For Quick Alerts
ALLOW NOTIFICATIONS  
For Daily Alerts

  ದೀಪಾವಳಿಯ ಸಡಗರ: ಮನೆಯನ್ನು ಝಗಮಗಿಸುವ ದೀಪಾಲಂಕಾರ ಹೀಗಿರಲಿ

  By Jaya Subramanya
  |

  ಅಂತೂ ಇಂತೂ ಕಾತರದಿಂದ ಕಾಯುತ್ತಿದ್ದ ಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ. ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನ ದೀವಿಗೆಯನ್ನು ಬೆಳಗಿಸುವ ಈ ಬೆಳಕಿನ ಹಬ್ಬ ಕತ್ತಲೆಯನ್ನು ದೂರಗೊಳಿಸುವ ಬೆಳಕಿನ ಸುರಕ್ಷತೆಯನ್ನು ನಮ್ಮ ಬಾಳಿಗೆ ತರುತ್ತಿದೆ. ಹಿಂದೂಗಳಿಗೆ ಬೇರೆಲ್ಲಾ ಹಬ್ಬಗಳಿಗಿಂತಲೂ ದೀಪಾವಳಿಗೆ ಹೆಚ್ಚಿನ ಪ್ರಾಶಸ್ತ್ಯ ಇದ್ದೇ ಇದೆ.

  ಮೂರು ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ. ಎಣ್ಣೆ ಸ್ನಾನ, ಧನ್‌ತೇರಾಸ್, ಲಕ್ಷ್ಮೀಪೂಜೆ, ಗೋ ಪೂಜೆ, ಅಂಗಡಿ ಪೂಜೆ ಹೀಗೆ ದೇಶದ ನಾನಾ ಭಾಗಗಳಲ್ಲಿ ದೀಪಾವಳಿಯನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ರೀತಿ, ವಿಧಾನ ಬೇರೆಯಾಗಿದ್ದರೂ ಬೆಳಕಿನ ಹಬ್ಬ ಸಾರುವ ಸಂದೇಶ ಮಾತ್ರ ಒಂದೇ ಆಗಿದೆ.

  Diwali Decoration Ideas

  ಇನ್ನು ಮನೆಯಲ್ಲಿರುವ ಗೃಹಿಣಿಯರಿಗಂತೂ ದೀಪಾವಳಿಯಂದು ಮಾಡುವ ಬಗೆಬಗೆಯ ತಿಂಡಿ ತಿನಿಸುಗಳ ತಯಾರಿಯದ್ದೇ ಗಲಾಟೆಯಾಗಿರುತ್ತದೆ. ಎಂದೋ ಮಹಡಿಯಲ್ಲಿ ಕಟ್ಟಿ ಇಟ್ಟ ಮಣ್ಣಿನ ಹಣತೆಗಳನ್ನು ಸ್ವಚ್ಛಗೊಳಿಸುವುದು, ಪೂಜಾ ಪರಿಕರಗಳನ್ನು ತೊಳೆದು ಒರೆಸಿ ಒಪ್ಪವಾಗಿಸಿಡುವುದು, ಖಾದ್ಯಗಳನ್ನು ತಯಾರಿಸುವುದು, ಮನೆಯ ಸ್ವಚ್ಛತೆ ಹೀಗೆ ದೀಪಾವಳಿಗೆ ಕೆಲಸಗಳು ಒಂದೇ ಎರಡೇ, ಮನೆಯಲ್ಲಿರುವ ತಾಯಿಗಂತೂ ದೂರದೂರಿನಲ್ಲಿರುವ ಮಕ್ಕಳು ಮರಿಮಕ್ಕಳು ಹಬ್ಬಕ್ಕೆ ಮನೆಗೆ ಬಂದು ತಮ್ಮೊಡನೆ ಬೆರೆಯುವ ಸಂತಸ, ಮಕ್ಕಳಿಗಂತೂ ಪಟಾಕಿ ಹಚ್ಚುವ ಖುಷಿ, ಅಜ್ಜಿಯ ಕೈಅಡುಗೆ ಸವಿಯುವ ಸಂಭ್ರಮ ಹೀಗೆ ಎಲ್ಲರಲ್ಲೂ ಹಬ್ಬ ಹೊಸದೊಂದು ಸಂತಸವನ್ನು ತರುತ್ತದೆ.

  Diwali Decoration Ideas

  ಹೀಗೆ ದೀಪಾವಳಿಗೆ ಮನೆಗೆ ಮನೆಯೇ ಸಂಭ್ರಮದಿಂದ ತಯಾರಾಗುತ್ತದೆ. ದೀಪಾವಳಿಯಂದು ಮಾಡುವ ಎಣ್ಣೆ ಸ್ನಾನಕ್ಕೆ ಅದರದ್ದೇ ಆದ ವಿಶೇಷತೆ ಇದೆ ಕೂಡ. ಮುಂಜಾನೆ ನಾಲ್ಕಕ್ಕೆ ಎದ್ದು ಹಿಂದಿನ ದಿನ ತುಂಬಿಸಿಟ್ಟ ಬಿಸಿನೀರಿನಿಂದ ಸ್ನಾನ ಮಾಡುವ ಈ ವಿಧಾನದಲ್ಲಿ ಹಿಂದಿನ ದಿನ ಬಿಸಿ ನೀರ ಹಂಡೆಯನ್ನು ಸ್ವಚ್ಛಮಾಡಿ ನೀರು ತುಂಬಿಸುವ ಒಂದು ಕ್ರಮವೇ ಮಹತ್ವದಿಂದ ಕೂಡಿರುವಂತಹದ್ದು. ಮುಂಜಾನೆ ಎದ್ದು ಅಮ್ಮ, ಅಜ್ಜಿಯ ಕೈಯಿಂದ ಎಣ್ಣೆಯನ್ನು ಹಚ್ಚಿಸಿಕೊಂಡು ಕೊತಕೊತನೆ ಕುದಿಯುವ ನೀರಿನಿಂದ ಸ್ನಾನ ಮಾಡಿದರೆ ಮನಕ್ಕೆ ದೇಹಕ್ಕೆ ಹೊಸ ಸಂತಸ ಉಂಟಾಗುತ್ತದೆ.

  Diwali Decoration Ideas

  ನಂತರ ಉದ್ದಿನ ದೋಸೆಯ ತಿಂಡಿ, ಆಲೂಗಡ್ಡೆ ಪಲ್ಯ, ಕಾಯಿ ಚಟ್ನಿ ಹೀಗೆ ದೀಪಾವಳಿಗಾಗಿಯೇ ಬೆಳಗ್ಗಿನ ಉಪಹಾರ ವಿಶೇಷವಾಗಿ ತಯಾರಾಗುತ್ತದೆ. ಹೀಗೆ ದೀಪಗಳ ಹಬ್ಬದ ಮೆರುಗನ್ನು ಹೊಗಳುತ್ತಾ ಹೋದರೆ ಅದಕ್ಕೆ ಪೂರ್ಣವಿರಾಮ ಎನ್ನುವುದೇ ಇರುವುದಿಲ್ಲ. ನಮ್ಮ ಇಂದಿನ ಲೇಖನದಲ್ಲಿ ಈ ದೀಪಾವಳಿಯ ಸೊಬಗನ್ನು ಹೆಚ್ಚಿಸುವುದಕ್ಕಾಗಿ ನಾವು ಮನೆಯನ್ನು ಶೃಂಗರಿಸುವ ಕೆಲವೊಂದು ಸಲಹೆಗಳನ್ನು ನಿಮಗೆ ನೀಡುತ್ತಿದ್ದು ಇದರಿಂದ ನಿಮಗೆ ಸಹಾಯವಾಗುವುದು ಖಂಡಿತ.

  ದೀಪಾವಳಿಗೆ ಗೂಡು ದೀಪಗಳನ್ನು ಮನೆಯ ಮುಂಭಾಗದಲ್ಲಿ ತೂಗಾಡಿಸುವುದು ವಾಡಿಕೆಯಾಗಿದೆ. ಕೆಲವರು ಇದನ್ನು ಕೈಯಾರೆ ತಾವೇ ಸಿದ್ಧಪಡಿಸಿಕೊಂಡರೆ ಇನ್ನು ಕೆಲವರು ಮಾರುಕಟ್ಟೆಯಿಂದ ಖರೀದಿ ಮಾಡಿ ಮನೆಯ ಮುಂದೆ ತೂಗಾಡಿಸುತ್ತಾರೆ. ಇಂದಿಲ್ಲಿ ನಾವು ತಿಳಿಸಲು ಹೊರಟಿರುವುದು ಮಾರುಕಟ್ಟೆಯಲ್ಲಿ ದೊರೆಯುವ ಬೇರೆ ಬೇರೆ ಗೂಡುದೀಪಗಳ ಬಗ್ಗೆಯಾಗಿದೆ.

  Diwali Decoration Ideas

  ಹ್ಯಾಂಗಿಂಗ್ ದೀಪಗಳು

  ಈ ಬಾರಿಯ ದೀಪಾವಳಿಗೆ ನಿಮ್ಮ ಮನೆಯನ್ನು ಅದ್ಧೂರಿಯಾಗಿರುವ ತೂಗಾಡುವ ಲ್ಯಾಂಟೀನ್‌ಗಳಿಂದ ಅಲಂಕರಿಸಿ. ಪೇಪರ್ ಅಥವಾ ಇತರ ಬೇಡದೇ ಇರುವ ಪ್ಲಾಸ್ಟಿಕ್ ಬಾಟಲಿಗಳ ಸಹಾಯದಿಂದ ಈ ಗೂಡುದೀಪವನ್ನು ನಿಮಗೆ ತಯಾರಿಸಿಕೊಳ್ಳಬಹುದಾಗಿದೆ. ಈ ದೀಪಾವಳಿಗೆ ನಿಮ್ಮ ಕ್ರಿಯಾತ್ಮಕತೆಗೆ ಕೆಲಸ ಕೊಡಿ.

  ಸ್ಟ್ರಿಂಗ್ ದೀಪಗಳು

  ಈ ದೀಪಗಳು ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿದ್ದು ಎಲ್ಲೆಡೆಯೂ ಲಭ್ಯವಿದೆ. ನೀವು ಇದನ್ನು ಬೇರೆ ಬೇರೆ ರೂಪಗಳಲ್ಲಿ ಅಲಂಕಾರಕ್ಕಾಗಿ ಬಳಸಬಹುದಾಗಿದೆ. ನಿಮ್ಮ ಮನೆಯ ಪ್ರತಿ ಮೂಲೆಯಲ್ಲೂ ಈ ದೀಪಗಳಿಂದ ಹೊಸ ರೂಪವನ್ನು ಕೊಡಬಹುದಾಗಿದೆ.

  Diwali Decoration Ideas

  ನೀವೇ ತಯಾರಿಸಿ

  ನಿಮ್ಮ ಮನೆಯನ್ನು ನಿಮ್ಮ ಕೈಯಿಂದಲೇ ಸಿದ್ಧಪಡಿಸಿದ ಗೂಡುದೀಪಗಳಿಂದ ಅಲಂಕರಿಸಿ. ನಿಮ್ಮ ಡ್ರೆಸ್ಸಿಂಗ್ ಟೇಬಲ್ ಮೇಲಿರುವ ಬಳೆಗಳನ್ನು ಬಳಸಿಕೊಂಡು ಏನಾದರೂ ಕ್ರಿಯಾತ್ಮಕವಾಗಿರುವುದನ್ನು ರೂಪಿಸಿಕೊಳ್ಳಿ. ಸುಂದರವಾದ ಬಣ್ಣದ ಮೇಣದ ಬತ್ತಿಗಳನ್ನು ನೀವು ತಯಾರಿಸಬಹುದಾಗಿದೆ.

  ದೀಪಗಳ ಬಳಕೆ

  ಇನ್ನು ಹಲವಾರು ದೀಪಗಳನ್ನು ಬಳಸಿಕೊಂಡು ಅದಕ್ಕೆ ಮೆರುಗನ್ನು ನೀಡಿ ಮನೆಯನ್ನು ಅಲಂಕರಿಸುವ ಉಪಕರಣಗಳನ್ನು ತಯಾರಿಸಿಕೊಳ್ಳಬಹುದಾಗಿದೆ. ದೀಪಗಳ ಹ್ಯಾಂಗಿಂಗ್ ಸೆಟ್ ಅನ್ನು ನೀವೇ ತಯಾರಿಸಿಕೊಳ್ಳಬಹುದಾಗಿದೆ.

  Diwali Decoration Ideas

  ಲೋಟಸ್ ಲ್ಯಾಂಪ್ಸ್

  ನಿಮ್ಮ ಉದ್ಯಾನವನ ಅಥವಾ ವೆರಾಂಡವನ್ನು ಅಲಂಕರಿಸಲು ಲೋಟಸ್ ಲ್ಯಾಂಪ್‌ಗಳನ್ನು ಬಳಸಬಹುದಾಗಿದೆ. ನೀರಿನಲ್ಲೂ ಇವುಗಳನ್ನು ಹರಿಯಬಿಡಬಹುದಾಗಿದೆ. ಇದರಿಂದ ನಿಮ್ಮ ಹಬ್ಬದ ಕಳೆ ಇನ್ನಷ್ಟು ದುಪ್ಪಟ್ಟಾಗುತ್ತದೆ.

  ರಂಗೋಲಿ

  ನೀವು ರಂಗೋಲಿ ಬರೆಯಲು ನಿಷ್ಣಾತರು ಎಂದಾದಲ್ಲಿ ಮನೆಯ ತುಂಬೆಲ್ಲಾ ಸುಂದರವಾದ ಬಣ್ಣದ ರಂಗೋಲಿಗಳನ್ನು ಬಿಡಿಸಿ. ಅವುಗಳನ್ನು ದೀಪಗಳ ಸಹಾಯದಿಂದ ಅಲಂಕರಿಸಿ. ರಂಗೋಲಿಯಲ್ಲೂ ನಿಮ್ಮ ಕ್ರಿಯಾತ್ಮಕತೆಯನ್ನು ಬಳಸಿಕೊಂಡು ಹೊಸ ಬಗೆಯಲ್ಲಿ ರಂಗೋಲಿಯನ್ನು ಬರೆಯಿರಿ.

  ಮನೆಯ ಮುಂದೆ ಆಕರ್ಷಕ ರಂಗೋಲಿ

  ನಿಮ್ಮ ಮನೆಯ ಮುಂಬಾಗಿಲಿನಲ್ಲಿ ಆಕರ್ಷಕ ರಂಗೋಲಿಗಳನ್ನು ರಚಿಸಿ. ಬೇರೆ ಬಣ್ಣಗಳನ್ನು ತುಂಬಿಕೊಂಡು ರಂಗೋಲಿಯನ್ನು ಕಳೆಗಟ್ಟಿಸಿ. ಇನ್ನು ರಂಗೋಲಿಯನ್ನು ದೀಪಗಳಿಂದ ಅಲಂಕರಿಸಿ.

  Diwali Decoration Ideas

  ಓವಲ್ ಆಕಾರದ ಲ್ಯಾಂಪ್‌ಗಳು

  ನಿಮ್ಮ ದೀಪಾವಳಿ ಸಿದ್ಧತೆಯನ್ನು ದುಪ್ಪಟ್ಟುಗೊಳಿಸಲು ಈ ಬಗೆಯ ಲ್ಯಾಂಪ್‌ಗಳು ಸಹಕಾರಿಯಾಗಿವೆ. ನೀವು ದೊಡ್ಡದಾದ ಕಿಟಕಿಗಳನ್ನು ಹೊಂದಿದ್ದರೆ ಅದಕ್ಕೆ ಅನುಗುಣವಾಗಿ ಈ ದೀಪಗಳನ್ನು ಬಳಸಿ. ಸಮಾನ ಆಕಾರದ ದೀಪಗಳನ್ನು ಬಳಸಿಕೊಳ್ಳಿ. ನಾವು ಇಲ್ಲಿ ತಿಳಿಸಿರುವ ಎಲ್ಲಾ ದೀಪಾವಳಿ ಅಲಂಕಾರ ಸಲಹೆಗಳು ನಿಮ್ಮ ಮನೆಯನ್ನು ಇನ್ನಷ್ಟು ಮೆರುಗುಗೊಳಿಸುವುದು ಖಂಡಿತ. ಬರಿಯ ದೀಪಗಳನ್ನು ಮಾತ್ರವೇ ಬಳಸಿ ಮನೆಯ ಅಲಂಕಾರವನ್ನು ಮಾಡದೆಯೇ, ಬೇರೆ ಬೇರೆ ಕ್ರಿಯಾತ್ಮಕ ಯೋಜನೆಗಳಿಂದ ಮನೆಯ ಅಲಂಕಾರವನ್ನು ಮಾಡಿ ಇದರಿಂದ ನಿಮ್ಮಲ್ಲೂ ಆತ್ಮತೃಪ್ತಿ ಉಂಟಾಗುತ್ತದೆ ಮತ್ತು ಮನೆಮಂದಿ ನಿಮ್ಮ ಕಲಾಮೆರುಗಿಗೆ ತಲೆದೂಗುವುದು ಖಂಡಿತ.

  English summary

  Best Diwali Decoration Ideas

  After the festivities of Navratri that have just finished, people have started gearing up for Diwali. Apart from buying new attire and preparing scrumptious food, there is a very important aspect of Diwali, i.e., the decoration. Diwali is incomplete without the decoration of your house. Each and every household in India is cleaned a few weeks ahead of the festivand the doorways are adorned with candles and lamps. If you want to exhibit your creative skills this Diwali, then you must check out for the following decoration ideas to decorate your houses this Diwali 2017.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more