For Quick Alerts
ALLOW NOTIFICATIONS  
For Daily Alerts

ಕೈತೋಟ ಮಾಡಲು ಕೆಲವು ಸರಳ ಸಲಹೆಗಳು

By Hemanth
|

ಪ್ರಕೃತಿ ಮಡಿಲಿನಲ್ಲಿ ತೋಟದ ಹಸಿರಿನ ಮಧ್ಯೆ ಒಂದು ಸುತ್ತ ಹೋಗಿ ಬಂದರೆ ಆಗ ಮನಸ್ಸಿಗೆ ಸಿಗುವಂತಹ ಖುಷಿ ಹೇಳತೀರದು. ಆದರೆ ಇಂದಿನ ವ್ಯಸ್ತ ಜೀವನದಲ್ಲಿ ಇಂತದಕ್ಕೆಲ್ಲಾ ಸಮಯವೆಲ್ಲಿದೆ ಹೇಳಿ? ಆದರೂ ಗ್ರಾಮೀಣ ಭಾಗದ ಜನರು ಹಸಿರಿನ ಮಧ್ಯೆ ಇರುವ ಕಾರಣದಿಂದಾಗಿ ಅವರ ಆರೋಗ್ಯವು ಚೆನ್ನಾಗಿರುವುದು. ನಗರ ವಾಸಿಗಳು ಕಲುಷಿತ ವಾತಾವರಣದಲ್ಲಿ ವಾಸಿಸುವ ಕಾರಣದಿಂದ ಇದು ಅವರ ಆರೋಗ್ಯ ಮೇಲೆ ನೇರ ಪರಿಣಾಮ ಬೀರುವುದು. ಇಷ್ಟು ಮಾತ್ರವಲ್ಲದೆ ತಿನ್ನುವಂತಹ ಪ್ರತಿಯೊಂದು ಆಹಾರಕ್ಕೂ ರಾಸಾಯನಿಕಗಳ ಸಿಂಪಡಣೆ ಮಾಡಿರುವ ಕಾರಣದಿಂದಾಗಿ ಇದು ಆರೋಗ್ಯ ಕೆಡಿಸುವಲ್ಲಿ ದೊಡ್ಡ ಪಾತ್ರ ವಹಿಸುವುದು.

ಇದರಿಂದ ತಾಜಾ ಹಾಗೂ ಸಾವಯವವಾಗಿರುವಂತಹ ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ನಾವಾಗಿಯೇ ಬೆಳೆಸಿಕೊಂಡರೆ ಅದು ಆರೋಗ್ಯಕ್ಕೂ ಒಳ್ಳೆಯದು ಮತ್ತು ನಾವೇ ಮಾಡಿದಂತಹ ಕೈದೋಟದಲ್ಲಿ ಒಂದೆರಡು ಸುತ್ತು ಬಂದರೆ ಶುದ್ಧ ಗಾಳಿ ಸಿಗುವುದು ಮಾತ್ರವಲ್ಲದೆ ಇದರಿಂದ ಮನಸ್ಸಿಗೂ ಆನಂದ. ಇದಕ್ಕಾಗಿ ಹೆಚ್ಚಿನವರು ಇಂದಿನ ದಿನಗಳಲ್ಲಿ ಟೆರೇಸ್ ಮೇಲೆ ಹಾಗೂ ಸಿಕ್ಕಿದ ಅಲ್ಪಸ್ವಲ್ಪ ಜಾಗದಲ್ಲಿ ಕೈದೋಟ ಮಾಡಿಕೊಂಡು ತಾವೇ ತರಕಾರಿಗಳನ್ನು ಬೆಳಸುತ್ತಿದ್ದಾರೆ. ಈ ಲೇಖನದಲ್ಲಿ ನಿಮಗೆ ಇಂತಹ ಆಧುನಿಕ ಕೈದೋಟದ ಬಗ್ಗೆ ಹೇಳಿಕೊಡಲಿದ್ದೇವೆ. ಇದು ತುಂಬಾ ಸರಳ ಹಾಗೂ ಬೇಗನೆ ಫಲಿತಾಂಶ ಕೂಡ ನೀಡುವುದು. ಈ ಲೇಖನ ಓದಿದ ತಕ್ಷಣ ನೀವು ಕೂಡ ಕೈದೋಟದಲ್ಲಿ ತೊಡಗಿಕೊಳ್ಳಿ.

1. ಪ್ಲಾಸ್ಟಿಕ್ ಮಡಕೆ ಕೈದೋಟ

ಸಾವಯವಲ್ಲದೆ ಇರುವಂತಹ ವಸ್ತುಗಳನ್ನು ಸಾವಯವಾಗಿರುವ ಕೈದೋಟಕ್ಕೆ ಬಳಸುವಂತಹ ಅತ್ಯುತ್ತಮ ವಿಧಾನ ಇದಾಗಿದೆ. ಪ್ಲಾಸ್ಟಿಕ್ ಮಡಕೆಯನ್ನು ನೇರವಾಗಿ ಸಸ್ಯದ ಹಾಸಿಗೆ ಮೇಲೆ ನೇರವಾಗಿ ಅಳವಡಿಸಿ. ಇದರಿಂದ ಋತು ಬದಲಾದಾಗ ಇದನ್ನು ತೆಗೆಯಲು ಸುಲಭವಾಗುವುದು. ಬೇರೆ ಸಸ್ಯಗಳನ್ನು ಇದರಲ್ಲಿ ನೆಟ್ಟರೆ ಆಗ ಅದಕ್ಕೆ ಪೋಷಕಾಂಶದ ಕೊರತೆ ಕೂಡ ಆಗದು.

2. ಕಾರ್ಕ್ (ಮರದ ತೊಗಟೆ) ಬಳಸಿ

ಹೆಚ್ಚಾಗಿ ಕೆಲವೊಂದು ಮನೆಯಲ್ಲಿ ವೈನ್ ಬಳಸಿದ ಬಳಿಕ ಅದರ ಮರದ ಕಾರ್ಕ್ ಹಾಗೆ ಉಳಿದಿರುವುದು. ಇದನ್ನು ತೋಟದಲ್ಲಿ ಹೇಗೆ ಬಳಸಬೇಕೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಹಳೆಯ ಕಾರ್ಕ್ ಗಳನ್ನು ನೀವು ತೋಟದ ಮಣ್ಣಿನಲ್ಲಿ ಹೂತಿಟ್ಟರೆ ಆಗ ಅದು ಸಸ್ಯ ಬೆಳೆಯಲು ಒಳ್ಳೆಯ ಸ್ಥಿತಿ ನಿರ್ಮಾಣ ಮಾಡಿಕೊಡುವುದು.

3. ಪ್ಲಾಸ್ಟಿಕ್ ಫೋರ್ಕ್(ಚಮಚ) ರಕ್ಷಣೆ

ಕೀಟಗಳಿಂದ ತೋಟವನ್ನು ರಕ್ಷಿಸಲು ಕೆಲವೊಂದು ಪ್ಲಾಸ್ಟಿಕ್ ಚಮಚಗಳನ್ನು ತೋಟದ ಸುತ್ತಲು ನೇತಾಡಿಸಬೇಕು. ಇದು ಸಸ್ಯಗಳಿಗೆ ಒಳ್ಳೆಯ ರಕ್ಷಣೆ ನೀಡುವುದು ಎಂದು ಹೇಳಲಾಗುತ್ತದೆ. ಆದರೆ ಇದನ್ನು ಅತಿಯಾಗಿ ಬಳಸಬೇಡಿ.

4. ಜತೆ ಜತೆಗೆ ಸಸ್ಯಗಳನ್ನು ಬೆಳೆಸಿ

ಮನುಷ್ಯರು ಹೇಗೆ ಸ್ನೇಹಜೀವಿಯೋ ಅದೇ ರೀತಿ ಸಸ್ಯಗಳು ಕೂಡ ಎಂದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿದೆ. ಕೆಲವೊಂದು ಸಸ್ಯಗಳಿಗೆ ಇತರ ಕೆಲವು ಸಸ್ಯಗಳು ಸ್ನೇಹಿತರಾಗಿರುತ್ತವೆ. ಇದರಿಂದ ಇಂತಹ ಸಸ್ಯಗಳನ್ನು ಜತೆಯಾಗಿ ಬೆಳೆಸಿದರೆ ಆಗ ಅವುಗಳ ಬೆಳವಣಿಗೆ ಕೂಡ ಒಳ್ಳೆಯ ರೀತಿ ಆಗುವುದು. ಯಾವ ಸಸ್ಯಕ್ಕೆ ಯಾವುದು ಸ್ನೇಹಿತ ಎಂದು ಪತ್ತೆ ಹಚ್ಚುವುದು ಮಾತ್ರ ಸ್ವಲ್ಪ ಕಷ್ಟದ ಕೆಲಸವಾದರೂ ನೀವು ಮಾಡಬಹುದು.

5. ನೀರಿನ ಮರುಬಳಕೆ

ಭೂ ಮೇಲಿನ ನೀರಿನ ಬಳಕೆಯನ್ನು ಮಿತಿಗೊಳಿಸಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಇದರಿಂದ ಬಳಕೆ ಮಾಡಿದಂತಹ ನೀರನ್ನು ತೋಟಗಳಿಗೆ ಬಳಸಬೇಕು. ತರಕಾರಿ ತೊಳೆದ ಮತ್ತು ಮೊಟ್ಟೆ ಬೇಯಿಸಿದ ನೀರು ಸಸ್ಯಗಳಿಗೆ ಒಳ್ಳೆಯದು. ಇದು ಹೆಚ್ಚು ಇಳುವರಿ ನೀಡುವಂತೆ ಮಾಡುವುದು.

6. ಸಸ್ಯಗಳ ನಡುವಿನ ಅಂತರ

ಸಸ್ಯಗಳು ಸರಿಯಾಗಿ ಬೆಳೆಯಬೇಕಾದರೆ ಅವುಗಳನ್ನು ಸರಿಯಾದ ಅಂತದಲ್ಲಿ ಬಿತ್ತನೆ ಮಾಡಬೇಕು. ತರಕಾರಿ ಬೀಜಗಳನ್ನು ಬಿತ್ತನೆ ಮಾಡುವ ವೇಳೆ ನೀವು ಮಫಿನ್ ಟ್ರೇಗೆ ತೂತು ಮಾಡಿಕೊಂಡು ಬಳಸಬಹುದು. ಇದರಿಂದ ಸಾಮಾನ್ಯಕ್ಕಿಂತ ಒಳ್ಳೆಯ ರೀತಿಯಿಂದ ಗಿಡಗಳು ಬೆಳೆಯಲು ನೆರವಾಗುವುದು.

7. ಹುಲ್ಲು ಬರದಂತೆ ಕಾರ್ಡ್ ಬೋರ್ಡ್(ಹಲಗೆ) ಬಳಸಿ

ತೋಟಗಾರಿಕೆಯಲ್ಲಿ ನೀವು ಬಳಸಬಹುದಾದ ಮತ್ತೊಂದು ವಸ್ತುವೆಂದರೆ ಅದು ಕಾರ್ಡ್ ಬೋರ್ಡ್. ನೀವು ಇಲ್ಲಿ ಮಾಡಬೇಕಾದ ಕೆಲಸವೆಂದರೆ ದಪ್ಪಗಿರುವಂತಹ ಕಾರ್ಡ್ ಬೋರ್ಡ್ ನ್ನು ಮುಚ್ಚುವುದು. ಇದರಿಂದ ಲಾನ್ ನ ಮೇಲ್ಭಾಗದಲ್ಲಿ ಸಸ್ಯದ ಹಾಸಿಗೆಯು ನಿರ್ಮಾಣವಾಗುವುದು.

8 ಆದಷ್ಟು ಸಣ್ಣ ಸ್ಥಳದಲ್ಲಿ ಹೂಗಳನ್ನು ಬೆಳೆಸಿ

ಸಣ್ಣ ಸ್ಥಳದಲ್ಲಿ ಹೂಗಳನ್ನು ಬೆಳೆಸಿ ನಿಮ್ಮ ಉದ್ಯಾನವನವನ್ನು ಸುಂದರಗೊಳಿಸಲು ಸಾಧ್ಯ. ಉದ್ದನೆಯ ದಾಹಿಲಾಸ್ ಹಾಗೂ ಗ್ಲೋರಿಸೋಗಳನ್ನು ಕೈ ತೋಟದಲ್ಲಿ ಬೆಳೆಸಬಹುದು. ಪಿಂಕ್ ಹಾಗೂ ನೇರಳೆ ಬಣ್ಣದ ಹೂಗಳನ್ನು ನೆಟ್ಟು ನಿಮ್ಮ ಕೈ ತೋಟವನ್ನು ವರ್ಣರಂಜಿತಗೊಳಿಸಬಹುದು. ಕಾಸ್ಮೋ ಹಾಗೂ ಸವ್ಲಿಯಾವನ್ನು ಬೆಳೆಸಿ ನಿಮ್ಮ ತೋಟದ ಶೋಭೆಯನ್ನು ಹೆಚ್ಚಿಸಬಹುದು.

9. ಕಾಲಕಾಲಕ್ಕೆ ಅನುಗುಣವಾಗಿ ಸಸಿಗಳನ್ನು ನೆಡಿ

ಆಯಾ ಋತುವಿಗನುಸಾರವಾಗಿ ಬೆಳೆಯುವ ಸಸಿಗಳು ಯಾವಾಗಲೂ ನಿಮ್ಮ ಕೈತೋಟವನ್ನು ಸಮೃಧ್ಧಿಯಾಗಿ ಇರಿಸುತ್ತವೆ ಹಾಗೂ ವರ್ಷದ ಬಹುತೇಕ ಸಮಯ ಹಚ್ಚ ಹಸಿರಾಗಿರಿಸುತ್ತವೆ. ಹೀಗಾಗಿ, ಸಸಿಗಳನ್ನು ಸರಿಯಾದ ಕಾಲದಲ್ಲಿ ನೆಡಿರಿ ಹಾಗೂ ವರ್ಷಪೂರ್ತಿ ಹಸಿರಾದ ಕೈತೋಟವನ್ನು ನಿಮ್ಮದಾಗಿಸಿಕೊಳ್ಳಿ.

10. ಶೀಘ್ರವಾಗಿ ಬೆಳೆಯುವ ಸಸಿಗಳನ್ನು ಬೆಳೆಸಿರಿ

ಹೀಗೆ ಮಾಡುವುದರಿಂದ ನೀವು ಬೇಗನೇ ಕಟಾವು ಮಾಡಬಹುದು ಹಾಗೂ ಆ ಜಾಗದಲ್ಲಿ ಹೊಸ ಸಸಿಗಳನ್ನು ಬೆಳೆಸಬಹುದು. ಹೀಗೆ ಮಾಡುವುದರ ಮೂಲಕ ಕಳೆ ಗಿಡಗಳಿಗೆ ಅವಕಾಶ ನೀಡದಂತಾಗುತ್ತದೆ ಹಾಗೂ ನಿಮ್ಮ ಕೈತೋಟವೂ ಕೂಡ ಸಮೃಧ್ಧವಾಗುತ್ತದೆ.

11. ಉತ್ತಮ ಗುಣಮಟ್ಟದ ಮಣ್ಣು ಬಳಸಿ

ಮಣ್ಣಿನ ಗುಣಧರ್ಮವನ್ನು ಅರಿತುಕೊಳ್ಳಿ ನಿಮ್ಮ ಕೈತೋಟದ ಮಣ್ಣಿನ ಗುಣಧರ್ಮವನ್ನು ತಿಳಿದುಕೊಳ್ಳುವುದರಿಂದ, ನಿಮ್ಮ ಕೈತೋಟಕ್ಕೆ ಎಷ್ಟು ಬಾರಿ ನೀರುಣಿಸಬೇಕೆಂಬುದನ್ನು ನಿರ್ಣಯಿಸಲು ಸಹಕಾರಿಯಾಗುತ್ತದೆ. ಈ ಮೇಲಿನ ಕೈತೋಟದ ಆರೈಕೆಯ ಕೆಲವು ಸೂತ್ರಗಳು ನಿಮ್ಮ ಕೈತೋಟವನ್ನು ಹಸಿರಾಗಿ ಮತ್ತು ಸ್ವಚ್ಚವಾಗಿರಿಸಲು ಸಹಕಾರಿಯಾಗಿವೆ ಹಾಗೂ ಅನುಸರಿಸಲು ಸುಲಭವಾಗಿವೆ. ಇನ್ನುನಿರ್ದಿಷ್ಟ ಪ್ರಮಾಣದಲ್ಲಿ ಸೂರ್ಯನ ಬೆಳಕು ಬೀಳುವಂತಹ ಹಿತ್ತಲನ್ನು ಆಯ್ಕೆ ಮಾಡಿಕೊಳ್ಳಿ. ಸೂರ್ಯನ ಬೆಳಕು ಸಸ್ಯಗಳಿಗೆ ಶಕ್ತಿಯ ಮೂಲ ಮತ್ತು ಇದು ಗಿಡಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಿನದಲ್ಲಿ ಕನಿಷ್ಠ 5-6 ಗಂಟೆಗಳ ಕಾಲ ಸಸ್ಯಗಳಿಗೆ ಸೂರ್ಯನ ಬೆಳಕು ಸಿಗಬೇಕು. ತರಕಾರಿ ತೋಟ ಮಾಡಲು ನೆರಳಿನ ಪ್ರದೇಶ ಆಯ್ಕೆ ಮಾಡಬೇಡಿ.

English summary

Easy Gardening Tips & Tricks for Beginners

Indeed there is nothing like walking up to a beautiful garden. There is a certain refreshing feeling associated with it. Irrespective of how stressed out you are about life at large, if you spend some time in the lap of nature, you end up feeling rejuvenated. In today's modern city life, one of the only ways to be able to do so is by going into your very own garden. In such a case, it is up to us to invest our efforts into gardening. Another major advantage of having a kitchen garden of your own is the fact that the vegetables that grow there are not just free from harmful pesticides and chemicals,but they are much fresher than those available in the market.
X