For Quick Alerts
ALLOW NOTIFICATIONS  
For Daily Alerts

ತುತ್ತೂರಿ ಹೂಗಳನ್ನು ಬೆಳೆಯುವುದು ಹೇಗೆ?

By * ಬಿ.ಎಂ. ಲವಕುಮಾರ್, ಮೈಸೂರು
|
How to grow Pyrostegia venusta
ಈ ಹೂವಿನ ರಚನೆಯು ವಿಭಿನ್ನವಾಗಿದ್ದು, ಮೂರರಿಂದ ಆರು ಇಂಚಿನಷ್ಟು ಉದ್ದದ ದಳನಾಳವನ್ನು ಹೊಂದಿ ಕಪ್ ಆಕಾರದ ಪುಷ್ಪ ಪಾತ್ರೆ ಐದು ದಳಗಳನ್ನೊಳಗೊಂಡ ಆಕರ್ಷಕ ಕೇಸರಗಳಿವೆ. ಬಳ್ಳಿಯಲ್ಲಿ ಹೂಬಿಟ್ಟ ನಂತರ ಕಾಯಿಗಳಾಗುತ್ತವೆ. ಈ ಕಾಯಿಗಳ ಬೀಜದಿಂದ ಸಸ್ಯಾಭಿವೃದ್ಧಿ ಮಾಡಬಹುದಾದರೂ ಹೆಚ್ಚಿನವರು ಬಳ್ಳಿಯನ್ನೇ ಕತ್ತರಿಸಿ ನೆಡುವ ಮೂಲಕ ಸಸ್ಯಾಭಿವೃದ್ಧಿ ಮಾಡುವುದನ್ನು ನಾವು ಕಾಣಬಹುದು.

ಬಳ್ಳಿ ನೆಡುವ ಪರಿ : ಒಂದು ವರ್ಷವಾಗಿರುವ ಬಳ್ಳಿಯನ್ನು ಕತ್ತರಿಸಿ ಸುಮಾರು ಇಪ್ಪತ್ತು ಸೆಂಟಿ ಮೀಟರ್ ಉದ್ದಕ್ಕೆ ತುಂಡುಗಳನ್ನಾಗಿ ಮಾಡಿ ನಾವು ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ ಸುಮಾರು ಒಂದೂವರೆ ಅಡಿಯಷ್ಟು ಉದ್ದ ಹಾಗೂ ಅಗಲದ ಗುಂಡಿ ತೋಡಿ ಅದರಲ್ಲಿ ಕೊಟ್ಟಿಗೆ ಗೊಬ್ಬರ ಹಾಗೂ ಮಣ್ಣನ್ನು ಬೆರೆಸಿ ನಾಟಿ ಮಾಡಬೇಕು. ಮಣ್ಣಿನ ತೇವಾಂಶ ನೋಡಿಕೊಂಡು ನೀರು ಹಾಕಬೇಕು. ಕೆಲವು ದಿನಗಳಲ್ಲಿ ನೆಟ್ಟ ಬಳ್ಳಿ ಚಿಗುರೊಡೆದು ಹಬ್ಬಲಾರಂಭಿಸುತ್ತದೆ. ಈ ಸಂದರ್ಭ ಆಧಾರ ನೀಡಿ ಹಬ್ಬಿಸಬೇಕು.

ಇನ್ನು ಪಾಲಿಥೀನ್ ಚೀಲದಲ್ಲಿ ಬಳ್ಳಿಯನ್ನು ಕತ್ತರಿಸಿ ಒಂದು ಚೀಲದಲ್ಲಿ ಎರಡರಿಂದ ಮೂರು ಬಳ್ಳಿಯನ್ನು ನೆಡಬೇಕು ಅದು ಚಿಗುರಿದ ಬಳಿಕ ನಮಗೆ ಎಲ್ಲಿ ಬೇಕೋ ಅಲ್ಲಿ ಸೂಕ್ತ ಸ್ಥಳದಲ್ಲಿ ಅದನ್ನು ನೆಟ್ಟು ಬೆಳೆಸಬಹುದು. ಬಳ್ಳಿ ನೆಟ್ಟು ಒಂದೆರಡು ವರ್ಷದಲ್ಲಿ ಹೂಬಿಡಲು ಆರಂಭಿಸುತ್ತದೆ. ಅಷ್ಟೇ ಅಲ್ಲ ಹೂಗಳು ಹೆಚ್ಚು ಸಮಯ ಬಳ್ಳಿಯಲ್ಲಿದ್ದು ಮನೆಯಂಗಳದ ಚೆಲುವನ್ನು ಇಮ್ಮಡಿಗೊಳಿಸುತ್ತವೆ.

English summary

Beautiful flowers in home garden | Pyrostegia venusta flower | How to grow Jilebi flowers | ಮನೆಯಂಗಳದಲ್ಲಿ ಜಿಲೇಬಿ ಹೂಗಳು

Decorate compound of your home by planting beautiful Pyrostegia venusta flower plants. These flowers are also called as Jilegi flowers of Tuttoori flowers. Orange colored flowers are ascends the beauty of any home. An article by BM Lavakumar, Mysore.
Story first published: Wednesday, January 18, 2012, 13:05 [IST]
X
Desktop Bottom Promotion