For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಮುದ್ದಿನ ಹಕ್ಕಿಗಳ ಆರೈಕೆ

By Poornima heggade
|

ಚಳಿಗಾಲದಲ್ಲಿ ಹೇಗೆ ನಮ್ಮ ಚರ್ಮದ ಆರೋಗ್ಯ ಬಹಳ ಕೆಡುತ್ತದೆಯೋ ಅದೇ ರೀತಿ ನಿಮ್ಮ ಸಾಕು ಪ್ರಾಣಿಗಳಿಗೂ ಇದು ಬಹಲ ಕಾಳಜಿ ಬೇಕಾಗುವ ಸಮಯವಾಗಿದೆ. ನೀವು ಸಾಕು ಪ್ರಾಣಿಗಳನ್ನು ಸಾಕುವವರಾಗಿದ್ದರೆ ಅಥವಾ ಸಾಕು ಪ್ರಾಣಿಗಳನ್ನು ಸಾಕುವವರು ಅದರ ಬಗ್ಗೆ ಮಾತನಾಡುವಾಗ ಕೇಳಿದ್ದರೆ ನಿಮಗೆ ಈ ವಿಷಯ ಸ್ಪಷ್ಟವಾಗಿ ತಿಳಿದಿರಬಹುದು. ನೀವು ಸಾಕುವ ಪ್ರಾಣಿಗಳಾಗಲಿ ಪಕ್ಷಿಗಳಾಗಲಿ ಈ ಅವಧಿಯನ್ನು ಇಷ್ಟ ಪಡುವುದಿಲ್ಲ. ನೀವು ನಿಮ್ಮ ಸಾಕು ಪ್ರಾಣಿಯನ್ನು ಸಾಕಿದಂತೆ ಅದರ ಆರೈಕೆಯ ಕ್ರಮವೂ ಭಿನ್ನವಾಗಿರುತ್ತದೆ.

ಗೂಡಿನಲ್ಲಿ ಇರುವ ಪಕ್ಷಿಗಳನ್ನು ಹೊರಗೆ ಇಡುವ ಬದಲು ಒಳಗೆ ಇಡಬೇಕು. ಆದರೆ ಹೊರಗಡೆ ಇರುವ ಪಕ್ಷಿಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಗೂಡಿನಲ್ಲಿ ಇಡುವ ಪಕ್ಷಿಗಳಿಗಿಂತ ಹೊರಗಡೆ ಇರುವ ಹಕ್ಕಿಗಳ ಆರೈಕೆ ಮತ್ತಷ್ಟು ಕಷ್ಟಕರವಾಗಿರುತ್ತದೆ. ಈ ಅವಧಿಯಲ್ಲಿ ಅವುಗಳಿಗೆ ನೈಸರ್ಗಿಕವಾಗಿ ಯಾವುದೇ ರೀತಿಯ ಆಹಾರ ಲಭ್ಯವಾಗದ ಕಾರಣ ಅವುಗಳ ಆಹಾರದಲ್ಲೂ ಬಹಳಷ್ಟು ಕಾಳಜಿ ವಹಿಸಬೇಕಾಗಿರುತ್ತದೆ.

Taking Care Of Pet Birds During Winter Season

ಕೊರೆಯುವ ಚಳಿಯಲ್ಲಿ ಮನುಷ್ಯರಿಗೆ ಬಹಳ ಕಷ್ಟವಾಗುವಾಗ ಏನೂ ಹೊದೆಯಲು ಇರದ ಹಕ್ಕಿಗಳ ಪಾಡು ಮತ್ತಷ್ಟು ಕಷ್ಟಕರವಾಗಿರುತ್ತದೆ. ಗೂಡಿನಲ್ಲಿ ಸಾಕುವ ಮತ್ತು ಹೊರಗಡೆ ಇರುವ ಎರಡು ರೀತಿಯ ಹಕ್ಕಿಗಳ ಆರೈಕೆಗೆ ಹಲವು ಸೂತ್ರಗಳಿವೆ. ಇವುಗಳನ್ನು ತಿಳಿದಿರುವುದು ಬಹಳ ಮುಖ್ಯ. ಇದರಿಂದ ನಿಮ್ಮ ಮುದ್ದಿನ ಹಕ್ಕಿಗಳ ಆರೈಕೆ ಬಹಳ ಸುಲಭವಾಗುತ್ತದೆ.

ಮನೆಯೊಳಗಿಡಿ: ನಿಮ್ಮ ಮುದ್ದಿನ ಪಕ್ಷಿ ಹೊರಗಿನ ಚಳಿಯಲ್ಲಿ ನಡುಗುವಾಗ ನಿಮ್ಮ ಮನಸ್ಸಿಗೆ ನೋವಾಗದೇ ಇರದು. ಅದಕ್ಕೆ ಅವುಗಳನ್ನು ಒಳಗಡೆ ಸಾಕುವುದು ಬಹಳ ಮುಖ್ಯ. ಅವುಗಳಿಗೆ ಚಳಿಯಾಗದಂತೆ ಒಳಗಡೆ ಎಲ್ಲಾದರೂ ಸುರಕ್ಷಿತ ವ್ಯವಸ್ಥೆ ಮಾಡಿಡಬೇಕಾಗುತ್ತದೆ. ಸಾಧ್ಯವಾದರೆ ಹೊರಗಡೆ ಇರುವ ಹಕ್ಕಿಗಳಿಗೆ ಸ್ವಲ್ಪವಾದರೂ ಚಳಿಯಿಂದ ರಕ್ಷಣೆ ಇರುವ ಕಡೆ ಗೂಡನ್ನು ನಿರ್ಮಿಸಿ.

ಕೋಣೆಯ ತಾಪಮಾನ ನಿರ್ಮಾಣ ಮಾಡಿ:
ನಿಮ್ಮ ಹಕ್ಕಿಗಳಿಗೆ ನೆರವಾಗುವಂತೆ ಕೊಠಡಿಯ ತಾಪಮಾನ ಇರುವಂತೆ ನೋಡಿಕೊಳ್ಳಿ. ರೂಮ್ ಹೀಟರ್ ಅನ್ನು ಬಳಸುತ್ತೀರಿ ಎಂದಾದರೆ ಆದ್ರತೆಯ ಮಟ್ಟದ ಬಗ್ಗೆಯೂ ಗಮನ ಕೊಡಿ. ಒಣ ಹವೆ ಹಕ್ಕಿಗಳಲ್ಲಿ ಬೇರೆ ರೀತಿಯಾದ ಅನಾರೋಗ್ಯ ಸೃಷ್ಟಿಸಬಹುದು.

ಆದ್ರತೆಯನ್ನು ಕಾಪಾಡಿ: ರೂಮ್ ಹೀಟರ್ ಬಳಸುವಾಗಿನ ಒಂದು ಅನಾನುಕೂಲ ಎಂದರೆ ಒಣ ಹವೆ ಸೃಷ್ಟಿಯಾಗುತ್ತದೆ. ಇದಕ್ಕಾಗಿ ನಿಮ್ಮ ಹಕ್ಕಿಗಳು ಸ್ವಲ್ಪ ನಿರಿನಾಂಶ ಇರುವ ಹವೆಯನ್ನು ಉಸಿರಾಡುವಂತೆ ನೊಡಿಕೊಳ್ಳಿ. ಇದಕ್ಕೆ ಸುಲಭದ ಉಪಾಯ ಎಂದರೆ ಸ್ನಾನ ಮಾಡುವಾಗ ಹಕ್ಕಿಗಳನ್ನು ಸ್ನಾನಗೃಹದಲ್ಲಿ ಇಡುವುದು.

ಕುಡಿಯುವ ನೀರನ್ನು ಬದಲಾಯಿಸುತ್ತಾ ಇರಿ:
ಕೊರೆಯುವ ಚಳಿ ನೀವು ಹಕ್ಕಿಗೆ ಕುಡಿಯಲು ಇಟ್ಟ ನೀರನ್ನೂ ಬೇಗ ತಣ್ಣಗಾಗುವಂತೆ ಮಾಡುತ್ತದೆ. ಹೀಗಾದಾಗ ಹಕ್ಕಿ ನೀರನ್ನು ಕುಡಿಯದೇ ಇರಬಹುದು ಆದ್ದರಿಂದ ನೀರನ್ನು ಆಗಾಗ ಬದಲಾಯಿಸುತ್ತಾ ಇರಿ.

ಆಹಾರ ಸರಿಯಾಗಿ ನೀಡಿ:
ಹಕ್ಕಿಗಳಿಗೆ ಸಾಕಾಗುವಷ್ಟು ಆಹಾರವನ್ನು ಕೊಡುತ್ತಿರಿ. ಈ ಅವಧಿಯಲ್ಲಿ ಅವುಗಳ ನೈಸರ್ಗಿಕ ಆಹಾರ ಲಭ್ಯವಾಗದೇ ಇರಬಹುದು ಹಾಗಾಗಿ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಸಾಕಷ್ಟು ಪೌಷ್ಟಿಕಾಂಶ ಮತ್ತು ಕ್ಯಾಲರಿ ಇರುವ ಆಹಾರವನ್ನು ನೀಡಿ.

ಬಿಸಿನೀರಿನ ಸ್ನಾನ: ಹಕ್ಕಿಗಳು ಸಾಮಾನ್ಯವಾಗಿ ನೀರಿನಲ್ಲಿ ಆಟವಾಡುವುದನ್ನು ಇಷ್ಟಪಡುತ್ತವೆ. ನಿಮ್ಮ ಹಕ್ಕಿ ನೀರಿನಲ್ಲಿ ಆಟವಾಡುವುದನ್ನು ಇಷ್ಟಪಡುವುದಾದರೆ ಹಾಗೆ ಮಾಡಲು ಬಿಡಿ. ಆದರೆ ನೀರು ಬಿಸಿ ಇದೆ ಎಂದು ಖಾತರಿ ಪಡಿಸಿಕೊಳ್ಳಿ ಮತ್ತು ಸ್ನಾನ ಆದ ಮೇಲೆ ಹಕ್ಕಿಯನ್ನು ಒಳಗಿಸಲು ಮರೆಯದಿರಿ.

ನಿಮ್ಮ ಕೋಣೆಯನ್ನು ಸುರಕ್ಷಿತವಾಗಿಡಿ: ನೀವು ಹಕ್ಕಿಯನ್ನು ಗೂಡಿನಲ್ಲಿ ಇಡುವುದಿಲ್ಲ ಎಂದಾದರೆ ನಿಮ್ಮ ಕೋಣೆಯು ಸುರಕ್ಷಿತವಾಗಿದೆ ಎಂದು ಖಾತರಿ ಮಾಡಿ. ಬೆಂಕಿ, ಕೆಂಡ ಮುಂತಾದುವು ಕೋಣೆಯಲ್ಲಿ ಇಲ್ಲದಿರಲಿ. ಏನಾದರೂ ಬಿಸಿ ಮಾಡುವ ವ್ಯವಸ್ಥೆ ಇದ್ದರೆ ಅದನ್ನು ಹಕ್ಕಿಗೆ ತಲುಪದಂತೆ ಇಡಿ.

English summary

Taking Care Of Pet Birds During Winter Season

Winter is a difficult time for both you and your pet birds. Pet care during winter season is a common topic of discussion among all those who love pets. Your feathered friend needs some extra care to overcome the frosty winter.
Story first published: Tuesday, January 7, 2014, 18:47 [IST]
X
Desktop Bottom Promotion