For Quick Alerts
ALLOW NOTIFICATIONS  
For Daily Alerts

ಕೈ ತೋಟದ ಆರೈಕೆಯ 12 ಮಹಾನ್ ಸೂತ್ರಗಳು

By Super
|

ಕೈ ತೋಟವನ್ನು ಹಸಿರಾಗಿ ಹಾಗೂ ಸ್ವಚ್ಚವಾಗಿ ಕಾಪಾಡಿಕೊಳ್ಳುವುದು ಕಠಿಣ ಕೆಲಸವೇ ಸರಿ. ಹವಾಮಾನದಲ್ಲಾಗುವ ಬದಲಾವಣೆ, ಪ್ರಾಣಿಗಳ ಹಾಗೂ ಕಳೆ ಗಿಡಗಳ ಉಪಟಳವನ್ನು ಯಾವಾಗಲೂ ನಿಭಾಯಿಸುತ್ತಿರಬೇಕಾಗುತ್ತದೆ. ಹಾಗಾದರೆ ನಿಮ್ಮ ಕೈತೋಟವು ನಿತ್ಯವೂ ಹಚ್ಚ ಹಸುರಾಗಿ ನಂದನವನದಂತೆ ಕಂಗೊಳಿಸಲು, ನೋಡುಗರ ಹೃನ್ಮನಗಳನ್ನು ಸೆಳೆಯುವ ಹಾಗೆ ಆಕರ್ಷಕವಾಗಿ ಕಾಣುವಂತೆ ಮಾಡಲು ಅನುಸರಿಸಬೇಕಾದ ಮಾರ್ಗೋಪಾಯಗಳು ಯಾವುವು ? ಅರ್ಥಾತ್, ಕೈ ತೋಟದ ಆರೈಕೆ ಮಾಡಲು ನೀವು ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳು ಯಾವುವು...?

ಉತ್ತರವನ್ನು ಕಂಡುಕೊಳ್ಳಲು ಇದನ್ನು ಓದಿ.

1. ಸೂಕ್ತವಾದ ಸಲಕರಣೆಗಳನ್ನು ಸಂಗ್ರಹಿಸಿ

1. ಸೂಕ್ತವಾದ ಸಲಕರಣೆಗಳನ್ನು ಸಂಗ್ರಹಿಸಿ

ನಿಮ್ಮ ಕೈತೋಟವನ್ನು ಸರಿಯಾಗಿ ನಿರ್ವಹಿಸಲು ಮಾಡಬೇಕಾದ ಮೊದಲ ಮತ್ತು ಅತಿ ಮುಖ್ಯವಾದ ಕೆಲಸವೇನೆಂದರೆ, ನೆಲವನ್ನು ಸಮತಟ್ಟುಗೊಳಿಸುವ ಸಲಕರಣೆ, ಗಿಡಗಳನ್ನು ಓರಣಗೊಳಿಸಲು ಉಪಯೋಗಿಸುವ ಕತ್ತರಿಯೇ ಮೊದಲಾದ ಸರಿಯಾದ ಸಲಕರಣೆಗಳನ್ನು ಖರೀದಿಸುವುದು.

2. ಸರಿಯಾದ ಸಮಯದಲ್ಲಿ ನೀರಿನ ಪೂರೈಕೆ

2. ಸರಿಯಾದ ಸಮಯದಲ್ಲಿ ನೀರಿನ ಪೂರೈಕೆ

ಆವಿಯಾಗುವುದನ್ನು ತಪ್ಪಿಸಲು, ಮುಂಜಾವಿನ ವೇಳೆ ಅಥವಾ ರಾತ್ರಿಯ ಹೊತ್ತು ನಿಮ್ಮ ಕೈತೋಟಕ್ಕೆ ನೀರುಣಿಸಬಹುದು.

3. ಸರಿಯಾದ ಗೊಬ್ಬರವನ್ನು ಪಡೆಯಿರಿ

3. ಸರಿಯಾದ ಗೊಬ್ಬರವನ್ನು ಪಡೆಯಿರಿ

ನಿಮ್ಮ ಸಸಿಗಳನ್ನು ನಿತ್ಯ ಹಸಿರಾಗಿರಿಸಲು, ಮಣ್ಣಿನ ಗುಣವನ್ನಾಧರಿಸಿ ಯಾವಾಗಲೂ ಸಮರ್ಪಕವಾದ ಗೊಬ್ಬರವನ್ನು ಉಪಯೋಗಿಸಿ.

4. ಕೊಳೆತ ತರಕಾರಿ, ಹಿಂಡಿಯನ್ನು ಮಣ್ಣಿನ ಮೇಲೆ ಹರವಿರಿ

4. ಕೊಳೆತ ತರಕಾರಿ, ಹಿಂಡಿಯನ್ನು ಮಣ್ಣಿನ ಮೇಲೆ ಹರವಿರಿ

ಮಣ್ಣಿನ ಸವಕಳಿಯನ್ನು ತಡೆಗಟ್ಟಲು, ಕೊಳೆತ ತರಕಾರಿ, ಹಿಂಡಿಯನ್ನು ಬಳಸಿ. ಇದು ಮಣ್ಣಿನ ತೇವಾಂಶವನ್ನು ಕಾಪಾಡುತ್ತದೆ ಹಾಗೂ ಕಳೆ ಗಿಡಗಳು ಬೆಳೆಯುವುದನ್ನು ತಡೆಗಟ್ಟುತ್ತದೆ. ಅದ್ದರಿಂದ, ಕೈತೋಟದ ಪ್ರಯೋಜನವನ್ನು ಪಡೆಯಲು ಕೊಳೆತ ತರಕಾರಿ, ಹಿಂಡಿಯನ್ನು ನಿಯಮಿತವಾಗಿ ಮಣ್ಣಿನ ಮೇಲೆ ಹರಡಿರಿ.

5. ಆಯಾ ಕಾಲಕ್ಕನುಗುಣವಾಗಿ ಬೆಳೆಯುವ ಸಸಿಗಳನ್ನು ಪಡೆಯಿರಿ

5. ಆಯಾ ಕಾಲಕ್ಕನುಗುಣವಾಗಿ ಬೆಳೆಯುವ ಸಸಿಗಳನ್ನು ಪಡೆಯಿರಿ

ಆಯಾ ಋತುವಿಗನುಸಾರವಾಗಿ ಬೆಳೆಯುವ ಸಸಿಗಳು ಯಾವಾಗಲೂ ನಿಮ್ಮ ಕೈತೋಟವನ್ನು ಸಮೃಧ್ಧಿಯಾಗಿ ಇರಿಸುತ್ತವೆ ಹಾಗೂ ವರ್ಷದ ಬಹುತೇಕ ಸಮಯ ಹಚ್ಚ ಹಸಿರಾಗಿರಿಸುತ್ತವೆ. ಹೀಗಾಗಿ, ಸಸಿಗಳನ್ನು ಸರಿಯಾದ ಕಾಲದಲ್ಲಿ ನೆಡಿರಿ ಹಾಗೂ ವರ್ಷಪೂರ್ತಿ ಹಸಿರಾದ ಕೈತೋಟವನ್ನು ನಿಮ್ಮದಾಗಿಸಿಕೊಳ್ಳಿ.

6. ಕಳೆಗಿಡಗಳು

6. ಕಳೆಗಿಡಗಳು

ಕೈತೋಟದ ಆರೈಕೆಯ ಬಹು ಮುಖ್ಯ ಭಾಗಗಳಲ್ಲಿ ಒಂದು, ಕಳೆ ಗಿಡಗಳನ್ನು ಕೀಳುವುದು. ನಿಮಗೆ ಸಮಯಾವಕಾಶ ಸಿಕ್ಕಿದಾಗಲೆಲ್ಲ ಕೈತೋಟದತ್ತ ನಡೆಯಿರಿ ಹಾಗೂ ಕಳೆಯನ್ನು ತೆಗೆಯಿರಿ.

7. ನಿತ್ಯಹರಿದ್ವರ್ಣ, ಅಲಂಕಾರಿಕ ಪೊದೆಗಳನ್ನು ಬೆಳೆಸಿರಿ

7. ನಿತ್ಯಹರಿದ್ವರ್ಣ, ಅಲಂಕಾರಿಕ ಪೊದೆಗಳನ್ನು ಬೆಳೆಸಿರಿ

ಇಂತಹ ಪೊದೆ (ಸಣ್ಣ ಸಸಿ) ಗಳನ್ನು ಬೆಳೆಸುವುದರಿಂದ ನಿಮ್ಮ ಕೈತೋಟದ ಒಂದು ಭಾಗವು ವರ್ಷದ ಯಾವುದೇ ಕಾಲದಲ್ಲಿಯೂ ಸಹ ಹಸಿರಾಗಿ ಕಂಗೊಳಿಸುವಂತೆ ಮಾಡುತ್ತದೆ.

8. ಶೀಘ್ರವಾಗಿ ಬೆಳೆಯುವ ಸಸಿಗಳನ್ನು ಬೆಳೆಸಿರಿ

8. ಶೀಘ್ರವಾಗಿ ಬೆಳೆಯುವ ಸಸಿಗಳನ್ನು ಬೆಳೆಸಿರಿ

ಹೀಗೆ ಮಾಡುವುದರಿಂದ ನೀವು ಬೇಗನೇ ಕಟಾವು ಮಾಡಬಹುದು ಹಾಗೂ ಆ ಜಾಗದಲ್ಲಿ ಹೊಸ ಸಸಿಗಳನ್ನು ಬೆಳೆಸಬಹುದು. ಹೀಗೆ ಮಾಡುವುದರ ಮೂಲಕ ಕಳೆ ಗಿಡಗಳಿಗೆ ಅವಕಾಶ ನೀಡದಂತಾಗುತ್ತದೆ ಹಾಗೂ ನಿಮ್ಮ ಕೈತೋಟವೂ ಕೂಡ ಸಮೃಧ್ಧವಾಗುತ್ತದೆ.

9 . ಸಿಕ್ಕಾಪಟ್ಟೆ ನೀರುಣಿಸಬೇಡಿ

9 . ಸಿಕ್ಕಾಪಟ್ಟೆ ನೀರುಣಿಸಬೇಡಿ

ನಿಮ್ಮ ಸಸಿಗಳಿಗೆ ನೀರಿನ ಅವಶ್ಯಕತೆ ಖಂಡಿತಾ ಇದೆ. ಆದರೆ, ಅತಿ ಹೆಚ್ಚು ನೀರನ್ನು ಹಾಯಿಸುವುದರಿಂದ ಸಸಿಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

10 . ಗೊಬ್ಬರವನ್ನು ಬಳಸಿರಿ

10 . ಗೊಬ್ಬರವನ್ನು ಬಳಸಿರಿ

ಪ್ರಾಣಿಗಳು ಹಾಗೂ ಸಸ್ಯಗಳ ತ್ಯಾಜ್ಯದಿಂದ ಗೊಬ್ಬರವು ದೊರೆಯುತ್ತದೆ. ಗೊಬ್ಬರವನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಿರಿ. ಹೀಗೆ ಮಾಡುವುದರಿಂದ ಮಣ್ಣಿನ ಫಲವತ್ತತೆಯು ಹೆಚ್ಚುತ್ತದೆ

11 . ಅನಾವಶ್ಯಕವಾಗಿ ಕೈತೋಟವನ್ನು ಪದೇ ಪದೇ ಓರಣ ಮಾಡಬೇಡಿ

11 . ಅನಾವಶ್ಯಕವಾಗಿ ಕೈತೋಟವನ್ನು ಪದೇ ಪದೇ ಓರಣ ಮಾಡಬೇಡಿ

ಕೆಲವು ಸಸಿಗಳು, ಪೊದೆಗಳು, ಹಾಗೂ ಅಲಂಕಾರಿಕ ಪೊದೆಗಳನ್ನು ಪದೇ ಪದೇ ಕತ್ತರಿಸಿ ಓರಣ ಮಾಡುವ ಅಗತ್ಯವಿರುವುದಿಲ್ಲ. ಅಂತಹ ಸಸಿಗಳನ್ನು ಕೇವಲ ಕೆಲವು ಬಾರಿ ಮಾತ್ರ ಓರಣಗೊಳಿಸಿರಿ.

12 . ಮಣ್ಣಿನ ಗುಣಧರ್ಮವನ್ನು ಅರಿತುಕೊಳ್ಳಿ

12 . ಮಣ್ಣಿನ ಗುಣಧರ್ಮವನ್ನು ಅರಿತುಕೊಳ್ಳಿ

ನಿಮ್ಮ ಕೈತೋಟದ ಮಣ್ಣಿನ ಗುಣಧರ್ಮವನ್ನು ತಿಳಿದುಕೊಳ್ಳುವುದರಿಂದ, ನಿಮ್ಮ ಕೈತೋಟಕ್ಕೆ ಎಷ್ಟು ಬಾರಿ ನೀರುಣಿಸಬೇಕೆoಬುದನ್ನು ನಿರ್ಣಯಿಸಲು ಸಹಕಾರಿಯಾಗುತ್ತದೆ.

ಈ ಮೇಲಿನ ಕೈತೋಟದ ಆರೈಕೆಯ ಕೆಲವು ಸೂತ್ರಗಳು ನಿಮ್ಮ ಕೈತೋಟವನ್ನು ಹಸಿರಾಗಿ ಮತ್ತು ಸ್ವಚ್ಚವಾಗಿರಿಸಲು ಸಹಕಾರಿಯಾಗಿವೆ ಹಾಗೂ ಅನುಸರಿಸಲು ಸುಲಭವಾಗಿವೆ.

English summary

12 Great Garden Care Tips

Keeping your garden green and clean is a tough task. You have to handle weather changes, animals and weeds all the time. So what are the garden care tips that you should follow? Read on to find out.
X
Desktop Bottom Promotion