For Quick Alerts
ALLOW NOTIFICATIONS  
For Daily Alerts

ಬಹುಪಯೋಗಿ ಲಿಂಬೆಯನ್ನು ಕೈತೋಟದಲ್ಲಿ ಬೆಳೆಸುವುದು ಹೇಗೆ?

|

ವಿಟಮಿನ್ ಸಿ ಅಧಿಕವಾಗಿರುವ ಲಿಂಬೆಹಣ್ಣಿನಲ್ಲಿ ಆರೋಗ್ಯಕಾರಿ ಪ್ರಯೋಜನಗಳು ಅಧಿಕವಾಗಿರುತ್ತವೆ. ಈ ಬೇಸಿಗೆಯಲ್ಲಿ ಲಿಂಬೆಹಣ್ಣಿನ ಪಾನೀಯವನ್ನು ಸೇವಿಸಿದರೆ ಆಹ್ಲಾದಕತೆ ನಮಗೆ ದೊರೆಯುತ್ತದೆ. ಇದರಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಲು ನಿಂಬೆರಸವನ್ನು ಯಾವಾಗ ಬೇಕಾದರು ನೀವು ಸೇವಿಸಬಹುದು. ಇಂತಹ ಒಂದು ಅದ್ಭುತವಾದ ಹಣ್ಣನ್ನು ನಿಮ್ಮ ಮನೆಯ ತೋಟದಲ್ಲಿ ಬೆಳೆಯುವ ಬಗೆಯನ್ನು ನಾವು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಈ ಬಗೆಯಲ್ಲಿ ನೀವು ಈ ಹಣ್ಣನ್ನು ಬೆಳೆದುಕೊಂಡರೆ ಅದು ಸಾವಯವ ಹಣ್ಣಾಗಿರುತ್ತದೆ, ಕೀಟನಾಶಕಗಳಿಂದ ಮುಕ್ತವಾಗಿರುತ್ತದೆ ಮತ್ತು ರುಚಿಕರವು ಸಹ ಆಗಿರುತ್ತದೆ. ಲಿಂಬೆಹಣ್ಣಿನ ಹೂವುಗಳು ಸೂರ್ಯನ ಬೆಳಕಿನಲ್ಲಿ ಮಿರಿ ಮಿರಿ ಎಂದು ಮಿರುಗುತ್ತಿರುತ್ತವೆ. ಇವು ನಿಮ್ಮ ತೋಟಕ್ಕೆ ಮೆರಗನ್ನು ಸಹ ನೀಡುತ್ತದೆ. ಇದಕ್ಕೆ ಬಿಸಿಲಿನ ಅವಶ್ಯಕತೆ ಇರುವುದರಿಂದ ಇದನ್ನು ಹೊರಾಂಗಣದಲ್ಲಿ ಬೆಳೆಯುವುದು ಉತ್ತಮ.

ಆದರೂ ಸಹ ನಿಮಗೆ ಅಗತ್ಯವಾದರೆ ಇದನ್ನು ಒಳಾಂಗಣದಲ್ಲಿ ಸಹ ಬೆಳೆಯಬಹುದು. ಇದಕ್ಕಾಗಿ ನಿಮಗೆ ನಿಂಬೆ ಗಿಡ, ನೀರಿನ ಅಗತ್ಯತೆಗಳು, ಹವಾಮಾನ, ಗೊಬ್ಬರ ಮತ್ತು ಸೂರ್ಯನ ಬೆಳಕಿನ ಅವಶ್ಯಕತೆ ಇರುತ್ತದೆ. ಕೈತೋಟದಲ್ಲಿ ಪಪ್ಪಾಯಿಯ ಗಿಡವನ್ನು ನೆಡುವ ಸುಲಭ ಹ೦ತಗಳು

ಕುಂಡದ ಬಗೆ

How To Grow Lemon In Your Garden

ಲಿಂಬೆ ಗಿಡ ಬೆಳೆಸಲು ಎಂತಹ ಕುಂಡ ಬೇಕು? ಇದಕ್ಕೆ 6 ರಿಂದ 7 ಇಂಚು ಆಳವಿರುವ ಕುಂಡ ಬೇಕು. ಇದರ ಅಗಲ ಮೂರರಿಂದ ಐದು ಇಂಚು ಇರಬೇಕು. ನಿಮಗೆ ಬೇಕಾದರೆ ಇದನ್ನು ದೊಡ್ಡ ಗಾತ್ರದ ಕುಂಡದಲ್ಲಿ ಸಹ ನೀವು ನೆಡಬಹುದು. ದೊಡ್ಡ ಗಿಡಗಳಿಗೆ ದೊಡ್ದದಾದ ಕುಂಡಗಳು ಅಗತ್ಯವಿರುತ್ತದೆ. ಕುಂಡದಲ್ಲಿ ಬೆಳೆದ ಗಿಡಗಳು ಸಹ ಕೆಲವು ವರ್ಷದ ನಂತರ ಹಣ್ಣುಗಳನ್ನು ಬಿಡಲು ಆರಂಭಿಸುತ್ತದೆ.

ಬೀಜವನ್ನು ಬಿತ್ತುವುದು


ಸಾವಯವ ಲಿಂಬೆಯನ್ನು ಕೊಂಡುಕೊಳ್ಳಿ. ಅದರಲ್ಲಿರುವ ಬೀಜಗಳನ್ನು ಕತ್ತರಿಸಿ ಹೊರತೆಗೆಯಿರಿ. ಸ್ವಲ್ಪ ದೊಡ್ಡ ಬೀಜಗಳನ್ನು ಆರಿಸಿಕೊಳ್ಳಿ. ಈ ಬೀಜಗಳನ್ನು ಬಾಯಿಯಲ್ಲಿ ಹಾಕಿಕೊಂಡು ಅದರ ಸುತ್ತ ಇರುವ ರಸವನ್ನು ಚೆನ್ನಾಗಿ ಹೀರಿ. ಈಗ ಈ ಬೀಜಗಳನ್ನು ಒಣಗಲು ಬಿಡದೆ, ನೀರು ಮತ್ತು ಮಣ್ಣಿನ ಮಿಶ್ರಣದಲಿ ಹಾಕಿ. ಅದರ ಮೇಲೆ ಸ್ವಲ್ಪ ನೀರನ್ನು ಸಹ ಹಾಕಿ. ಇದು ಮಣ್ಣಿನಲ್ಲಿ ಹೊರಪದರಿಂದ ಎರಡು ಮೂರು ಇಂಚು ಒಳಗೆ ಇರಲಿ. ಇದಾದ ಮೇಲೆ ಇದನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ. ಗಾಳಿಯಾಡಲು ಈ ಪ್ಲಾಸ್ಟಿಕ್ ಕವರಿನಲ್ಲಿ ಅಲ್ಲಲ್ಲಿ ಕೆಲವು ತೂತು ಮಾಡಿ. ಮನೆಯ ಕೈತೋಟದಲ್ಲಿ ಸಿಹಿ ಗೆಣಸನ್ನು ಬೆಳೆಸುವುದು ಹೇಗೆ?

ಲಿಂಬೆಗೆ ಸೂರ್ಯನ ಬೆಳಕು


ಮನೆಯಲ್ಲಿ ನಿಂಬೆಹಣ್ಣು ಬೆಳೆಯುವುದು ಹೇಗೆ? ನಿಂಬೆ ಬೀಜಗಳು ಬೆಳೆಯಲು ಅದನ್ನು ಅಗತ್ಯ ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಇಡಿ. ವಿಶೇಷವಾಗಿ ಮೊಳಕೆ ಬರುವಾಗ ಇದನ್ನು ತಪ್ಪದೆ ಅನುಸರಿಸಿ. ಅವುಗಳಿಗೆ 10-14 ಗಂಟೆಗಳ ಸೂರ್ಯನ ಬೆಳಕು ಅತ್ಯಗತ್ಯ.

ಬೆಚ್ಚಗಿನ ಸ್ಥಳ


ಲಿಂಬೆ ಗಿಡಗಳು ಕೇವಲ ಬೆಚ್ಚಗಿನ ಆದರೆ, ತೇವಾಂಶವಿರುವ ಸ್ಥಳದಲ್ಲಿ ಮಾತ್ರ ಬೆಳೆಯುತ್ತದೆ. ಆಗಾಗಿ ಈ ಕುಂಡವನ್ನು ಬೆಚ್ಚಗಿನ ಜಾಗದಲ್ಲಿಡಲು ಮರೆಯಬೇಡಿ. ಮಣ್ಣು ಯಾವುದೇ ಕಾರಣಕ್ಕು ಒಣಗಲು ಬಿಡಬೇಡಿ. ಜೊತೆಗೆ ಅಧಿಕ ಬಿಸಿಲು ಮತ್ತು ತೇವಾಂಶ ಸಹ ಇದರ ಮೇಲೆ ಬೀಳದಂತೆ ಎಚ್ಚರವಹಿಸಿ. ಇಲ್ಲವಾದಲ್ಲಿ ಬೀಜಗಳು ಕೊಳೆತು ಹೋಗುತ್ತವೆ.

ಬೀಜದ ಮೊಳಕೆ


ಬೀಜವು ಮೊಳಕೆ ಬಂದು ಎರಡು ವಾರವಾದ ಮೇಲೆ ಅದನ್ನು ಪ್ಲಾಸ್ಟಿಕ್ ಕವರ್‌ನಿಂದ ಹೊರ ತೆಗೆಯಿರಿ. ಆನಂತರ ಅದನ್ನು ಸ್ವಲ್ಪ ಬಿಸಿಲು ಬೀಳುವ ಜಾಗದಲ್ಲಿ ನೆಡಿ. ಆರೋಗ್ಯ ರಕ್ಷಕ ಶುಂಠಿಯನ್ನು ಮನೆಯಲ್ಲಿ ಬೆಳೆಸುವುದು ಹೇಗೆ?

ನೀರಿನ ಅಗತ್ಯತೆ


ಲಿಂಬೆ ಮರಗಳಿಗೆ ಯಾವಾಗಲು ತೇವಾಂಶವಿರಬೇಕು. ಹಾಗೆಂದು ಯಾವುದೇ ಕಾರಣಕ್ಕು ಅಧಿಕ ನೀರನ್ನು ಹಾಕಬೇಡಿ. ಬಿತ್ತನೆ ಮಾಡುವ ಮುನ್ನ ಇದಕ್ಕಾಗಿ ಚಿಕ್ಕ ಚಿಕ್ಕ ತೂತುಗಳನ್ನು ಮಾಡಿ. ಇದರಿಂದ ಅಧಿಕ ನೀರು ಹರಿದು ಹೋಗಲು ಸಹಾಯವಾಗುತ್ತದೆ. ಕನಿಷ್ಠ ಎಂಟು ಗಂಟೆಗಳ ಸೂರ್ಯನ ಬೆಳಕು ಇದಕ್ಕೆ ಬೇಕು.
English summary

How To Grow Lemon In Your Garden

Lemon is rich in vitamin C. It has many health benefits. A refreshing lemon juice in summer gives much relief. Not only in summer, you can have lemon in any season for it's health benefits. Today we will share with you how you can grow lemon at home.
Story first published: Monday, March 9, 2015, 12:43 [IST]
X
Desktop Bottom Promotion