ಮಲಗಿದ ಕೂಡಲೇ ನಿದ್ದೆ ಬರಬೇಕೆಂದರೆ, ಹಾಗಾದರೆ ಬೆಡ್‌ರೂಮ್ ಹೀಗಿರಲಿ...

By: Hemanth
Subscribe to Boldsky

ಆರೋಗ್ಯ ಚೆನ್ನಾಗಿರಬೇಕೆಂದರೆ ಸರಿಯಾದ ನಿದ್ರೆ ಬೇಕೇಬೇಕು. ನಿದ್ರೆ ಸರಿಯಾಗಿಲ್ಲವೆಂದರೆ ಆರೋಗ್ಯ ಕೈಕೊಡುವುದರಲ್ಲಿ ಸಂಶಯವೇ ಇಲ್ಲ. ನಿದ್ರೆಗೆಟ್ಟರೆ ಹಲವಾರು ಕಾಯಿಲೆಗಳು ದೇಹವನ್ನು ವಕ್ಕರಿಸಿಕೊಳ್ಳುತ್ತವೆ. ಇದರಿಂದ ರಾತ್ರಿ ವೇಳೆ ಸರಿಯಾಗಿ ನಿದ್ರೆ ಮಾಡಬೇಕು ಎಂದು ವೈದ್ಯರು ಕೂಡ ಸೂಚಿಸುತ್ತಾರೆ. ಸಮಯಕ್ಕೆ ಸರಿಯಾಗಿ ಮಲಗಿ ಬೆಳಿಗ್ಗೆ ಬೇಗನೆ ಎದ್ದರೆ ಆರೋಗ್ಯವು ಚೆನ್ನಾಗಿರುತ್ತದೆ.

ನಿದ್ರೆ ವ್ಯವಸ್ಥಿತ ರೀತಿಯಲ್ಲಿ ಆಗಬೇಕೆಂದರೆ ನಿದ್ರಿಸುವಂತಹ ಸ್ಥಳ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಮಲಗುವ ಕೋಣೆ, ಹಾಸಿಗೆ, ಮಂಚ, ದಿಂಬು, ಕಂಬಳಿ ಹೀಗೆ ಪ್ರತಿಯೊಂದು ಸರಿಯಾಗಿರಬೇಕಾಗುತ್ತದೆ. ಮಲಗುವ ಕೋಣೆಯನ್ನು ಸರಿಯಾಗಿ ಅಲಂಕರಿಸಿಕೊಂಡು ಸ್ವಚ್ಛವಾಗಿಟ್ಟುಕೊಂಡರೆ ಆಗ ಸರಿಯಾದ ನಿದ್ರೆ ನಿಮ್ಮದಾಗುವುದು.

ಬೆಡ್‌ರೂಮ್‌ನಲ್ಲಿ ಇಂತಹ ವರ್ಣಚಿತ್ರಗಳನ್ನು ಮಾತ್ರ ಇಡಬೇಡಿ! 

ಮಲಗುವ ಕೋಣೆಗೆ ನೀಲಿ, ಹಸಿರು ಮತ್ತು ಕಂದು ಬಣ್ಣವನ್ನು ಹಚ್ಚಿಕೊಳ್ಳಿ. ಈ ಬಣ್ಣಗಳು ಮನಸ್ಸನ್ನು ಶಾಂತಗೊಳಿಸುವುದು ಮತ್ತು ಕೋಣೆಗೆ ಧನಾತ್ಮಕ ಶಕ್ತಿ ನೀಡುವುದು. ಯಾವುದೇ ಶಬ್ಧ ಕೋಣೆಯಲ್ಲಿ ಇರದಂತೆ ನೋಡಿಕೊಳ್ಳಿ. ಒತ್ತಡ ಮತ್ತು ಚಿಂತೆ ದೂರ ಮಾಡಲು ಮಲಗುವ ಕೋಣೆಯಲ್ಲಿ ಟೇಬಲ್ ಮತ್ತು ಗೋಡೆಗಳಲ್ಲಿ ಮಂದ ಬೆಳಕು ನೀಡುವ ಲೈಟ್‌ಗಳನ್ನು ಹಾಕಿ. 

bedroom

ಒಳ್ಳೆಯ ಹಾಸಿಗೆ ತನ್ನಿ

ಒಳ್ಳೆಯ ಹಾಸಿಗೆಯು ಆರೋಗ್ಯದ ಮೇಲೆ ಹೂಡಿಕೆ ಮಾಡಿದಂತೆ. ಹಾಸಿಗೆಯು ತುಂಬಾ ಗಟ್ಟಿ, ಮೃಧು ಅಥವಾ ಮುದ್ದೆಗಟ್ಟಿದ್ದರೆ ಅದರಿಂದ ಒಳ್ಳೆಯ ನಿದ್ರೆ ಬರಲು ಸಾಧ್ಯವಿಲ್ಲ. ಹಾಸಿಗೆ ಒಳ್ಳೆಯದಿರದ ಕಾರಣದಿಂದ ಹೆಚ್ಚಿನವರು ಕುತ್ತಿಗೆ ಮತ್ತು ಸ್ನಾಯು ನೋವಿಗೆ ಒಳಗಾಗುತ್ತಾರೆ. ಹಾಸಿಗೆಗೆ ಸಂಪೂರ್ಣ ಹಣ ನೀಡುವ ಮೊದಲು ಅದನ್ನೊಮ್ಮೆ ಪರೀಕ್ಷಿಸಿ ನೋಡಿ.

ಕೋಣೆಯು ಕತ್ತಲಾಗಿರಲಿ

ಒಳ್ಳೆಯ ನಿದ್ರೆ ಬರಬೇಕೆಂದರೆ ಕೋಣೆಯು ಕತ್ತಲು ಹಾಗೂ ಶಾಂತವಾಗಿರಬೇಕು. ಡಿಜಿಟಲ್ ಗಡಿಯಾರ, ಟಿವಿ, ಮೊಬೈಲ್ ಬೆಳಕನ್ನು ಉಂಟು ಮಾಡಿ ನಿದ್ರೆಗೆ ಭಂಗ ಉಂಟು ಮಾಡಬಹುದು. ಇದನ್ನು ಕೋಣೆಯಿಂದ ದೂರವಿಟ್ಟರೆ ತುಂಬಾ ಒಳ್ಳೆಯದು. 

bedroom

ಶಬ್ದ ಕಡಿಮೆ ಮಾಡಿ

ಫ್ಯಾನ್ ಅಥವಾ ಎಸಿ ಶಬ್ದ ಮಾಡುತ್ತಾ ಇದೆಯಾ? ಹಾಗಾದರೆ ಅದನ್ನು ಬದಲಾಯಿಸಿ. ಕೋಣೆ ತುಂಬಾ ತಂಪು ಅಥವಾ ಬಿಸಿಯಾಗುತ್ತಾ ಇದೆಯಾ? ಕೋಣೆಯಲ್ಲಿನ ಉಷ್ಣತೆಯನ್ನು ನಿಯಂತ್ರಣದಲ್ಲಿ ಇಡಲು ಥರ್ಮೋಸ್ಟಾಟ್ ಅಳವಡಿಸಿ.

ಮಲಗುವ ಕೋಣೆಯನ್ನು ಚೊಕ್ಕವಾಗಿರಿಸಲು 5 ಸರಳ ವಿಧಾನಗಳು 

English summary

This is how your bedroom will help you sleep better

"Bedroom is the most luxurious and personal space in any home. Beautify your room with posh cushions and rugs. They'll help muffle noise, in addition to looking warm and cosy." Use colours like blues, greens and greys to create a cool oasis, as these colours have a calming effect and give a positive energy to the room. An important element for a good sleep is lights. Add table or floor lamps in your bedroom to free yourself from stress and worries.
Subscribe Newsletter