For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕೈತೋಟದ ಗಿಡ ಹೀಗೆ ನೋಡಿಕೊಳ್ಳಿ

By Deepak M
|

ಸುಂದರವಾದ ಗಿಡಗಳು ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತವೆ. ಚಳಿಗಾಲವು ನಿಮ್ಮ ಜೊತೆಗೆ ನಿಮ್ಮ ಮನೆಯ ಗಿಡಗಳ ಆರೋಗ್ಯಕ್ಕು ಸಹ ಕುತ್ತನ್ನು ತರುತ್ತದೆ. ಅದಕ್ಕಾಗಿ ಈ ಚಳಿಗಾಲದಲ್ಲಿ ಗಿಡಗಳ ವಿಚಾರವಾಗಿ ವಿಶೇಷ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾದುದು ಅತ್ಯಾವಶ್ಯಕ. ಅದರಲ್ಲು ಗಿಡಗಳ ಮೇಲೆ ವಿಪರೀತವದ ಅಭಿಮಾನ ಹೊಂದಿರುವವರು ತಪ್ಪದೆ ಈ ಚಳಿಗಾಲದಲ್ಲಿ ಗಿಡಗಳ ಕುರಿತಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲೇ ಬೇಕು.

ನಿಮ್ಮ ಗಾರ್ಡನ್‍ನಲ್ಲಿ ನಿಮಗಿಷ್ಟವಾದ ಗಿಡಗಳನ್ನು ತಂದು ನೆಟ್ಟರೆ ಮುಗಿಯುವುದಿಲ್ಲ. ಅದಕ್ಕೆ ಕಾಲ ಕಾಲಕ್ಕೆ ಬೇಕಾದ ಅಗತ್ಯತೆಗಳನ್ನು ಪೂರೈಸುತ್ತಿದ್ದರೆ ಅವುಗಳು ಚೆನ್ನಾಗಿ ಬೆಳೆಯುತ್ತವೆ. ಗಿಡಗಳಿಗೆ ಋತುಮಾನಕ್ಕೆ ತಕ್ಕಂತೆ ಆರೈಕೆಗಳನ್ನು ಮಾಡುತ್ತ ಇರಬೇಕು. ಅದರಲ್ಲು ಚಳಿಗಾಲದ ಸಂದರ್ಭದಲ್ಲಿ ಗಿಡಗಳು ವಿಶೇಷವಾದ ಆರೈಕೆಯನ್ನು ಬಯಸುತ್ತವೆ. ಅದನ್ನು ನಾವು ತಪ್ಪದೆ ನೀಡಬೇಕು.

Winter care for garden plants

ಚಳಿಗಾಲದಲ್ಲಿ ಕೆಲವು ಗಿಡಗಳು ಸೊರಗಬಹುದು ಮತ್ತು ಕೆಲವು ಗಿಡಗಳಿಗೆ ಚಳಿ ಬಾಧಿಸುವುದಿಲ್ಲ. ಕೆಲವು ಗಿಡಗಳಿಗೆ ಅತ್ಯಗತ್ಯವಾಗಿ ಮಾಡಬೇಕಾಗಿರುವ ಆರೈಕೆಯನ್ನು ಮಾಡಿ, ನಳ ನಳಿಸುವ ಗಾರ್ಡನ್ ಅನ್ನು ನಿಮ್ಮದಾಗಿಸಿಕೊಳ್ಳಿ. ಇಲ್ಲಿ ನಿಮ್ಮ ಗಾರ್ಡನ್‍ನ ಶೋಭೆಯನ್ನು ಹೆಚ್ಚಿಸುವ ಕೆಲವು ಸಲಹೆಗಳನ್ನು ನೀಡಿದ್ದೇವೆ ಓದಿ ಪಾಲಿಸಿ.

ಮನೆಯಲ್ಲಿ ಇಡಿ.
ಅಧಿಕ ಪ್ರಮಾಣದಲ್ಲಿ ಮಂಜು ಸುರಿದರೆ ಗಿಡಗಳು ಹಾಳಾಗುತ್ತವೆ. ಅದಕ್ಕೆ ಉತ್ತಮ ಪರಿಹಾರ, ಅವುಗಳನ್ನು ಮನೆಯ ಒಳಾಂಗಣದಲ್ಲಿ ಇಡುವುದು. ಇದರಿಂದ ಗಿಡಗಳು ಸುಮ್ಮನೆ ಹಾಳಾಗುವುದನ್ನು ತಡೆಯಬಹುದು. ಹೊರಾಂಗಣ ಗಿಡಗಳಾಗಿದ್ದರು ಸರಿ, ಅವುಗಳನ್ನು ಮನೆಯ ಒಳಗಡೆ ಬೆಳೆಸಬಹುದು. ಆದರೆ ಸ್ವಲ್ಪ ಹೊತ್ತು ಸೂರ್ಯನ ಬೆಳಕಿನಲ್ಲಿ ಇಡುವುದನ್ನು ಮಾತ್ರ ಮರೆಯಬೇಡಿ.

ಗುಲಾಬಿಗೆ ಆರೈಕೆ
ಚಳಿಗಾಲದ ಸಮಯದಲ್ಲಿ ಗುಲಾಬಿ ಹೂಗಳಿಗೆ ಅತ್ಯಗತ್ಯವಾದ ಆರೈಕೆ ನೀಡಲೆ ಬೇಕು. ಪ್ರತಿ ಚಳಿಗಾಲವು ನಿಮ್ಮ ಗುಲಾಬಿ ಗಿಡಗಳಿಗೆ ಏನಾದರು ತೊಂದರೆಯನ್ನು ನೀಡುತ್ತಲೆ ಇರುತ್ತದೆ. ಈ ಅವಧಿಯಲ್ಲಿ ಬೀಳುವ ಹಿಮವು ಗುಲಾಬಿಗಳನ್ನು ಹಾಳು ಮಾಡುತ್ತದೆ. ಹಾಗಾಗಿ ಮಂಜು ನಿಮ್ಮ ಗುಲಾಬಿ ಗಿಡಗಳಿಗೆ ತಗುಲದಂತೆ ಎಚ್ಚರವಹಿಸಿ, ಇಲ್ಲ ಮನೆ ಒಳಗಿಡಿ, ಇಲ್ಲವಾದಲ್ಲಿ ಅದಕ್ಕೆ ಮರೆಯನ್ನು ಮಾಡಿ.

ಕಂಟೇನರುಗಳನ್ನು ಇನ್‍ಸುಲೇಟ್ ಮಾಡಿ
ಒಂದು ವೇಳೆ ನಿಮ್ಮ ಬಳಿ ಇರುವ ಗಿಡಗಳನ್ನು ಕಂಟೇನರುಗಳಲ್ಲಿ ಬೆಳೆಸಿದ್ದಲ್ಲಿ, ಚಳಿಗಾಲಕ್ಕಾಗಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಿ. ನಿಮ್ಮ ಕಂಟೇನರುಗಳನ್ನು ಸರಿಯಾಗಿ ಇನ್‍ಸುಲೇಟ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಗಿಡಗಳು ಚಳಿಗಾಲದಲ್ಲಿ ಉಳಿಯುತ್ತವೆ. ಚಳಿಗಾಲದಲ್ಲಿ ಗಿಡಗಳನ್ನು ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ವಿಶೇಷ ಕಾಳಜಿ ಅತ್ಯಗತ್ಯ.

ಚಳಿಗಾಲದಲ್ಲಿ ಗಿಡಗಳನ್ನು ಕಾಪಾಡಲು ಇನ್ನು ಕೆಲವು ಸಲಹೆಗಳು
- ಗಿಡಗಳಿಗೆ ಚಳಿಗಾಲದಲ್ಲಿ ಅಗತ್ಯವಿರುವ ಆರೈಕೆಯನ್ನು ಮೊದಲೆ ನಿರ್ಧರಿಸಿ, ಅವುಗಳನ್ನು ತಪ್ಪದೆ ನೀಡಿ.
- ನೀರಿನಲ್ಲಿ ತೇಲುವ ಗಿಡಗಳನ್ನು ನಿಮ್ಮ ಮನೆಯ ಹೊರಾಂಗಣದಿಂದ ಒಳಾಂಗಣಕ್ಕೆ ಸ್ಥಳಾಂತರಿಸಿ. ಅವುಗಳನ್ನು ಮನೆಯ ಅಂದಕ್ಕೆ ಯಾವುದೇ ವೆಚ್ಚವಿಲ್ಲದೆ ಬಳಸಿಕೊಳ್ಳಿ. ಅವುಗಳು ನೋಡಲು ಸುಂದರವಾಗಿದ್ದು, ಮನೆಯ ಸೊಬಗನ್ನು ಹೆಚ್ಚಿಸುತ್ತವೆ.
- ಚಳಿಗಾಲದಲ್ಲಿ ಬೆಳೆಯುವ ಗಿಡಗಳು ಅಷ್ಟೇನು ಭಾರವಾಗಿಲ್ಲವಾದಲ್ಲಿ , ಅವುಗಳನ್ನು ಸಹ ಸ್ಥಳಾಂತರಿಸಿ. ಒಂದು ವೇಳೆ ಅವುಗಳು ನಿಮಗೇ ಅತ್ಯಗತ್ಯವಾಗಿ ಬೇಕಾಗಿದ್ದಲ್ಲಿ, ಅವುಗಳನ್ನು ಮನೆಯ ಒಳಗಡೆ ಒಂದು ಟಬ್‍ನಲ್ಲಿ ನೀರು ತುಂಬಿಸಿ ಇಡಿ.
- ಒಂದು ವೇಳೆ ದಪ್ಪನಾಗಿರುವ ದೊಡ್ಡ ಗಿಡಗಳು ನಿಮ್ಮ ಬಳಿ ಇದ್ದಲ್ಲಿ, ಅವುಗಳನ್ನು ಸಹ ಮನೆಯ ಒಳಗಡೆಗೆ ಸ್ಥಳಾಂತರಿಸಬಹುದು. ಅದರಿಂದ ತೊಂದರೆಯೇನು ಇರುವುದಿಲ್ಲ. ಇಲ್ಲವಾದಲ್ಲಿ ಅವುಗಳನ್ನು ಬುಡದಿಂದ ಕೆಲವು ಇಂಚು ಮೇಲೆ ಕತ್ತರಿಸಿ ಟ್ರಿಮ್ ಮಾಡಬಹುದು.
- ಇನ್ನು ಲಿಲ್ಲಿಗಳ ಬಗ್ಗೆ ಈ ಕಾಲದಲ್ಲಿ ವಿಶೇಷ ಕಾಳಜಿವಹಿಸ ಬೇಕಾಗಿರುವುದು ಅತ್ಯಗತ್ಯ. ಅದರಲ್ಲು ನಿಮ್ಮ ಬಳಿ ಇರುವ ಸಮಶೀತೋಷ್ಣ ವಲಯದ ಲಿಲ್ಲಿಗಳನ್ನು ತಪ್ಪದೆ ಮನೆಯ ಒಳಗಡೆಗೆ ಸಾಗಿಸಿ. ದೊಡ್ಡ ಗಿಡಗಳಾದಲ್ಲಿ ಮನೆಯ ಒಳಗಡೆಯೇ ಬಿಡಿ.
- ನಿಮ್ಮ ಗಾರ್ಡನ್‍ನಲ್ಲಿ ಯಾವುದಾದರು ಗೆಡ್ಡೆಗಳು ಬೆಳೆಯುತ್ತಿದ್ದಲ್ಲಿ ಅವುಗಳ ಆರೈಕೆಗು ಗಮನ ನೀಡಿ. ನಿಮಗೆ ಮುಂದೆ ಅವುಗಳ ಅವಶ್ಯಕತೆ ಇದ್ದಲ್ಲಿ, ಕೆಲವನ್ನು ತೋಡಿ ಇಟ್ಟುಕೊಳ್ಳಿ. ಅವುಗಳನ್ನು ಮುತುವರ್ಜಿಯಿಂದ ಸಂಗ್ರಹಿಸಿಡಿ. ಚಳಿಗಾಲದಲ್ಲಿ ಗಿಡಗಳನ್ನು ಸಂರಕ್ಷಿಸುವುದು ಕಷ್ಟದ ಕೆಲಸ. ಆದರೆ ಕಷ್ಟ ಪಟ್ಟರೆ ನಿಮ್ಮ ಗಾರ್ಡನ್ ನಯನ ಮನೋಹರವಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ.

English summary

Winter care for garden plants

Beautiful gardens add beauty to the home. Winter is a climate which causes a lot of trouble to our health as well as homes. The climatic conditions in winter also affect plants to a certain extent.
Story first published: Monday, December 2, 2013, 15:24 [IST]
X
Desktop Bottom Promotion