For Quick Alerts
ALLOW NOTIFICATIONS  
For Daily Alerts

ಮನೆಯ ಬಾಲ್ಕನಿ: ಸ್ವಲ್ಪ ಎಡವಟ್ಟಾದರೂ ನೆಮ್ಮದಿಯೇ ಹಾಳಾಗಬಹುದು!

By Divya
|

ಮನೆಯ ನಿರ್ಮಾಣದಲ್ಲಿ ಬಾಲ್ಕನಿಯು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಮನೆಯಿಂದಾಚೆಯ ಜಾಗವಾದರೂ ಮನೆಯ ಸೌಂದರ್ಯ ಹೆಚ್ಚಿಸುವಲ್ಲೂ ಸಹಾಯ ಮಾಡುತ್ತದೆ. ಜೊತೆಗೆ ಮನೆಯ ಹೊರಗಿನ ಪರಿಸರವನ್ನು ಸವಿಯಲು ಸೂಕ್ತ ಜಾಗವನ್ನು ಕಲ್ಪಿಸಿಕೊಡುತ್ತದೆ. ಪ್ರತಿದಿನ ಬೆಳಗ್ಗೆ ಸೂರ್ಯನ ಕಿರಣಗಳನ್ನು ಸ್ವಾಗತಿಸಿ, ರಾತ್ರಿ ಸ್ವಚ್ಛಂದ ಆಕಾಶದ ಚಿತ್ತಾರವನ್ನು ಪ್ರದರ್ಶಿಸುವ ಈ ಸ್ಥಳ ವಾಸ್ತು ವಿಚಾರದಲ್ಲೂ ಹೆಚ್ಚು ಪ್ರಾಶಸ್ತ್ಯವನ್ನು ಪಡೆದುಕೊಂಡಿದೆ. ಮನೆಯ ಒಳಗೆ ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಯ ಪ್ರವೇಶಕ್ಕೆ ಅವಕಾಶ ನೀಡುವ ಈ ಸ್ಥಳದ ಬಗ್ಗೆ ಅಸಡ್ಡೆ ತೋರುವಂತಿಲ್ಲ. ಬಾಲ್ಕನಿ ಶೃಂಗರಿಸಲು ಕೆಲವು ಟಿಪ್ಸ್

ಅನೇಕರು ಮನೆಯ ಬಾಲ್ಕನಿ ಎಂದರೆ ಬೇಡದ ವಸ್ತುಗಳನ್ನು ಶೇಖರಿಸಿಡುವ ಸ್ಥಳ ಎನ್ನುವ ಭಾವವನ್ನು ಹೊಂದಿರುತ್ತಾರೆ. ಇನ್ನು ಕೆಲವರು ಬಟ್ಟೆ ಒಣಗಿಸಲು ಸೂಕ್ತ ಸ್ಥಳ ಎಂದು ತಿಳಿಯುತ್ತಾರೆ. ಮನೆಯ ಸೌಂದರ್ಯವನ್ನು ಹೆಚ್ಚಿಸುವ ಈ ಬಾಲ್ಕನಿಯ ಬಗ್ಗೆ ನಿಷ್ಕಾಳಜಿ ತೋರದೆ ಇದ್ದರೆ ಒಳಿತು. ಏಕೆ? ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಮೂಡಿದರೆ ಮುಂದೆ ಓದಿ...

ವಿನ್ಯಾಸ ನಿಯಮ

ವಿನ್ಯಾಸ ನಿಯಮ

ಮನೆಯ ವಿನ್ಯಾಸದ ದೃಷ್ಟಿಯಿಂದ ವಿಭಿನ್ನ ಶೈಲಿಯ ಬಾಲ್ಕನಿಗಳು ಇಂದು ಚಾಲ್ತಿಯಲ್ಲಿವೆ. ಬಾಲ್ಕನಿಯನ್ನು ನಿರ್ಮಿಸುವಾಗ ವೃತ್ತಾಕಾರದ ಬಾಲ್ಕನಿ ನಿರ್ಮಿಸಬಾರದು. ಆಯತ ಮತ್ತು ಚದರ ರೀತಿಯ ಆಕಾರದಲ್ಲಿ ನಿರ್ಮಿಸಬೇಕು. ಇದು ವಾಸ್ತು ಪ್ರಕಾರ ಒಳ್ಳೆಯದು.

ಸಂಗ್ರಹ ಕೋಣೆಯಲ್ಲ

ಸಂಗ್ರಹ ಕೋಣೆಯಲ್ಲ

ಬಾಲ್ಕನಿಯಲ್ಲಿ ಹಲವಾರು ಪೀಠೋಪಕರಣಗಳನ್ನು ಇಡುವುದು, ಅನುಪಯುಕ್ತ ವಸ್ತುಗಳನ್ನು ಒಂದೆಡೆ ರಾಶಿ ಹಾಕುವುದು ಮತ್ತು ಮನೆಯ ಕಸದ ಬುಟ್ಟಿಯನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಜೊತೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಂತೆ.

ಸಸ್ಯಗಳ ಬೆಳೆಸಿ

ಸಸ್ಯಗಳ ಬೆಳೆಸಿ

ಬಾಲ್ಕನಿಯಲ್ಲಿ ಪೊದೆಯಾಕಾರದ ಸಣ್ಣಸಣ್ಣ ಸಸ್ಯಗಳನ್ನು ಇಡಬೇಕು. ಇವು ಬಾಲ್ಕನಿಯ ಸೊಬಗನ್ನು ಹೆಚ್ಚಿಸುವುದರೊಂದಿಗೆ ಸಕಾರಾತ್ಮ ಶಕ್ತಿ ಮನೆಯೊಳಗೆ ಪ್ರವೇಶಿಸುವಂತೆ ಮಾಡುತ್ತದೆ.

ದಿಕ್ಕುಗಳ ಆಯ್ಕೆ

ದಿಕ್ಕುಗಳ ಆಯ್ಕೆ

ಬಾಲ್ಕನಿಯನ್ನು ನಿರ್ಮಿಸುವಾಗ ದಿಕ್ಕುಗಳ ಆಯ್ಕೆಯು ಮಹತ್ತರವಾದ ಪಾತ್ರ ವಹಿಸುತ್ತದೆ. ಪೂರ್ವ, ಈಶಾನ್ಯ ಮತ್ತು ನೈರುತ್ಯ ಭಾಗದಲ್ಲಿ ನಿರ್ಮಿಸುವ ಬಾಲ್ಕನಿ ಕುಳಿತುಕೊಳ್ಳಲು ಹೆಚ್ಚು ಪ್ರಶಸ್ತವಾದದ್ದು. ಪೂರ್ವ ಮತ್ತು ಪಶ್ಚಿಮದಲ್ಲಿ ಜೋಕಾಲಿಯನ್ನು ಕಟ್ಟಲು ಯೋಗ್ಯವಾದ ಸ್ಥಳ.

ಕೈ ತೊಳೆಯುವುದು

ಕೈ ತೊಳೆಯುವುದು

ಕೆಲವರು ಬಾಲ್ಕನಿಯಲ್ಲಿ ಕೈ ತೊಳೆಯುವ ವಾಷ್‍ಬೇಸಿನ್ ಇಟ್ಟಿರುತ್ತಾರೆ. ಇದು ವಾಸ್ತುಪ್ರಕಾರ ಒಳ್ಳೆಯದಲ್ಲ.

ಬಟ್ಟೆ ಒಣಗಿಸುವುದು

ಬಟ್ಟೆ ಒಣಗಿಸುವುದು

ಅನೇಕರು ಬಾಲ್ಕನಿಯಲ್ಲಿ ಬಟ್ಟೆ, ಮ್ಯಾಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಒಣಹಾಕಲು ಉಪಯೋಗಿಸುತ್ತಾರೆ. ಈ ಪ್ರಕ್ರಿಯೆ ವಾಸ್ತು ಪ್ರಕಾರ ಒಳ್ಳೆಯದಲ್ಲ. ಇದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ. ಬಾಲ್ಕನಿ ಸದಾ ಸ್ವಚ್ಛ ಹಾಗೂ ಗಾಳಿ ಓಡಾಡುವಂತಿರಬೇಕು.

 ಛಾವಣಿ ವ್ಯವಸ್ಥೆ

ಛಾವಣಿ ವ್ಯವಸ್ಥೆ

ಬಾಲ್ಕನಿಗೆ ಹಾಕುವ ಛಾವಣಿಯು ಕೋಣೆಯ ಛಾವಣಿಗಿಂತ ಎತ್ತರ ಅಥವಾ ಸಮನಾಗಿರಬಾರದು. ಇದು ವಾಸ್ತು ಪ್ರಕಾರ ಅಶುಭ ಸೂಚನೆಯನ್ನು ನೀಡುತ್ತದೆ.

English summary

Don't Neglect The Balcony Area Of Your Home, It Could Affect Your Happiness!

While some treat their balconies as just another storage space, some actually go that extra mile to add character to them. According to Vastu shastra, being built at a height, balconies are the place from where maximum cosmic energy (positive or negative) enters a home. Thus, its design and right construction should not be neglected. It will ultimately affect the overall happiness quotient of the place.
X