Just In
Don't Miss
- News
ಯಡಿಯೂರಪ್ಪ ಭೇಟಿಗೂ ಮೊದಲು ಕುಮಾರ್ ಬಂಗಾರಪ್ಪ ಮುನಿಸು!
- Sports
ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ: ಜೀವಮಾನ ಶ್ರೇಷ್ಠ ಸ್ಥಾನಕ್ಕೇರಿದ ರೋಹಿತ್ ಶರ್ಮಾ, ಅಶ್ವಿನ್ ನಂಬರ್ 3
- Movies
ಪುನೀತ್ ರಾಜ್ ಕುಮಾರ್ ಸಾಧನೆಗೆ ಶುಭಕೋರಿದ ಕಿಚ್ಚ ಸುದೀಪ್
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೋಟದಲ್ಲಿರುವ ಕಳೆ ಗಿಡಗಳನ್ನು ನಿವಾರಿಸಲು ಸುರಕ್ಷಿತ ಪರಿಹಾರ!
ನಿಮ್ಮ ಮನೆಯ ಕೈತೋಟದಲ್ಲಿ ಹಲವಾರು ಕಳೆಗಳು ಬೆಳೆದಿದ್ದಲ್ಲಿ, ಅದನ್ನು ನಿವಾರಿಸಲು ನೀವು ಪಡಿಪಾಟಲು ಪಡುತ್ತಿರಬಹುದು. ಅದನ್ನು ಕೀಳುವ ಪ್ರಯತ್ನವನ್ನು ಮಾಡುವ ಜೊತೆಗೆ, ಬಹುಶಃ ನೀವು ಮಾರುಕಟ್ಟೆಯಲ್ಲಿ ದೊರೆಯುವ ಕಳೆ ನಿವಾರಕಗಳನ್ನು ಮತ್ತು ರಾಸಾಯನಿಕಗಳನ್ನು ಸಹ ಬಳಸಬಹುದು.
ಈ ಕಳೆ ನಿವಾರಕಗಳು ಕೇವಲ ಗಿಡಗಳಿಗಷ್ಟೇ ಅಲ್ಲದೆ ಮನುಷ್ಯರು ಮತ್ತು ಪ್ರಾಣಿಗಳಿಗೆ ಎರಡಕ್ಕೂ ಸಹ ಮಾರಕ ಎಂಬ ವಿಚಾರ ನಿಮಗೆ ತಿಳಿದಿರುವುದೇ. ಕೆಲವೊಂದು ಕಳೆ ನಿವಾರಕಗಳನ್ನು ಬಳಸಿದಲ್ಲಿ, ಅದು ಪಕ್ಕದಲ್ಲಿರುವ ನೀರಿನ ಆಕರಗಳನ್ನು ಸಹ ಮಲಿನ ಮಾಡುತ್ತವೆ.
ಅದೃಷ್ಟವಶಾತ್ ನಮ್ಮ ಮನೆಯಲ್ಲಿಯೇ ಕೆಲವೊಂದು ಕಳೆ ನಿವಾರಕ ಮನೆಮದ್ದುಗಳು ದೊರೆಯುತ್ತವೆ. ಇವು ಮಾನವ ಮತ್ತು ಪ್ರಾಣಿಗಳೆರಡಕ್ಕು ಸುರಕ್ಷಿತ. ರಾಸಾಯನಿಕಗಳಿಗೆ ಹೋಲಿಸಿದರೆ, ಇವು ಸ್ವಾಭಾವಿಕವಾಗಿ ಕಳೆ ಸಸಿಗಳನ್ನು ಕೊಂದು ಹಾಕುತ್ತವೆ. ಇವುಗಳು ಅಗ್ಗದ ದರದಲ್ಲಿ ನಿಮಗೆ ದೊರೆಯುತ್ತವೆ ಎಂಬುದು ಇವುಗಳ ಹೆಚ್ಚುಗಾರಿಕೆಗಳಲ್ಲಿ ಒಂದು.
ಸ್ವಾಭಾವಿಕವಾಗಿ ಕಳೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂದು ಆಲೋಚಿಸುತ್ತಿರುವ ನಿಮಗಾಗಿ ಬೋಲ್ಡ್ ಸ್ಕೈ ಇಂದು ಮನೆಯಲ್ಲಿಯೇ ದೊರೆಯುವ ಮನೆ ಮದ್ದುಗಳನ್ನು ಬಳಸಿ ಕಳೆಗಳನ್ನು ನಿವಾರಿಸಿಕೊಳ್ಳುವ ಉಪಾಯಗಳನ್ನು ತಿಳಿಸಿಕೊಡುತ್ತಿದೆ. ಬನ್ನಿ ಆ ಪದಾರ್ಥಗಳು ಯಾವುವು ಎಂದು ತಿಳಿದುಕೊಳ್ಳೋಣ....

ವಿನಿಗರ್
ಕಳೆಗಳನ್ನು ನಿವಾರಿಸಿಕೊಳ್ಳಲು ಆಪಲ್ ಸಿಡೆರ್ ವಿನಿಗರ್ (ಎಸಿವಿ) ಅಥವಾ ವೈಟ್ ವಿನಿಗರ್ ಅನ್ನು ನೀವು ಬಳಸಿಕೊಳ್ಳಬಹುದು. ವಿನಿಗರಿನಲ್ಲಿರುವ ಅಧಿಕ ಆಮ್ಲದ ಅಂಶವು ಕಳೆಯನ್ನು ಕೊಂದು ಹಾಕುತ್ತದೆ.ಈ ವಿನಿಗರಿಗೆ ನೀರನ್ನು ಬೆರೆಸುವ ಮೂಲಕ ಅಥವಾ ಹಾಗೆಯೇ ಪ್ರಬಲ ಮಟ್ಟದಲ್ಲಿಯೇ ಕಳೆಗಳ ಮೇಲೆ ಪ್ರಯೋಗಿಸಬಹುದು. ಆದರೆ ಮೊದಲ ಬಾರಿಗೆ ದುರ್ಬಲ ಮಟ್ಟದಲ್ಲಿ ( 1 ಭಾಗ ವಿನಿಗರಿಗೆ 1 ಭಾಗ ನೀರನ್ನು ಬೆರೆಸಿ) ಬಳಸಿ ಮತ್ತು ನಂತರ ಪ್ರಬಲ ಮಟ್ಟದಲ್ಲಿ ಪ್ರಯೋಗಿಸಿ. ಒಂದು ವೇಳೆ ಕಳೆಯು ಹೆಚ್ಚಾಗಿದ್ದಲ್ಲಿ ನೀವು ಇದನ್ನು ಸ್ಪ್ರೇ ಮಾಡಬೇಕಾಗುತ್ತದೆ. ಇದರ ಜೊತೆಗೆ ಸ್ವಲ್ಪ ಖಾದ್ಯವನ್ನು ಬೆರೆಸಿಕೊಂಡರೆ, ಕಳೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಹಾಯವಾಗುತ್ತದೆ.

ಉಪ್ಪು
ಉಪ್ಪನ್ನು ಬಳಸುವುದರಿಂದ ಮಣ್ಣಿನಲ್ಲಿ ಕಳೆ ಬೆಳೆಯುವುದನ್ನು ತಡೆಗಟ್ಟಬಹುದು. ಉಪ್ಪಿನಂಶ ಇರುವ ಮಣ್ಣಿನಲ್ಲಿ ಗಿಡಗಳು ಬೆಳೆಯುವುದಿಲ್ಲ. ಪೇವ್‌ಮೆಂಟ್ ಪ್ರದೇಶ ಅಥವಾ ಗ್ರೆವೆಲ್ ಪಾಥ್ ಮುಂತಾದ ಕಡೆ ತಣ್ಣೀರು ಅಥವಾ ಬಿಸಿ ನೀರಿನ ಜೊತೆಗೆ 1/2 ಕಪ್ ಉಪ್ಪನ್ನು ಬೆರೆಸಿ ಸ್ಪ್ರೇ ಮಾಡಿ.

ಬ್ಲೀಚ್
ಇದು ಸಹ ಕಳೆಗಳನ್ನು ಕೊಲ್ಲಲು ಇರುವ ಅತ್ಯುತ್ತಮ ಮನೆ ಮದ್ದುಗಳಲ್ಲಿ ಒಂದಾಗಿದೆ. ಬ್ಲೀಚ್‌ನ ಪ್ರಬಲ ಅಂಶಗಳು ಕಳೆಗಳನ್ನು ಬೇಗ ಕೊಲ್ಲುತ್ತವೆ. ದಿನದಲ್ಲಿ ಬಿಸಿಲು ಅಧಿಕವಾಗಿರುವ ಸಮಯದಲ್ಲಿ ಸ್ಪ್ರೇ ಮೂಲಕ ಬ್ಲೀಚನ್ನು ನೇರವಾಗಿ ಕಳೆಗಳ ಮೇಲೆ ಸಿಂಪಡಿಸಿ. ಇದನ್ನು ಅಧಿಕ ಪ್ರಮಾಣದಲ್ಲಿ ಬಳಸಬೇಡಿ. ಏಕೆಂದರೆ ಅಧಿಕವಾದ ಬ್ಲೀಚ್ ಕಳೆಗಳನ್ನಷ್ಟೇ ಅಲ್ಲದೆ, ಇತರೆ ಗಿಡಗಳನ್ನು ಸಹ ಬೆಳೆಯಲು ಬಿಡುವುದಿಲ್ಲ.

ಬೇಕಿಂಗ್ ಸೋಡಾ
ಕಳೆಗಳ ಮೇಲೆ ಬೇಕಿಂಗ್ ಸೋಡಾವನ್ನು ಲೇಪಿಸಿ. ಇದನ್ನು ಹಲವಾರು ಬಾರಿ ಪುನರಾವರ್ತನೆ ಮಾಡಬೇಕಾದ ಅಗತ್ಯ ಬರಬಹುದು. ಚಳಿಗಾಲದಲ್ಲಿ ಕಳೆಗಳು ಸಕ್ರಿಯವಾಗಿ ಬೆಳೆಯುತ್ತವೆ. ಆ ಸಮಯದಲ್ಲಿ ಈ ಬೇಕಿಂಗ್ ಸೋಡಾವನ್ನು ಬಳಸಿ. ಬೇಸಿಗೆಯಲ್ಲೂ ಸಹ ಇದನ್ನು ಬಳಸಬಹುದು.

ರಬ್ಬಿಂಗ್ ಆಲ್ಕೋಹಾಲ್
ಕಳೆ ಗಿಡಗಳನ್ನು ಹೇಗೆ ಕೊಲ್ಲುವುದು? ರಬ್ಬಿಂಗ್ ಆಲ್ಕೋಹಾಲನ್ನು ಕಳೆ ಗಿಡಗಳ ಮೇಲೆ ಉಜ್ಜಿ. ಇದು ಸ್ವಾಭಾವಿಕವಾದ ಕಳೆ ನಿವಾರಕಗಳು ಆಗಿವೆ. ಇದು ಕಳೆ ಗಿಡಗಳಲ್ಲಿರುವ ತೇವಾಂಶವನ್ನು ಹೀರಿಕೊಂಡು ಬಿಡುವ ಮೂಲಕ, ಕಳೆ ಗಿಡಗಳನ್ನು ಕೊಲ್ಲುತ್ತವೆ. ನಿಮ್ಮ ಸ್ಪ್ರೇ ಬಾಟಲಿಗೆ ನೀರು ಮತ್ತು ಕೆಲವು ಚಮಚ ರಬ್ಬಿಂಗ್ ಆಲ್ಕೋಹಾಲ್ ಬೆರೆಸಿ. ಕಳೆ ಗಿಡಗಳ ಮೇಲೆ ಸ್ಪ್ರೇ ಮಾಡಿ.