬೆಳೆಯುವುದರಿಂದ ಮತ್ತು ಗೋಡೆಗಳಿಗೆ ಅಂಟಿಕೊಂಡು ಬೆಳೆಯುವುದರಿಂದ ಇಷ್ಟಪಡುತ್ತಾರೆ. ಆದರೆ ಈ ಸಸ್ಯ ಅಷಟ್ಏನೂ ತೊಂದರೆ ಇಲ್ಲದಿದ್ದರೂ, 10,000 ಜನರಲ್ಲಿ ಕೇವಲ ಒಬ್ಬರಿಗೆ ಅಲರ್ಜಿ ಆಗಬಹುದು. ಅದರ ಎಲೆಗಳು ಚರ್ಮದ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು ಮತ್ತು ನಾವು ಸೇವಿಸಿದಾಗ ಸ್ವಲ್ಪ ವಿಷಕಾರಿಯಾಗಬಹುದು.

10. ಜೇಡ್ ಪ್ಲಾಂಟ್/ ಕ್ರಾಸ್ಸುಲಾ ಓವಾಟಾ

10. ಜೇಡ್ ಪ್ಲಾಂಟ್/ ಕ್ರಾಸ್ಸುಲಾ ಓವಾಟಾ

ಈ ಸಸ್ಯಗಳು ನಿಮ್ಮ ಆಯು‍ಷ್ಯವನ್ನು ಮೀರಿಸುವಷ್ಟು ವರ್ಷಗಳ ಕಾಲ ಜೀವಂತವಾಗಿರುತ್ತದೆ. ಇದು ಬರೋಬ್ಬರಿ 100 ವರ್ಷಗಳು ಬದುಕಬಲ್ಲವು. ಮನೆಯಲ್ಲಿ ಇಡಲು ಉತ್ತಮವಾದ ಹಾಗೂ ಆಕರ್ಷಕವಾಗಿ ಕಾಣುವ ಈ ಸಸ್ಯ ಪ್ರಾಣಿಗಳಿಗೆ ಉತ್ತಮವಲ್ಲ. ಇದನ್ನು ಪ್ರಾಣಿಗಳು ಸೇವಿಸಿದರೆ ವಾಂತಿ, ಹೃದಯ ಬಡಿತ ಹೆಚ್ಚುವುದು ಮತ್ತು ಖಿನ್ನತೆಯಿಂದ ಬಳಲಬಹುದು.

English summary

Plants To Never Keep in your House or Workplace

Here we are discussing about Plants To Never Keep in your House or Workplace. Below you will find a list of the most common indoor plants that are bought for offices and homes, and the negative toll they can have on your family and even your pets. Read more.
Story first published: Thursday, July 1, 2021, 14:25 [IST]
X
Desktop Bottom Promotion