ಮನೆಯಲ್ಲಿ ಪಾಸಿಟಿವ್ ಶಕ್ತಿಯನ್ನು ಹೆಚ್ಚಿಸಲು ಸರಳ ವಾಸ್ತು ಶಾಸ್ತ್ರ

By: Deepak M
Subscribe to Boldsky

ಇಂದಿನ ಪ್ರಸ್ತುತ ಜಂಜಾಟದ ಯುಗದಲ್ಲಿ ನಮ್ಮ ಆರೋಗ್ಯ ಅಥವಾ ಸಂಬಂಧಗಳಲ್ಲಿ ವೈಫಲ್ಯಗಳಿಗೆ ಕಾರಣಗಳನ್ನು ಕಂಡು ಹಿಡಿಯಲು ಮತ್ತು ಅದನ್ನು ವಿಶ್ಲೇಷಿಸಲು ನಮಗೆ ಸಮಯವೇ ಇರುವುದಿಲ್ಲ.

ಈ ಹೆಚ್ಚಿನ ಸಮಸ್ಯೆಗಳು ಪ್ರಮುಖವಾಗಿ ವಾಸ್ತು ಮತ್ತು ಫೆಂಗ್ ಶೂಯಿ ದೋಷಗಳೊಂದಿಗೆ ಸಂಬಂಧವನ್ನು ಹೊಂದಿರುತ್ತವೆ. ಹಾಗಾಗಿ ಇಲ್ಲಿ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲವಾಗುವ ಕೆಲವು ಸಲಹೆಗಳನ್ನು ಪಟ್ಟಿಮಾಡಲಾಗಿದೆ....

ಮನೆಯ ದಿಕ್ಕು

ಮನೆಯ ದಿಕ್ಕು

ಮನೆಯ ದಿಕ್ಕುಗಳನ್ನು ಕಂಡು ಹಿಡಿಯಲು ಮೊದಲು ಕೈಯಲ್ಲಿ ದಿಕ್ಸೂಚಿಯನ್ನು ಹಿಡಿದುಕೊಂಡು ಮನೆಯ ಮಧ್ಯಭಾಗದಲ್ಲಿ ನಿಂತುಕೊಳ್ಳಿ. ಮನೆಯ ಮುಖ್ಯದ್ವಾರ ಮನೆಯ ಬಾಯಿ ಇದ್ದಂತಿದ್ದು ಶಕ್ತಿಯನ್ನು ತರುವಂತದಾಗಿರುತ್ತದೆ. ಅಲ್ಲದೆ ಇದು ಆನೇಕ ಕಷ್ಟಗಳು ಮತ್ತು ದೌರ್ಭಾಗ್ಯವನ್ನು ತರುತ್ತದೆ. ಹಾಗಾಗಿ ನಿಮ್ಮ ಮನೆಯ ಮುಖ್ಯದ್ವಾರ ದಕ್ಷಿಣ ಅಥವಾ ಪಶ್ಚಿಮಾಭಿಮುಖವಾಗಿದ್ದಲ್ಲಿ ಮನೆಯ ಹೊರಬಾಗಿಲಿಗೆ ಎರಡು ಹನುಮಾನ್‍ ಜೀ ಟೈಲ್ಸ್‌ಗಳನ್ನು ಹಾಕಿ ನಂತರ ಆಗುವ ಬದಲಾವಣೆಯನ್ನು ನೀವೇ ನೋಡಿ.

ವಾಸ್ತು ಶಾಸ್ತ್ರ: ನೀವು ತಿಳಿಯಬೇಕಾದ ದಿಕ್ಕಿನ ಪ್ರಾಮುಖ್ಯತೆ

ದೇವರಮನೆ ಅಥವಾ ಪೂಜಾ ಕೋಣೆ

ದೇವರಮನೆ ಅಥವಾ ಪೂಜಾ ಕೋಣೆ

ದೇವರಮನೆ ಅಥವಾ ಪೂಜಾ ಕೋಣೆ ಎಲ್ಲಾ ವಾಸ್ತು ನಿಯಮಗಳ ರಾಜನಿದ್ದಂತೆ. ಇದನ್ನು ಈಶಾನ್ಯ ದಿಕ್ಕಿನಲ್ಲಿ ಬರುವಂತೆ ಇಡೀ ಆಗ ನೋಡಿ ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತವೆ. ಹಾಗಾಗಿ ನೀವು ಪ್ರಾರ್ಥನೆ ಮಾಡುವ ಸಮಯದಲ್ಲಿ ಪೂರ್ವಾಭಿಮುಖವಾಗಿ ಕುಳಿತು ಪ್ರಾರ್ಥನೆ ಮಾಡಿ.

ಅಡುಗೆ ಮನೆ

ಅಡುಗೆ ಮನೆ

ಅಡುಗೆ ಮನೆಯು ಸಮೃದ್ಧಿಯ ಸಂಕೇತವಾಗಿರುತ್ತದೆ. ಹಾಗಾಗಿ ಅಡಿಗೆ ಮನೆಯು ಆಗ್ನೇಯ ದಿಕ್ಕಿನಲ್ಲಿರಬೇಕು. ಹಾಗೇನಾದರೂ ಆಗದೇ ಅಡಿಗೆ ಮನೆಯು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇದ್ದಲ್ಲಿ ಅದು ಹಣಕಾಸಿನ ಹಾಗೂ ಅನೇಕ ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಮೇಲ್ಛಾವಣಿಯಲ್ಲಿ (ಸೀಲಿಂಗ್) ಮೂರು ಕಂಚಿನ ಬಟ್ಟಲುಗಳನ್ನು ತಲೆಕೆಳಕಾಗಿ ನೇತುಹಾಕಿ ಆದರೆ ಅದನ್ನು ಸ್ಟವ್‌ ಮೇಲೆ ನೇರವಾಗಿ ನೇತು ಹಾಕಬೇಡಿ.

ಮಲಗುವ ಕೋಣೆ

ಮಲಗುವ ಕೋಣೆ

ಮಲಗುವ ಕೋಣೆ ಸ್ಥಿರತೆಯನ್ನು ಕಾಪಾಡುವಂತಹದ್ದು ಆ ಕೋಣೆಯ ಬಾಗಿಲು ನೈಋತ್ಯ ದಿಕ್ಕಿಗೆ ಇರಬೇಕು. ಮತ್ತು ನೀವು ದಕ್ಷಿಣಾಭಿಮುಖವಾಗಿ ಅಥವಾ ಪಶ್ಚಿಮಾಭಿಮುಖವಾಗಿ ತಲೆ ಹಾಕಿ ಮಲಗಬೇಕು. ಆದರೆ ಮನೆಯ ಯಜಮಾನ ಯಾವುದೇ ಕಾರಣಕ್ಕೂ ಈಶಾನ್ಯ ದಿಕ್ಕಿಗೆ ತಲೆಹಾಕಿ ಮಲಗಬಾರದು.

ಸ್ನಾನಗೃಹಗಳು ಮತ್ತು ಶೌಚಾಲಯಗಳು

ಸ್ನಾನಗೃಹಗಳು ಮತ್ತು ಶೌಚಾಲಯಗಳು

ಸ್ನಾನಗೃಹಗಳು ಮತ್ತು ಶೌಚಾಲಯಗಳು ಕಷ್ಟವನ್ನು ತರುವ ಶಕ್ತಿಯನ್ನು ಹೊಂದಿರುವ ಸ್ಥಳವಾಗಿದ್ದು, ಇವು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿರಬೇಕು. ಇವುಗಳು ಯಾವುದೇ ಕಾರಣಕ್ಕೂ ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ಎಂದಿಗೂ ಇರಬಾರದು. ಹಾಗೆ ಇದ್ದಲ್ಲಿ ಅದು ಹಣಕಾಸು, ಆರೋಗ್ಯ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ತರುತ್ತವೆ.

ಝೀರೊ ವ್ಯಾಟ್‌ನ ನೀಲಿ ಬಲ್ಬನ್ನು ಉಪಯೋಗಿಸಿ...

ಝೀರೊ ವ್ಯಾಟ್‌ನ ನೀಲಿ ಬಲ್ಬನ್ನು ಉಪಯೋಗಿಸಿ...

ನಿಮ್ಮ ಮನೆಯ ಕೇಂದ್ರ ಸ್ಥಳವು ನಿಮ್ಮ ದೇಹದಲ್ಲಿರುವ ಮೂಗಿಗೆ ಸಮಾನ. ಇದು ಉಸಿರಾಡಲು ಅನುಕೂಲವಾಗುವಂತೆ ಮುಕ್ತವಾಗಿ ಮತ್ತು ಗೊಂದಲವಿಲ್ಲದೆ ಇರಬೇಕು. ಕೇಂದ್ರ ಸ್ಥಳದ ಗೋಡೆಯು ಹೊಟ್ಟೆಗೆ ಸಂಬಂಧಿಸಿದ ಮತ್ತು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅದ್ದರಿಂದ ಝೀರೊ ವ್ಯಾಟ್‌ನ ನೀಲಿ ಬಲ್ಬನ್ನು ಈ ಗೋಡೆಗೆ ಹಾಕಿ ಅದನ್ನು 24X7 ಉರಿಯುತ್ತಿರುವಂತೆ ನೋಡಿಕೊಳ್ಳಬೇಕು.

 ಕೆಲವೊಂದು ಸರಳ ಪರಿಹಾರ

ಕೆಲವೊಂದು ಸರಳ ಪರಿಹಾರ

ಮನೆಯ ಯಾವುದೇ ದಿಕ್ಕನ್ನು ಕಡಿತಗೊಳಿಸಿದ್ದಲ್ಲಿ ಅಥವಾ ಅಸ್ಥಿರಗೊಳಿಸಿದ್ದಲ್ಲಿ ಅಂದರೆ ಮುಖ್ಯವಾಗಿ ನೈಋತ್ಯ, ಉತ್ತರ ಈಶಾನ್ಯ ಮತ್ತು ಆಗ್ನೇಯ ದಿಕ್ಕಿನಲ್ಲಿ ಯಾವುದೇ ಕಡಿತ ಮಾಡಿದ್ದಲ್ಲಿ ಅದು ಗಂಭೀರ ಸಮಸ್ಯೆಯನ್ನು ತರುತ್ತದೆ. ಅದರ ಪರಿಹಾರಕ್ಕೆ ಹಲವಾರು ರಹಸ್ಯಗಳಿವೆ. ಇದೀಗ ಪರಿಹಾರಗಳತ್ತ ಒಂದು ಪಕ್ಷಿನೋಟ ಹರಿಸೋಣ ಬನ್ನಿ.

 ಕೆಂಪು ಮತ್ತು ಕೆನ್ನೆರಳೆಯ ಬಣ್ಣಗಳನ್ನು ಉಪಯೋಗಿಸಬೇಡಿ....

ಕೆಂಪು ಮತ್ತು ಕೆನ್ನೆರಳೆಯ ಬಣ್ಣಗಳನ್ನು ಉಪಯೋಗಿಸಬೇಡಿ....

ನಿಮ್ಮ ಮನೆಯನ್ನು ಅಲಂಕರಿಸಲು ಹೆಚ್ಚು ಪ್ರಕಾಶಮಾನವಾದ ಕೆಂಪು ಮತ್ತು ಕೆನ್ನೆರಳೆಯ ಬಣ್ಣಗಳನ್ನು ಉಪಯೋಗಿಸಬೇಡಿ. ಇದು ನಿಮ್ಮಲ್ಲಿ ಅನಾರೋಗ್ಯದ ಶಕ್ತಿಯನ್ನು ಹೆಚ್ಚಿಸಬಹುದು. ನೀವು ಮಲಗುವ ಕೋಣೆಯಲ್ಲಿ ನೀರಿನ ಚಿತ್ರಗಳು ಅಥವಾ ಕಾರಂಜಿಗಳನ್ನು ಇಟ್ಟುಕೊಳ್ಳಬೇಡಿ. ಇದು ನಿಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

 

English summary

Ways to increase positivity in home

In the present complex scenario, we do not find time for ourselves to analyse the various reasons that lead us to failures in health, wealth or relationships. Most of these problems are connected to major Vastu and Feng Shui defects. Here are the lists some commandments which may help you to increase positive energy in your home:
Subscribe Newsletter