For Quick Alerts
ALLOW NOTIFICATIONS  
For Daily Alerts

ಲಿವಿಂಗ್ ರೂಮ್‌ ಅಂದರೆ ಹೀಗಿರಲಿ, ನಾಲ್ಕು ಮಂದಿ ಮೆಚ್ಚುವಂತಿರಲಿ....

ಮನೆಯ ಹೃದಯಭಾಗ ಎಂದೆನಿಸಿರುವ ಲಿವಿಂಗ್ ರೂಮ್‌ಗೆ ನೀವು ಎಷ್ಟು ಮಹತ್ವವನ್ನು ನೀಡಿದ್ದೀರಿ ಮತ್ತು ಅತಿಥಿಗಳ ಕಣ್ಮನಸೆಳೆಯುವಂತೆ ಅದನ್ನು ಹೇಗೆ ಸಜ್ಜುಗೊಳಿಸಿದ್ದೀರಿ ಎಂಬುನ್ನೇ ಇಂದಿನ ಲೇಖನದಲ್ಲಿ ನಾವು ಚರ್ಚಿಸಲಿರುವೆವು.

By Jaya Subramanya
|

ನಾವು ವಾಸಿಸುವ ಮನೆ ಸುಂದರವಾಗಿರಬೇಕು, ಪ್ರತಿಯೊಬ್ಬರ ಮನವನ್ನೂ ಕದಿಯುವಂತಿರಬೇಕು, ಮೆಚ್ಚಿಕೊಳ್ಳುವಂತಿರಬೇಕು ಎಂಬ ನಿಟ್ಟಿನಲ್ಲಿಯೇ ನಾವು ಮನೆಯನ್ನು ಕಟ್ಟಿ ಅದನ್ನು ಸುಂದರವಾಗಿ ಸಜ್ಜುಗೊಳಿಸುತ್ತೇವೆ. ಮನೆಯ ಪ್ರತಿಯೊಂದು ಕೊಠಡಿಯೂ ಅತ್ಯಂತ ಪ್ರಮುಖ ಎಂದೆನಿಸಿದ್ದು ಪ್ರತಿಯೊಂದರೆ ಅಚ್ಚುಕಟ್ಟು ಮತ್ತು ಸುಂದರತೆಯನ್ನು ನಾವು ಕಾಪಾಡಿಕೊಳ್ಳಲೇಬೇಕಾಗಿದೆ.

ನಿಮ್ಮ ಮನೆ ಚಿಕ್ಕದಾಗಿದೆಯೇ ದೊಡ್ಡದಾಗಿದೆಯೇ ಎಂಬುದು ಪ್ರಶ್ನೆಯಾಗಿರದೇ ಮನೆಯನ್ನು ನೀವು ಹೇಗೆ ಇಟ್ಟುಕೊಂಡಿದ್ದೀರಿ ಮತ್ತು ಮನೆಯನ್ನು ಚೊಕ್ಕಟಗೊಳಿಸುವಲ್ಲಿ ನಿಮ್ಮ ಯೋಜನೆಗಳೇನು ಎಂಬುದನ್ನು ಆಧರಿಸಿರುತ್ತದೆ. ಮನೆಯ ಹೃದಯಭಾಗ ಎಂದೆನಿಸಿರುವ ಲಿವಿಂಗ್ ರೂಮ್‌ಗೆ ನೀವು ಎಷ್ಟು ಮಹತ್ವವನ್ನು ನೀಡಿದ್ದೀರಿ ಮತ್ತು ಅತಿಥಿಗಳ ಕಣ್ಮನಸೆಳೆಯುವಂತೆ ಅದನ್ನು ಹೇಗೆ ಸಜ್ಜುಗೊಳಿಸಿದ್ದೀರಿ ಎಂಬುನ್ನೇ ಇಂದಿನ ಲೇಖನದಲ್ಲಿ ನಾವು ಚರ್ಚಿಸಲಿರುವೆವು.

ಮನೆಗೆ ಬರುವ ಅತಿಥಿಗಳನ್ನು ನೀವು ಆಸೀನರಾಗಿಸುವ ಸ್ಥಳ ಇದಾಗಿರುವುದರಿಂದ ನೀವು ಹೆಚ್ಚುವರಿ ಮುತುವರ್ಜಿಯನ್ನು ಈ ಕೊಠಡಿಯನ್ನು ಸಜ್ಜಿಗೊಳಿಸುವಾಗ ನೀಡಬೇಕು. ಹೆಚ್ಚು ಆಡಂಬರವಾಗಿರದೇ ಸರಳವಾಗಿ ನೀವು ಲಿವಿಂಗ್ ರೂಮ್ ಅನ್ನು ಇರಿಸಿಕೊಳ್ಳಬೇಕಾಗುತ್ತದೆ. ಮನೆಯ ಆಕರ್ಷಕ ಅಲಂಕಾರಕ್ಕಾಗಿ ಸೂಪರ್ ಟಿಪ್ಸ್

ಅದಾಗ್ಯೂ ನಮ್ಮ ಲಿವಿಂಗ್ ರೂಮ್‌ನ ವಿಷಯದಲ್ಲಿ ನಾವು ಮಾಡುವ ತಪ್ಪುಗಳೇನು ಎಂಬುದನ್ನೇ ಇಂದಿಲ್ಲಿ ತಿಳಿಸಲಿದ್ದೇವೆ. ಅಂತೆಯೇ ನಿಮಗಾಗಿ ಈ ಲೇಖನದಲ್ಲಿ ಸಲಹೆಗಳೂ ಇದ್ದು ಇದನ್ನು ನೀವು ಅನುಸರಿಸಿಕೊಂಡು ಲಿವಿಂಗ್ ರೂಮ್‌ನ ಅಂದವನ್ನು ಇಮ್ಮಡಿಗೊಳಿಸಬಹುದಾಗಿದೆ....

ಲೈಟಿಂಗ್

ಲೈಟಿಂಗ್

ನಿಮ್ಮ ಕೊಠಡಿಯಲ್ಲಿ ಲೈಟಿಂಗ್ ಚೆನ್ನಾಗಿ ಇಲ್ಲವೆಂದಾದರೆ ಅದು ಅಂದವನ್ನೇ ಹಾಳುಗೆಡವುತ್ತದೆ. ಎಲ್ಲಾ ಬದಿಯಿಂದಲೂ ಬೆಳಕು ಕೋಣೆಯನ್ನು ಪ್ರವೇಶಿಸುವಂತೆ ಮಾಡಿ. ಎಲ್‌ಇಡಿ ಬಲ್ಬ್‌ಗಳನ್ನೇ ಬಳಸಿಕೊಳ್ಳಿ.

ತಪ್ಪಾದ ಕಾರ್ಪೆಟ್

ತಪ್ಪಾದ ಕಾರ್ಪೆಟ್

ಕೊಠಡಿಯ ಅಳತೆಗೆ ತಕ್ಕಂತೆ ನಿಮ್ಮ ಕಾರ್ಪೆಟ್ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಬಣ್ಣವನ್ನು ಆಯ್ಕೆಮಾಡುವಾಗ ಕೂಡ ಹೆಚ್ಚಿನ ಕಾಳಜಿ ವಹಿಸಿ.

ವ್ಯವಸ್ಥಿತಗೊಳಿಸುವುದು

ವ್ಯವಸ್ಥಿತಗೊಳಿಸುವುದು

ಎಲ್ಲಾ ಪೀಠೋಪಕರಣಗಳು ಕೊಠಡಿಯಲ್ಲಿ ಸೂಕ್ತವಾಗಿ ಕ್ರಮಬದ್ಧವಾಗಿ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಟಿವಿಯನ್ನು ಕೊಠಡಿಯಲ್ಲಿ ಎಲ್ಲೆಂದರಲ್ಲಿ ಇರಿಸುವುದು ತಪ್ಪಾದ ಅಂಶವಾಗಿದೆ.

ಸೋಫಾ ಹೊಂದಿಸುವುದು

ಸೋಫಾ ಹೊಂದಿಸುವುದು

ಗೋಡೆಗೆ ಹೊಂದಿಕೊಳ್ಳುವಂತೆ ಸೋಫಾವನ್ನು ಇರಿಸುವುದು ತಪ್ಪು ಕ್ರಮವಾಗಿದೆ. ಇದರಿಂದ ಹೆಚ್ಚಿನ ಜಾಗವನ್ನು ಉಳಿಸಬಹುದು ಎಂಬುದು ನಿಮ್ಮ ಯೋಚನೆಯಾಗಿದ್ದರೆ ಅದು ತಪ್ಪು ಇದರಿಂದ ಕೊಠಡಿಯ ಅಂದ ಹಾಳಾಗುವುದಂತೂ ಖಂಡಿತ. ಮನೆಯ ಅಂದ ಹೆಚ್ಚಿಸುವ ಪೀಠೋಪಕರಣಗಳ ಆಯ್ಕೆ ಹೀಗಿರಲಿ...

ಗಾಢ ಗೋಡೆಯ ಬಣ್ಣ

ಗಾಢ ಗೋಡೆಯ ಬಣ್ಣ

ಗೋಡೆಗಳ ಬಣ್ಣಕ್ಕಾಗಿ ಗಾಢತೆಯನ್ನು ಆಯ್ಕೆಮಾಡಿಕೊಳ್ಳದಿರಿ. ನಿಮಗೆ ಗಾಢ ಬಣ್ಣ ಇಷ್ಟ ಎಂದಾದಲ್ಲಿ ಗೋಡೆಯ ಒಂದು ಬದಿಗೆ ಮಾತ್ರವೇ ಇದನ್ನು ಹಚ್ಚಿ ಉಳಿದ ಭಾಗಕ್ಕೆ ತಿಳಿ ಬಣ್ಣವನ್ನು ಆರಿಸಿ. ಮನೆಯ ಗೋಡೆಯ ಬಣ್ಣ, ಹೀಗಿದ್ದರೆ ಚೆನ್ನ....

ಹಳೆಯ ಮಾದರಿಯ ವಿನ್ಯಾಸ

ಹಳೆಯ ಮಾದರಿಯ ವಿನ್ಯಾಸ

"ಹಳತು ಬಂಗಾರ" ಎಂಬ ಮಾತು ಎಲ್ಲಾ ಹಂತಕ್ಕೂ ಹೊಂದಿಕೆಯಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಹಳೆಯ ಮಾದರಿಯ ಪೀಠೋಪಕರಣಗಳ ವಿನ್ಯಾಸವನ್ನು ಆಯ್ಕೆಮಾಡಿಕೊಳ್ಳದೇ ಈಗಿನ ಟ್ರೆಂಡಿ ನೋಟಕ್ಕೆ ಆದ್ಯತೆಯನ್ನು ನೀಡಿ.

ಕೋಣೆಯ ಮುಖ್ಯ ಅಂಶವನ್ನೇ ಮರೆಯುವುದು

ಕೋಣೆಯ ಮುಖ್ಯ ಅಂಶವನ್ನೇ ಮರೆಯುವುದು

ನಿಮ್ಮ ಲಿವಿಂಗ್ ರೂಮ್ ಎನ್ನುವುದು ಅತಿಥಿಗಳಿಗೆ ಮೀಸಲಾಗಿರುವುದರಿಂದ ಅದನ್ನು ಆಕರ್ಷಕವಾರಿಸಿಕೊಳ್ಳಿ. ನಿಮ್ಮ ಕಚೇರಿಯ ಟೇಬಲ್, ವ್ಯಾಯಾಮ ಪೀಠೋಕರಣಗಳು, ನಿದ್ರಾ ಕೊಠಡಿಯಂತೆ ಇದನ್ನು ರೂಪಿಸಿಕೊಳ್ಳಬೇಡಿ.

ಕರ್ಟನ್‌ಗಳು

ಕರ್ಟನ್‌ಗಳು

ಕಿಟಕಿಯಷ್ಟಕ್ಕೇ ಬರುವ ಕರ್ಟನ್‌ಗಳು ಈಗ ಫ್ಯಾಶನ್ ಆಗಿ ಉಳಿದಿಲ್ಲ. ನೆಲಕ್ಕೆ ತಾಗುವಷ್ಟಿರುವ ಕರ್ಟನ್‌ಗಳನ್ನು ಆಯ್ಕೆಮಾಡಿಕೊಳ್ಳಿ. ಇದರಿಂದ ನಿಮ್ಮ ಲಿವಿಂಗ್ ರೂಮ್‌ನ ಅಂದ ಇಮ್ಮಡಿಯಾಗುವುದು ಖಂಡಿತ.

English summary

Mistakes That We Make While Designing Our Living Room

Living room is where people get to judge you and so you must make no mistakes while designing it. Here are the common mistakes that could ruin your living room design, so avoid them!
X
Desktop Bottom Promotion