ಕ್ರಿಸ್‌ಮಸ್‌ಗಾಗಿ ನಿಮ್ಮ ಮನೆ ಉದ್ಯಾನದ ಅಲಂಕಾರ ಹೀಗಿರಲಿ

Posted By: Jaya Subramanya
Subscribe to Boldsky

ಕ್ರಿಸ್‌ಮಸ್ ಹಬ್ಬಕ್ಕೇ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ಸಮಯದಲ್ಲಿ ನಾವು ಮಾಡಬೇಕಾಗಿರುವ ಬಹಳಷ್ಟು ಕೆಲಸಗಳಿವೆ. ಮನೆಯ ಅಲಂಕಾರದಿಂದ ಹಿಡಿದು ಹೂತೋಟದವರೆಗಿನ ಅಲಂಕಾರವನ್ನು ನಿರ್ವಹಿಸುವ ಕ್ರಮವನ್ನು ನಾವು ಈಗ ಕೈಗೊಳ್ಳಬೇಕಾಗಿದೆ. ಡಿಸೆಂಬರ್‌ನ ತಣ್ಣನೆಯ ಚಳಿಯ ವಾತಾವರಣ ಮತ್ತು ಕ್ರಿಸ್‌ಮಸ್ ಹಬ್ಬದ ಆನಂದ ಇದೆರಡೂ ಮಿಳಿತಗೊಂಡರೆ ಹಬ್ಬಕ್ಕೆ ಇನ್ನಷ್ಟು ಮೆರುಗು ಬಂದೇ ಬರುತ್ತದೆ.

ನಮ್ಮ ದೇಶದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿ ಕೂಡ ಕ್ರಿಸ್‌ಮಸ್ ಸಡಗರ ಡಿಸೆಂಬರ್ ಆದಿಯಿಂದಲೇ ಆರಂಭಗೊಳ್ಳುತ್ತದೆ. ಹಿಮದ ಧಾರೆ ಈ ಸಮಯದಲ್ಲಿ ಅಲ್ಲಿ ಬೀಳುವುದರಿಂದ ಅಲ್ಲಿನವರು ಮಂಜಿನೊಂದಿಗೆ ಆಡುತ್ತಾ ಕ್ರಿಸ್‌ಮಸ್ ಅನ್ನು ಬರಮಾಡಿಕೊಳ್ಳುತ್ತಾರೆ. ಪ್ರತೀ ವರ್ಷದಂತೆ ಈ ಬಾರಿ ಕೂಡ ನಿಮ್ಮ ಕ್ರಿಸ್‌ಮಸ್ ಆಚರಣೆ ಎಂದಿನಂತೆಯೇ ಇದೆ ಎಂದಾದಲ್ಲಿ ಈ ಬಾರಿ ನಾವು ಕೆಲವೊಂದು ಮಾರ್ಪಾಡುಗಳನ್ನು ನಿಮ್ಮ ಮುಂದೆ ಇಡುತ್ತಾ ನೀವು ಹಬ್ಬವನ್ನು ಇನ್ನಷ್ಟು ಆನಂದಿಸುವಂತೆ ಮಾಡಲಿರುವೆವು.

ಹಬ್ಬ ಯಾವುದೇ ಆಗಿರಲಿ ಮನೆಯ ಅಲಂಕಾರ ಅತಿಮುಖ್ಯವಾಗಿರುತ್ತದೆ. ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸಲು ಮನೆಯನ್ನು ಚೊಕ್ಕಟವಾಗಿರಿಸಬೇಕಾಗುತ್ತದೆ. ಈ ಬಾರಿಯ ಕ್ರಿಸ್‌ಮಸ್‌ಗಾಗಿ ನಿಮ್ಮ ಮನೆಯನ್ನು ಆಕರ್ಷಕವಾಗಿ ಅಂದಗೊಳಿಸುವ ಮೂಲಕ ಹೊಸ ಮಾರ್ಪಾಡನ್ನು ತಂದುಕೊಳ್ಳಬಹುದಲ್ಲವೇ? ಇಂದಿನ ಲೇಖನದಲ್ಲಿ ಮನೆಯ ಪ್ರತಿಯೊಂದು ಮೂಲೆಯನ್ನೂ ಅಂದಗೊಳಿಸುವುದು ಹೇಗೆ ಎಂಬುದನ್ನು ಕೆಲವೊಂದು ಅಲಂಕಾರಿಕ ವಿಧಾನಗಳ ಮೂಲಕ ತಿಳಿಸುತ್ತಿದ್ದೇವೆ. ಈ ಅಲಂಕಾರವನ್ನು ಮಾಡಿದ ನಂತರ ನಿಮ್ಮ ಮನೆಗೆ ಬರುವ ಅತಿಥಿಗಳು ನಿಮ್ಮ ಕಲಾಚಾತುರ್ಯವನ್ನು ಮೆಚ್ಚುವುದು ಖಂಡಿತ...

ಮನೆಯ ಅಲಂಕಾರ

ಮನೆಯ ಅಲಂಕಾರ

ಬಾಗಿಲಿಗೆ ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸುವುದಕ್ಕಾಗಿ ಮನೆಯ ಬಾಗಿಲನ್ನು ಅಂದವಾಗಿ ಅಲಂಕರಿಸಿ. ಕ್ರಿಸ್‌ಮಸ್ ಹಬ್ಬದ ಶುಭಾಶಯ ಇಲ್ಲವೇ ಹೂಗಳನ್ನು ಬಳಸಿಕೊಂಡು ನಿಮ್ಮ ಮನೆಯ ಮುಖ್ಯದ್ವಾರವನ್ನು ಹೂವು ಹಾಗೂ ಇತರ ಅಲಂಕಾರಗಳನ್ನು ಬಳಸಿಕೊಂಡು ಬಾಗಿಲಿನ ಅಲಂಕಾರವನ್ನು ಮಾಡಿ. ಇಲ್ಲವೇ ಹೂವಿನ ವ್ರೆತ್‌ ಅನ್ನು ಬಾಗಿಲಿಗೆ ಬಳಸಬಹುದಾಗಿದೆ. ಹಾಗೆಯೇ ಸ್ವಲ್ಪ ಹಸಿರು ಸಸ್ಯಗಳನ್ನು ಹೂವಿನ ಜೊತೆ ಬಳಸಿಕೊಳ್ಳಿ.

ಲಿವಿಂಗ್ ರೂಮ್

ಲಿವಿಂಗ್ ರೂಮ್

ಕ್ರಿಸ್‌ಮಸ್ ಟ್ರಿಯನ್ನು ಇರಿಸುವ ಲಿವಿಂಗ್ ರೂಮ್‌ನ ಅಲಂಕಾರವನ್ನು ನೀವು ತಪ್ಪದೆ ಮಾಡಬೇಕು. ಇದು ಪ್ರತಿಯೊಬ್ಬರನ್ನು ಆಕರ್ಷಿಸುವ ರೀತಿಯಲ್ಲಿರಬೇಕು. ಬೇಡದೇ ಇರುವ ವಸ್ತುಗಳನ್ನು ಬಳಸಿಕೊಂಡು ಸ್ಟಾರ್‌ಗಳು, ಅಲಂಕಾರಿಕ ವಸ್ತುಗಳನ್ನು ಬಳಸಿ ಇಲ್ಲದಿದ್ದರೆ ಕೆಲವೊಂದು ಲೈಟ್‌ಗಳನ್ನು ಸುತ್ತಿ ಮರಕ್ಕೆ ಜೋಡಿಸಬಹುದಾಗಿದೆ. ಲಿವಿಂಗ್ ರೂಮ್‌ನಲ್ಲಿ ಟೇಬಲ್ ಇದ್ದರೆ ಅದನ್ನು ಅಲಂಕರಿಸಿ. ಬೆಲ್ ರಿಬ್ಬನ್‌ಗಳನ್ನು ಬಳಸಿ ಮೇಜನ್ನು ಅಲಂಕರಿಸಿ.

ಚಾಂಡಿಲಿಯರ್ಸ್‌ಗಾಗಿ

ಚಾಂಡಿಲಿಯರ್ಸ್‌ಗಾಗಿ

ನಕ್ಷತ್ರಪುಂಜಗಳು, ಚೆಂಡುಗಳು, ಸಂಗೀತ ವಾದ್ಯಗಳು, ದೇವದೂತರು ದೀಪಗಳನ್ನು ಅಲಂಕರಿಸಲು ಬಳಸಿ. ಇವುಗಳನ್ನು ಎಳೆಗಳನ್ನು ಬಳಸಿ ಬೆಳಕನ್ನು ಒಳಭಾಗದಿಂದ ತೂರಿಸಬೇಕು ಮತ್ತು ವಿವಿಧ ಹಂತಗಳಲ್ಲಿ ತೂಗುಹಾಕಬೇಕು. ಹೀಗಿದ್ದಾಗ ಜನರು ಇದನ್ನು ನೋಡಿಯೇ ನೋಡುತ್ತಾರೆ. ಸ್ವಲ್ಪ ವಿಭಿನ್ನವಾಗಿ ಅಲಂಕಾರವನ್ನು ಮಾಡಿ.

ಊಟದ ಮೇಜು

ಊಟದ ಮೇಜು

ಊಟದ ಮೇಜನ್ನು ಅಲಂಕರಿಸಲು ಕ್ಯಾಂಡಲ್‌ಗಳನ್ನು ಬಳಸಬಹುದು. ಸೀಸನ್ ಹಣ್ಣುಗಳನ್ನು ಬಳಸಿ ಮೇಜನ್ನು ಅಲಂಕರಿಸಿ. ಟೇಬಲ್ ಬಟ್ಟೆಗಳನ್ನು ಮೇಜಿಗೆ ಹಾಸಿ ಅದರ ಮೇಲೆ ಹಣ್ಣುಗಳನ್ನು, ಆಹಾರಗಳನ್ನು ಇಡಿ. ನಿಮ್ಮ ಮೆಚ್ಚಿನ ವೈನ್ ಅನ್ನು ಅಲಂಕಾರಿಕ ಬಾಟಲಿಯಲ್ಲಿ ಹಾಕಿಡಿ.

ಕಿಟಕಿಗಳಿಗೆ

ಕಿಟಕಿಗಳಿಗೆ

ನಿಮ್ಮ ಮನೆಯ ಕಿಟಕಿಯನ್ನು ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ. ಕ್ಯಾಂಡಿ ಕೇನ್‌ಗಳನ್ನು ಬಳಸಿ. ಕೆಂಪು ಮತ್ತು ಕೆಲವೊಂದು ಸಾಂಪ್ರದಾಯಿಕ ಬಣ್ಣಗಳನ್ನು ಬಳಸಿ ಕಿಟಕಿಯನ್ನು ಸಿಂಗರಿಸಿ. ಕಿಟಕಿಯ ಹಿಂಭಾಗಕ್ಕೆ ಬಿಳಿ ಬಣ್ಣವನ್ನು ಬಳಸಿ.

ಮ್ಯಾಂಟಲ್

ಮ್ಯಾಂಟಲ್

ಮನೆಯಲ್ಲಿ ಫೈರ್‌ಪ್ಲೇಸ್ ಇದೆ ಎಂದಾದಲ್ಲಿ ಇದನ್ನೂ ನೀವು ಅಲಂಕರಿಸಬಹುದು. ಇಲ್ಲಿ ಬಳಸುವ ಬಣ್ಣ ಸುತ್ತಲಿಗೂ ಅನ್ವಯವಾಗುವುದರಿಂದ ಸೂಕ್ತವಾಗಿರುವ ಬಣ್ಣವನ್ನು ಬಳಸಿ. ಇಲ್ಲಿ ಕೂಡ ಕ್ರಿಸ್‌ಮಸ್ ಶುಭಾಶಯಗಳನ್ನು ಬಳಸಿ. ಮ್ಯಾಂಟಲ್ ಸಿಂಗರಣೆಯನ್ನು ನೀವು ಮಾಡಬಹುದು.

 ಮೆಟ್ಟಿಲು

ಮೆಟ್ಟಿಲು

ನಿಮ್ಮ ಮನೆಯ ಮಹಡಿಯ ಮೆಟ್ಟಿಲನ್ನು ಅಲಂಕರಿಸುವುದನ್ನು ಮರೆಯದಿರಿ. ದಾರಗಳನ್ನು ಹಸಿರನ್ನು ಬಳಸಿ ಮೆಟ್ಟಿಲಿನ ಅಲಂಕಾರವನ್ನು ಮಾಡಿ.

ಉದ್ಯಾನ ಅಲಂಕಾರ

ಉದ್ಯಾನ ಅಲಂಕಾರ

ನೀವು ಮನೆಯ ಅಲಂಕಾರವನ್ನು ಮಾಡುವುದರ ಜೊತೆಗೆ ಉದ್ಯಾನದ ಅಲಂಕಾರವನ್ನು ಮಾಡಿ. ಹಸಿರು, ರಿಬ್ಬನ್, ಲೈಟಿಂಗ್ಸ್ ಅನ್ನು ಬಳಸಿ. ಇನ್ನು ಉದ್ಯಾನದಲ್ಲಿ ಕೂಡ ನೀವು ಕ್ರಿಸ್‌ಮಸ್ ಮರವನ್ನು ಇರಿಸಬಹುದು. ಮರದ ಕಟ್ಟಿಗೆಯನ್ನು ಬಳಸಿಕೊಂಡು ಬೇರೆ ಬೇರೆ ಅಲಂಕಾರಗಳನ್ನು ನಿಮ್ಮ ಉದ್ಯಾನಕ್ಕೆ ಮಾಡಬಹುದು. ಕ್ರಿಬ್ ಅನ್ನು ತಯಾರಿಸಿ. ಅಂತೆಯೇ ಕ್ರಿಸ್ತುವಿನ ಜನನ ಸ್ಥಳವನ್ನು ಗೋಲದಲಿಯ ರೂಪದಲ್ಲಿ ಮಾಡಿ. ನಿಮ್ಮ ಉದ್ಯಾನದಲ್ಲಿ ಬೆಂಚ್ ಇದ್ದಲ್ಲಿ ಅದಕ್ಕೆ ಬಣ್ಣವನ್ನು ಬಳಸಿ. ಮನೆಗೆ ಬಣ್ಣದ ಲೈಟ್‌ಗಳನ್ನು ಬಳಸಿ.

English summary

Beautiful Home And Garden Decoration Ideas For This Christmas Season

Festive seasons are meant for rejoicing and there is no better time than Christmas for it. With the onset of December, the spirit of the season kicks in and the effect of this can be seen all over - homes, public spaces, on the streets, and where not.Not a single place is left without a decoration. Decorating the space we live in for Christmas is a way to express joy for the season and, in addition, it is a makeover for the house. It brings in a sense of goodness when things are bright all around us.
Story first published: Thursday, December 14, 2017, 23:31 [IST]