For Quick Alerts
ALLOW NOTIFICATIONS  
For Daily Alerts

ಓಣಂ 2021: ಕಣ್ಮನ ಸೆಳೆಯುವ ಪೂಕಳಂ ಸೊಬಗು ನೋಡಿ

|

ಕೇರಳದ ಪ್ರಮುಖ ಹಬ್ಬವಾಗಿರುವ ಓಣಂನ ಪ್ರಮುಖ ಆಕರ್ಷಣೆಯೆಂದರೆ ಪೂಕಳಂ ಅಂದ್ರೆ ಹೂವಿನಿಂದ ಹಾಕುವ ರಂಗೋಲಿ. 10 ದಿನ ಮನೆಯ ಮುಂದುಗಡೆ ಹೂವಿನ ರಂಗೋಲಿ ಹಾಕಿ ಸಡಗರ ಸಂಭ್ರಮದಿಂದ ಆಚರಿಸಲಾಗುವುದು.

ಈ ವರ್ಷ ಆಗಸ್ಟ್‌ 21ರಂದು ಓಣಂ ಹಬ್ಬವನ್ನು ಆಚರಿಸಲಾಗುವುದು. ಕರ್ನಾಟಕದಲ್ಲಿ ದೀಪಾವಳಿಗೆ ಬಲಿ ಚಕ್ರವರ್ತಿಯನ್ನು ಸ್ವಾಗತಿಸಿದರೆ ಕೇರಳದಲ್ಲಿ ಓಣಂ ಹಬ್ಬದಂದು ಹೂಗಳನ್ನು ಹಾಕಿ ಬಲಿ ಚಕ್ರವರ್ತಿಯನ್ನು ಸ್ವಾಗತಿಸಲಾಗುವುದು.

Onam 2021,

ರಾಜ ಬಲಿಚಕ್ರವರ್ತಿ ದಾನದಲ್ಲಿ ಶೂರನಾಗಿದ್ದ. ಈತನಷ್ಟು ದಾನಶೂರ ಮತ್ತೊಬ್ಬನಿಲ್ಲ ಎಂಬ ಖ್ಯಾತಿ ಗಳಿಸಿದ್ದ. ವಿಷ್ಣು ಇವನ ದಾನವನ್ನು ತಿಳಿಯಲು ವಾಮನ ಮೂರ್ತಿಯಾಗಿ ಬಾಹುಬಲಿ ಆಸ್ಥಾನಕ್ಕೆ ಬರುತ್ತಾನೆ. ಆಗ ಬಲಿಚಕ್ರವರ್ತಿ ವಾಮನನ ಬಳಿ ನಿನಗೇನು ಬೇಕು ಎಂದು ಕೇಳುತ್ತಾನೆ, ನನ್ನ ಮೂರು ಅಡಿಯಷ್ಟು ಜಾಗ ಸಾಕು ಎಂದು ವಾಮನ ಮೂರ್ತಿಯು ಹೇಳುತ್ತಾನೆ. ಆಗ ಬಲಿ ಚಕ್ರವರ್ತಿ ನೀನು ಕೇಳಿದಷ್ಟು ಸ್ಥಳ ನೀಡುತ್ತೇನೆ ಎಂದು ಹೇಳುತ್ತಾನೆ.

ನೋಡು-ನೋಡುತ್ತಿದ್ದಂತೆ ವಾಮನ ಮೂರ್ತಿ ಬೆಳೆಯಲಾರಂಭಿಸುತ್ತಾನೆ ಒಂದು ಅಡಿಯಲ್ಲಿ ಭೂಲೋಕವನ್ನು ಆವರಿಸಿದರೆ, ಮತ್ತೊಂದಡಿಯಲ್ಲಿ ಆಕಾಶವನ್ನು ಆವರಿಸುತ್ತಾನೆ. ಆಗ ವಿಷ್ಣು ಬಲಿಚಕ್ರವರ್ತಿ ಬಳಿ ಮೂರನೇ ಅಡಿ ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಯ ಮೇಲಿಡುವಂತೆ ಕೋರುತ್ತಾನೆ, ಅದರಂತೆ ಬಲಿ ಚಕ್ರವರ್ತಿ ವಿಷ್ಣು ಪಾದವನ್ನು ಇಟ್ಟಾಗ ಪಾತಾಳ ಲೋಕಕ್ಕೆ ಹೋಗುತ್ತಾನೆ. ಆಗ ವಿಷ್ಣು ಅವನ ದಾನವನ್ನು ಮೆಚ್ಚಿ ಬಲಿ ಚಕ್ರವರ್ತಿ ವರ್ಷಕೊಮ್ಮೆ ತನ್ನ ಪ್ರಜೆಗಳನ್ನು ನೋಡಲು ಭೂಲೋಕಕ್ಕೆ ಬಾ, ಆಗ ಜನರು ನಿನ್ನನ್ನು ಹೂವಿನ ರಂಗೋಲಿ ಹಾಕಿ, ದೀಪಗಳನ್ನು ಹಚ್ಚಿ ಸ್ವಾಗತಿಸುತ್ತಾರೆ ಎಂಬ ವರ ನೀಡುತ್ತಾನೆ. ಓಣಂ ಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಹಬ್ಬವಾಗಿದೆ.

ಎಲ್ಲರ ಮನೆಗಳಲ್ಲಿ ತುಂಬಾ ಆಕರ್ಷಕವಾಗಿ ಪೂಕಳಂ ಹಾಕಲಾಗುವುದು. ಕರ್ನಾಟಕದಲ್ಲೂ ಕೆಲಸಕ್ಕಾಗಿ ಬಂದು ಇಲ್ಲಿ ನೆಲೆಸಿದವರು, ವಲಸೆ ಬಂದು ಇಲ್ಲಿಯೇ ನೆಲೆಸಿದ ಮಲೆಯಾಳಿಗಳು ಓಣಂ ಆಚರಿಸುತ್ತಾರೆ.

ನಾವಿಲ್ಲಿ ಹೂವಿನ ರಂಗೋಲಿ ಅಥವಾ ಪೂಕಳಂ ಕೆಲ ಆಕರ್ಷಕ ಚಿತ್ರಗಳನ್ನು ನೀಡಿದ್ದೇವೆ ನೋಡಿ.

ಪೂಕಳಂ 1

ಪೂಕಳಂ 1

ವೃತ್ತಾಕಾರದ ಪೂಕಳಂ

ಇದು ತುಂಬಾ ಸರಳವಾದ ಹಾಗೂ ಆರ್ಷಕವಾದ ಪೂಕಳಂವಾಗಿದೆ. ಸ್ವಲ್ಪ ವಿಭಿನ್ನ ಹೂಗಳಿದ್ದರೆ ಈ ರೀತಿಯ ಪೂಕಳಂ ಸುಲಭವಾಗಿ ಬಿಡಿಸಬಹುದು.

ಪೂಕಳಂ 2

ಪೂಕಳಂ 2

ಇದು ಕೂಡ ತುಂಬಾನೇ ಸರಳವಾದ ಪೂಕಳಂವಾಗಿದೆ, ಇಲ್ಲಿ 7 ಸುತ್ತಿನಲ್ಲಿ ಹಾಕಲಾಗಿದೆ, 10ನೇ ದಿನಕ್ಕೆ ಈ ರೀತಿಯ 10 ಬಣ್ಣಗಳಲ್ಲಿ ಪೂಕಳಂ ಹಾಕಿದರೆ ಮತ್ತಷ್ಟು ಸುಂದರವಾಗಿರುತ್ತದೆ.

ಪೂಕಳಂ 3

ಪೂಕಳಂ 3

ಇದು ರಂಗೋಲಿ ಪುಡಿ ಹಾಗೂ ಹೂಗಳನ್ನು ಬಳಸಿ ಹಾಕಿರುವ ರಂಗೋಲಿಯಾಗಿದೆ. ಮೊದಲಿಗೆ ಹೂಗಳಿಂದ ರಂಗೋಳಿ ಹಾಕಿ, ನಂತರ ರಂಗೋಲಿ ಹಿಟ್ಟಿನಿಂದ ರಂಗೋಲಿ ಹಾಕಲಾಗುವುದು.

ಪೂಕಳಂ 4

ಪೂಕಳಂ 4

ಈ ಪೂಕಳಂ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ? ಸ್ವಲ್ಪ ಕ್ರಿಯೇಟಿವ್ ಆಗಿ ಯೋಚಿಸಿದರೆ ಹೀಗೆ ಆಕರ್ಷಕವಾಗಿ ಪೂಕಳಂ ಹಾಕಬಹುದು.

ಪೂಕಳಂ 5

ಪೂಕಳಂ 5

ತ್ರಿರಂಗ ಬಣ್ಣ ಬಳಸಿ ಹಾಕಿರುವ ಈ ರಂಗೋಲಿ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ.. ಕೇಸರಿ, ಬಿಳಿ, ಹಸಿರು ಬಣ್ಣ ಬಳಸಿ ಈ ರೀತಿಯಾಗಿ ಹಾಕಿದರೆ ತುಂಬಾನೆ ಆಕರ್ಷಕವಾಗಿರುತ್ತದೆ ಅಲ್ವಾ?

ಪೂಕಳಂ 6

ಪೂಕಳಂ 6

ಇದು ಕೂಡ ಮತ್ತೊಂದು ಸುಂದರವಾದ ಪೂಕಳಂವಾಗಿದೆ.

ಪೂಕಳಂ 8

ಪೂಕಳಂ 8

ಈ ಪೂಕಳಂ ಕೂಡ ಹಾಕಲು ತುಂಬಾನೇ ಸ್ವಲ್ಪವಾಗಿದೆ. ಪೂಕಳಂ ಮುನ್ನ ಚಾಕ್‌ಪೀಸ್‌ನಿಂದ ಬರೆದು ನಂತೆ ಹೂಗಳಿಂದ ತುಂಬಿದರೆ ಸಾಕು. ಸುಂದರವಾದ ರಂಗೋಲಿ ಮನೆ ಮುಂದೆ ನಗುತ್ತಿರುತ್ತದೆ.

ಪೂಕಳಂ 7

ಪೂಕಳಂ 7

ಹೂವಿನ ಚಿತ್ತಾರದಲ್ಲಿ ಮೂಡಿದ ನರ್ತಕಿ, ಎಷ್ಟೊಂದು ಸೊಗಸಾಗಿದೆ ಅಲ್ವಾ?

ಪೂಕಳಂ 8

ಪೂಕಳಂ 8

ತೆಳು ಬಣ್ಣ ಹಾಗೂ ಗಾಢ ಬಣ್ಣದ ಹೂಗಳ ಕಾಂಬಿನೇಷನ್‌ನಿಂದ ತಯಾರಿಸಿದ ಈ ಹೂವಿನ ಚಿತ್ತಾರ ನೋಡಿ....

ಪೂಕಳಂ 9

ಪೂಕಳಂ 9

ಹೂವಿನಲ್ಲಿ ಮೂಡಿದಳು ಹೂ ಮನಸ್ಸಿನ ಹೆಣ್ಣು...

ಪೂಕಳಂ 11

ಪೂಕಳಂ 11

ಈ ಪೂಕಂ ನೋಡಿ ಚಿತ್ರಗಾರರಿಗೆ ಮಾತ್ರ ಇಂಥ ಆಕರ್ಷಕ ಪೂಕಳಂ ಬಿಡಿಸಲು ಸಾಧ್ಯ...

ಪೂಕಳಂ 12

ಪೂಕಳಂ 12

ವೃತ್ತಾಕಾರದ ಪೂಕಳಂ

ಇದು ತುಂಬಾ ಸರಳವಾದ ಹಾಗೂ ಆರ್ಷಕವಾದ ಪೂಕಳಂವಾಗಿದೆ. ಸ್ವಲ್ಪ ವಿಭಿನ್ನ ಹೂಗಳಿದ್ದರೆ ಈ ರೀತಿಯ ಪೂಕಳಂ ಸುಲಭವಾಗಿ ಬಿಡಿಸಬಹುದು.

English summary

Onam: Attractive Onam Pookalam designs for harvesting festival in kannada

Onam 2021: Attractive Onam Pookalam designs for harvesting festival in kannada, Read on..
X
Desktop Bottom Promotion