ಕ್ರಿಸ್‌ಮಸ್‌ ಹಬ್ಬಕ್ಕೆ ಮನೆಯ ಅಲಂಕಾರ ಹೀಗಿರಲಿ....

By: Jaya subramanya
Subscribe to Boldsky

ಡಿಸೆಂಬರ್ ಬಂತೆಂದರೆ ಸಾಕು ಜನರಲ್ಲಿ ಹೊಸ ಹುರುಪು ಮೂಡಿಬಿಡುತ್ತದೆ. ಕೊರೆಯುವ ಚಳಿಯ ನಡುವೆಯೇ ಹೊಸ ವರ್ಷ ಮತ್ತು ಕ್ರಿಸ್‌ಮಸ್‌ನ ತಯಾರಿಗೆ ಭರದ ಸಿದ್ಧತೆಯನ್ನು ಮಾಡಿಕೊಂಡು ಬಿಡುತ್ತಾರೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷ ಬೆನ್ನು ಬೆನ್ನಿಗೆ ಆಚರಿಸಲ್ಪಡುವ ಸಂಭ್ರಮದ ದಿನಗಳಾಗಿವೆ. ಕ್ರಿಸ್‌ಮಸ್ ಹಬ್ಬದ ವಿಶೇಷ: ಮೂರು ಬಣ್ಣಗಳ ಮಹತ್ವ

ಮನೆಗಳಲ್ಲಿ ಈಗಲೇ ಕ್ರಿಸ್‌ಮಸ್ ಮತ್ತು ಹೊಸವರ್ಷಕ್ಕಾಗಿ ಕಂದೀಲುಗಳನ್ನು ಹಚ್ಚಿ ಆಚರಣೆಯನ್ನು ಆರಂಭಿಸಿದರೆ ಅಂಗಡಿಗಳಲ್ಲಿ ಕೊಡುಗೆಗಳು, ಕ್ರಿಸ್ತನ ಜನನದ ಗೋಧಲಿ, ಸಿಡಿಮದ್ದುಗಳು ಹೀಗೆ ನಾನಾ ಬಗೆಯ ಸಾಮಾಗ್ರಿಗಳ ಮಾರಾಟ, ಕೊಳ್ಳುವಿಕೆ ಭರದಿಂದಲೇ ನಡೆಯುತ್ತಿದೆ. ಕ್ರಿಸ್‌ಮಸ್ ಹಬ್ಬ: ನೀವು ತಿಳಿದಿರದ ಇಂಟರೆಸ್ಟಿಂಗ್ ಸಂಗತಿ

ಹೊಸ ವರ್ಷಕ್ಕಿಂತ ಮುಂಚಿತವಾಗಿಯೇ ಆಗಮಿಸುವ ಕ್ರಿಸ್‌ಮಸ್‌ಗಾಗಿ ಮನೆಯ ಅಲಂಕಾರ ಹೇಗೆ ಮಾಡಬೇಕು, ಅತಿಥಿಗಳನ್ನು ಸಂಪ್ರೀತಿಗೊಳಿಸುವ ವಿಧಾನಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ನೀವು ಉದ್ಯೋಗಿ ಮಹಿಳೆಯಾಗಿದ್ದರೂ ಈ ವಿಧಾನಗಳನ್ನು ಅನುಸರಿಸಿಕೊಂಡು ಚಿಂತೆ ಇಲ್ಲದೆ ಕ್ರಿಸ್‌ಮಸ್‌ಗಾಗಿ ತಯಾರಿಯನ್ನು ನಡೆಸಬಹುದಾಗಿದೆ.

ವಿನ್ಯಾಸಕಾರರ ಸಂಸ್ಥೆಗಳಿಗೆ ಭೇಟಿ ನೀಡಿ

ವಿನ್ಯಾಸಕಾರರ ಸಂಸ್ಥೆಗಳಿಗೆ ಭೇಟಿ ನೀಡಿ

ನಿಮ್ಮ ಈ ಬಾರಿಯ ಕ್ರಿಸ್‌ಮಸ್ ಆಚರಣೆಯನ್ನು ವಿಜೃಂಭಣೆಗೊಳಿಸಲು ಮನೆಯ ಅಲಂಕಾರ ಅದ್ಭುತವಾಗಿರಬೇಕು ಎಂದಾದಲ್ಲಿ ವಿನ್ಯಾಸಕಾರರನ್ನು ಭೇಟಿ ಮಾಡಿ ನಿಮ್ಮ ಇಚ್ಛೆಯ ಅಲಂಕಾರ ಸಲಹೆಗಳನ್ನು ಅವರಿಗೆ ನೀಡಿ. ಗಾಜಿನ ಬಾಟಲಿಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ. ಅವುಗಳಿಗೆ ಕೆಂಪು ಬಣ್ಣವನ್ನು ಬಳಿದು ಹಸಿರು ಮತ್ತು ಬಿಳಿ ಬಣ್ಣಗಳ ಟಚಪ್ ನೀಡಿ ಮತ್ತು ಚಿನ್ನದ ಬೀಡ್ಸ್‌ಗಳನ್ನು ಅವುಗಳ ಮೇಲಿರಿಸಿ. ಕುತ್ತಿಗೆಗೆ ರಿಬ್ಬನ್‌ಗಳನ್ನು ಕಟ್ಟಿಕೊಳ್ಳಿ ಮತ್ತು ಕಾಗದದಿಂದ ತಯಾರಿಸಿದ ಕೊಂಬುಗಳನ್ನು ಬಾಟಲಿಗಳ ಮೇಲಿರಿಸಿ ಮತ್ತು ಸಾಂತಾರ ಹಿಮಸಾರಂಗವನ್ನು ಇದು ನೆನಪಿಸುವಂತಿರುತ್ತದೆ.

ಕ್ರಿಸ್‌ಮಸ್ ಆಭರಣಗಳು

ಕ್ರಿಸ್‌ಮಸ್ ಆಭರಣಗಳು

ಇದನ್ನು ನೀವು ಖರೀದಿ ಮಾಡಬಹುದಾಗಿದ್ದರೂ ಮನೆಯಲ್ಲಿಯೇ ಸಿದ್ಧಪಡಿಸುವುದು ಅತ್ಯುತ್ತಮ ಸಲಹೆಯಾಗಿದೆ. ಮಕ್ಕಳನ್ನು ಈ ಆಭರಣಗಳ ತಯಾರಿಯಲ್ಲಿ ತೊಡಗಿಸಿಕೊಳ್ಳಿ ಇದರಿಂದ ಅವರಿಗೂ ಮನರಂಜನೆ ಮತ್ತು ಕ್ರಿಯಾತ್ಮಕತೆ ದೊರೆಯುತ್ತದೆ. ಕಾಗದಗಳು, ಗ್ಲಿಟ್ಟರ್‌ಗಳು, ರಿಬ್ಬನ್‌ಗಳು ಮತ್ತು ಇನ್ನಷ್ಟು ಹೆಚ್ಚಿನ ವಸ್ತುಗಳನ್ನು ಬಳಸಿಕೊಂಡು ಈ ಆಭರಣಗಳನ್ನು ತಯಾರಿಸಬಹುದಾಗಿದೆ. ಸಣ್ಣ ಅಲಂಕಾರಗಳನ್ನು ಮಾಡಿಕೊಂಡು ಕ್ರಿಸ್‌ಮಸ್ ಮರದಲ್ಲಿ ಅವುಗಳನ್ನು ನೇತಾಡಿಸಿ.

ಬೆಂಕಿಯುರಿಸುವ ಸ್ಥಳದ ಅಲಂಕಾರ

ಬೆಂಕಿಯುರಿಸುವ ಸ್ಥಳದ ಅಲಂಕಾರ

ನೀವು ಬೆಂಕಿ ಹಾಕುವ ಸ್ಥಳದಲ್ಲಿ ಹಾರ ಮತ್ತು ಕೊಂಬೆಗಳು ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ಇರಿಸಿ ಕ್ರಿಸ್‌ಮಸ್ ಸಿದ್ಧತೆಯನ್ನು ಮಾಡಿಕೊಳ್ಳಬಹುದಾಗಿದೆ. ನೈಜವಾದ ಕಿತ್ತಳೆ ಮತ್ತು ಲಿಂಬೆ ಕೊಂಬೆಗಳನ್ನು ಆಯ್ಕೆಮಾಡಿಕೊಂಡು ಮನೆಗೆ ನೈಸರ್ಗಿಕ ಸ್ಪರ್ಶವನ್ನು ನೀಡಬಹುದಾಗಿದೆ. ಇದು ಮುದ್ದಾಗಿ ಕಣ್ಸೆಳೆಯುವುದು ಮಾತ್ರವಲ್ಲದೆ, ಮನೆಗೆ ಆಹ್ಲಾದವನ್ನು ನೀಡುತ್ತದೆ ಮತ್ತು ಸ್ವಾಗತಿಸುವಂತೆ ಇರುತ್ತದೆ.

ಮನೆಯಲ್ಲಿ ಸುಗಂಧ ಪಸರಿರಲಿ

ಮನೆಯಲ್ಲಿ ಸುಗಂಧ ಪಸರಿರಲಿ

ಕ್ರಿಸ್‌ಮಸ್‌ಗಾಗಿ ಮನೆಗೆ ಅತಿಥಿಗಳು ಬರುವಂತಹ ಸಂದರ್ಭದಲ್ಲಿ ಮನೆಯಲ್ಲಿ ಉತ್ತಮ ಸುಗಂಧವಿದ್ದರೆ ಅವರಿಗೂ ಅದು ಸಂತಸವನ್ನು ನೀಡುವಂತಿರುತ್ತದೆ. ತಾಜಾ ಬೇಕ್ ಮಾಡಿದ ಹಣ್ಣಿನ ಕೇಕ್‌ನ ಸುಗಂಧವಾಗಿದ್ದರೂ ಸರಿಯೇ. ಒಲೆಯ ಮೇಲೆ ಇಟ್ಟಿರುವ ಪಾತ್ರೆಯಲ್ಲಿ ಕಿತ್ತಳೆ ಹೂವುಗಳು ಮತ್ತು ಲವಂಗವನ್ನು ಕುದಿಸಿಕೊಳ್ಳಿ. ಈ ಸುಗಂಧ ನಿಮ್ಮನ್ನು ನೇರವಾಗಿ ಉತ್ತರ ಧ್ರುವಕ್ಕೆ ಕರೆದುಕೊಂಡು ಹೋಗುವಂತಿರಲಿ.

ಮುಂಭಾಗಿಲನ್ನು ಅಲಂಕರಿಸಿ

ಮುಂಭಾಗಿಲನ್ನು ಅಲಂಕರಿಸಿ

ನಿಮ್ಮ ಮನೆಯ ಮುಂಭಾಗಿಲನ್ನು ಹೂವುಗಳು, ಹೂವಿನ ದಂಡೆಗಳು, ಹೂಮಾಲೆಗಳಿಂದ ಇತ್ಯಾದಿಗಳಿಂದ ಅಲಂಕರಿಸಬಹುದಾಗಿದೆ. ಹಸಿರು ಜರೀ ಗಿಡಗಳಿಂದ ಕಂಬಗಳನ್ನು ಅಲಂಕರಿಸಿ ಮತ್ತು ಅಲ್ಲಿ ಚಿನ್ನದ ಮತ್ತು ಕೆಂಪು ಚೆಂಡುಗಳನ್ನು ನೇತಾಡಿಸಿ. ಕಾಲ್ಪನಿಕ ದೀಪಗಳಿಂದ ಅಲಂಕರಿಸಿ ಕಾಲ್ಪನಿಕ ನೋಟವನ್ನೂ ನೀಡಬಹುದಾಗಿದೆ.

ಟೇಬಲ್ ಅನ್ನು ಅಲಂಕರಿಸಿ

ಟೇಬಲ್ ಅನ್ನು ಅಲಂಕರಿಸಿ

ಜೊತೆಯಾಗಿ ಸೇರಿಕೊಂಡು ಭೂರೀ ಭೋಜನವನ್ನು ಸವಿಯುವುದು ಎಂಬುದಾಗಿ ಕ್ರಿಸ್‌ಮಸ್ ತಿಳಿಸಿಕೊಡುತ್ತದೆ. ಆದ್ದರಿಂದ ನಿಮ್ಮ ವೈಭವೋಪೇತ ಕ್ರಿಸ್‌ಮಸ್ ಭೋಜನಕ್ಕಾಗಿ ನಿಮ್ಮ ಟೇಬಲ್ ಅಷ್ಟೇ ಸುಂದರವಾಗಿ ಅಲಂಕಾರಗೊಳ್ಳಬೇಕು. ಕೆಂಪು ಮತ್ತು ಚಿನ್ನದ ಕ್ರಿಸ್‌ಮಸ್ ಬಾಲ್‌ಗಳನ್ನು ಮತ್ತು ಹೂವುಗಳನ್ನು ಅಲಂಕಾರಕ್ಕಾಗಿ ಬಳಸಿ. ಸುಗಂಧಭರಿತ ಕ್ಯಾಂಡಲ್‌ಗಳನ್ನು ಉರಿಸಲು ಮರೆಯದಿರಿ. ಇದರಿಂದ ಆಹ್ಲಾಮಯ ವಾತಾವರಣ ನಿಮ್ಮದಾಗುತ್ತದೆ.

ಛಾವಣಿಯ ಅಲಂಕಾರ

ಛಾವಣಿಯ ಅಲಂಕಾರ

ಮನೆಯ ಅಲಂಕಾರ ಇದಿಲ್ಲದೆ ಸಂಪೂರ್ಣವಾಗುವುದೇ ಇಲ್ಲ. ನಿಮ್ಮ ಮನೆಯ ಛಾವಣಿಯನ್ನು ಅಲಂಕರಿಸಲು ಕ್ರಿಸ್‌ಮಸ್ ಬಾಲ್‌ಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ. ಕ್ರಿಸ್‌ಮಸ್ ಆಭರಣಗಳನ್ನು ಬಳಸಿಕೊಂಡು ಅವುಗಳನ್ನು ಛಾವಣಿಯಲ್ಲಿ ನೇತಾಡಿಸಿ. ಹೊಳೆಯುವ ಇಫೆಕ್ಟ್‌ಗಳನ್ನು ಬಳಸಿಕೊಂಡು ಅವುಗಳಲ್ಲಿ ಶಬ್ಧಗಳನ್ನು ಅಳವಡಿಸಿಕೊಂಡು, ಸ್ವರ್ಗವನ್ನೇ ಮನೆಯಲ್ಲೇ ಸಿದ್ಧಪಡಿಸಬಹುದಾಗಿದೆ.

ಈ ವರ್ಷದಂದು ನೀವು ಮರೆಯದೇ ಅನುಸರಿಸಬೇಕಾಗಿರುವ ಕ್ರಿಸ್‌ಮಸ್ ಸಿದ್ಧತಾ ವಿಧಾನಗಳು ಇವುಗಳಾಗಿವೆ. ಎಲ್ಲೆಡೆಯೂ ಸಂತಸವನ್ನು ಪಸರಿಸಿ ಮತ್ತು ಮುಂಬರುವ ವರ್ಷಗಳಲ್ಲಿ ನಿಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವಂತೆ ಕ್ರಿಸ್ತುವನ್ನು ಬೇಡಿಕೊಳ್ಳಿ. ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಷಯಗಳು!

 

 

English summary

Latest Decoration Tips For This Christmas

Christmas is all about happiness, joy, fun and many more things. This is the time when you share love and happiness with your family and friends and spread love to one and all who are deprived of these emotions throughout the year. It is also the time to decorate your house with some amazing christmas decoration tricks! Have you planned to decorate your house this year? So, here are top 7 ways to decorate your house this Christmas, do take a look.
Please Wait while comments are loading...
Subscribe Newsletter